ಮೆಟ್ರೋ ಪ್ರಯಾಣಿಕರಿಗೆ ವಿಶೇಷ ಸೂಚನೆ ಇದಾಗಿದೆ.ನಮ್ಮ ಮೆಟ್ರೋ ಟಿಕೆಟ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಇದರಿಂದ ಆನ್ಲೈನ್ ಹಾಗೂ ಕೆಲವು ಡಿಜಿಟಲ್ ಟಿಕೆಟ್ ಸೇವೆಗಳು ನಿರ್ದಿಷ್ಟ ಅವಧಿಗೆ ಲಭ್ಯವಿರುವುದಿಲ್ಲ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರು ತಾತ್ಕಾಲಿಕ ಪರ್ಯಾಯ ಟಿಕೆಟ್ ವ್ಯವಸ್ಥೆಗಳನ್ನು ಬಳಸುವಂತೆ ಹಾಗೂ ಮೆಟ್ರೋ ನಿಲ್ದಾಣಗಳಲ್ಲಿ ಲಭವಿರುವ ಕೌಂಟರ್ ಗಳು ಮೂಲಕ ಟಿಕೆಟ್ ಗಳನ್ನು ಪಡೆದು ಪ್ರಯಾಣಿಸುವಂತೆ ಮನವಿ ಮಾಡಲಾಗಿದೆ. ಇವತ್ತಿನಿಂದ ಜಾರಿಗೆ ಬರಬೇಕಿದ್ದ ನಮ್ಮ ಮೆಟ್ರೋ ರೈಲು ದರ ಪರಿಷ್ಕರಣಿ ನಿರ್ಧಾರವನ್ನು ಮುಂದಿನ ಆದೇಶಗಳ ತನಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಬೆಂಗಳೂರಿನ ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ.
ಬಿಎಂಆರ್ ಸಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟಣೆ ಮೂಲಕ ಈ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿದ್ದಾರೆ.ಇದರ ಜೊತೆಗೆ ಫೆಬ್ರವರಿ 5 2026ರ ಪ್ರಕಟಣೆಯಲ್ಲಿ ಫೆಬ್ರುವರಿ 9 ರಿಂದ ವಾರ್ಷಿಕ ಸ್ವಯಂ ಚಾಲಿತ ದರ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.
ಬಿ ಎಂ ಆರ್ ಸಿ ಎಲ್ ಬೆಂಗಳೂರು ನಾಗರಿಕರಿಗೆ ಸುರಕ್ಷಿತ,ನಂಬಿಗಸ್ತ ಮತ್ತು ಕೈಗೆಟಕುವ ಮೆಟ್ರೋ ಸೇವೆಗಳನ್ನು ಒದಗಿಸಲು ಸದಾ ಬದ್ಧವಾಗಿದೆ ಎಂದು ತಿಳಿಸಲಾಗಿದೆ.ಇದರ ಜೊತೆಗೆ ಈ ನಿರ್ಧಾರವನ್ನು ಮುಂದಿನ ಆದೇಶಗಳ ತನಕ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಕೂಡ ಹೇಳಿದರು.ಮತ್ತು ನಿರ್ದೇಶಕ ಮಂಡಳಿಯ ಪರಿಶೀಲನೆ ಬಳಿಕ ಪರಿಷ್ಕೃತ ದರದ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಮೆಟ್ರೋ ದರ ಪರಿಷ್ಕರಣೆಯಿಂದ ರಾಜಕೀಯದಲ್ಲಿ ಬದಲಾವಣೆ:
ಹೌದು ಕೇಂದ್ರ ಸರ್ಕಾರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ರಚಿಸಿದ ಸ್ವತಂತ್ರದರ ನಿಗದಿ ಸಮಿತಿ ಈ ದರಗಳನ್ನು ನಿರ್ಧರಿಸುತ್ತದೆ ಎಂದು ತಿಳಿಸಿದ್ದಾರೆ.ಇದರ ಜೊತೆಗೆ ಮೆಟ್ರೋ ದರ ಏರಿಕೆಯೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ಜಟಾಪಟಿ ಗೆ ಕಾರಣವಾಗಿದೆ.ಮತ್ತು ದರ ಹೆಚ್ಚಳದಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಇತರ ಹಲವು ಸಚಿವರು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ಧನ ನಿಗದಿ ಸಮಿತಿ ರಚನೆಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮೆಟ್ರೋ ದರ ಏರಿಕೆಯನ್ನು ತಡೆಹಿಡಿಯಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಅವರಿಗೆ ಆಗ್ರಹಿಸಿದ್ದರು ಉದ್ದೇಶದ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಕೇಂದ್ರ ನಗರ ಅಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ಸೂಚಿಸಿದ್ದಾರೆ ಎಂದು ತೇಜಸ್ ಸೂರ್ಯ ಅವರು ಸ್ಪಷ್ಟವಾಗಿ ಸಾರ್ವಜನಿಕರಿಗೆ ಹೇಳಿದ್ದಾರೆ.
ಇದು ದೇಶದಲ್ಲಿ ಬೆಂಗಳೂರು ಮೆಟ್ರೋ ಈಗಾಗಲೇ ಅತಿ ದುಬಾರಿ ದರವನ್ನು ಹೊಂದಿದೆ ಇದೊಂದು ದರ ಏರಿಕೆಯಿಂದ ಸಾರ್ವಜನಿಕರಿಗೆ ಸಾರಿಗೆ ಲಕ್ಷಾಂತರ ನಾಗರಿಕರು ಕೈಗೆಟಗುವಂತೆ ಮಾಡಲಿದ್ದು ಅದರ ಉದ್ದೇಶವೇ ವಿಫಲವಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಎಕ್ಸ್ಪೋರ್ಟ್ ಮಾಡಿದ್ದ ಅವರು,ಸೋಮವಾರದಿಂದ ಏರಿಕೆ ಆಗಬೇಕಿದ್ದ ಮೆಟ್ರೋ ದರವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಇನ್ನಷ್ಟು ಓದಿರಿ:
ಬ್ಯಾಂಕ್ ಆಫ್ ಬರೋಡ ನೇಮಕಾತಿ 2026: ಮ್ಯಾನೇಜರ್ ಸೇರಿ ಹಲವು ಹುದ್ದೆಗಳು ಖಾಲಿ