<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಚಲಿಸುತ್ತಿದ್ದ ಬಸ್ ಗೆ ಏಕಾಏಕಿ ಬ್ರೇಕ್ ಫೇಲ್ : ಗದಗದಲ್ಲಿ ಭಯಾನಕ ಘಟನೆ

ಚಲಿಸುತ್ತಿದ್ದ ಬಸ್ ಗೆ ಏಕಾಏಕಿ ಬ್ರೇಕ್ ಫೇಲ್ : ಗದಗದಲ್ಲಿ ಭಯಾನಕ ಘಟನೆ
Summary: The brakes of a bus moving near the new bus stand in Gadag failed, and a major tragedy was averted due to the driver's punctuality. The incident created an atmosphere of anxiety among the passengers.

elagavi News :

ಗದಗಳಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ ನ ಬ್ರೇಕ್ ಫೇಲ್ ಆಗಿ ಸಂಭವಿಸಬಹುದಾಗಿದ್ದ ಭಾರಿ ದುರಂತ ಒಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಗದಗ ಹಳೆ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣದತ್ತ ತೆರಳುತ್ತಿದ್ದ ಸಾರಿಗೆ ಬಸ್ ಏಕಾಏಕಿ ನಿಯಂತ್ರಣ ಕಳೆದುಕೊಂಡ ಘಟನೆ ಆತಂಕ ಸೃಷ್ಟಿಸಿತು.

ಬಸ್ ಬ್ರೇಕ್ ಕೈ ಕೊಟ್ಟ ಪರಿಣಾಮ ವಾಹನ ಏಕಾಏಕಿ ರಿವರ್ಸ್ ಚಲಿಸಿದ್ದು, ಬಸ್ ಅಡಿ ಸಿಲುಕಿದ್ದ ವೃದ್ಧರೊಬ್ಬರು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ, ಸ್ಥಳದಲ್ಲಿದ್ದ ಬ್ರೇಕ್ ಸವಾರರು ಸಮಯ ಪ್ರಜ್ಞೆಯಿಂದ ಬದಿಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ.

ಘಟನೆಯಿಂದ ಕೆಲ ಕಾಲ ಗದಗ ಹೊಸ ಬಸ್ ನಿಲ್ದಾಣದ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಸಾರಿಗೆ ಬಸ್ ಗಳ ನಿರ್ವಹಣೆಯ ಬಗ್ಗೆ ಸಾರ್ವಜನಿಕರಿಂದ ಹಲವು ಪ್ರಶ್ನೆಗಳು ಕೇಳಿ ಬರುತ್ತಿವೆ. ಬಸ್ ಗಳ ತಾಂತ್ರಿಕ ದೋಷಗಳು ಮೇಲಿಂದ ಮೇಲೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ನಿರ್ವಹಣೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಕಲಬುರ್ಗಿಯಲ್ಲಿ ಬಸ್ ಅಣ್ಣ ಹೆಡ್ ಲೈಟ್ ಕಾರ್ಯನಿರ್ವಹಿಸದ ಕಾರಣ ಚಾಲಕ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಘಟನೆ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಗದಗದಲ್ಲಿ ಬ್ರೇಕ್ ವೈಫಲ್ಯದಿಂದ ಘಟನೆ ಮತ್ತೆ ಸಾರಿಗೆ ಬಸ್ ಗಳ ನಿರ್ವಹಣೆ ಕುರಿತು ಚರ್ಚೆಗೆ ಕಾರಣವಾಗಿದೆ.

ಘಟನೆ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಬಸ್ ನ ತಾಂತ್ರಿಕ ದೋಷಕ್ಕೆ ನಿಖರ ಕಾರಣ ತಿಳಿಯಬೇಕಿದೆ.

ಗದಗದಲ್ಲಿ ಬಸ್ ಬ್ರೇಕ್ ಫೇಲ್ - ಹಿಮ್ಮುಖವಾಗಿ ಚಲಿಸಿದ ಸಾರಿಗೆ ಬಸ್ ಅಡಿ ಸಿಲುಕಿದ ವೃದ್ಧ , ಬೈಕ್ ಸವಾರರು ಪಾರು :

ಗದಗ ನಗರದ ಹಳೆ ಬಸ್ ಸ್ಟ್ಯಾಂಡ್ ನಿಲ್ದಾಣದಿಂದ ಹೊಸ ಬಸ್ ಸ್ಟ್ಯಾಂಡ್ ನಿಲ್ದಾಣದತ್ತ ತೆರಳುತ್ತಿದ್ದ ಸಾರಿಗೆ ಬಸ್ ನ ಬ್ರೇಕ್ ಫೇಲ್ ಆಗಿ ಆತಂಕ ಕಾರಿ ಘಟನೆ ನಡೆದಿದೆ. ಏಕಾಏಕಿ ನಿಯಂತ್ರಣ ಕಳೆದುಕೊಂಡ ಬಸ್ ಹಿಮುಕವಾಗಿ ಚಲಿಸಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ದುರಂತ ತಪ್ಪಿದೆ.

ಬಸ್ ರಿವರ್ಸ್ ಚಲಿಸಿದ ವೇಳೆ ಹಿಂಭಾಗದಲ್ಲಿದ್ದ ಬೈಕ್ ಸವಾರರು ಸಮಯ ಪ್ರಜ್ಞೆಯಿಂದ ಬೈಕ್ ಬಿಟ್ಟು ಹಾರಿ ಜೀವ ಉಳಿಸಿಕೊಂಡಿದ್ದಾರೆ. ಆದರೆ ವೃದ್ಧರೊಬ್ಬರು ಬಸ್ ಅಡಿ ಸಿಲುಕಿ ಕೆಲಕಾಲ ಪರದಾಡಿದ್ದು, ತಳದಲ್ಲಿದ್ದ ಸಾರ್ವಜನಿಕರು ತಕ್ಷಣ ಕಾರ್ಯ ಪ್ರವೃತ್ತರಾಗಿ ಅವರನ್ನು ರಕ್ಷಿಸಿದ್ದಾರೆ.

ಅವಘಡದಲ್ಲಿ ಎರಡು ಬೈಕ್ ಗಳು ಜಖಂಗೊಂಡಿದ್ದು, ಬಸ್ ನಡಿ ಸಿಲುಕಿದ್ದ ವಾಹನಗಳನ್ನು ಹೊರತೆಗೆಯಲು ಸಾರ್ವಜನಿಕರು ಹರ ಸಾಹಸಪಟ್ಟಿದ್ದಾರೆ. ಘಟನೆ ಬಳಿಕ ಬಸ್ ಚಾಲಕ ಸ್ಥಳದಿಂದ ತೆರಳಿದ್ದಾನೆ ಎನ್ನಲಾಗಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಪ್ರತ್ಯಕ್ಷ ದರ್ಶಿಗಳು ಹೇಳಿದ್ದೇನು ? :

ಪ್ರತ್ಯಕ್ಷ ದರ್ಶಿಗಳ ಪ್ರಕಾರ, ಬಸ್ ಏಕಾಏಕಿ ವೇಗವಾಗಿ ಹಿಮ್ಮುಖವಾಗಿ ಚಲಿಸಲು ಆರಂಭಿಸಿತು. ತಳದಲ್ಲಿದ್ದವರು ಬೈಕ್ ಗಳನ್ನು ಬಿಟ್ಟು ಪಕ್ಕಕ್ಕೆ ಹಾರಿ ಅಪಾಯದಿಂದ ಪಾರಾದರು . ಬಸ್ ಅಡಿ ವೃದ್ಧ ಸಿಲುಕಿಕೊಂಡಿದ್ದರೂ, ಬೈಕ್ ಗಳು ಬಸ್ ನ ಚಲನೆಯನ್ನು ತಡೆದ ಕಾರಣ ದೊಡ್ಡ ಅನಾಹುತ ತಪ್ಪಿದೆ ಎಂದು ತಿಳಿಸಿದ್ದಾರೆ.

ಬಸ್ ನ ಬ್ರೇಕ್ ಮೊದಲೇ ಸಮಸ್ಯೆಗಳಿಗಾಗಿತ್ತು ಎನ್ನಲಾಗಿದ್ದು, ಅದನ್ನು ಸರಿಪಡಿಸಲು ಮೆಕ್ಯಾನಿಕ್ ಕೂಡ ವಾಹನದಲ್ಲಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಇಳಿಜಾರು ಪ್ರದೇಶವಾಗಿದ್ದರಿಂದ ಚಾಲಕನಿಗೆ ಬಸ್ ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ತಳದಲ್ಲಿದ್ದ ಸ್ಪೀಡ್ ಬ್ರೇಕರ್ ಕೂಡ ಬಸ್ ನ ವೇಗ ಕಡಿಮೆಯಾಗಲು ಕಾರಣವಾಗಿದ್ದು, ಇದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಘಟನೆ ವೇಳೆ ಬಸ್ ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ ಎನ್ನಲಾಗಿದೆ.

ಗದಗ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online