ರೈತರ ಪಾಲಿಗೆ ಕಹಿಯಾದ ಕಬ್ಬು: ದರ ನಿಗದಿಗೆ FRP ನೆಪ ಹೇಳಿ
ರಾಜ್ಯ ಸರ್ಕಾರ ಮನವಿಗೆ ಸ್ಪಂದಿಸದ ಕಾರಣಕ್ಕೆ ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ಬೀದಿಗಿಳಿದಿದ್ದಾರೆ. ಪ್ರತಿ ಟನ್ ಕಬ್ಬಿಗೆ ಮೂರುವರೆ ಸಾವಿರ ರೂ. ಬೆಲೆ ನಿಗದಿ ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ಆದರೆ ಎಫ್ಆರ್ಪಿ ಪ್ರಕಾರ ದರ ನಿಗದಿ ಮಾಡುವುದಾಗಿ ಸಕ್ಕರೆ ಕಾರ್ಖಾನೆಗಳು ಹೇಳುತ್ತಿವೆ. ಆ ಮೂಲಕ ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಿವೆ.
ಬೆಳಗಾವಿ:
ಕೇಂದ್ರ ಸರ್ಕಾರ ಕಬ್ಬಿಗೆ ಎಫ್ಆರ್ಪಿ ನ್ಯಾಯಸಮ್ಮತ ದರ ನಿಗದಿ ಮಾಡಿದೆ. ಶೇಕಡಾ 10.25 ರಷ್ಟು ಇಳುವರಿ ಇರುವ ಕಬ್ಬಿಗೆ ಟನ್ಗೆ 3,550 ರೂ. ನಿಗದಿ ಮಾಡಿದೆ. ಅದರ ಆಧಾರದ ಮೇಲೆ ಸಕ್ಕರೆ ಕಾರ್ಖಾನೆಗಳು ದರ ನೀಡಬೇಕು. ಆದರೆ ಕಾರ್ಖಾನೆಗಳು 2,700 ರಿಂದ 3,200 ರೂ. ಕೊಡಲು ಮುಂದಾಗಿವೆ.
ಕಬ್ಬು ಬೆಳೆಗಾರರ (Sugarcane Farmers) ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿ ಟನ್ ಕಬ್ಬಿಗೆ ಮೂರುವರೆ ಸಾವಿರ ರೂ. ಬೆಲೆ ನಿಗದಿ ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ಆದರೆ ಕೇಂದ್ರ ಸರ್ಕಾರದ (central government) ಎಫ್ಆರ್ಪಿ (ನ್ಯಾಯಸಮ್ಮತ ದರ) ಪ್ರಕಾರ ದರ ನಿಗದಿ ಮಾಡುತ್ತೇವೆ ಎನ್ನುತ್ತಿರುವ ಸಕ್ಕರೆ ಕಾರ್ಖಾನೆಗಳು ಆ ಮೂಲಕ ದ್ವಂದ್ವ ನೀತಿ ಅನುಸರಿಸುತ್ತಿವೆ. ಸಸ್ಯ ಕಾರ್ಖಾನೆಗಳು ಟನ್ಗೆ 2,700 ರಿಂದ 3,200 ರೂ. ಕೊಡಲು ಮುಂದಾಗಿದ್ದು, 3500 ರೂ. ನೀಡಲೇಬೇಕೆಂದು ಬೆಳೆಗಾರರ ಪಟ್ಟು ಹಿಡಿದಿದ್ದಾರೆ.
ಕರ್ನಾಟಕದಲ್ಲಿ ಹೀಗೆ ಬೆಲೆ ಕಡಿಮೆಯಾಗುತ್ತಿದೆ. ಆದರೆ ನೆರೆಯ ಮಹಾರಾಷ್ಟ್ರದಲ್ಲಿ ಪ್ರತಿ ಟನ್ ಕಬ್ಬಿಗೆ 300 ರಿಂದ 400 ರೂ. ಹೆಚ್ಚಿಗೆ ಸಿಗುತ್ತಿದೆ. ಇದ್ರಿಂದ ರಾಜ್ಯದ ಕಬ್ಬು ನೆರೆಯ ಮಹಾರಾಷ್ಟ್ರಕ್ಕೆ ಹೋಗುತ್ತಿದೆ. ಅಂದಾಜಿನ ಪ್ರಕಾರ ಬೆಳಗಾವಿ, ಬಾಗಲಕೋಟೆ ಸೇರಿದಂತೆ ಮಹಾರಾಷ್ಟ್ರದ ಗಡಿಯಲ್ಲಿರುವ ರಾಜ್ಯ ಜಿಲ್ಲೆಗಳಿಂದ 10 ಲಕ್ಷಕ್ಕೂ ಟನ್ ಕಬ್ಬು ರವಾನೆಯಾಗುತ್ತಿದೆ.
ಜೊತೆಗೆ ಕಬ್ಬಿನ ಕಟಾವು ಮತ್ತು ಸಾಗಣೆ ವೆಚ್ಚ ಕಡಿತ ಮಾಡಿ ದರ ನಿಗದಿ ಮಾಡಿವೆ. ಹೀಗಾಗಿ ಒಂದು ಟನ್ ಕಬ್ಬಿನ ದರ ಮತ್ತಷ್ಟು ಕಡಿಮೆಯಾಗುತ್ತಿದೆ. ಇದರ ಜೊತೆ ರಾಜ್ಯದ ಹಲವು ಕಾರ್ಖಾನೆಗಳು ಬಾಕಿ ಹಣವನ್ನೂ ಕಟ್ಟಿಲ್ಲ. ಕಾರ್ಖಾನೆಗಳ ಈ ನಡೆಗಳೇ ರೈತರ ಆಕ್ರೋಶಕ್ಕೆ ಕಾರಣವಾಗಿವೆ. ಟನ್ ಕಬ್ಬಿಗೆ 3500 ರೂ ನೀಡಲೇಬೇಕೆಂದು ಕಬ್ಬು ಬೆಳೆಗಾರರ ಪಟ್ಟು ಹಿಡಿದಿದ್ದಾರೆ.
ದರ ನಿಗದಿ ಮಾಡದಿದ್ದರೆ ಇಡೀ ರಾಜ್ಯಕ್ಕೆ ಕಿಚ್ಚು ಹತ್ತುತ್ತದೆ: ಬಿವೈ ವಿಜಯೇಂದ್ರ :
ಇಂದು ಸಂಜೆ 5 ಗಂಟೆಯೊಳಗೆ ಸ್ಥಳಕ್ಕೆ ಅಧಿಕಾರಿಗಳು ಬರ್ತಾರೋ, ಉಸ್ತುವಾರಿ ಸಚಿವರು ಬರ್ತಾರೋ, ಸಿಎಂ ಬರ್ತಾರೋ ಗೊತ್ತಿಲ್ಲ. ಅವರು ಬಂದು ದರ ನಿಗದಿ ಮಾಡುವವರೆಗೂ ಇಲ್ಲೇ ಇರುತ್ತೇನೆ. ನಾಳೆ ನನ್ನ ಹುಟ್ಟು ಹಬ್ಬ ಬೆಂಗಳೂರಿಗೆ ಹೋಗಬೇಕಿತ್ತು. ಆದರೆ ದರ ನಿಗದಿ ಆಗುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ. ಕಬ್ಬಿಗೆ ದರ ನಿಗದಿ ಮಾಡದಿದ್ದರೆ ಇಡೀ ರಾಜ್ಯಕ್ಕೆ ಕಿಚ್ಚು ಹತ್ತುತ್ತದೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ, ಸಕ್ಕರೆ ಕಾರ್ಖಾನೆಗಳ ಪರ ವಕಾಲತ್ತು ವಹಿಸಿಕೊಂಡು ಬಂದಿಲ್ಲ. ರೈತನ ಬೆನ್ನೆಲುಬಾಗಿ ನಿಲ್ಲುವುದು ಪ್ರತಿಯೊಂದು ಪಕ್ಷದ ಕರ್ತವ್ಯ. ರೈತರ ಸ್ವಾಭಿಮಾನಕ್ಕೆ ಧಕ್ಕೆ ತಂದ್ರೇ ದೇವರು ಒಳ್ಳೆಯದು ಮಾಡಲ್ಲ. ಆರು ದಿನದಿಂದ ರೈತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದರೂ ಮುಖ್ಯಮಂತ್ರಿ, ಸಚಿವರಿಗೆ ನಿಮ್ಮ ಬಳಿ ಬರಲು ಸಮಯ ಸಿಕ್ಕಿಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನಷ್ಟು ಓದಿರಿ :
ರೈಸಿಂಗ್ ಸ್ಟಾರ್ ಏಷ್ಯಾಕಪ್ಗೆ ಭಾರತ ತಂಡ ಪ್ರಕಟ