Belagavi News:
ಬಾಲಿವುಡ್ ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಹಾಗೂ ಖ್ಯಾತ ನಿರ್ಮಾಪಕ ಆದಿತ್ಯ ಚೋಪ್ರಾ ನಡುವೆ ನಡೆದ ರಹಸ್ಯ ಸಭೆ ಇದೀಗ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕೆಲ ವಿಚಾರಗಳಿಂದಾಗಿ ಇಬ್ಬರ ನಡುವೆ ಹಿಂದೆ ಅಸಮಾಧಾನ ಉಂಟಾಗಿತ್ತು ಎಂದು ಹೇಳಲಾಗುತ್ತಿದ್ದು, ಇದೀಗ ಇಬ್ಬರು ಅಂದಾನ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಹೊರಬಂದಿದೆ.
ಮಾಹಿತಿ ಪ್ರಕಾರ, ಇಬ್ಬರೂ 'ಯಶ್ ರಾಜ್ ಫಿಲಂ' ಕಚೇರಿಯಲ್ಲಿ ಗೌಪ್ಯವಾಗಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಬೇಟಿ ಸಂಪೂರ್ಣವಾಗಿ ರಹಸ್ಯವಾಗಿದ್ದು, ಹಳೆಯ ಭಿನ್ನಾಭಿಪ್ರಾಯಗಳನ್ನು ಮರೆತು ಹೊಸ ಸಹಕಾರದ ದಾರಿಯನ್ನು ತೆರೆಯಲಾಗಿದೆ ಎಂದು ಊಹಾಪೋಹಗಳು ಹರಡಿವೆ. ಶೀಘ್ರದಲ್ಲೇ ಹೊಸ ಸಿನಿಮಾ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ.
ರಣವೀರ್ ಸಿಂಗ್ ಈಗ ಬಾಲಿವುಡ್ ನಲ್ಲಿ ಯಶಸ್ಸಿನ ಉತ್ತಂಗದಲ್ಲಿದ್ದಾರೆ. ಬ್ಯಾಕ್ ಟು ಬ್ಯಾಕ್ ಎರಡು ಭರ್ಜರಿ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಕೇವಲ ನಾಲ್ಕು ತಿಂಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿದ್ದಾರೆ. ಸದ್ಯ ಅವರು ಪ್ರಮುಖ ನಿರ್ಮಾಪಕರು,ನಿರ್ದೇಶಕರು ಹಾಗೂ ಬ್ರ್ಯಾಂಡ್ ಗಳ ಮೊದಲ ಆಯ್ಕೆಯಾಗಿದ್ದಾರೆ.
ಈ ನಡುವೆ, ರಣವೀರ್ ಸಿಂಗ್ ತಮ್ಮ ಚಿತ್ರರಂಗದ ಆರಂಭಕ್ಕೆ ಕಾರಣರಾದ ಯಾತ ನಿರ್ಮಾಪಕ ಆದಿತ್ಯ ಚೋಪ್ರಾ ಅವರನ್ನು ಭೇಟಿಯಾಗಿ ನಡೆಸಿದ ಈ ಮಾತುಕತೆ, ಮುಂದಿನ ದಿನಗಳಲ್ಲಿ ದೊಡ್ಡ ಸಿನಿಮಾ ಪ್ರಕಾರಕ್ಕೆ ನಾಂದಿ ಹಾಡಬಹುದು ಎಂಬ ನಿರೀಕ್ಷೆ ಬಾಲಿವುಡ್ ವಲಯದಲ್ಲಿ ವ್ಯಕ್ತವಾಗಿದೆ.
ಯಶ್ ರಾಜ್ ಫಿಲಂಸ್ ಕಚೇರಿಯಲ್ಲಿ ನಡೆದ ಗೌಪ್ಯ ಸಭೆ ಇದೀಗ ಬಾಲಿವುಡ್ ಅಂಗಳದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ, ನಟ ರಣವೀರ್ ಸಿಂಗ್ ಅವರ ಇತ್ತೀಚಿನ ಬಿಗ್ ಹಿಟ್ ಸಿನಿಮಾ "ಧುರಂಧರ" ಪಡೆದ ಭರ್ಜರಿ ಯಶಸ್ಸು ನಿರ್ಮಾಪಕ ಆದಿತ್ಯ ಚೋಪ್ರಾ ಗೆ ವೈಯಕ್ತಿಕವಾಗಿ ಸಂತೋಷ ತಂದಿದೆ ಎಂದು ಹೇಳಲಾಗುತ್ತಿದೆ.
ರಣಧೀರ ಸಿಂಗ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿ, ಅವರ ವೃತ್ತಿ ಜೀವನಕ್ಕೆ ಬಲವಾದ ಅಡಿಪಾಯ ಹಾಕಿದವರು ಆದಿತ್ಯ ಚೋಪ್ರಾ ಎಂಬುದು ಗಮನಾರ್ಹ. ಈ ಹಿನ್ನೆಲೆ ಇಬ್ಬರು ನಡುವಿನ ಬಾಂಧವ್ಯವು ಸದಾ ವಿಶೇಷವಾಗಿದ್ದರು, ಕಳೆದ ಕೆಲವು ವರ್ಷಗಳಿಂದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು ಎಂಬ ವರದಿಗಳು ಹೊರಬಂದಿದ್ದವು.
ಇತ್ತೀಚೆಗೆ ವೈ ಆರ್ ಎಫ್ ಕಚೇರಿಯಲ್ಲಿ ನಡೆದ ಈ ರಹಸ್ಯ ಸಭೆಯಲ್ಲಿ ಆ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಭೆಯ ವೇಳೆ ಇಬ್ಬರು ಪರಸ್ಪರ ಆಲಂಗಿಸಿಕೊಂಡು, ಹಳೆಯ ವಿಚಾರಗಳನ್ನು ಮರೆತು ಮುಂದಿನ ಸಹಕಾರದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಈ ಸುದೀರ್ಘ ಮಾತುಕತೆ ಧುರಂಧರ ಸಿನಿಮಾದ ಯಶಸ್ಸು ಅವರ ಇತ್ತೀಚಿನ ವೃತ್ತಿ ಜೀವನ ಗತಿ ಹಾಗೂ ಭವಿಷ್ಯದ ಸಿನಿಮಾ ಯೋಜನೆಗಳ ಕುರಿತು ಗಂಭೀರ ಚರ್ಚೆ ನಡೆದಿದ್ದು, ಮುಂದಿನ ದಿನಗಳಲ್ಲಿ ಇಬ್ಬರು ಮತ್ತೆ ಒಂದಾಗಿ ಕೆಲಸ ಮಾಡುವ ಸಾಧ್ಯತೆ ದಟ್ಟವಾಗಿದೆ.
ಈ ಬೆಳವಣಿಗೆ ಬಾಲಿವುಡ್ ನಲ್ಲಿ ಹೊಸ ಕುತೂಹಲ ಹುಟ್ಟಿಸಿದ್ದು, ಶೀಘ್ರದಲ್ಲೇ ವೈ ಆರ್ ಎಫ್ ಮತ್ತು ರಣವೀರ್ ಸಿಂಗ್ ಕಾಂಬಿನೇಷನ್ ನಲ್ಲಿ ದೊಡ್ಡ ಘೋಷಣೆ ಹೊರಬರ ಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ರಣವೀರ್ ಸಿಂಗ್ ಮತ್ತು ಆದಿತ್ಯ ಚೋಪ್ರಾ ಮತ್ತೆ ಒಂದಾಗುವ ಸಾಧ್ಯತೆ :
ವೈ ಆರ್ ಎಫ್ ಕಚೇರಿಯಲ್ಲಿ ನಡೆದ ರಹಸ್ಯ ಸಭೆಯು ಬಾಲಿವುಡ್ ನಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿಸಿದ್ದು, ನಟ ರಣವೀರ್ ಸಿಂಗ್ ಮತ್ತು ನಿರ್ಮಾಪಕ ಆದಿತ್ಯ ಚೋಪ್ರಾ ಮತ್ತು ಕೈಜೋಡಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ತಿಳಿಸುವೆ.
ಮಾಹಿತಿ ಪ್ರಕಾರ, ಈ ಸಭೆಯಲ್ಲಿ ಇಬ್ಬರೂ ಒಟ್ಟಾಗಿ ದೊಡ್ಡ ಬಜೆಟ್ ಸಿನಿಮಾ ಒಂದನ್ನು ಮಾಡಲು ಆಸಕ್ತಿ ತೋರಿಸಿದ್ದಾರೆ. ಮುಂದಿನ ಆರು ತಿಂಗಳೊಳಗೆ ರಣವೀರ್ ಸಿಂಗ್ ಗಾಗಿ ಭರ್ಜರಿ ಕಥೆ ಸಿದ್ಧಪಡಿಸಿ ತರಲಾಗುವುದು ಎಂದು ಆದಿತ್ಯ ಚೋಪ್ರಾ ಬರವಸೆ ನೀಡಿದ್ದಾರೆ. ಈ ಯೋಜನೆಗೆ ಸಂಬಂಧಿಸಿ ದಂತೆ ಆರಂಭಿಕ ಚರ್ಚೆಗಳು ನಡೆದಿದ್ದು , ರಣವೀರ್ ಕೂಡ ವೈ ಆರ್ ಎಫ್ ಕಥೆಯನ್ನು ಕೇಳಲು ಕಾತುರರಾಗಿದ್ದಾರೆ ಎನ್ನಲಾಗಿದೆ.
ರಣವೀರ್ ಸಿಂಗ್ ಅವರಿಗೆ ಯಶ್ ರಾಜ್ ಫಿಲಂ ಬ್ಯಾನರ್ ಗೆ ಮರಳುವುದು 'ತವರು ಮನೆಗೆ ಮರಳಿದಷ್ಟು ವಿಶೇಷ' ಎಂದು ಚಿತ್ರರಂಗದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಈ ಸಹಕಾರ ಮತ್ತೆ ಆರಂಭವಾದರೆ, ಬಾಲಿವುಡ್ ನಲ್ಲಿ ಮತ್ತೊಂದು ದೊಡ್ಡ ಹಿಟ್ ಕಾಂಬಿನೇಷನ್ ಮೂಡಿಬರುವ ನಿರೀಕ್ಷೆ ಇದೆ.
ಇದೇ ವೇಳೆ, ರಣವೀರ್ ಸಿಂಗ್ ಮತ್ತೊಂದು ದೊಡ್ಡ ಸಾಹಸಕ್ಕೂ ಕೈ ಹಾಕಿದ್ದಾರೆ. ಖ್ಯಾತ ಲೇಖಕ ಅಮಿತ್ ತ್ರಿಪಾಠಿ ಅವರ ಬೆಸ್ಟ್ ಸೆಲ್ಲರ್ ಕಾದಂಬರಿ 'ಇಮಾರ್ಟಲ್ಸ್ ಆಫ್ ಮೆಲುಹ' ಚಿತ್ರದ ಹಕ್ಕುಗಳನ್ನು ಅವರು ಪಡೆದುಕೊಂಡಿದ್ದು, ಈ ಸಿನಿಮಾ ಪ್ರಸ್ತುತ ಸ್ಕ್ರಿಪ್ಟಿಂಗ್ ಹಂತದಲ್ಲಿದೆ.
Also Read:
ಚೋಳರ ಕಾಲದ ತಾಮ್ರ ಫಲಕಗಳನ್ನು ಭಾರತಕ್ಕೆ ಹಸ್ತಾಂತರಿಸಿದ ನೆದರ್ಲ್ಯಾಂಡ್ಸ್