belagavi news:
ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿದ್ದು, ನಟರಾಜಕಾರಣಿ ವಿಜಯ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಸರ್ಕಾರ ರಚಿಸಲು ಸಾಧ್ಯವಾಗದ ಬೆಂಬಲ ದೊರೆಯುವ ಹಂತ ತಲುಪಿದೆ. ಭಾರತೀಯ ಕಮ್ಯೂನಿಸ್ಟ್ ಪಕ್ಷ(ಸಿಪಿಐ) ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾಡಿ) ಹಾಗೂ ವಿದುತಲೈ ಚಿರುತೈಗಲ್ ಕಚ್ಚಿ ಪಕ್ಷಗಳು ವಿಜಯವರಿಗೆ ಬೆಂಬಲ ಘೋಷಿಸಿವೆ. ಆದರೆ ವಿಸಿಕೆ ಇನ್ನು ಅಧಿಕೃತ ಬೆಂಬಲ ಪಕ್ಷ ಸಲ್ಲಿಸಿಲ್ಲ.
ಈ ನಡುವೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೂಡ ಸರ್ಕಾರ ರಚನೆಗೆ ಬೆಂಬಲ ನೀಡುವುದಾಗಿ ತಿಳಿಸಿದೆ. ಈ ಬೆಳವಣಿಗೆಗಳಿಗಿಂತ ತಮಿಳುನಾಡು ವಿಧಾನಸಭೆಯಲ್ಲಿ ಪಿವಿಕೆ ಪಕ್ಷವು ಬಹುಮತಕ್ಕೆ ಇನ್ನಷ್ಟು ಸಮೀಪಿಸಿದ್ದು, ವಿಜಯ್ ಇಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಅಧಿಕೃತ ಮೂಲಗಳ ಪ್ರಕಾರ, ತಮಿಳಿಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ಅವರು ಶುಕ್ರವಾರ ಸಂಜೆ ರಾಜ್ಯಪಾಲರನ್ನು ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಈ ವೇಳೆ 116 ಸದಸ್ಯರ ಬೆಂಬಲ ಹೊಂದಿರುವ ಪತ್ರವನ್ನು ರಾಜ್ಯಪಾಲರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಈ ಕುರಿತು ರಾಜ್ಯಪಾಲರ ಕಚೇರಿಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ. ಸಭೆಯ ವೇಳೆ ಮೈತ್ರಿ ಪಕ್ಷಗಳ ಬೆಂಬಲ ಪತ್ರಗಳನ್ನು ಸಲ್ಲಿಸಿದ ವಿಜಯ್, ಬಹುಮತದ ಬೆಂಬಲ ಹೊಂದಿರುವ ಏಕೈಕ ಅತಿ ದೊಡ್ಡ ಪಕ್ಷದ ನಾಯಕನಾಗಿ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಟಿವಿಕೆ ಮೂಲಗಳು ತಿಳಿಸಿವೆ.
ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ ತಿವಿಕೆ ಪಕ್ಷದ ಸಂಖ್ಯಾಬಲ ಮತ್ತಷ್ಟು ಬಲಗೊಂಡಿದೆ. ಕಾಂಗ್ರೆಸ್, ಸಿಪಿಐ ಹಾಗೂ ಸಿಪಿಐ (ಎಂ) ಪಕ್ಷ ಗಳ ಬೆಂಬಲದೊಂದಿಗೆ ವಿಜಯ ನೇತೃತ್ವದ ತಮಿಳಿಗ ವೆಟ್ರಿ ಕಳಗಂ ಪಕ್ಷದ ಒಟ್ಟು ಬೆಂಬಲ ಸಂಖ್ಯೆ 116 ಕ್ಕೆ ಏರಿಕೆಯಾಗಿದೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ ಅಗತ್ಯವಿರುವ ಸಂಖ್ಯೆ 118,ಟಿವಿಕೆ ಪಕ್ಷದ ಬಳಿ 107 ಶಾಸಕರಿಂದ್ದು, ಕಾಂಗ್ರೆಸ್ನ ಐದು ಶಾಸಕರು, ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳ ತಲಾ ಇಬ್ಬರು ಶಾಸಕರು ಬೆಂಬಲ ನೀಡಿರುವುದರಿಂದ ವಿಜಯ್ ಇದೀಗ ಮ್ಯಾಜಿಕ್ ನಂಬರ್ ಕೇವಲ ಎರಡು ಸ್ಥಾನಗಳ ಅಂತರದಲ್ಲಿದ್ದಾರೆ. ಆದರೆ ವಿದುತಲೈ ಚಿರು ತೈಗಲ್ ಕಚ್ಚಿ ಇನ್ನು ಅಧಿಕೃತ ಬೆಂಬಲ ಪತ್ರವನ್ನು ಹಸ್ತಾಂತರಿಸಿಲ್ಲ.
ಈ ಹಿನ್ನೆಲೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಮುಂದುವರೆದಿದೆ. ಇದಕ್ಕೂ ಮೊದಲು ಸರ್ಕಾರ ರಚನೆ ವಿಚಾರದಲ್ಲಿ ಟಿ ವಿ ಕೆ ಮತ್ತು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೆಕರ್ ನಡುವೆ ರಾಜಕೀಯ ಬಿಕ್ಕಟ್ಟು ಉಂಟಾಗಿದ್ದು, ಇದರಿಂದ ಸರ್ಕಾರ ರಚನೆ ಪ್ರಕ್ರಿಯೆ ವಿಳಂಬವಾಗಿತ್ತು. ಇದೀಗ ಕಾಂಗ್ರೆಸ್ ಸೇರಿದಂತೆ ಇನ್ನೂ ಎರಡು ಪಕ್ಷಗಳ ಬೇಸರ ಬೆಂಬಲ ದೊರೆತಿರುವುದರಿಂದ ವಿಜಯ್ ಮುಖ್ಯಮಂತ್ರಿ ಹಾಗೂ ಹಾದಿ ಇನ್ನಷ್ಟು ಸುಗಮವಾಗಿದೆ.
ತಮಿಳುನಾಡಿನಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ವಿಳಂಬವಾಗಿರುವ ಹಿನ್ನೆಲೆ, ಟಿವಿಕೆ ಕಾರ್ಯಕರ್ತರು ರಾಜ್ಯಪಾಲರ ನಡುವೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಚೆನ್ನೈನ ಲೋಕ ಭವನದ ಹೊರಗೆ ಪಕ್ಷದ ಬೆಂಬಲಿಗರು ಪ್ರತಿಭಟನೆ ನಡೆಸಿ, ವಿಜಯ್ ಅವರನ್ನು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲು ತಕ್ಷಣ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಇದರ ನಡುವೆ ಭಾರತ ಕಮ್ಯುನಿಸ್ಟ್ ಪಕ್ಷ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ರಾಜ್ಯಪಾಲರ ನಡುವೆ ಟಿಕೆ ವ್ಯಕ್ತಪಡಿಸಿದರು. ಚುನಾವಣೆಯ ಬಳಿಕ ಯಾವುದೇ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆಯದ ಸಂದರ್ಭದಲ್ಲಿಯೂ ಏಕೈಕ ಅತಿ ದೊಡ್ಡ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕಾಗಿತ್ತು ಎಂದು ಹೇಳಿದ್ದಾರೆ.
ಟಿವಿಕೆ ನಾಯಕ ವಿಜಯ್ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು, ರಾಜ್ಯಪಾಲರು ಅಗತ್ಯ ಸಹಿಗಳೊಂದಿಗೆ ಅಧಿಕೃತ ಬೆಂಬಲ ಪತ್ರ ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಈ ನಡೆ ಸರ್ಕಾರ ರಚನೆ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿದೆ ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಆರೋಪಿಸಿದ್ದಾರೆ. ಅವರು ರಾಜ್ಯಪಾಲರ ಕ್ರಮವು ಉದ್ದೇಶಪೂರ್ವಕವಾಗಿ ಬಿಕ್ಕಟ್ಟು ಸೃಷ್ಟಿಸಿ ಎಂದು ಟೀಕಿಸಿದ್ದಾರೆ.
ಇದೇ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಪ್ರಜಾ ಸತ್ತಾತ್ಮಕವಾಗಿ ಸರ್ಕಾರ ರಚನೆ ಖಚಿತವಾಗಬೇಕು ಎಂಬ ಉದ್ದೇಶದಿಂದ ಸಿಪಿಐ, ಸಿಪಿಐ (ಎಂ) ಹಾಗೂ ವಿದುತಲೈ ಚಿರುತೈಗಲ ಕಚ್ಚಿ ಪಕ್ಷಗಳು ಟಿವಿಕೆಗೆ ಬೆಂಬಲ ನೀಡಲು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ. ಈ ಬೆಂಬಲದಿಂದ ವಿಜಯ ನೇತೃತ್ವದ ಟಿವಿಕೆ ಸರ್ಕಾರ ರಚನೆ ಹಾದಿ ಸುಗಮವಾಗಿದ್ದರು, ಬಹುಮತಕ್ಕೆ ಇನ್ನು ಎರಡು ಸ್ಥಾನಗಳ ಕೊರತೆ ಉಳಿದಿದೆ. ವಿಸಿ ಕೆ ಇನ್ನು ಅಧಿಕೃತ ಬೆಂಬಲ ಪತ್ರ ಹಸ್ತಾಂತರಿಸದಿರುವ ಕಾರಣ, ಸರ್ಕಾರ ರಚನೆ ಕುರಿತ ಅನಿಶ್ಚಿತತೆ ಮುಂದುವರೆದಿದೆ
Also Read: