Belagavi News:
Telegram Blocked in India: ನೀಟ್ ಮರುಪರೀಕ್ಷೆಗೆ ಮುನ್ನ ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಜೂನ್ 27ರವರೆಗೆ ಮೆಸೇಜಿಂಗ್ ಆ್ಯಪ್ ಟೆಲಿಗ್ರಾಮ್ ಮೇಲೆ ನಿಷೇಧ ಹೇರಲಾಗಿದೆ. ಜೊತೆಗೆ ಟೆಲಿಗ್ರಾಮ್ ನ ಮೆಸೇಜ್ ಎಡಿಟಿಂಗ್ ಫೀಚರ್ ಅನ್ನು ಜೂನ್ 30ರವರೆಗೆ ನಿಷ್ಕ್ರಿಯಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸರ್ಕಾರದ ನಿರ್ಧಾರವನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ (NTA) ಸ್ವಾಗತಿಸಿದೆ. ವಂಚನೆ ಸಿಂಡಿಕೇಟ್ ಗಳು ನೀಟ್ ಅಕಾಂಕ್ಷಿಗಳನ್ನು ಗುರಿಯಾಗಿಸಿ ವಂಚನೆ ಮಾಡುವುದು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯ ಸುಳ್ಳು ವಂದತಿಗಳನ್ನು ಹರಡಲು ಟೆಲಿಗ್ರಾಮ್ ಅನ್ನು ಬಳಸುತ್ತಿದ್ದವು ಎಂದು NTA ಆರೋಪಿಸಿದೆ.
NTA ಮತ್ತು ರಾಜ್ಯ ಪೊಲೀಸರಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ( I4C ) ಹಲವಾರು ಟೆಲಿಗ್ರಾಮ್ ಚಾನೆಲ್ ಗಳು, ಗ್ರೂಪ್ ಗಳು ಹಾಗೂ ಬಾಟ್ ಗಳನ್ನು ಗುರುತಿಸಿ ಮುಚ್ಚಲು ಸಹಾಯ ಮಾಡಿದೆ. ಈ ಕ್ರಮದ ಮೂಲಕ ಪರೀಕ್ಷಾ ಆಕ್ರಮಗಳನ್ನು ತಡೆಯುವ ಉದ್ದೇಶ ಹೊಂದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈಯಕ್ತಿಕ ಚಾನೆಲ್ ಗಳ ವಿರುದ್ಧ ಕ್ರಮ ಕೈಗೊಂಡರು ಬೆದರಿಕೆಯನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗದೆ ಹಿನ್ನೆಲೆಯಲ್ಲಿ ಪ್ಲಾಟ್ ಫಾರ್ಮ್ ಮಟ್ಟದ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ NTA ತಿಳಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು " ಮರು ಪರೀಕ್ಷೆ" ಹೆಸರಿನಲ್ಲಿ ಕಾರ್ಯನಿರ್ವಹಿಸುವ ಕೆಲವು ಟೆಲಿಗ್ರಾಮ್ ಚಾನೆಲ್ ಗಳು ನಕಲಿ ಪ್ರಶ್ನೆ ಪತ್ರಿಕೆಗಳನ್ನು ಒದಗಿಸುವ ನೆಪದಲ್ಲಿ ಅಕಾಂಕ್ಷಿ ಗಳಿಂದ ಸಾವಿರಾರು ರೂಪಾಯಿಗಳಿಂದ ಲಕ್ಷಾಂತರ ರೂಪಾಯಿವರೆಗೆ ಹಣ ವಸೂಲಿ, ಮಾಡುತ್ತಿದ್ದವು ಎಂದು ಆರೋಪಿಸಲಾಗಿದೆ.
ಟೆಲಿಗ್ರಾಮ್ ನ ಎಡಿಟಿಂಗ್ ವೈಶಿಷ್ಟ್ಯವು ನಿರ್ವಾಹಕರಿಗೆ ಹಳೆಯ ಪೈಲ್ ಗಳನ್ನು ಹೊಸದಾಗಿ ಬದಲಾಯಿಸಲು ಅವಕಾಶ ನೀಡುತ್ತಿತ್ತು. ಆದರೆ ಮೂಲ ಟೈಮ್ ಸ್ಟ್ಯಾಂಪ್ ಉಳಿಯುತ್ತಿದ್ದ ಕಾರಣ, ಪರೀಕ್ಷೆಯ ನಂತರ ತಪ್ಪು ಮಾಹಿತಿಯ " ಪುರಾವೆ" ಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತಿತ್ತು ಎಂದು NTA ತಿಳಿಸಿದೆ.
ಈ ನಿರ್ಬಂಧವು ನಿಜವಾದ ಬಳಕೆದಾರರ ಮೇಲೆ ಪರಿಣಾಮ ಬೀರುವುದನ್ನು ಮಂಡಳಿ ಒಪ್ಪಿಕೊಂಡಿದ್ದರೂ, ಪರೀಕ್ಷೆಯ ಸಮಗ್ರತೆಯನ್ನು ಕಾಪಾಡುವ ಉದ್ದೇಶದಿಂದ ಇದು ತಾತ್ಕಾಲಿಕವಾಗಿ ಜಾರಿಯಲ್ಲಿರುತ್ತದೆ ಎಂದು ಸ್ಪಷ್ಟಪಡಿಸಿದೆ. ಜೂನ್ 21 ರಂದು ನಿಗದಿಯಾಗಿರುವ ಮರು ಪರೀಕ್ಷೆ ಯೋಜನೆಯಂತೆ ನಡೆಯಲಿದೆ ಎಂದು ಭರವಸೆ ನೀಡಿದ್ದು, ವಿದ್ಯಾರ್ಥಿಗಳು NTA ನೀಡುವ ಅಧಿಕೃತ ಮಾಹಿತಿಯನ್ನೇ ಮಾತ್ರ ಅವಲಂಬಿಸಬೇಕು ಎಂದು ಮನವಿ ಮಾಡಿದೆ.
NTA ಹೊಸ ಪ್ಲಾನ್: ಜೂನ್ 21ರಂದು NEET UG 2026 ಮರು ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪರೀಕ್ಷೆಗೆ ಸಂಬಂಧಿಸಿದ ವದಂತಿಗಳು ನಿರಂತರವಾಗಿ ಹರಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಪರೀಕ್ಷಾ ಮಂಡಳಿ NTA ಹೊಸ ಕ್ರಮ ಕೈಗೊಂಡಿದೆ.
ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ NEET UG ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಅನುಮಾನಾಸ್ಪದ ಘಟನೆಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಅಥವಾ ವಂಚನೆ ಸಂಬಂಧಿತ ಮಾಹಿತಿಯನ್ನು ವರದಿ ಮಾಡಲು ವಿಶೇಷ ವೇದಿಕೆಯನ್ನು (portal) ಆರಂಭಿಸಲಾಗಿದೆ. ಈ ವೇದಿಕೆಯ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರು ಶಂಕಾಸ್ಪದ ಚಟುವಟಿಕೆಗಳನ್ನು ನೇರವಾಗಿ ದೂರು ನೀಡಬಹುದು ಎಂದು NTA ತಿಳಿಸಿದೆ.
ಪರೀಕ್ಷಾ ಪಾರದರ್ಶಕತೆ ಮತ್ತು ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಅಧಿಕೃತ ಮಾಹಿತಿಗಾಗಿ NTA ಪ್ರಕಟಣೆಗಳನ್ನೇ ಅವಲಂಬಿಸುವಂತೆ ಮನವಿ ಮಾಡಲಾಗಿದೆ.
Also Read:
ಟ್ರಂಪ್ ಮನಸ್ಥಿತಿ ಅರ್ಥೈಸಲು ಇರಾನ್ ನಿಂದ ಹೊಸ ಪ್ರಯೋಗ