<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ತಾಜ್ ಮಹಲ್ ಗೆ ತಾತ್ಕಾಲಿಕ ನಿರ್ಬಂಧ

ತಾಜ್ ಮಹಲ್ ಗೆ ತಾತ್ಕಾಲಿಕ ನಿರ್ಬಂಧ
Summary: ಪ್ರೇಮಿಗಳ ಪ್ರಸಿದ್ಧ ಸ್ಥಳವಾಗಿರುವ ತಾಜ್ ಮಹಲ್ ಗೆ ಪ್ರವೇಶಿಸಲು ನಾಳೆ ಅಂದರೆ, ಮಂಗಳವಾರದಂದು ಎರಡುವರೆ ಗಂಟೆಗಳವರೆಗೆ ತಾತ್ಕಾಲಿಕ ನಿರ್ಬಂಧವನ್ನು ಹಾಕಲಾಗಿತ್ತು. ಕಾರಣವೇನು ನೋಡೋಣ ಬನ್ನಿ...

Belagavi news:

ಇಂದು ಬೆಳಿಗ್ಗೆ ಆಗ್ರಾದಲ್ಲಿರುವ ತಾಜ್ ಮಹಲ್ ಪ್ರವಾಸಿಗರಿಗೆ ಪ್ರವೇಶದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.ಭದ್ರತಾ ಹಾಗೂ ಆಡಳಿತಾತ್ಮಕ ಕಾರಣಗಳಿಂದ ನಾಳೆ ಅಂದರೆ ಫೆಬ್ರವರಿ ಹತ್ತರಂದು , ಎರಡು ಗಂಟೆಗಳವರೆಗೆ ತಾಜ್ ಮಹಲ್ ಪ್ರವಾಸವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಈ ಸಮಯದಲ್ಲಿ ಪ್ರವಾಸಿಗರು ತಾಜ್ ಮಹಲ್ ವೀಕ್ಷಣೆಗೆ ಅವಕಾಶ ಇರುವುದಿಲ್ಲ ಎಂದು ಅಧಿಕಾರಿಗಳು ಮೊದಲೇ ತಿಳಿಸಿದ್ದರೂ.

ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ತಮ್ಮ ಪ್ರವಾಸ ಯೋಜನೆ ಮಾಡುವಾಗ ಈ ಸಮಯದ ಬದಲಾವಣೆಯನ್ನು ಗಮನದಲ್ಲಿಟ್ಟುಕೊಡಬೇಕು ಎಂದು ಎರಡು ದಿನಗಳ ಹಿಂದೆಯೇ ಆದೇಶವನ್ನು ಹೊರಡಿಸಿದ್ದರು.ತಾಜ್ ಮಹಲ್ ಇದೊಂದು ಭಾರತದ ಪ್ರಮುಖ ಐತಿಹಾಸಿಕ ಸ್ಮಾರಕವಾಗಿದ್ದು,ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಇಲಾಖೆಯನ್ನು ಭೇಟಿ ನೀಡುವುದಾಗಿ ಮನವಿಯನ್ನು ಮಾಡಿಕೊಂಡಿದ್ದರು.

ಭಾರತೀಯ ಪುರಾತತ್ವ ಇಲಾಖೆಯಿಂದ ಪ್ರೇಮಿಗಳಿಗೆ ಬೇಸರದ ಸಂಗತಿಯನ್ನು ಹೊರಡಿಸಿದ್ದಾರೆ. ಫೆಬ್ರವರಿ 7 ರಿಂದ ಫೆಬ್ರುವರಿ 14ರವರೆಗೆ ವ್ಯಾಲೆಂಟೈನ್ ವಾರದ ಖುಷಿಯಲ್ಲಿರುವ ಪ್ರೇಮಿಗಳಿಗೆ ಇದೊಂದು ದೊಡ್ಡ ಬೇಸರದ ಸಂಗತಿಯಾಗಿದೆ. ವಿಶೇಷವಾಗಿ ಈ ವ್ಯಾಲೆಂಟೈನ್ ವಾರದಲ್ಲಿ ಹಲವಾರು ಪ್ರೇಮಿಗಳು ಹೆಚ್ಚಾಗಿ ಭೇಟಿ ನೀಡುವ ಪ್ರಸಿದ್ಧಿಯಾದ ಸ್ಥಳವಾಗಿರುವ ತಾಜ್ ಮಹಲ್ ಅನ್ನು ಎರಡು ಗಂಟೆಗಳವರೆಗೆ ತಾತ್ಕಾಲಿಕ ನಿರ್ಬಂಧ ನೀಡಿದ್ದು ಇದೊಂದು ಬೇಸರದ ಸುದ್ದಿಯಾಗಿದೆ.

ಫೆಬ್ರುವರಿ 7ರಿಂದ 14ರವರೆಗೆ ಈ ತಿಂಗಳ ಈ ಒಂದು ವಾರದಲ್ಲಿ ಹಲವಾರು ಅಥವಾ ಬಹುತೇಕ ಪ್ರವಾಸಿಗರು ಅದರಲ್ಲೂ ಪ್ರೇಮಿಗಳು ಎಂದರೆ ಎರಡು ಗಂಟೆಗಳವರೆಗೆ ಪ್ರವೇಶ ನಿರ್ಬಂಧ ಮಾಡಿದ್ದು,ಅದು ಫೆಬ್ರುವರಿ 10 ಅಂದರೆ ನಾಳೆ ಎರಡುವರೆ ಗಂಟೆಗಳವರೆಗೆ ಪ್ರವೇಶವನ್ನು ನಿರ್ಬಂಧ ಮಾಡಿದ್ದಾರೆ.ಎರಡುವರೆ ಗಂಟೆಗಳ ಕಾಲ ಪ್ರವಾಸಿಗರಿಗೆ ಈ ಭವ್ಯಸೋದಕ್ಕೆ ಪ್ರವೇಶ ನಿಷೇಧಿಸಲಾಗಿದೆ.

Sponsored

ಇದೇ ಸಮಯದಲ್ಲಿ ಫೆಬ್ರುವರಿ ಐದರಂದು ಭಾರತಕ್ಕೆ ಆಗಮಿಸುತ್ತಿರುವ ಸೀಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಅವರು ಫೆಬ್ರವರಿ ಹತ್ತರವರೆಗೆ ಭಾರತ ಪ್ರವಾಸದಲ್ಲಿದ್ದಾರೆ.ಇದರ ಜೊತೆಗೆ ಪ್ಯಾಟ್ರಿಕ್ ಹರ್ಮಿನ್ 2025 ರ ಅಕ್ಟೋಬರ್ ನಲ್ಲಿ

ಸೀಶೆಲ್ಸ್ ಅಧ್ಯಕ್ಷರಾಗಿ ವಹಿಸಿಕೊಂಡರು ಇದಾದ ಬಳಿಕ ಅದು ಅವರ ಮೊದಲ ಭಾರತದ ಭೇಟಿಯಾಗಿತ್ತು ಇದು ಅತ್ಯಂತ ವಿಶೇಷವಾದ ಸಂಗತಿಯಾಗಿದೆ.

ತಾಜ್ ಮಹಲ್ ಭಾರತೀಯ ಪುರಾತತ್ವ ಸಮೀಕ್ಷೆ ಪ್ರಕಾರ ನಾಳೆ ತಾಜ್ಮಹಲ್ ಅನ್ನು ನಿರ್ಬಂಧಿಸಲಾಗಿದೆ. ಸೀಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಅವರ ಪತ್ನಿ ವರುನಿಕ್ ಹರ್ಮಿನಿ ಅವರೊಂದಿಗೆ ಭೇಟಿ ನೀಡಿದ್ದಾರೆ.

ಸೀಶೆಲ್ಸ್ ಹಾಗೂ ಭಾರತ ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ 50ನೇ ವಾರ್ಷಿಕೋತ್ಸವದಲ್ಲಿದ್ದು,ಇದೇ ಸಮಯಕ್ಕೆ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನ್ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ.ಬೇಟಿಯ ಸಂದರ್ಭದಲ್ಲಿ ಪರಸ್ಪರ ಹಿತಾಸಕ್ತಿಯ ದ್ವಿಪಕ್ತಿಯ ಮತ್ತು ಪ್ರಾದೇಶಿಕ ಹಾಗೂ ಅಂತರಾಷ್ಟ್ರೀಯ ವಿಷಯಗಳ ಚರ್ಚೆಯಾಗಲಿವೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.ಇದರೊಂದಿಗೆ ವಿವಿಐಪಿ ಭೇಟಿಯ ಸಮಯದಲ್ಲಿ ಭದ್ರತಾ ಕಾರಣಗಳಿಂದಾಗಿ ತಾಜ್ ಮಹಲ್ ಗೆ ಪ್ರವಾಸಿಗರು ಪ್ರವೇಶ ನಿರ್ಬಂಧಿಸಲಾಗುತ್ತಿದೆ ಎಂದು ಎಎಸ್ಐ ಅಧಿಕ್ಷಕ ಪುರಾತತ್ವ ಶಾಸ್ತ್ರಜ್ಞ ಸ್ಮಿತಾ ಎಸ್ ಕುಮಾರ್ ಆದೇಶವನ್ನು ಹೊರಡಿಸಿದ್ದಾರೆ ಎಂದು ತಿಳಿಸಲಾಗಿದೆ.

Sponsored

ಒಟ್ಟಾರೆಯಾಗಿ ನಾಳೆ ಅಂದರೆ ಮಂಗಳವಾರ,ಪ್ರೇಮಿಗಳ ಪ್ರಸಿದ್ಧ ಸ್ಥಳವಾಗಿರುವ ತಾಜ್ ಮಹಲ್ ಪ್ರವೇಶವನ್ನು ನಾಳೆ ಬೆಳಗ್ಗೆ 9:00 ಗಂಟೆಯಿಂದ 11:30ವರೆಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧವನ್ನು ಮಾಡಲಾಗಿದೆ. ಎಲ್ಲ ಪ್ರವಾಸಿಗರು ಈ ಸಮಯದ ಬದಲಾವಣೆಯನ್ನು ಗಮನಹರಿಸಬೇಕೆಂದು ವಿನಂತಿಸಿಕೊಳ್ಳಲಾಗಿದೆ.

ಇನ್ನಷ್ಟು ಓದಿರಿ:

ಸೋಮವಾರದ ಪಂಚಾಂಗ ಭವಿಷ್ಯ: ಈ ರಾಶಿಯವರಿಗೆ ಇಂದು ಅದೃಷ್ಟದ ದಿನ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online