BELAGAVI NEWS :
ವಾಷಿಂಗ್ಟನ್ ಡಿ.ಸಿ (ಯು ಎಸ್): ಶ್ವೇತ ಭವನದ ಸೆಕ್ಯೂರಿಟಿ ಚೆಕ್ ಪಾಯಿಂಟ್ ಸಮೀಪ ಬಂದೂಕುಧಾರಿ ವ್ಯಕ್ತಿಯೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ. ಶನಿವಾರ ಸಂಜೆ ಸುಮಾರು 6 ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು, ತಕ್ಷಣವೇ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿ ಶಂಕಿತನನ್ನು ಹೊಡೆದುರುಳಿಸಿದ್ದಾರೆ.
ಘಟನೆಯಲ್ಲಿ ಗುಂಡು ತಗುಲಿ ಮತ್ತೊಬ್ಬ ವ್ಯಕ್ತಿಗೂ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿಯ ಪ್ರಕಾರ, ಸೆಕ್ಯೂರಿಟಿ ಬೂತ್ ಸಮೀಪ ಬಂದ ವ್ಯಕ್ತಿಯೊಬ್ಬ ತನ್ನ ಬ್ಯಾಗ್ ನಿಂದ ಶಸ್ತ್ರಾಸ್ತ್ರ ತೆಗೆದು ಅಚಾನಕ್ ವಾಗಿ ಗುಂಡು ಹಾರಿಸಲು ಆರಂಭಿಸಿದ್ದಾನೆ. ತಕ್ಷಣ ಪ್ರತಿಕ್ರಿಯಿಸಿದ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಪ್ರತಿ ದಾಳಿ ನಡೆದಿದ್ದು, ಶಂಕಿತ ಗಾಯಗೊಂಡಿದ್ದಾನೆ
. ಬಳಿಕ ಆಸ್ಪತ್ರೆಗೆ ಸಾಗಿಸುವ ವೇಳೆ ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೀಕ್ರೆಟ್ ಸರ್ವಿಸ್ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.
ಶ್ವೇತ ಭವನದ ಸೆಕ್ಯೂರಿಟಿ ಚೆಕ್ ಪಾಯಿಂಟ್ ಸಮೀಪ ನಡೆದ ಗುಂಡಿನ ದಾಳಿಯ ಸಂದರ್ಭವನ್ನು ಕುರಿತು ಅಮೆರಿಕ ಫೆಡರಲ್ ಬ್ಯೂರೋ ಆಫ್ ಆಫ್ ಇನ್ವೆಸ್ಟಿಗೇಷನ್ (ಎಫ್ ಬಿಐ) ನಿರ್ದೇಶಕ ಕಾಶ್ ಪಟೇಲ್ ಹೆಚ್ಚಿನ ವಿವರಗಳನ್ನು ನೀಡಿದ್ದಾರೆ.
ಅಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತರೊಬ್ಬರು ಗುಂಡಿನ ಶಬ್ದಗಳನ್ನು ಕೇಳಿದ್ದಾರೆ. ತಕ್ಷಣ ಅವರಿಗೆ ಪ್ರತಿಕಾಗೋಷ್ಠಿಯ ಕೊಠಡಿಯೊಳಗೆ ಆಶ್ರಯ ಪಡೆಯಲು ಸೂಚಿಸಲಾಗಿದ್ದು, ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಅವರಿಗೆ ರಕ್ಷಣೆ ಒದಗಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಘಟನೆ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲೇ ಇದ್ದರು ಎಂದು ಕಾಶ್ ಪಟೇಲ್ ಹೇಳಿದ್ದಾರೆ.
"ಅಮೆರಿಕದಲ್ಲಿ ರಾಜಕೀಯ ಹಿಂಸಾಚಾರಗಳಿಗೆ ಯಾವುದೇ ಸ್ಥಾನವಿಲ್ಲ. ದುರದೃಷ್ಟವಶಾತ ಇಂತಹ ಘಟನೆಗಳು ಹೆಚ್ಚುತ್ತಿರುವುದು ಆತಂಕಕಾರಿ ರಾಜಕೀಯ ಹಿಂಸಾಚಾರ ಯಾವುದೇ ಸಂಬಂಧದಲ್ಲೂ ಪರಿಹಾರವಲ್ಲ. ಇದು ತಕ್ಷಣ ನಿಲ್ಲಬೇಕು" ಎಂದು ಅಮೆರಿಕ ಕಾಂಗ್ರೆಸ್ ಸದಸ್ಯ ರ್ಯಾಂಡಿ ಫೈನ್ ಹೇಳಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಶ್ವೇತ ಭವನದಲ್ಲಿ ನಡೆದ ಮತ್ತೊಂದು ಘಟನೆಯನ್ನು ಕೂಡ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಭೋಜನಕೂಟ ನಡೆಯುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದ್ದು, ಇದನ್ನು, " ಟ್ರಂಪ್ ಅವರ ಹತ್ಯೆಗೆ ನಡೆದ ಸಂಚು" ಎಂದು ಅಧಿಕಾರಿಗಳು ವರ್ಣಿಸಿದ್ದರು. ಆ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಲಿಲ್ಲ. ದಾಳಿಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂದಿಸಿ ವಿಚಾರಣೆಗೆ ಒಳಪಡಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Also Read:
ಕ್ವೆಟ್ಟಾ ರೈಲು ದುರಂತ:ಭೀಕರ ಆತ್ಮಹತ್ಯಾ ದಾಳಿಯಲ್ಲಿ 23 ಮಂದಿ ಬಲಿ, BLAಉಗ್ರರ ಕೃತ್ಯ