belagavi news :
ಇಷ್ಟು ದಿನ ತೀವ್ರ ಬಿಸಿಲಿನ ದ್ಯಗೆ ಕಂಗೆಟ್ಟಿದ್ದ ರಾಷ್ಟ್ರ ರಾಜಧಾನಿ ದೆಹಲಿ,ಇದೀಗ ಹೊಸ ಮಾದರಿಯ ಯುವ ಬೇಸರವಾಗಿದೆ ಚಳವಳಿಯತ್ತ ಗಮನಹರಿಸಿದೆ.ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ 'ಕಾಕ್ರೋಚ್ ಜನತಾ ಪಾರ್ಟಿ 'ಬೆಂಬಲಿಗರು ಜಂತರ್ ಮಂತರ್ ನಲ್ಲಿ ಸೇರಿ ಕೇಂದ್ರ ಸರ್ಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದುವರೆಗೆ ಆನ್ಲೈನ್ ವೇದಿಕೆಯಲ್ಲಿ ಮಾತ್ರ ಸಕ್ರಿಯವಾಗಿದ್ದ ಸಿಜೆಪಿ ,ಇದೀಗ ಮೊದಲ ಬಾರಿಗೆ ಬೀದಿ ಹೋರಾಟದ ಮೂಲಕ ತನ್ನ ಅಸ್ತಿತ್ವವನ್ನು ತೋರಿಸಲು ಮುಂದಾಗಿದೆ. ಯುವ ಸಮುದಾಯದ ದೊಡ್ಡ ಗುಂಪು ಜಂತರ್ ಮಂತರ್ ನಲ್ಲಿ ಸೇರಿ ಶಿಕ್ಷಣ ವ್ಯವಸ್ಥೆಯ ಪಾದರ್ಶಕತೆ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಗೆ ಸಂಬಂಧಿಸಿದ ಬೇಡಿಕೆಗಳನ್ನು ಮುಂದಿಟ್ಟಿವೆ.
ಪ್ರತಿಭಟನೆಯ ಪ್ರಮುಖ ಅಂಶವಾಗಿ ನೀಟ್ ಪರೀಕ್ಷೆ ಹಗರಣದ ವಿಚಾರವನ್ನು ಪ್ರಸ್ತಾಪಿಸಿರುವ ಬಿಜೆಪಿ ಬೆಂಬಲಿಗರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಉಂಟಾದ ಆರೋಪಗಳು ಮತ್ತು ವಿದ್ಯಾರ್ಥಿಗಳಲ್ಲಿ ಮೂಡಿರುವ ಆತಂಕಗಳಿಗೆ ಸರ್ಕಾರ ಉತ್ತರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಆರಂಭವಾದ ಚರ್ಚೆ ಇದೀಗ ಬೀದಿಗಿಳಿರುವುದು ರಾಜಕೀಯ ವಲಯದ ಗಮನ ಸೆಳೆದಿದೆ. ಯುವಕರ ಈ ಹೋರಾಟ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಮತ್ತು ಕೇಂದ್ರ ಸರಕಾರದ ಪ್ರಕ್ರಿಯೆ ಎನಿರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಅಮೇರಿಕಾದಿಂದ ಇಂದು ದೆಹಲಿಗೆ ಬಂದಿಳಿದು,ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಡಿಜಿಟಲ್ ಹೋರಾಟದ ಮೂಲಕ ಆರಂಭವಾದ ಕಾಕ್ರೋಚ್ ಜನತಾ ಹೋರಾಟ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಕುತೂಹಲವಾಗಿದೆ
ಕಳೆದ ಕೆಲವು ವಾರಗಳಿಂದ' 'ಅಭಿಜಿತ್ ದಿಪ್ಕೆ' ಎಂಬ ಹೆಸರು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ ವಿಷಯಗಳನ್ನು ವಿನೂತನ ರೀತಿಯಲ್ಲಿ ಜನರಿಗೆ ತಲುಪುವ ಮೂಲಕ ಗಮನ ಸೆಳೆದಿರುವ ಅಭಿಜಿತ್, ಮೂಲತಃ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಮೂಲದ 30 ವರ್ಷದ ಯುವಕ.
ಶೈಕ್ಷಣಿಕವಾಗಿ ಕೂಡ ಗಮನಾರ್ಹ ಸಾಧನೆ ಮಾಡಿರುವ ಅವರು, Boston university ಇಂದ ಪತ್ರಿಕೋದ್ಯಮದಲ್ಲಿ ಪದವಿ ಹಾಗೂ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ರಾಜಕೀಯ ಸಂವಹನ ಕ್ಷೇತ್ರದಲ್ಲಿ ಅವರ ಕೆಲಸದ ಶೈಲಿ ಮತ್ತು ಡಿಜಿಟಲ್ ಪ್ರಭಾವ ಅವರಿಗೆ ವಿಶಿಷ್ಟ ಗುರುತುಗಳನ್ನು ತಂದು ಕೊಟ್ಟಿದೆ.
ಎಎಪಿ ಜೊತೆಗಿನ ಪಯಣ:
ಅಭಿಜಿತ್ ದಿಪ್ಕೆ ಅವರು 2020ರ Delhi legislative Assembly Election 2020 ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿ ಸಾಮಾಜಿಕ ಮಾಧ್ಯಮ ನಿರ್ವಹಣಾ ತಂಡದ ಭಾಗವಾಗಿದ್ದರು.ಪಕ್ಷದ ಸಂದೇಶಗಳು, ಅಭಿಮಾನಿಗಳು ಹಾಗೂ ರಾಜಕೀಯ ನಿರೂಪಣೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಲುಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.
ಅವರ ಸಹೋದ್ಯೋಗಿಗಳ ಪ್ರಕಾರ, ಸಂಕೀರ್ಣ ರಾಜಕೀಯ ಬೆಳವಣಿಗೆಗಳು,ಅಂಕಿ ಅಂಶಗಳು ಮತ್ತು ನೀತಿ ವಿಷಯಗಳನ್ನು ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗುವಂತೆ ವಿವರಿಸುವ ಸಾಮರ್ಥ್ಯ ಬಜಿತ್ ಅವರ ದೊಡ್ಡ ಶಕ್ತಿಯಾಗಿದೆ.ವಿಶೇಷವಾಗಿ ವಿಡಂಬನಾತ್ಮಕ ಮೀಮ್ ಗಳು,ಸೃಜನಾತ್ಮಕ ಡಿಜಿಟಲ್ ಕಂಟೆಂಟ್ ಮತ್ತು ಸರಳ ನಿರೂಪಣೆಯ ಮೂಲಕ ಅವರು ಯುವಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಏಕೆ ಚರ್ಚೆ?ರಾಜಕೀಯ ಸಂವಹನ,ಡಿಜಿಟಲ್ ಅಭಿಯಾನಗಳು ಹಾಗೂ ಯುವ ಸಮುದಾಯದೊಂದಿಗೆ ನೇರ ಸಂಪರ್ಕ ಸಾಧಿಸುವ ಅವರ ಶೈಲಿಯೇ ಅಭಿಜಿತ್ ದಿಪ್ಕೆ ಅವರದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಗೆ ಒಳಪಡಿಸಿದೆ.ರಾಜಕೀಯ ವಿಚಾರಗಳನ್ನು ಹೊಸ ತಲೆಮಾರಿಗೆ ತಲುಪಿಸುವಲ್ಲಿ ಅವರ ಪಾತ್ರ ಮತ್ತು ಡಿಜಿಟಲ್ ತಂತ್ರಗಳು ಇದೀಗ ಹಲವರ ಕುತೂಹಲಕ್ಕೆ ಕಾರಣವಾಗಿದೆ.
ಕಾಕ್ರೋಚ್ ಜನತಾ ಪಕ್ಷ' ಹೇಗೆ ಹುಟ್ಟಿಕೊಂಡಿತು? ಸಾಮಾಜಿಕ ಮಾಧ್ಯಮದಿಂದ ಬೀದಿಯವರಿಗೆ ಬಂದ ಯುವ ಚಳುವಳಿ
'ಕಾಕ್ರೋಚ್ ಜನತಾ ಪಾರ್ಟಿ' ಸಾಂಪ್ರದಾಯಿಕ ಅರ್ಥದಲ್ಲಿ ಚುನಾವಣಾ ರಾಜಕೀಯ ಪಕ್ಷವಲ್ಲ.ಇದು ಚುನಾವಣಾ ಆಯೋಗದ ಮಾನ್ಯತೆ ಪಡೆದ ಸಂಘಟನೆಯು ಅಲ್ಲ.ಬದಲಾಗಿ,ಕೆಲವು ನ್ಯಾಯಾಂಗ ಮತ್ತು ರಾಜಕೀಯ ಬೆಳವಣಿಗೆಗಳ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಹುಟ್ಟಿಕೊಂಡ ಡಿಜಿಟಲ್ ಚಳವಳಿಯಾಗಿದೆ.
ಇದರ ಹುಟ್ಟಿಗೆ ಕಾರಣವಾದ ಘಟನೆ ಎಂದರೆ,ಸುಪ್ರೀಂ ಕೋರ್ಟ್ ನ ವಿಚಾರಣೆಯಂದರೆ ವೇಳೆ ಯುವ ನಿರುದ್ಯೋಗಿಗಳ ಬಗ್ಗೆ ನಡೆದ ಚರ್ಚೆ ಆ ಸಂದರ್ಭದಲ್ಲಿ ಯುವಕರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು.ಈ ಹಿನ್ನೆಲೆಯಲ್ಲಿ ಯುವಕರ ಅಸಮಾಧಾನ ಮತ್ತು ಹಿತಾಸಕ್ತಿಯನ್ನು ಪ್ರತಿನಿಧಿಸುವ ಹೊಸ ಸಂಕೇತದಅಗತ್ಯತೆ ಮೂಡಿತು.
ಅದೇ ಸಮಯದಲ್ಲಿ ರಾಜಕೀಯ ಸಂವಹನಕಾರ ಅಭಿಜಿತ್ ದಿಪ್ಕೆ ಈ ವಿವಾದವನ್ನು ವಿಭಿನ್ನ ರೀತಿಯಲ್ಲಿ ಜನರ ಮುಂದೆ ತಂದರು.ಯುವಕರನ್ನು ಅವಹೇಳನ ಮಾಡುವ ರೀತಿಯ ಪದ ಪ್ರಯೋಗದ ವಿರುದ್ಧ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಂಭನಾತ್ಮಕ ಪೋಸ್ಟ್ಗಳು, ಮೀಮ್ ಗಳು ಮತ್ತು ಅಭಿಯಾನಗಳನ್ನು ಆರಂಭಿಸಿದರು. "ನಿರುದ್ಯೋಗಿ ಆಗಿರುವುದು ಅಪರಾಧವೇ?" ಎಂಬ ಪ್ರಶ್ನೆಯನ್ನು ಮುಂದಿಟ್ಟು ಯಾವ ಸಮುದಾಯದ ಸಮಾದಾನಕ್ಕೆ .ಧ್ವನಿಯಾದರು.
ಇದೆಯಾ ಅಭಿಯಾನದ ಭಾಗವಾಗಿ 'ಕಾಕ್ರೋಚ್ ಜನತಾ ಪಕ್ಷ' ಎಂಬ ಪರಿಕಲ್ಪನೆ ಹುಟ್ಟಿಕೊಂಡಿತು.ಆರಂಭದಲ್ಲಿ ವ್ಯಂಗ್ಯ ಮತ್ತು ಪ್ರತಿಭಟನೆಯ ರೂಪದಲ್ಲಿದ್ದ ಈ ಹೆಸರು,ಕೆಲವೇ ವೇದಿಕೆಗಳಲ್ಲಿ ಸಾವಿರಾರು ಯುವಕರ ಬೆಂಬಲವನ್ನು ಪಡೆದುಕೊಂಡಿತು. ನಿರುದ್ಯೋಗ,ಶಿಕ್ಷಣ,ಅವಕಾಶಗಳ ಕೊರತೆ ಹಾಗೂ ಯುವಕರ ಸಮಸ್ಯೆಗಳ ಬಗ್ಗೆ ಅಸಮಾಧಾನ ಹೊಂದಿದ್ದ ಅನೇಕರು ಈ ಅಭಿಯಾನಕ್ಕೆ ಕೈಜೋಡಿಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಆರಂಭವಾದ ಈ ಚಳುವಳಿ ಶೀಘ್ರದಲ್ಲಿ ವೈರಲ್ ಆಗಿ,ವಿವಿಧ ರಾಜಕೀಯ ಪಕ್ಷಗಳ ಬೆಂಬಲೀಗರನ್ನು ಮೀರಿಸುವ ಮಟ್ಟದಲ್ಲಿ ಗಮನಿತು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈಗ ಡಿಜಿಟಲ್ ವೇದಿಕೆಯಲ್ಲಿ ಆರಂಭವಾದ ಈ ಚಳವಳಿ, ಜಂತರ್ ಮಂತರ್ ನಂತಹ ಸ್ಥಳದಲ್ಲಿ ಪ್ರತಿಭಟನೆಗಳ ಮೂಲಕ ನೆಲಮಟ್ಟದಲ್ಲೂ ತನ್ನ ಅಸ್ತಿತ್ವವನ್ನು ತೋರಿಸಲು ಮುಂದಾಗಿದ್ದಾರೆ.
'ಕಾಕ್ರೋಚ್ ಜನತಾ ಪಕ್ಷ'ದ ಉದಯವು ಯಾವ ಸಮುದಾಯದ ಅಸಮಾಧಾನ,ನಿರುದ್ಯೋಗದ ಪ್ರಶ್ನೆ ಮತ್ತು ಸಾಮಾಜಿಕ ಮಾಧ್ಯಮಗಳ ರಾಜಕೀಯ ಪ್ರಭಾವದ ಹೊಸ ಅಧ್ಯಯನವಾಗಿ ವಿಶ್ಲೇಷಸಲಾಗುತ್ತಿದೆ.
ಅಜಿತ್ ದಿಪ್ಕೆ ಸ್ಥಾಪಿಸಿರುವ ಕಾಕ್ರೋಚ್ ಜನತಾ ಪಾರ್ಟಿ ಇಂದಿನಿಂದ ಹೋರಾಟದ ಮೂಲಕ ಭಾರತಕ್ಕೆ ಅಧಿಕೃತವಾಗಿ ಕಾಲಿಟ್ಟಿದೆ. ಬಹಳ ಸಮಯದಿಂದ ಯುಎಸ್ ನಲ್ಲಿ ವಾಸಿಸುತ್ತಿರುವ ಅಭಿಜಿತ್ ಜಾಗತಿಕ ರಾಜಕೀಯವನ್ನು ಹತ್ತಿರದಿಂದ ಗಮನಿಸಿದಲ್ಲದೆ, ವಿದ್ಯಾರ್ಥಿ ಜೀವನದಲ್ಲಿ ಹಲವು ಹೋರಾಟಗಳನ್ನು ನಡೆಸಿದ್ದಾರೆ.
ಶಿಕ್ಷಣ,ನಿರುದ್ಯೋಗದ ಪ್ರಶ್ನೆಗಳೊಂದಿಗೆ ಜಂತರ್ ಮಂತರ್ ನಲ್ಲಿ ಅಭಿಜಿತ್ ದಿಪ್ಕೆ ಹೋರಾಟ
ಮಾಹಿತಿ ಪ್ರಕಾರ ,ಶಿಕ್ಷಣ ವ್ಯವಸ್ಥೆ ಮತ್ತು ನಿರುದ್ಯೋಗದಂತ ಪ್ರಮುಖ ಸಾಮಾಜಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಉದ್ದೇಶದಿಂದ ಅಭಿಜಿತ್ ದಿಪ್ಕೆಅವರು ಅಮೆರಿಕದಲ್ಲಿ ಲಭ್ಯವಿದ್ದ ಹಲವು ಉನ್ನತ ಉದ್ಯೋಗ ಅವಕಾಶಗಳನ್ನು ತಿರಸ್ಕರಿಸಿದರು.ಅಮೆರಿಕಾದಲ್ಲಿ ವಲಸೆ ವಿದ್ಯಾರ್ಥಿಯಾಗಿ ಜೀವನ ಸಾಧಿಸುತ್ತಿದ್ದರು, ಅವರ ಗಮನ ಸದಾ ಭಾರತೀಯ ರಾಜಕೀಯ, ಶಿಕ್ಷಣಮತ್ತು ಯುವಕರ ಸಮಸ್ಯೆಗಳತ್ತ ಕೇಂದ್ರೀಕೃತವಾಗಿತ್ತು.
ವಿದ್ಯಾವಂತ ಯುವಕರು ಆರೋಗ್ಯಕ್ಕಾಗಿ ಅಲೆದಾಡುತ್ತಿರುವ ಸಂದರ್ಭದಲ್ಲಿ,ಶಿಕ್ಷಣ ವ್ಯವಸ್ಥೆಯನ್ನು ರಚಿಸುವುದು ಮತ್ತು ಅದರಲ್ಲಿನ ಲೋಪದೋಷಗಳ ಬಗ್ಗೆ ಕುರಿತು ಚರ್ಚೆ ಮಾಡುವುದೇ ನಿಜವಾದ ರಾಷ್ಟ್ರೀಯತೆಯ ಒಂದು ರೂಪವೆಂದು ಅವರು ತಮ್ಮ ಡಿಜಿಟಲ್ ವೇದಿಕೆಯಲ್ಲಿ ನಿರಂತರವಾಗಿ ವಾದಿಸುತ್ತಿದ್ದಾರೆ.ಇದೇ ವಿಚಾರಧಾರೆಯೂ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವಿಶಿಷ್ಟ ಧ್ವನಿಯನ್ನಾಗಿ ರೂಪಿಸಿದೆ.
ಜಂತರ್ ಮಂತರ್ ನಲ್ಲಿ ಶಾಂತಿಯುತ ಪ್ರತಿಭಟನೆ ಇಂದು ದೆಹಲಿಗೆ ಆಗಮಿಸಿರುವ ಅಭಿಜಿತ್ ದಿಪ್ಕೆ ,ಜಂತರ್ ಮಂತರ್ ನಲ್ಲಿ ಯುವಕರ ಬೆಂಬಲದೊಂದಿಗೆ ಪ್ರತಿಭಟನೆಗೆ ಚಾಲನೆ ನೀಡಿದ್ದಾರೆ. ಈ ಘಟನೆಯ ಕೇಂದ್ರ ಬಿಂದುವಾಗಿ ಶಿಕ್ಷಣ ಸಂಸ್ಥೆಯ ಸುಧಾರಣೆ, ಯುವಕರ ಭವಿಷ್ಯ ಮತ್ತು ನೀಟ್ ಪರೀಕ್ಷೆ ವಿವಾದದಂತಹ ವಿಷಯಗಳು ಇರಲಿವೆ.
ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, "ನಾನು ಇಲ್ಲಿ ಯಾವುದೇ ಗಲಭೆ ಅಥವಾ ಅವ್ಯವಸ್ಥೆ ಸೃಷ್ಟಿಸಲು ಬಂದಿಲ್ಲ
ನಮ್ಮ ಉದ್ದೇಶ ಸಂಪೂರ್ಣವಾಗಿ ಶಾಂತಿಯುತ ಮತ್ತು ಪ್ರಜಾ ಸತ್ತಾತ್ಮಕವಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಗೆ ಒತ್ತಾಯಿಸುವುದರ ಜೊತೆಗೆ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸರ್ಕಾರದ ಮುಂದೆ ಇಡುವುದು ಪ್ರತಿಭಟನೆಯ ಪ್ರಮುಖ ಗುರಿಯಾಗಿದೆ. ಎಂದು ಹೇಳಿದ್ದಾರೆ.
ಜಂತರ್ ಮಂತರ್ ನಲ್ಲಿ ತಮ್ಮ ಅಭಿಪ್ರಾಯಗಳನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ಮಂಡಿಸಿರುವುದಾಗಿ ಘೋಷಿಸಿರುವ ದಿಪ್ಕೆ,ಯುವ ಸಮುದಾಯದ ಧ್ವನಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಕೇಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಆರಂಭವಾದ ಅಭಿಯಾನ ಈಗ ನೆಲಮಟ್ಟದ ಹೋರಾಟದ ರೂಪ ಪಡೆದುಕೊಂಡಿದ್ದು,ಮುಂದಿನ ದಿನಗಳಲ್ಲಿ ಇದು ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಕುತೂಹಲ ಮೂಡಿಸಿದೆ.
Also Read:
ರಾಜೀನಾಮೆ ಚರ್ಚೆಗೆ ಫುಲ್ ಸ್ಟಾಪ್: "ಬೇಸರವಿದೆ, ಆದರೆ ತಾಳ್ಮೆ ಕಳೆದುಕೊಂಡಿಲ್ಲ" ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟನೆ