Belagavi News:
ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಹಲವಡೆ ಬರೆದ ಛಾಯೆ ಆವರಿಸುತ್ತಿದೆ. ಬೆಳೆದ ಬೆಳೆ ನಾಶವಾಗುತ್ತಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ಗದಗ ಜಿಲ್ಲೆಯ ಓರ್ವ ರೈತನ ವಿಶಿಷ್ಟ ನಿರ್ಧಾರ ಇದೀಗ ಎಲ್ಲರ ಗಮನ ಸೆಳೆದಿದೆ.
ಮಳೆಗಾಗಿ ಕಾತುರಗೊಂಡಿರುವ ಈ ರೈತ ಊಟ, ನಿದ್ದೆ ಬಿಟ್ಟು ಹಗಲು-ರಾತ್ರಿ ಮೌನ ಅನುಷ್ಠಾನಕ್ಕೆ ಕುಳಿತಿದ್ದಾರೆ. ಮಳೆ ಬರುತ್ತದೆ ಎಂದು ವರುಣದೇವನ ಕೃಪೆಗಾಗಿ ಅವರು ನಿರಂತರವಾಗಿ ಪ್ರಾರ್ಥನೆ ನಡೆಸುತ್ತಿದ್ದಾರೆ.
ರೈತನ ಈ ಭಕ್ತಿ ಹಾಗೂ ಸಂಕಲ್ಪಕ್ಕೆ ಗ್ರಾಮದ ನೂರಾರು ಜನರು ಸಹ ಬೆಂಬಲ ನೀಡಿದ್ದು, ಒಟ್ಟಾಗಿ ವರುಣ ದೇವನಿಗಾಗಿ ಪ್ರಾರ್ಥನೆ, ಸಲ್ಲಿಸುತ್ತಿದ್ದಾರೆ. ಬರದ ಪರಿಸ್ಥಿತಿಯಿಂದ ಬೇಸತ್ತ ಗ್ರಾಮಸ್ಥರು ಕೂಡ ಮಳೆಯ ನಿರೀಕ್ಷೆಯಲ್ಲಿ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ಮುಂಗಾರು ಮಳೆ ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಸಾಲ - ಸೋಲ ಮಾಡಿಕೊಂಡು ಬೆಳೆದ ಬೆಳೆಗಳು ನಾಶವಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೈತನ ಭಕ್ತಿ ಮತ್ತು ಸಂಕಟದ ಜೀವನ ಎಲ್ಲರ ಮನ ಮುಟ್ಟಿದೆ.
ಗದಗದಲ್ಲಿ ಮಳೆಗಾಗಿ ರೈತನ ಮೌನ ಅನುಷ್ಠಾನ - ಶಿರಹಟ್ಟಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಭಕ್ತಿ, ಆತಂಕದ ವಾತಾವರಣ :
ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರ ಸಂಕಷ್ಟ ಹೆಚ್ಚಾಗುತ್ತಿದ್ದು, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ವಿಶೇಷ ಘಟನೆ ನಡೆದಿದೆ. ಗ್ರಾಮದ ಹೊರವಲಯದ ಜಮೀನಿನಲ್ಲಿ ಮರದ ಕೆಳಗೆ ರೈತ ಭೀಮಪ್ಪ ಚಳ್ಳಿಕೇರಿ ಅವರು ಮಳೆಗಾಗಿ ಮೌನ ಅನುಷ್ಠಾನಕ್ಕೆ ಕುಳಿತಿದ್ದಾರೆ.
ಮೈಲಾರ ದೇವರ ಆರಾಧಕರಾಗಿರುವ ರೈತ ಭೀಮಪ್ಪ ಚಳ್ಳಿಕೇರಿ, ಮಳೆ ಬರುತ್ತದೆಯೋ ಅಲ್ಲವೋ ಎಂಬ ಅನಿಶ್ಚಿತತೆಯ ನಡುವೆ ಊಟ - ನಿದ್ರೆ ಬಿಟ್ಟು ಮೌನ ವಿರುದ್ಧ ಕೈಗೊಂಡಿದ್ದಾರೆ. ಮಳೆ ಆಗುವವರೆಗೂ ಈ ಮೌನ ಅನುಷ್ಠಾನ ಮುಂದುವರೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಸಾಲ ಮಾಡಿಕೊಂಡು ಬಿತ್ತನೆ ಮಾಡಿದ್ದರೂ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯ ದೇವರ ಮೊರೆ ಹೋಗಿರುವ ರೈತ ಭೀಮಪ್ಪ , ಗ್ರಾಮದ ಕೆಲ ರೈತರೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಮೌನ ಅನುಷ್ಠಾನಕ್ಕೆ ಗ್ರಾಮಸ್ಥರೂ ಬೆಂಬಲ ವ್ಯಕ್ತಪಡಿಸಿದ್ದು, ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ನಡೆಸುತ್ತಿದ್ದಾರೆ. ಮಳೆ ಇಲ್ಲದ ಕಾರಣ ಜಿಲ್ಲೆಯನ್ನು ಬರಪೀಡಿತ ಪ್ರದೇಶವಾಗಿ ಘೋಷಿಸಬೇಕು ಎಂದು ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಘಟನೆ ಗ್ರಾಮೀಣ ಭಾಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ರೈತನ ಭಕ್ತಿ ಹಾಗೂ ಕೃಷಿ ಸಂಕಷ್ಟ ಸಾಮಾಜಿಕ ಜಾಲತಾಣಗಳಲ್ಲಿಯೂ ಗಮನ ಸೆಳೆದಿದೆ.
ಮಳೆಗಾಗಿ ಜಾನಪದ ಹಾಡುಗಳೊಂದಿಗೆ ಮಳೆರಾಯನ ಸ್ಮರಣೆ - ಗದಗದಲ್ಲಿ ಭೀಮಪ್ಪ ಚಳ್ಳಿಕೇರಿ ಮೌನ ಅನುಷ್ಠಾನ ಮುಂದುವರಿಕೆ :
ರಾಜ್ಯದಲ್ಲಿ ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರೈತರ ಸಂಕಷ್ಟ ಹೆಚ್ಚಾಗುತ್ತಿದ್ದು, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ರೈತ ಭೀಮಪ್ಪ ಚಳ್ಳಿಕೇರಿ ಅವರ ಮೌನ ಅನುಷ್ಠಾನ ಮುಂದುವರಿಸಿದ್ದಾರೆ. ಯಾರೊಂದಿಗೂ ಮಾತನಾಡದೆ ದೇವರ ನಾಮಸ್ಮರಣೆಯಲ್ಲಿ ನಿರತರಾಗಿರುವ ಅವರ ಈ ವಿಶಿಷ್ಟ ಭಕ್ತಿ ಎಲ್ಲರ ಗಮನ ಸೆಳೆಯುತ್ತಿದೆ.
ಭೀಮಪ್ಪ ಚಳ್ಳಿಕೇರಿ ಅವರ ಅನುಷ್ಠಾನವನ್ನು ನೋಡಲು ಅಕ್ಕಪಕ್ಕದ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ವೇಳೆ ಮಹಿಳೆಯರು ಮಳೆರಾಯನ ಕೃಪೆ ತೋರಲಿ ಎಂದು ಜಾನಪದ ಹಾಡುಗಳನ್ನು ಹಾಡುವ ಮೂಲಕ ಮಳೆರಾಯನ ಸ್ಮರಣೆಯಲ್ಲಿ ಭಾಗವಹಿಸಿದ್ದಾರೆ.
ಜಿಲ್ಲೆಯಲ್ಲಿ ಶೇಕಡ 50ರಷ್ಟು ರೈತರು ಈಗಾಗಲೇ ಬಿತ್ತನೆ ಮಾಡಿದ್ದು, ಆದರೆ ಮಳೆಯ ಕೊರತೆಯಿಂದ ಹೆಸರು, ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ಒಣಗುತ್ತಿವೆ. ಶಾಲೆ ಸೋಲ ಮಾಡಿಕೊಂಡು ಕೃಷಿ ಮಾಡಿದ್ದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಮಳೆ ಬರಲಿ ಎಂಬ ಆಶಯದೊಂದಿಗೆ ಜಿಲ್ಲೆಯಾದ್ಯಂತ ವಿಶೇಷ ಪೂಜೆ, ಪುರಸ್ಕಾರಗಳು ನಡೆಯುತ್ತಿದ್ದು, ರೈತರು ದೇವರ ಮೊರೆ ಹೋಗಿದ್ದಾರೆ. ಭೀಮಪ್ಪ ಚಳ್ಳಿಕೇರಿ ಅವರು ಈ ಹಿಂದೆ ಕೂಡ ಇದೇ ರೀತಿಯ ಮೌನ ಅನುಷ್ಠಾನ ನಡೆಸಿದ್ದು, ಈಗ ಮತ್ತೆ ಮಳೆಗಾಗಿ ದೇವರ ಸ್ಮರಣೆಯಲ್ಲಿ ಕುಳಿತಿದ್ದಾರೆ.
ಮಳೆ ಆಗುತ್ತದೆ ಎಂಬ ನಂಬಿಕೆಯಲ್ಲಿರುವ ರೈತರು, ಮುಂದಿನ ದಿನಗಳಲ್ಲಿ ವರುಣದೇವ ಕೃಪೆ ತೋರಿಸುತ್ತಾನೆ ಎಂಬ ನಿರೀಕ್ಷೆಯಲ್ಲಿ ಇದ್ದಾರೆ. ಈ ಘಟನೆ ಗ್ರಾಮೀಣ ಭಾಗದಲ್ಲಿ ಭಕ್ತಿಭಾವ ಮತ್ತು ಕೃಷಿ ಸಂಕಷ್ಟ ಎರಡನ್ನು ಪ್ರತಿಬಿಂಬಿಸುತ್ತದೆ.