<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಹೈದರಾಬಾದ್ ನಲ್ಲಿ ದುರಂತ: ಔಟರ್ ರಿಂಗ್ ರೋಡ್ ಅಪಘಾತದಲ್ಲಿ ನಟ ಭರತ್ ಕಾಂತ್ ಸಾವು

ಹೈದರಾಬಾದ್ ನಲ್ಲಿ ದುರಂತ: ಔಟರ್ ರಿಂಗ್ ರೋಡ್ ಅಪಘಾತದಲ್ಲಿ ನಟ ಭರತ್ ಕಾಂತ್ ಸಾವು
Summary: Telugu actor Bharat Kant has died in a horrific road accident between a car and a truck on Hyderabad's Outer Ring Road.

belagavi news :

ಹೈದರಾಬಾದ್, ತೆಲಂಗಾಣ: ಹೈದರಾಬಾದ್ ನ ಆದಿಬಟ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಹೊರ ವರ್ತುಲ್ ರಸ್ತೆ (ORR) ಯ ನಿರ್ಗಮನ ಸಂಖ್ಯೆ 12ರ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತೆಲುಗು ನಟ ಭರತ್ ಕಾಂತ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ತಡರಾತ್ರಿ ಅಪಘಾತ ಸಂಭವಿಸಿದೆ. ಕಾರು ಮತ್ತು ಟ್ರಕ್ ನಡುವೆ ದಿಕ್ಕಿ ಸಂಭವಿಸಿದ ಪರಿಣಾಮ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದಿಬಟ್ಲಾ ಪೊಲೀಸರ ಪ್ರಕಾರ, ಈ ಘಟನೆ ನಿನ್ನೆ ರಾತ್ರಿ ನಗರದ ಹೊರ ವರ್ತುರ ರಸ್ತೆ (ORR) ಯ ನಿರ್ಗಮನ ಸಂಖ್ಯೆ 12ರ ಬಳಿ ಸಂಭವಿಸಿದೆ. ನಟನ ಕಾರುಡ್ ಟ್ರಕ್ ಗೆ ಡಿಕ್ಕಿ ಹೊಡೆದ ನಂತರ ಈ ಅಪಘಾತ ನಡೆದಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ಮುಂದುವರೆಯಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತಪಟ್ಟ ಎರಡನೇ ವ್ಯಕ್ತಿಯ ಗುರುತು ಇದುವರೆಗೆ ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲ. ಅಪಘಾತಕ್ಕೆ ಕಾರಣವಾದ ನಿಖರ ಪರಿಸ್ಥಿತಿಗಳನ್ನು ತಿಳಿಯಲು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

2021 ರಲ್ಲಿ ಬಿಡುಗಡೆಯಾದ ' ಗ್ರಾಮಂ ' ಹಾಗೂ 2024 ರಲ್ಲಿ ಕೆರೆ ಕಂಡ ' ಟೆನೆಂಟ್ ' ಚಿತ್ರಗಳು ಭರತ್ ಕಾಂತ್ ಅವರ ಪ್ರಮುಖ ಚಿತ್ರಗಳಾಗಿವೆ.

ಇದೇ ರೀತಿಯಲ್ಲಿ ಅವರು 'ಗೀತಾಂಜಲಿ' ಹಾಗೂ 'ಪಾರ್ವತಿ ಪರಮೇಶ್ವರ್ಲು ' ಸೇರಿದಂತೆ ಹಲವು ವೆಬ್ ಸರಣಿಗಳಲ್ಲಿಯೂ ಅಭಿನಯಿಸಿದ್ದಾರೆ.

Also Read:

ಪ್ರಧಾನಿ ಸಂಚಾರ ಮಾರ್ಗದಲ್ಲಿ ಸ್ಪೋಟಕ ಪತ್ತೆ: ಬೆಂಗಳೂರಿನಲ್ಲಿ ಭದ್ರತಾ ಎಚ್ಚರಿಕೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online