<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ಮೆಕ್ಸಿಕೋ ವಿಜಯೋತ್ಸವದ ವೇಳೆ ದುರ್ಘಟನೆ; ನಾಲ್ವರು ಅಭಿಮಾನಿಗಳು ಬಲಿ

ಮೆಕ್ಸಿಕೋ ವಿಜಯೋತ್ಸವದ ವೇಳೆ ದುರ್ಘಟನೆ; ನಾಲ್ವರು ಅಭಿಮಾನಿಗಳು ಬಲಿ
Summary: The celebration of Mexico's historic victory in the 32nd round of the 2026 FIFA World Cup turned tragic in a few moments. Four people were killed and several others were injured in a tragic incident among fans who were celebrating the team's victory.

BELAGAVI NEWS :

ಕಳೆದ ವರ್ಷ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಚೊಚ್ಚಲ ಟ್ರೋಫಿ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಮೃತಪಟ್ಟ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಅದೇ ರೀತಿ ದುಃಖದ ಘಟನೆ ಫಿಫಾ ವಿಶ್ವಕಪ್ ಸಂಭ್ರಮಾಚರಣೆಯಲ್ಲಿ ನಡೆದಿರುವುದು ಫುಟ್ಬಾಲ್ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ.

ಪ್ರಸ್ತುತ ನಡೆಯುತ್ತಿರುವ 22ನೇ ಆವೃತ್ತಿಯ ಫಿಫಾ ವಿಶ್ವಕಪ್ ನಲ್ಲಿ ನಿನ್ನೆ ನಡೆದ 32ನೇ ಸುತ್ತಿನ ಮಹತ್ವದ ಪಂದ್ಯದಲ್ಲಿ ಮೆಕ್ಸಿಕೋ ತಂಡ 2-0 ಗೋಲುಗಳ ಅಂತರದಲ್ಲಿ ಈಕ್ವೆಡಾರ್ ಐತಿಹಾಸಿಕ ಗೆಲುವು ದಾಖಲಿಸಿತು. ಹಲವು ವರ್ಷಗಳ ಬಳಿಕ ನಾಕೌಟ್ ಹಂತದಲ್ಲಿ ತಂಡದ ಸಾಧನೆಯಿಂದ ಅಭಿಮಾನಿಗಳು ದೇಶದ ವಿವಿಧ ಭಾಗಗಳಲ್ಲಿ ಸಂಭ್ರಮಾಚರಣೆ ಮುಂದಾದರು.

ಆದರೆ ಸಂಭ್ರಮದ ನಡುವೆ ದುರಂತ ಸಂಭವಿಸಿದೆ. ವಿಜಯೋತ್ಸವದ ವೇಳೆ ನಡೆದ ಅಪಘಾತದಲ್ಲಿ ನಾಲ್ವರು ಮೆಕ್ಸಿಕೋ ಅಭಿಮಾನಿಗಳು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗೆಲುವಿನ ಖುಷಿ ಕ್ಷಣಾರ್ಧದಲ್ಲೇ ಶೋಕವಾಗಿ ಬದಲಾಗಿದ್ದು, ಈ ಘಟನೆ ದೇಶಾದ್ಯಂತ ತೀವ್ರ ಆಘಾತ ಮೂಡಿಸಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆ ಕುರಿತು ತನಿಖೆ ಆರಂಭಿಸಿದ್ದು, ದುರಂತದ ನಿಖರ ಕಾರಣದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Sponsored

ಮೆಕ್ಸಿಕೋ ತಂಡ ಫ್ರೀ ಕ್ವಾಟರ್ ಫೈನಲ್ ಗೆ ಪ್ರವೇಶಿಸುತ್ತಿದ್ದಂತೆ ಸಂಭ್ರಮಾಚರಣೆಗಳು ಮುಗಿಲೇದ್ದಿದ್ದವು. ಹ್ಯಾಂಬರ್ಗ್ ಮತ್ತು ಲ್ಯಾಂಕಾಸ್ಟರ್ ಬೀದಿಗಳಲ್ಲಿ ಇರುವ ಐಕಾನಿಕ್ 'ಏಂಜಲ್ ಆಫ್ ಇಂಡಿಪೆಂಡೆನ್ಸ್' ಸ್ಮಾರಕದ ಬಳಿ ಸಾವಿರಾರು ಫ್ಯಾನ್ಸ್‌ಗಳು ಜಮಾಯಿಸಿ ಪಟಾಕಿ ಸಿಡಿಸಿ, ಬಾವುಟಗಳನ್ನು ಬೀಸುತ್ತಾ ತಂಡದ ಜಯವನ್ನು ಸಂಭ್ರಮಿಸಿದರು.

ಆದರೆ ಅತಿಯಾದ ಜನ ಸಮೂಹದಿಂದ ಪರಿಸ್ಥಿತಿ ನಿಯಂತ್ರಣ ತಪ್ಪಿದೆ ಎಂದು ಹೇಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಟ್ಟುಗೂಡಿದ ಪರಿಣಾಮ ಕೆಲವರು ಜನ ನಡುವೆ ಸಿಲುಕಿಕೊಂಡು ಹೊರಬರಲು ಸಾಧ್ಯವಾಗದೆ, ಉಸಿರಾಟ ತೊಂದರೆ ಅನುಭವಿಸಿದ್ದಾರೆ. ಈ ವೇಳೆ ಉಸಿರುಗಟ್ಟಿದ ಸ್ಥಿತಿಯಲ್ಲಿ ಮೂವರು ಫುಟ್ಬಾಲ್ ಅಭಿಮಾನಿಗಳು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಅಧಿಕೃತವಾಗಿ ದೃಢಪಡಿಸಿದ್ದಾರೆ.

ಘಟನೆಯ ನಂತರ ಸ್ಥಳದಲ್ಲಿ ತಕ್ಷಣ ತುರ್ತು ಸೇವೆಗಳು ಕಾರ್ಯಪ್ರವೇಶ ಮಾಡಿದ್ದು, ಗಾಯಗೊಂಡಿರುವವರಿಗೆ ಚಿಕಿತ್ಸೆ ನೀಡಲಾಗಿದೆ. ಈ ದುರಂತದ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಜನಸಮೂಹ ನಿಯಂತ್ರಣದ ವೈಫಲ್ಯವೇ ಕಾರಣವಾಗಬಹುದೇ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ಮೆಕ್ಸಿಕೋ ಪುಟ್ಬಾಲ್ ಸಂಭ್ರಮಾಚರಣೆಯಲ್ಲಿ ನಡೆದ ದುರಂತಕ್ಕೆ ಸಂಬಂಧಿಸಿದಂತೆ ಹೊಸ ವಿವರಗಳು ಬಹಿರಂಗವಾಗಿವೆ. ಮೆಕ್ಸಿಕೋ ನಗರದ ಆರೋಗ್ಯ ಇಲಾಖೆ 'x' ಮೂಲಕ ನೀಡಿದ ಮಾಹಿತಿ ಪ್ರಕಾರ, ಮೃತರ ಗುರುತುಗಳನ್ನು ಇನ್ನು ಅಧಿಕೃತವಾಗಿ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆದರೆ ಸಾವನ್ನಪ್ಪಿದವರಲ್ಲಿ 30, 48 ಮತ್ತು 44 ವರ್ಷದ ಮೂವರು ಪುರುಷರು ಹಾಗೂ 19 ವರ್ಷದ ಯುವತಿ ಸೇರಿದ್ದಾರೆ ಎಂದು ತಿಳಿಸಿದೆ. ಈ ಕುರಿತು ಇನ್ನು ಹೆಚ್ಚಿನ ವಿವರಗಳನ್ನು ಇಲಾಖೆ ಬಹಿರಂಗಪಡಿಸಿಲ್ಲ.

Sponsored

ಇದೇ ಸಂದರ್ಭದಲ್ಲಿ ಮೆಕ್ಸಿಕೋ ನಗರದ ಮೇಯರ್ ಕ್ಲಾರಾ ಬ್ರೂಗಡಾ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿದ್ದು, ಸಂಭ್ರಮಾಚರಣೆಯ ವೇಳೆ ಮೂವರು ಕುರಿತು ಮಾಹಿತಿ ಬಂದ ತಕ್ಷಣ ತುರ್ತು ಸೇವಾ ತಂಡಗಳು ಸ್ಥಳಕ್ಕೆ ಧಾವಿಸಿ ಚಿಕಿತ್ಸೆ ನೀಡಿದ್ದವು ಎಂದು ತಿಳಿಸಿದ್ದಾರೆ. ಆದಾಗ್ಯೂ, ವೈದ್ಯಕೀಯ ಪ್ರಯತ್ನಗಳ ನಡುವೆಯೂ ಅವರು ಬದುಕುಳಿಯಲಿಲ್ಲ ಎಂದು ಅವರು ಹೇಳಿದ್ದಾರೆ.

ಘಟನೆ ಬಳಿಕ ನಗರದಲ್ಲಿ ಕಠಿಣ ಭದ್ರತಾ ಕ್ರಮಗಳು ಜಾರಿಗೆ ತರಲಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಜನರಿಗೆ ಎಚ್ಚರಿಕೆಯಿಂದ ಹಾಗೂ ಜವಾಬ್ದಾರಿಯುತವಾಗಿ ಸಂಭ್ರಮಾಚರಣೆ ನಡೆಸುವಂತೆ ಮನವಿ ಮಾಡಲಾಗಿದೆ. ವರದಿಗಳ ಪ್ರಕಾರ, ಘಟನೆ ನಡೆದ ಸ್ಥಳದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರರೆಂದು ಅಂದಾಜಿಸಲಾಗಿದೆ. ಈ ದುರಂತದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ವಿಶ್ವದಾದ್ಯಂತ ಆಘಾತ ಮೂಡಿಸಿದೆ.

40 ವರ್ಷಗಳ ಬಳಿಕ ಮೆಕ್ಸಿಕೋ ತಂಡವು ವಿಶ್ವಕಪ್ ನಾಕೌಟ್ ಹಂತಕ್ಕೆ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ. ನಿನ್ನೆ ನಡೆದ 32ನೆಯ ಸುತ್ತಿನ ಪಂದ್ಯದಲ್ಲಿ ಈಕ್ವೆಡಾರ್ ವಿರುದ್ಧ 2-0 ಅಂತರದ ಭರ್ಜರಿ ಜಯ ಸಾಧಿಸುವ ಮೂಲಕ ತಂಡ 16ನೇ ಸುತ್ತಿಗೆ ಅರ್ಹತೆ ಪಡೆದಿದೆ. ಈ ಸಾಧನೆಗೆ ದೇಶಾದ್ಯಂತ ಅಭಿಮಾನಿಗಳು ಬಾರಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ವಾಸ್ತವವಾಗಿ, 1986ರ ನಂತರ ಮೆಕ್ಸಿಕೋ ತಂಡವು ವಿಶ್ವಕಪ್ ನಲ್ಲಿ ನಾಕ್ಔಟ್ ಹಂತದ ಪಂದ್ಯವನ್ನು ಗೆದ್ದಿರಲಿಲ್ಲ. ಅಂದು balgeriyaa ವಿರುದ್ಧ ಜಯ ಸಾಧಿಸಿದ್ದೆ ಕೊನೆಯ ದಾಖಲೆ. ಇದೀಗ ಸುಮಾರು ನಾಲ್ಕು ದಶಕಗಳ ಬಳಿಕ ಮತ್ತೆ ನಾಕೌಟ್ ಹಂತಕ್ಕೆ ಪ್ರವೇಶಿಸಿ ತಂಡ ಇತಿಹಾಸ ಪುನರಾವರ್ತಿಸಿದೆ.

Sponsored

ಆದರೆ ಈ ಐತಿಹಾಸಿಕ ವಿಜಯದ ಸಂಭ್ರಮ ಕ್ಷಣಾರ್ಧದಲ್ಲೇ ದುಃಖಕ್ಕೆ ತಿರುಗಿದೆ. ದೇಶದ ವಿವಿಧ ಭಾಗಗಳಲ್ಲಿ ನಡೆದ ವಿಜಯೋತ್ಸವದ ವೇಳೆ ಮೂವರು ಅಭಿಮಾನಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದ್ದು, ಹರ್ಷೋದ್ಗಾರದ ವಾತಾವರಣವನ್ನು ಶೋಕಮಯವಾಗಿ ಬದಲಾಯಿಸಿದೆ. ಒಂದೆಡೆ ಐತಿಹಾಸಿಕ ಸಾಧನೆಯ ಸಂತೋಷ, ಮತ್ತೊಂದೆಡೆ ದುರಂತದ ದುಃಖ ದೇಶವನ್ನು ಆಘಾತಕೀಡು ಮಾಡಿದೆ.

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online