<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಚೀನಾದ ಪಟಾಕಿ ಫ್ಯಾಕ್ಟರಿಯಲ್ಲಿ ದುರಂತ ಸ್ಫೋಟ

ಚೀನಾದ ಪಟಾಕಿ ಫ್ಯಾಕ್ಟರಿಯಲ್ಲಿ ದುರಂತ ಸ್ಫೋಟ
Summary: At least 21 people have been killed and 61 injured in a massive explosion at a fireworks factory in China. Rescue operations are ongoing and the injured are being treated. The exact cause of the explosion is not known, and authorities have launched an investigation.

belagavi news:

ಬೀಜಿಂಗ್ (ಚೀನಾ): ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಲಿಯುಯಾಂಗ್ ನಗರದಲ್ಲಿರುವ ಪಟಾಕಿ ಉತ್ಪನ್ನ ಘಟಕನದಲ್ಲಿ ಭಾರಿ ಸ್ಪೋಟ ಸಂಭವಿಸಿ ಕನಿಷ್ಠ 21 ಮಂದಿ ಸಾವನ್ನಪ್ಪಿದ್ದಾರೆ. 61ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಗುವಾಂಡು ಟೌನ್ ಶಿಪ್ ನಲ್ಲಿರುವ ಲಿಯುಯಾಂಕ್ ಹುವಾಶೇಗ ಪಟಾಕಿ ಉತ್ಪಾದನಾ ಮತ್ತು ಪ್ರದರ್ಶನ ಕೇಂದ್ರದಲ್ಲಿ ಸೋಮವಾರ ಸಂಜೆ ಸುಮಾರು 5 ಗಂಟೆಯ ವೇಳೆಗೆ ಸ್ಪೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೋಟದ ಪರಿಣಾಮವಾಗಿ ಪ್ರದೇಶದಲ್ಲಿ ಭಾರಿ ನಾಶ ನಷ್ಟ ಉಂಟಾಗಿದೆ.

ಕೇರಳ, ತಮಿಳುನಾಡಲ್ಲೂ ಪಟಾಕಿ ದುರಂತ: ಕಳೆದ ತಿಂಗಳು ಭಾರತದಲ್ಲಿಯೂ ಇಂತಹ ದುರಂತಗಳು ಸಂಭವಿಸಿದವು. ಕೇರಳದ ಮುಂಡತಿಕ್ಕೋಡ್ ನಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ನಡೆದ ಬಾರಿ ಸ್ಫೋಟದಲ್ಲಿ 13 ಮಂದಿ ಸಾವನ್ನಪ್ಪಿದ್ದರು. ತ್ರಿಶೂರ ಪುರಂ ಉತ್ಸವದ ಸಿದ್ಧತೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿತ್ತು.

Sponsored

ಕೇರಳ ವಿಪತ್ತು ನಿರ್ವಹನ ಪ್ರಾಧಿಕಾರದ ಧಿಕಾರಿಗಳ ಪ್ರಕಾರ 13 ಕಾರ್ಮಿಕರಿಗೆ ಸುಮಾರು ಶೇಕಡ 70ರಷ್ಟು ಸುಟ್ಟ ಗಾಯಗಳಾಗಿದ್ದು ಎಲ್ಲರನ್ನೂ ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತ್ತು.

ತ್ರಿಶೂರ್ ಪುರಂ ಉತ್ಸವದಲ್ಲಿ ಪಟಾಕಿ ಪ್ರದೇಶಕ್ಕಾಗಿ ಇಲ್ಲಿನ ಗೋದಾಮಿನಲ್ಲಿ ಬೃಹತ್ ಪ್ರಮಾಣದ ಗನ್ ಪೌಡರ್ ಸಂಗ್ರಹಿಸಿದಲಾಯಿತು ಎಂದು ತಿಳಿದು ಬಂದಿದೆ.

ತಮಿಳುನಾಡಿನ ವಿರುಧ ನಗರ ಜಿಲ್ಲೆಯ ಕಟ್ಟನಾರಪಟ್ಟಿ ಪ್ರದೇಶದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಕಳೆದ ತಿಂಗಳು ಭೀಕರ ಸ್ಫೋಟ ಸಂಭವಿಸಿ 25 ಮಂದಿ ಸಾವನ್ನಪ್ಪಿದ್ದರು . ಸ್ಪೋಟದ ತೀವ್ರತೆಗೆ ಕಾರ್ಖಾನೆಯ ನಾಲ್ಕು ಕೊಠಡಿಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದವು. ಸ್ಪೋಟದ ಪರಿಣಾಮ ಸುಮಾರು 10 ಕಿ.ಮೀ ವ್ಯಾಪ್ತಿವರೆಗೆ ಕಂಪನ್ ಅನುಭವವಾಗಿದ್ದು ಬಾರಿ ಶಬ್ದದಿಂದ ಜನರು ಭಯ ಬೀತರಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

Also Read:

Sponsored

ವಾಣಿಜ್ಯ ಗ್ಯಾಸ್ ಸಿಲೆಂಡರ್ ದುಬಾರಿ : ಊಟ ಉಪಹಾರ ದರ ಏರಿಕೆ ಗ್ರಾಹಕರ ಜೇಬಿಗೆ ಹೊಡೆತ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online