<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಇರಾನ್ ಮೇಲಿನ ದಾಳಿ ತಡೆದಿದ್ದೇವೆ ಎಂದ ಟ್ರಂಪ್ ; ಪಾಕಿಸ್ತಾನದ ಉಲ್ಲೇಖವಿಲ್ಲ

ಇರಾನ್ ಮೇಲಿನ ದಾಳಿ ತಡೆದಿದ್ದೇವೆ ಎಂದ ಟ್ರಂಪ್ ; ಪಾಕಿಸ್ತಾನದ ಉಲ್ಲೇಖವಿಲ್ಲ
Summary: Former US President Donald Trump has created a stir in global politics with a new statement. Trump said that he stopped the attack on Iran at the request of the Gulf countries. But the fact that he did not mention Pakistan in this important statement has led to many questions. Trump's statement is now the subject of a huge debate on the tense situation in the Middle East, action against Iran and the US position.

Belagavi News:

ವಾಷಿಂಗ್ಟನ್: ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ನಾಯಕರ ಮನವಿ ಮೇರೆಗೆ ಇರಾನ್ ಮೇಲಿನ ಹೊಸ ಮಿಲಿಟರಿ ದಾಳಿಯನ್ನು ತಾತ್ಕಾಲಿಕವಾಗಿ ತಡೆದಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಈ ಹೇಳಿಕೆ ಇದೀಗ ಜಾಗತಿಕ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಟ್ರಂಪ್ ತಮ್ಮ ' ಟ್ರೂತ್ ಸೋಶಿಯಲ್ ' ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನ ಪರಿಸ್ಥಿತಿಯಲ್ಲಿ ಗಲ್ಪ್ ರಾಷ್ಟ್ರಗಳ ನಾಯಕರ ಮನವಿಯನ್ನು ಗೌರವಿಸಿ ದಾಳಿ ಮುಂದೂಡಲಾಗಿದೆ ಎಂದು ಹೇಳಿದ್ದಾರೆ.

"ಕತಾರ್ ಅಮೀರ್ ತಮೀಮ್ ಬಿನ್ ಹಮದ್ ಅಲ್ ಥಾನಿ, ಸೌದಿ ಅರೇಬಿಯನ್ ಕ್ರೌನ್ ಪ್ರಿನ್ಸ್ ಮೋಹಮ್ಮದ್ ಬೀನ್ ಸಲ್ಮಾನ್ ಹಾಗೂ ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಇರಾನ್ ಮೇಲಿನ ಯೋಜಿತ ದಾಳಿಯನ್ನು ತಡೆಹಿಡಿಯುವಂತೆ ಮನವಿ ಮಾಡಿದ್ದಾರೆ" ಎಂದು ಟ್ರಂಪ್ ಉಲ್ಲೇಖಿಸಿದ್ದಾರೆ.

ಆದರೆ, ಇರಾನ್ - ಅಮೆರಿಕ ಸಂಘರ್ಷದಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದ್ದ ಪಾಕಿಸ್ತಾನದ ಬಗ್ಗೆ ಟ್ರಂಪ್ ಯಾವುದೇ ಉಲ್ಲೇಖ ಮಾಡದೆ ಇರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಮಧ್ಯ ಪ್ರಾಚ್ಯದ ರಾಜಕೀಯ ಬೆಳವಣಿಗೆಗಳ ನಡುವೆ ಟ್ರಂಪ್ ಹೇಳಿಕೆ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ.

ಇರಾನ್ ಗೆ ಟ್ರಂಪ್ ಅವರು ಖಡಕ್ ಎಚ್ಚರಿಕೆ: 'ಒಪ್ಪಂದ ಆಗದಿದ್ದರೆ ಭಾರಿ ದಾಳಿ'

ಅಮೆರಿಕ ಅಧ್ಯಕ್ಷರು ಡೊನಾಲ್ಡ್ ಟ್ರಂಪ್ ಇರಾನ್ ವಿಚಾರದಲ್ಲಿ ಮತ್ತೊಮ್ಮೆ ಕಠಿಣ ಸಂದೇಶ ರವಾನಿಸಿದ್ದಾರೆ. ಗಲ್ಪ್ ರಾಷ್ಟ್ರಗಳ ಮನವಿ ಮೇರೆಗೆ ತಾತ್ಕಾಲಿಕವಾಗಿ ದಾಳಿ ತಡೆದಿದ್ದೇವೆ ಎಂದಿರುವ ಟ್ರಂಪ್, ಒಪ್ಪಂದ ವಿಫಲವಾದರೆ ಇರಾನ್ ಮೇಲೆ "ಪೂರ್ಣ ಪ್ರಮಾಣದ ಬಾರಿ ದಾಳಿ" ನಡೆಸಲು ಅಮೆರಿಕ ಸೇವೆ ಸಿದ್ಧವಾಗಿರಬೇಕು ಎಂದು ಸೂಚನೆ ನೀಡುವುದಾಗಿ ಹೇಳಿದ್ದಾರೆ.

ಈ ಕುರಿತು ತಮ್ಮ ' ಟ್ರೂತ್ ಸೋಶಿಯಲ್ ' ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಮಂಗಳವಾರ ಮಹತ್ವದ ರಾಜ ತಾಂತ್ರಿಕ ಸಭೆ ನಡೆಯಲಿದ್ದು , ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಸೇರಿ ಎಲ್ಲರಿಗೂ ಸ್ವೀಕಾರಾರ್ಹವಾಗುವ ಒಪ್ಪಂದದತ್ತ ಮಾತುಕತೆ ನಡೆಯಲಿದೆ ಎಂದು ತಿಳಿಸಿದ್ದಾರೆ.

"ಈ ಒಪ್ಪಂದದಲ್ಲಿ ಇರಾನ್ ಗೆ ಯಾವುದೇ ಪರಮಾಣು ಶಸ್ತ್ರಾಸ್ತ್ರ ಹೊಂದುವ ಅವಕಾಶ ಇರುವುದಿಲ್ಲ. ಗಲ್ಪ್ ರಾಷ್ಟ್ರಗಳ ನಾಯಕರು ತನ್ನ ಮೇಲೆ ತೋರಿದ ಗೌರವದ ಹಿನ್ನೆಲೆ, ನಿಗದಿಯಾಗಿದ್ದ ದಾಳಿ ತಾತ್ಕಾಲಿಕವಾಗಿ ನಿಲ್ಲಿಸಿದ್ದೇನೆ" ಎಂದು ಟ್ರಂಪ್ ಹೇಳಿದ್ದಾರೆ.

ಇದೆ ವೇಳೆ, ಯುದ್ಧ ಕಾರ್ಯದರ್ಶಿ,ಪೀಟ್ ಹೆಗ್ಸೆತ, ಜಂಟಿ ಮುಖ್ಯಸ್ಥರ ಅಧ್ಯಕ್ಷ ಜನರಲ್ ಡೇನಿಯಲ್ ಕೇನ್ ಹಾಗು ಅಮೆರಿಕ ಮಿಲಿಟರಿಗೆ ದಾಳಿ ತಡೆ ಗುರುತು ಸೂಚನೆ ನೀಡಿರುವುದಾಗಿ ಟ್ರಂಪ್ ಹೇಳಿದ್ದಾರೆ. ಆದರೆ, "ಒಪ್ಪಂದ ಸಾಧ್ಯವಾಗದಿದ್ದರೆ ತಕ್ಷಣದ ಸೂಚನೆಯ ಮೇರೆಗೆ ಇರಾನ್ ಮೇಲೆ ದೊಡ್ಡ ಮಟ್ಟದ ದಾರಿ ನಡೆಸಲು ಸಿದ್ಧರಿರಬೇಕು"ಎಂದು ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ.

ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ನಡುವೆ ಟ್ರಂಪ್ ಹೇಳಿಕೆ ಜಾಗತಿಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ಮಿಲಿಟರಿ ಆಯ್ಕೆಗಳನ್ನು ಚರ್ಚಿಸಲು ಟ್ರಂಪ್ ಮಂಗಳವಾರ ತಮ್ಮ ಉನ್ನತ ರಾಷ್ಟ್ರೀಯ ಭದ್ರತಾ ತಂಡವನ್ನು ಕರೆಯುವ ನಿರೀಕ್ಷೆಯಿದೆ ಎಂದು ಅಮೆರಿಕಾದ ಇಬ್ಬರ ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮ ಘೋಷಣೆಗೂ ಮುನ್ನ ಟ್ರಂಪ್ ಸೌದಿ ಅರೇಬಿಯಾ, ಕತಾರ್ ಮತ್ತು ಯುಎಇ ನಾಯಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು ಎಂದು ಆಕ್ಸಿಯಸ್ ವರದಿ ಮಾಡಿದೆ.

Also Read:

ಸಾಧನ ಸಮಾವೇಶದಲ್ಲಿ ಐತಿಹಾಸಿಕ ಕ್ಷಣ : ಉಲ್ಲೇಖವಿಲ್ಲ ಗಿನ್ನಿಸ್ ದಾಖಲೆ ನಿರ್ಮಿಸಿದ ತುಮಕೂರು

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online