<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಉಚಿತವಾಗಿಯೇ ಶಾಲಾ ಮಕ್ಕಳ ಆಧಾರ್ ಅಪ್ಡೇಟ್ ಯುಐಡಿಎಐ ಮಹತ್ವದ ಘೋಷಣೆ

ಉಚಿತವಾಗಿಯೇ  ಶಾಲಾ ಮಕ್ಕಳ ಆಧಾರ್ ಅಪ್ಡೇಟ್ ಯುಐಡಿಎಐ ಮಹತ್ವದ ಘೋಷಣೆ
Summary: ಯುಐಡಿಎಐ (UIDAI) ವತಿಯಿಂದ ದೇಶದ ಕೋಟಿಗೆ ಹೆಚ್ಚು ಶಾಲಾ ಮಕ್ಕಳಿಗೆ ಉಚಿತ ಆಧಾರ್ ಅಪ್ಡೇಟ್ ಸೌಲಭ್ಯ ಒದಗಿಸಲಾಗಿದೆ.
belagavi news:
ಮಕ್ಕಳ ಬಯೋಮೆಟ್ರಿಕ್ ಅಪ್ಡೇಟ್, ವಿಳಾಸ ತಿದ್ದುಪಡಿ ಹಾಗೂ ಜನಸಾಂಖ್ಯಿಕ ಮಾಹಿತಿಯ ನವೀಕರಣವನ್ನು ಯಾವುದೇ ಶುಲ್ಕವಿಲ್ಲದೆ ಮಾಡಿಸಬಹುದು. ಶಾಲೆಗಳ ಸಹಕಾರದಿಂದ ಈ ಪ್ರಕ್ರಿಯೆ ಸರಳವಾಗಿ ನಡೆಯಲಿದ್ದು ಮಕ್ಕಳಿಗೆ ಮುಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳು, ಶಿಕ್ಷಣ ಸೌಲಭ್ಯಗಳು ಮತ್ತು ಡಿಜಿಟಲ್ ಸೇವೆಗಳು ಸುಲಭವಾಗಿ ಲಭ್ಯವಾಗಲಿವೆ. ಪೋಷಕರು ಈ ಅವಕಾಶವನ್ನು ಬಳಸಿಕೊಂಡು ಮಕ್ಕಳ ಆಧಾರ ವಿವರಗಳನ್ನು ಸಮೇತ ಸರಿಯಾಗಿ ಅಪ್ಡೇಟ್ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯ.

Schoolchildren Aadhar Biometric Updates: ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಶಾಲಾ ಮಕ್ಕಳಿಗೆ ಆಧಾರಗೆ ಸಂಬಂಧಿಸಿದಂತೆ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಇದು ಶಾಲೆಗಳು ಬಯೋಮೆಟ್ರಿಕ್ ನವೀಕರಣಗಳು ಬಾಕಿ ಇರುವ ಮಕ್ಕಳನ್ನು ಗುರುತಿಸಲು ಅವಕಾಶ ಮಾಡಿಕೊಟ್ಟಿತು. ದೇಶಾದ್ಯಂತ 83,000 ಶಾಲೆಗಳಲ್ಲಿ 10 ಮಿಲಿಯನ್ ಗಿಂತಲೂ ಹೆಚ್ಚು ಮಕ್ಕಳಿಗೆ ಕಡ್ಡಾಯ ಬಯೋಮೆಟ್ರಿಕ್ ಅಪ್ಡೇಟ್ ಪೂರ್ಣಗೊಳಿಸಲಾಗಿದೆ. ಯುಐಡಿಎಐ ಈ ವಿಶೇಷ ಅಭಿಯಾನವನ್ನು ಸೆಪ್ಟೆಂಬರ್ 2025 ರಲ್ಲಿ ಪ್ರಾರಂಭಿಸಿತು.

ಇದರ ನಂತರ ಮಕ್ಕಳಿಗಾಗಿ ನವೀಕರಣಗಳನ್ನು ಪೂರ್ಣಗೊಳಿಸಲು ಶಾಲೆಗಳಲ್ಲಿ ವಿಶೇಷ ಶಿಬಿರಗಳನ್ನು ಸ್ಥಾಪಿಸಲಾಯಿತು. ಅಭಿಯಾನವನ್ನು ಶಿಕ್ಷಣಕ್ಕಾಗಿ ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಪಾರ್ಮೇಶನ್ ಸಿಸ್ಟಮ್ ಪ್ಲಸ್ (ಯುಡಿಐಎಸ್ಇ ಪ್ಲಸ್) ಅಪ್ಲಿಕೇಶನ್ ನೊಂದಿಗೆ ಸಂಯೋಜಿಸಲಾಯಿತು. ಈ ಮಿಷನ್ ಮೋಡ ಅಭಿಯಾನವನ್ನು ವಿವರಿಸುವ ಹೇಳಿಕೆಯನ್ನು ಐಟಿ ಸಚಿವಾಲಯ ಬಿಡುಗಡೆ ಮಾಡಿದರು.

ಮಖಗಳಿಗೆ ಉಚಿತ ಅಪ್ ಡೇಟ್ಸ್ :ಯುಐಡಿಎಐ ಮಹತ್ವದ ನಿರ್ಧಾರ ಮಕ್ಕಳ ಆಧಾರ ಬಯೋಮೆಟ್ರಿಕ್ ನವೀಕರಣಕ್ಕೆ ಸಂಬಂಧಿಸಿದಂತೆ ಯುಐಡಿಎಐ (UIDAI) ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಅಕ್ಟೋಬರ್ 1.2025 ರಿಂದ ಒಂದು ವರ್ಷದ ಅವಧಿಗೆ ಏಳರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಬಯೋಮೆಟ್ರಿಕ್ ಅಪ್ಡೇಟ್ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಿದೆ.

ಇದರಿಂದ ಕೋಟ್ಯಾಂತರ ಮಕ್ಕಳಿಗೆ ಉಚಿತವಾಗಿ ಆಧಾರ್ ವಿವರಗಳನ್ನು ನವೀಕರಿಸುವ ಅವಕಾಶ ಲಭ್ಯವಾಗಲಿದೆ. ಇದಲ್ಲದೆ ಐದರಿಂದ ಏಳು ವರ್ಷ ಹಾಗೂ 15ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ಬಯೋಮೆಟ್ರಿಕ್ ನವೀಕರಣಗಳು ಈಗಾಗಲೇ ಉಚಿತವಾಗಿದೆ. ಈ ಹಿನ್ನಲೆಯಲ್ಲಿ ಪೋಷಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮಕ್ಕಳ ಆಧಾರ ಮಾಹಿತಿ ನವೀಕರಿಸಬಹುದು.

ಮಕ್ಕಳು ತಮ್ಮ ಆಧಾರ್ ವಿವರಗಳನ್ನು ಶಾಲೆಗಳ ಮೂಲಕ ದೇಶಾದ್ಯಂತ ಇರುವ ಅದರ್ ದಾಖಲಾತಿ ಕೇಂದ್ರಗಳು ಹಾಗೂ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಸುಲಭವಾಗಿ ಅಪ್ಡೇಟ್ ಮಾಡಿಸಿಕೊಳ್ಳಬಹುದು.

ಯುಐಡಿಎಐ ಮಾಹಿತಿಯ ಪ್ರಕಾರ ಈ ಅವಧಿಯಲ್ಲಿ ದೇಶಾದ್ಯಂತ ಸುಮಾರು 13 ಮಿಲಿಯನ್ ಬಯೋಮೆಟ್ರಿಕ್ ನವೀಕರಣಗಳು ಈಗಾಗಲೇ ಪೂರ್ಣಗೊಂಡಿವೆ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳು ವಿದ್ಯಾರ್ಥಿ ವೇತನ ಶಿಕ್ಷಣ ಮತ್ತು ಡಿಜಿಟಲ್ ಸೇವೆಗಳಲ್ಲಿ ಯಾವುದೇ ಅಡಚಣೆ ಎದುರಾಗದಂತೆ ಸಮಯಕ್ಕೆ ಸರಿಯಾಗಿ ಆಧಾರ ಅಪ್ಡೇಟ್ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.

5 ಮತ್ತು 15 ನೇ ವಯಸ್ಸಿನಲ್ಲಿ ಅಪ್ಡೇಟ್ ಏಕೆ ಅಗತ್ಯ? ಯುಐ ಡಿಎಐ ನಿಯಮಗಳ ಪ್ರಕಾರ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ಕಾರ್ಡ್ ರಚಿಸುವಾಗ ಕೇವಲ ಫೋಟೋ, ಹೆಸರು, ಜನ್ಮ ದಿನಾಂಕ, ಲಿಂಗ, ವಿಳಾಸ, ಮತ್ತು ಜನನ ಪ್ರಮಾಣ ಪತ್ರ ಮಾತ್ರ ಅಗತ್ಯವಿವೆ. ಮಗು 15 ವರ್ಷ ವಯಸ್ಸನ್ನು ತಲುಪಿದಾಗ ಆಧಾರ್ ನಲ್ಲಿ ಅವರ ಬೆರಳಚ್ಚುಗಳು ಮತ್ತು ಐರಿಸ್ ಅನ್ನು ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ.

ಈ ವಯಸ್ಸಿನಲ್ಲಿ ಮಕ್ಕಳ ಬೆರಳಚ್ಚುಗಳು ಮತ್ತು ಐರಿಸ್ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರುವುದಿಲ್ಲ ಆದ್ದರಿಂದ ಅವುಗಳನ್ನು ದಾಖಲಿಸಲಾಗುವುದಿಲ್ಲ. ಹಾಗೆ ಮಾಡದಿದ್ದರೆ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯುವಲ್ಲಿ ಮತ್ತು NEET, JEE ಮತ್ತು CUET ನಂತಹ ಪರೀಕ್ಷೆಗಳಿಗೆ ನೋಂದಾಯಿಸುವಲ್ಲಿ ತೊಂದರೆಗಳನ್ನು ಉಂಟಾಗುತ್ತದೆ.

ಅಭಿಯಾನಕ್ಕೆ ಸಹಕರಿಸುತ್ತವೆ ಸರ್ಕಾರ ಮತ್ತು ರಾಜ್ಯಗಳು: ದೇಶದ ಎಲ್ಲ ಶಾಲೆಗಳು ಈ ಅಭಿಯಾನವನ್ನು ಒಳಗೊಳ್ಳುವವರಿಗೆ ಈ ಮಿಷನ್ ಮೋಡ್ ಅಭಿಯಾನ ಮುಂದುವರಿಯುತ್ತದೆ ಎಂದು ಯುಐಡಿಎಐ ಹೇಳಿದೆ. ದೇಶಾದ್ಯಂತದ ಯುಐಡಿಎಐ ನ 8 ಪ್ರಾದೇಶಿಕ ಕಚೇರಿಗಳು ಈ ಅಭಿಯಾನವನ್ನು ಪೂರ್ಣಗೊಳಿಸಲು ಶಿಕ್ಷಣ ಇಲಾಖೆ ಜಿಲ್ಲಾಡಳಿತ ಮತ್ತು ಶಾಲಾ ನಿರ್ವಹಣೆಯೊಂದಿಗೆ ಸಹಕರಿಸುವೆ. ಯುಐಡಿಎಐ ಸಿಇಒ ಭುವನೇಶ್ ಕುಮಾರ್ ಈ ಅಭಿಯಾನದಲ್ಲಿ ಸಹಕಾರ ಕೋರಿಯ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.



ಇನ್ನಷ್ಟು ಓದಿರಿ:
ನವಲಗುಂದ ಅಭಿವೃದ್ಧಿಗೆ ವಿಶೇಷ ಗಮನ : ಸಿಎಂ ಸಿದ್ದರಾಮಯ್ಯ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online