<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Corporate

UPSC ನೇಮಕಾತಿ 2026:ಪರೀಕ್ಷೆ ಇಲ್ಲದೆ ಸರ್ಕಾರಿ ಜಾಬ್ ಪಡೆಯುವ ಚಾನ್ಸ್

UPSC ನೇಮಕಾತಿ 2026:ಪರೀಕ್ಷೆ ಇಲ್ಲದೆ ಸರ್ಕಾರಿ ಜಾಬ್ ಪಡೆಯುವ ಚಾನ್ಸ್
Summary: UPSC (Union Public Service Commission) 2026 new recruitment has given a big opportunity to central government job aspirants. This time, recruitment will be done directly on the basis of merit and interview without a written exam for some posts.

belahavi news :

ಕೇಂದ್ರ ಲೋಕಸೇವಾ ಆಯೋಗವು ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 194 ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಬೃಹತ್ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಮೂಲಕ ಅಭ್ಯರ್ಥಿಗಳಿಗೆ ಕೇಂದ್ರ ಸರಕಾರಿ ಹುದ್ದೆ ಪಡೆಯಲು ಉತ್ತಮ ಅವಕಾಶ ಲಭ್ಯವಾಗಿದೆ.ವಿಶೇಷವಾಗಿ ಕೆಲವು ಹುದ್ದೆಗಳಿಗೆ ಲಿಖಿತ ಪರೀಕ್ಷೆ ಇಲ್ಲದೆ ನೇರವಾಗಿ ಸಂದರ್ಶನ ಆಧಾರದ ಮೇಲೆ ಆಯ್ಕೆ ನಡೆಯುವ ಸಾಧ್ಯತೆ ಇರುವುದರಿಂದ ಇದು ಸುವರ್ಣ ಅವಕಾಶವಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು upsc ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 12 ಸಂಜೆ 6 ಗಂಟೆ ಎಂದು ನಿಗದಿಪಡಿಸಲಾಗಿದೆ.ಅಭ್ಯರ್ಥಿಗಳು ಕೊನೆಯ ಕ್ಷಣದ ತೊಂದರೆಗಳನ್ನು ತಪ್ಪಿಸಲು ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಸೂಕ್ತವಾಗಿದೆ.

ದೇಶದ ಅತ್ಯುನ್ನತ ನೇಮಕಾತಿ ಸಂಸ್ಥೆಯಾದ ಕೇಂದ್ರ ಲೋಕಸೇವಾ ಆಯೋಗವು ( UPSC )ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಖಾಲಿ ಇಟ್ಟಿರುವ ಒಟ್ಟು 194 ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಬೃಹತ್ ನೇಮಕಾತಿ ಅಧಿಸೂಚನೆ ಹೊರಡಿಸಿದೆ.ಕೇಂದ್ರ ಸರ್ಕಾರದ ವಿವಿಧ ಉನ್ನತ ಹುದ್ದೆಗಳಲ್ಲಿ ಜವಾಬ್ದಾರಿಯುತ ಮತ್ತು ಗೌರವಾನ್ವಿತ ಭವಿಷ್ಯವನ್ನು ರೂಪಿಸಲು ಬಯಸುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.

Sponsored

ಈ ನೇಮಕಾತಿಗಾಗಿ ಆನ್ ಲೈನ್ ಅರ್ಜಿ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು,ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹುದ್ದೆ ವಾರಿಯಾಗಿ ಭಿನ್ನವಾಗಿವೆ.ಸಾಮಾನ್ಯವಾಗಿ ಇಂಜಿನಿಯರಿಂಗ್ ಪದವಿಯಿಂದ ಹಿಡಿದು ಸ್ನಾತಕೋತ್ತರ ಪದವಿ ಹಾಗೂ ಪಿಎಚ್ಡಿ ವರೆಗಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಇಲ್ಲಿ ಅವಕಾಶವಿದೆ.

ಬಿ ಎಸ್ ಸಿ,ಬಿ.ಇ/ಬಿ.ಟೆಕ್,ಎಂ.ಎ/ಎಂ.ಟೆಕ್ ಹಾಗೂ ಪಿಜಿ ಡಿಪ್ಲೋಮಾ ಸೇರಿದಂತೆ ವಿವಿಧ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ತಮ್ಮ ಸಂಬಂಧಿತ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.ಪ್ರತಿಯೊಂದು ಹುದ್ದೆಗೆ ಅಗತ್ಯವಿರುವ ನಿರ್ದಿಷ್ಟ ಶೈಕ್ಷಣಿಕ ಅರ್ಹತೆಗಳನ್ನು ಅಧಿಕೃತ ಅಧಿ ಸೂಚನೆಯಲ್ಲಿ ವಿವರವಾಗಿ ನೀಡಲಾಗಿದ್ದು,ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅದನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಅಗತ್ಯವಾಗಿದೆ.

ವಿವಿಧ ಕ್ಷೇತ್ರಗಳ ತಜ್ಞರಿಗೆ ಮುಕ್ತ ಅವಕಾಶ: ಈ ವಿಶೇಷ ನೇಮಕಾತಿ ಅಭಿಯಾನದ ಮೂಲಕ ತಾಂತ್ರಿಕ,ಇಂಜಿನಿಯರಿಂಗ್,ವೈಜ್ಞಾನಿಕ,ಬೋಧನೆ,ವಾಯು ಯಾನ,ಪುರಾತತ್ವ ಶಾಸ್ತ್ರ,ಹವಾಮಾನ ಶಾಸ್ತ್ರ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಸೂಚಿಸಲಾಗಿದೆ.ಇಂಜಿನಿಯರಿಂಗ್, ವಿಜ್ಞಾನ ವಾತಾವರಣ ಅಧ್ಯಯನ, ವಿವಿಧ ಭಾಷೆಗಳು, ಮೆಕ್ಯಾನಿಕಲ್, ಸಿವಿಲ್, ತೈಲ ತಂತ್ರಜ್ಞಾನ ರಾಸಾಯನಿಕ ಇಂಜಿನಿಯರಿಂಗ್ ಹಾಗೂ ವಾಯು ನಿರ್ವಹಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಿನತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ಹೊಂದಿದ್ದಾರ

ಈ ನೇಮಕಾತಿ ಮೂಲಕ ತಮ್ಮ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಪ್ರಮುಖ ಇಲಾಖೆಗಳಲ್ಲಿನ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಯಲಿದೆ

Sponsored

ಲಿಖಿತ ಪರೀಕ್ಷೆ ಇಲ್ಲ,ಕೇವಲ ಸಂದರ್ಶನದ ಮೂಲಕ ಆಯ್ಕೆ:ಈ ನೇಮಕಾತಿಯ ಪ್ರಮುಖ ಆಕರ್ಷಣೆ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇಲ್ಲದಿರುವುದು.ಸಲ್ಲಿಸಲಾದ ಅರ್ಜಿಗಳನ್ನು ಶೈಕ್ಷಣಿಕ ಅರ್ಹತೆ ಮತ್ತು ವೃತ್ತಿಪರ ಅನುಭವದ ಆಧಾರದ ಮೇಲೆ ಪರಿಶೀಲಿಸಿ ಮೊದಲು ಕಿರುಪಟ್ಟಿ ಮಾಡಲಾಗುತ್ತದೆ.ನಂತರ ಅರ್ಹ ಅಭ್ಯರ್ಥಿಗಳಿಗೆ ನೇರ ಸಂದರ್ಶನ ನಡೆಸಲಾಗುತ್ತದೆ.

ಆಯ್ಕೆ ಪ್ರಕ್ರಿಯೆಯಲ್ಲಿ ಕೇವಲ ಪರೀಕ್ಷಾ ಅಂಕಗಳಿಗೆ ಮಾತ್ರವಲ್ಲದೆ,ಅಭ್ಯರ್ಥಿಯ ವಿಷಯದ ಪರಿಣತಿ,ಪ್ರಾಯೋಗಿಕ ಜ್ಞಾನ ಹಾಗೂ ಸಾಬಹನ ಕೌಶಲಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.ಇದರಿಂದಾಗಿ ತಮ್ಮ ಕ್ಷೇತ್ರದಲ್ಲಿ ಉತ್ತಮ ಜ್ಞಾನ ಮತ್ತು ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಅವಕಾಶ ಪಡೆಯಲು ಇದು ಮಹತ್ವದ ವೇದಿಕೆಯಾಗಿದೆ.

ಈ ನೇಮಕಾತಿಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಅವಕಾಶ ಇರುವುದಿಲ್ಲ.ಅರ್ಜಿದಾರರು ಯುಪಿಎಸ್ಸಿ ಯ ಅಧಿಕೃತ ORA ಪೋರ್ಟಲ್ ಮೂಲಕ ಅರ್ಜಿ ಬರ್ತಿ ಮಾಡಬೇಕು.ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯುಪಿಎಸ್ಸಿ ORA ಪೋರ್ಟಲ್ ಗೆ ಭೇಟಿ ನೀಡಿ,ಅಗತ್ಯ ಮಾಹಿತಿಗಳನ್ನು ಸರಿಯಾಗಿ ನಮೂದಿಸಿ,ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಅಂತಿಮವಾಗಿ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಶುಲ್ಕದ ವಿಷಯಕ್ಕೆ ಬಂದರೆ,ಸಾಮಾನ್ಯ ವರ್ಗ ಹಾಗೂ ಇತರೆ ಹಿಂದುಳಿದ ವರ್ಗ ಅಭ್ಯರ್ಥಿಗಳಿಗೆ₹25 ಶುಲ್ಕವನ್ನು ನಿಗದಿಪಡಿಸಲಾಗಿದೆ.ಈ ಶುಲ್ಕವನ್ನು ಆನ್ಲೈನ್ ಪಾವತಿ ವಿಧಾನಗಳ ಮೂಲಕ ಪಾವತಿಸಬಹುದು.ಆದರೆ ಮಹಿಳಾ ಅಭ್ಯರ್ಥಿಗಳು,ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಮತ್ತು ಅಂಗವೈಕಲ್ಯಾ ಹೊಂದಿರುವ ವ್ಯಕ್ತಿಗಳು ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ಪಡೆದಿರುತ್ತಾರೆ.ಇವರಿಗೆ ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ.

Sponsored

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ,ಅರ್ಹತೆ,ವಯೋಮಿತಿ,ಅಗತ್ಯ ದಾಖಲೆಗಳು ಹಾಗೂ ಕೊನೆಯ ದಿನಾಂಕದ ಕುರಿತು ಸ್ಪಷ್ಟ ಮಾಹಿತಿ ಪಡೆದುಕೊಳ್ಳುವುದು ಉತ್ತಮ.ಕೊನೆಯ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ,ಅರ್ಜಿಯನ್ನು ಮುಂಚಿತವಾಗಿಯೇ ಸಲ್ಲಿಸುವುದು ಸೂಕ್ತವಾಗಿದೆ.

ಈ ನೇಮಕಾತಿಯಲ್ಲಿ ಆಯ್ಕೆ ಹಾಗೂ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಏಳನೆಯ ವೇತನ ಆಯೋಗದ ನಿಯಮಾವಳಿಗಳ ಪ್ರಕಾರ ಆಕರ್ಷಕ ಸಂಬಳ ಮತ್ತು ವಿವಿಧ ಬಟ್ಟೆಗಳ ಸೌಲಭ್ಯ ದೊರೆಯಲಿದೆ.ಹುದ್ದೆಯ ಪ್ರಕಾರ ವೇತನ ಶ್ರೇಣಿ ಬದಲಾಗುವ ಸಾಧ್ಯತೆ ಇದ್ದರೂ,ಆರಂಭಿಕ ಹಂತದಲ್ಲಿ ಉತ್ತಮ ವೇತನವನ್ನು ನೀಡಲಾಗುತ್ತದೆ.ವಿಶೇಷವಾಗಿ'ಪೇ ಲೇವೆಲ್- 10'ಅಡಿಯಲ್ಲಿ ನೇಮಕವಾಗುವ ಅಭ್ಯರ್ಥಿಗಳಿಗೆ ಉತ್ತಮ ಮೂಲ ವೇತನದ ಜೊತೆಗೆ ಹಲವು ಸರ್ಕಾರಿ ಸೌಲಭ್ಯಗಳು ಲಭ್ಯವಾಗುತ್ತವೆ.

ಮೂಲವೇತನದೊಂದಿಗೆ ಸರ್ಕಾರದ ನಿಯಮಾನುಸಾರ ತುಟ್ಟಿಭತ್ಯೆ,ಮನೆ ಬಾಡಿಗೆ ಭತ್ಯೆ,ಹಾಗೂ ಸಾರಿಗೆ ಭತ್ಯೆ ನೀಡಲಾಗುತ್ತದೆ.ಇದಲ್ಲದೆ ವೈದ್ಯಕೀಯ ಸೌಲಭ್ಯ,ನಿವೃತ್ತಿ ವೇತನ ಯೋಜನೆ,ರಜೆ ಸೌಲಭ್ಯಗಳು ಮತ್ತು ಇತರೆ ಸರ್ಕಾರಿ ಉದ್ಯೋಗಿಗಳಿಗೆ ಲಭ್ಯವಾಗುವ ವಿಶೇಷ ಸೌಲಭ್ಯಗಳನ್ನು ಅಭ್ಯರ್ಥಿಗಳು ಪಡೆಯಬಹುದು.ಇನ್ನು ಗ್ರೂಪ್ ಎ ವರ್ಗದ ಹಿರಿಯ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳ ವೇತನ ಇನ್ನಷ್ಟು ಹೆಚ್ಚಿರುತ್ತದೆ.ಮತ್ತೊಬ್ಬ ಜವಾಬ್ದಾರಿ,ಅನುಭವ ಮತ್ತು ಸಂಬಂಧಿತ ಇಲಾಖೆಯ ಆಧಾರದ ಮೇಲೆ ಸಂಬಳದ ಮಟ್ಟದಲ್ಲಿ ವ್ಯತ್ಯಾಸ ಇರಬಹುದು.ಒಟ್ಟಾರೆ,ಈ ನೇಮಕಾತಿ ಉತ್ತಮ ಸಂಬಳದ ಜೊತೆಗೆ ಭದ್ರ ಸರ್ಕಾರಿ ಉದ್ಯೋಗ ಮತ್ತು ಉಜ್ವಲ ಭವಿಷ್ಯವನ್ನು ಒದಗಿಸುವ ಅವಕಾಶವಾಗಿದೆ.

Also Read:

Sponsored

ಹೃದಯಸ್ಪರ್ಶಿ ಕ್ಷಣ: ತನ್ನ ಆರೈಕೆ ಮಾಡಿದ ವ್ಯಕ್ತಿಗೆ ಮುತ್ತು ಕೊಟ್ಟ ಕರು

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online