<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Business

ಯುಎಸ್ - ಇರಾನ್ ಮಹತ್ವದ ಒಪ್ಪಂದ: ಸ್ವಿಟ್ಜರ್ ಲ್ಯಾಂಡ್ ನಲ್ಲಿ ಸಹಿ, ವ್ಯಾನ್ಸ್ ನೇತೃತ್ವದಲ್ಲಿ ಮಾತುಕತೆ

ಯುಎಸ್ - ಇರಾನ್ ಮಹತ್ವದ ಒಪ್ಪಂದ: ಸ್ವಿಟ್ಜರ್ ಲ್ಯಾಂಡ್ ನಲ್ಲಿ ಸಹಿ, ವ್ಯಾನ್ಸ್ ನೇತೃತ್ವದಲ್ಲಿ ಮಾತುಕತೆ
Summary: A landmark deal between the US and Iran has been signed in Switzerland. The talks led by Vance were successful, and former President Donald Trump has reacted to this. Here is a breakdown of the key points and developments of the deal.

Belagavi news:

ವಾಷಿಂಗ್ಟನ್ (ಯುಎಸ್ ಎ): ಸ್ವಿಟ್ಜರ್ ಲ್ಯಾಂಡ್ ನಲ್ಲಿ ಇರಾನ್ ಜೊತೆ ನಡೆಯಲಿರುವ ಶಾಂತಿ ಒಪ್ಪಂದಕ್ಕೆ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ಅಮೆರಿಕದ ನಿಯೋಗ ಸಹಿ ಹಾಕಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿಯ ಪ್ರಕಾರ, ಈಗಾಗಲೇ ಟ್ರಂಪ್ ಮತ್ತು ವ್ಯಾನ್ಸ್ ಇಬ್ಬರು ಇರಾನ್ ನ ಪ್ರಮುಖ ಸಮಾಲೋಚಕ ಮೊಹಮ್ಮದ್ ಬಘರ್ ಗಾಲಿಬಾಫ್ ಅವರೊಂದಿಗೆ ಒಪ್ಪಂದಕ್ಕೆ ಎಲೆಕ್ಟ್ರಾನಿಕ್ ಸಹಿ ಹಾಕಿದ್ದಾರೆ.

ಪ್ರಾನ್ಸ್ ನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಟ್ರಂಪ್, ಜೂನ್ 19ರಂದು ನಡೆಯಲಿರುವ ಸಹಿ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ವ್ಯಾನ್ಸ್ ಹಾಜರಿರಲಿದ್ದಾರೆ ಎಂದು ತಿಳಿಸಿದ್ದಾರೆ. "ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು ಅಥವಾ ಭಾಗಿಯಾಗದೆ ಇರಬಹುದು. ಒಪ್ಪಂದದ ತಿಳುವಳಿಕೆ ಪತ್ರದ ಅಂಶಗಳನ್ನು ಶೀಘ್ರದಲ್ಲೇ ಅಥವಾ ಕಾರ್ಯಕ್ರಮದ ಬಳಿಕ ಬಿಡುಗಡೆ ಮಾಡಲಾಗುವುದು" ಎಂದು ಅವರು ಹೇಳಿದರು.

Sponsored

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ವ್ಯಾನ್ಸ್, ಭಾನುವಾರವೇ ಶಾಂತಿ ಒಪ್ಪಂದಕ್ಕೆ ಡಿಜಿಟಲ್ ಸಹಿ ಹಾಕಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ವಾರದ ಬಳಿಕ ಒಪ್ಪಂದದ ಸಂಪೂರ್ಣ ವಿವರಗಳನ್ನು ಸಾರ್ವಜನಿಕಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಒಪ್ಪಂದದ ಮಧ್ಯಸ್ಥಿಕೆಯನ್ನು ಪಾಕಿಸ್ತಾನ್ ಮತ್ತು ಕತಾರ್ ವಹಿಸಿದ್ದವು ಎಂಬುದನ್ನು ವ್ಯಾನ್ಸ್ ವಿವರಿಸಿದ್ದಾರೆ.

ಇದೇ ವೇಳೆ ಇರಾನ್ ಪುನರ್ ನಿರ್ಮಾಣಕ್ಕೆ ಹಣಕಾಸು ಹರಿವು ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ವ್ಯಾನ್ಸ್, ಭವಿಷ್ಯದಲ್ಲಿ ಇರಾನ್ ಗೆ ಬರುವ ಹೂಡಿಕೆಗಳು ಅಮೆರಿಕಕ್ಕಿಂತ ಹೆಚ್ಚಾಗಿ ಗಲ್ಪ್ ಅರಬ್ ರಾಷ್ಟ್ರಗಳಿಂದ ಬರಬಹುದು ಎಂದು ಹೇಳಿದ್ದಾರೆ. ಇರಾನ್ ಸಾಮಾನ್ಯ ರಾಷ್ಟ್ರದಂತೆ ವರ್ತಿಸಿದರೆ ಮತ್ತು ಹೂಡಿಕೆದಾರರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿದರೆ, ಗಲ್ಪ್ ರಾಷ್ಟ್ರಗಳು ಅಲ್ಲಿ ಹೂಡಿಕೆ ಮುಂದಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇರಾನ್ ಗೆ ನೇರ ಆರ್ಥಿಕ ನೆರವು ನೀಡುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಮೆರಿಕ ಅಧಿಕಾರಿಗಳು, ಆ ಹಣದಲ್ಲಿ ಒಂದು ಬಿಡಿಗಾಸು ಅಮೇರಿಕದಿಂದ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Sponsored

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮಾತನಾಡಿ, ಒಪ್ಪಂದಕ್ಕೆ ಸಹಿ ಹಾಕಿದ ನಂತರ ಶುಕ್ರವಾರ ಜಿನೀವಾದಲ್ಲಿ ಅಮೆರಿಕದೊಂದಿಗೆ ಮಾತುಕತೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಎರಡು ಕಡೆಯ ನಿಯೋಗಗಳ ಮುಖ್ಯಸ್ಥರ ನಡುವೆ ಸ್ವಿಟ್ಜರ್ ಲ್ಯಾಂಡ್ ನಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇದು ಮೊದಲ ಸುತ್ತಿನ ಮಾತುಕತೆಗಳಾಗಲಿದೆ ಎಂದು ಪ್ರೆಸ್ ಟಿವಿ ವರದಿ ನೀಡಿದೆ.

ಇದೇ ವೇಳೆ, ಇರಾನ್ ಮತ್ತು ಅಮೆರಿಕ ಒಪ್ಪಂದಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಹಾರ್ಮುಜ್ ಜಲಸಂಧಿ ಸಂಪೂರ್ಣವಾಗಿ ಮುಕ್ತ ವಾಗುವ ಸಾಧ್ಯತೆ ಇದೆ. ಇದರಿಂದ ತೈಲ ಮತ್ತು ಅನಿಲ ಪೂರೈಕೆ ವೇಗವಾಗಿ ಸಾಗುವಂತೆ ನೋಡಿಕೊಳ್ಳಲಾಗುವುದು. ಭಾರಿ ಟ್ಯಾಂಕರ್ ಗಳ ಚಲನೆಗೆ ಆದ್ಯತೆ ನೀಡಲಾಗುವುದು ಎಂದು ಅಮೆರಿಕದ ಹಿರಿಯ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

Also Read:

ಶಿವರಾಜ್ ಕುಮಾರ್ ಬಗ್ಗೆ ಚಿರಂಜೀವಿ ಹೃದಯಸ್ಪರ್ಶಿ ಮಾತುಗಳು

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online