<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಅಮೆರಿಕ-ಇರಾನ್ ನಡುವೆ ಶಾಂತಿ ಪ್ರಯತ್ನ: ಸಂಘರ್ಷ ಅಂತ್ಯಕ್ಕೆ ಮಂಗಳವಾರ ಮಾತುಕತೆ

ಅಮೆರಿಕ-ಇರಾನ್ ನಡುವೆ ಶಾಂತಿ ಪ್ರಯತ್ನ: ಸಂಘರ್ಷ ಅಂತ್ಯಕ್ಕೆ ಮಂಗಳವಾರ ಮಾತುಕತೆ
Summary: A significant development has taken place towards ending the long-running conflict between the US and Iran. The two countries have agreed to hold peace talks, a major step at the diplomatic level. Learn more about the background, purpose and possible consequences of the talks here.

Belagavi News:

ಅಮೆರಿಕ-ಇರಾನ್ ಸಂಘರ್ಷ ಕೊನೆಗೊಳಿಸಲು ಮಂಗಳವಾರ ದೊಹಾದಲ್ಲಿ ಮಾತುಕತೆ

ಮಧ್ಯಪ್ರಾಚ್ಯದಲ್ಲಿ ಶಾಂತಿ ಒಪ್ಪಂದ ಉಲ್ಲಂಘನೆಯ ಬಳಿಕ ಕಳೆದೆ ಎರಡು ದಿನಗಳಿಂದ ಮತ್ತೆ ಉದ್ವಿಗ್ನತೆ ಹೆಚ್ಚಾಗಿ ಸಂಘರ್ಷ ತೀವ್ರಗೊಂಡಿತ್ತು. ಇದೀಗ ಪರಿಸ್ಥಿತಿಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ಮಾತುಕತೆ ಮೂಲಕ ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸಲು ನಿರ್ಧರಿಸಿವೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ಪ್ರತಿನಿಧಿಗಳು ಮಂಗಳವಾರ ಕತಾರ್ ರಾಜಧಾನಿ ದೋಹಾದಲ್ಲಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಇತ್ತೀಚೆಗೆ ಹಾರ್ಮುಜ್ ಜಲಸಂಧಿನಲ್ಲಿ ಸಾಗುತ್ತಿದ್ದ ಕಚ್ಚಾ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ ನಡೆಸಿ ಶಾಂತಿ ಒಪ್ಪಂದ ಉಲ್ಲಂಘಿಸಿದ ಆರೋಪ ಕೇಳಿ ಬಂದಿತ್ತು. ಈ ಘಟನೆ ಅಮೆರಿಕದ ತೀವ್ರ ಪ್ರತಿಕ್ರಿಯೆಗೆ ಕಾರಣವಾಗಿತ್ತು. ಬಳಿಕ ಅಮೆರಿಕವು ಇರಾನ್ ವಿರುದ್ಧ ಸೇನಾ ಕ್ರಮ ಕೈಗೊಂಡಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೂಚನೆಯಂತೆ ಇರಾನ್ ನ 10ಕ್ಕೂ ಹೆಚ್ಚು ಸೇನಾ ಸ್ಥಳದಲ್ಲಿ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.

Sponsored

ಇದೇ ಸಂದರ್ಭದಲ್ಲಿ, " ಇರಾನ್ ಅಸ್ತಿತ್ವದಲ್ಲಿ ಇರದಂತೆ ಮಾಡುತ್ತೇನೆ" ಎಂದು ಟ್ರಂಪ್ ನೀಡಿದ ಎಚ್ಚರಿಕೆ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿತ್ತು . ಇದಕ್ಕೆ ಪ್ರತಿಯಾಗಿ ಇರಾನ್ ಭಾನುವಾರ ಬಹ್ರೇನ್ ಮತ್ತು ಕುವೈತ್ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸಿ ಪ್ರತಿರೋಧ ತೋರಿಸಿದೆ.

ಅಮೆರಿಕದಲ್ಲಿ ಮುಂದುವರಿಸಿದರೆ ಶಾಂತಿ ಮಾತುಕತೆಯನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಇರಾನ್ ಖಡಕ್ ಎಚ್ಚರಿಕೆ ನೀಡಿತ್ತು. ಈ ಬೆಳವಣಿಗೆಗಳ ನಡುವೆ ಇದೀಗ ಉಭಯ ದೇಶಗಳು ಮಾತುಕತೆ ಮೂಲಕ ವಿವಾದ ಪರಿಹರಿಸಲು ಒಪ್ಪಿಕೊಂಡಿವೆ.

ಇದೇ ವೇಳೆ ಹಾರ್ಮುಜ್ ಜಲಸಂಧಿ ಕುರಿತಾಗಿ. ಇರಾನ್ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, "ನಮ್ಮ ನಿಯಂತ್ರಣದಲ್ಲೇ ಹಾರ್ಮುಜ್ ಇರಬೇಕು" ಎಂದು ಒತ್ತಾಯಿಸಿದೆ. ಪರ್ಷಿಯನ್ ಕೊಲ್ಲಿಯ ಈ ಪ್ರಮುಖ ಮಾರ್ಗವು ಜಾಗತಿಕ ತೈಲ ಮತ್ತು ನೈಸರ್ಗಿಕ ಅನಿಲದ ಸುಮಾರು ಐದನೇ ಒಂದು ಭಾಗದ ಸಾಗಣೆಗೆ ಪ್ರಮುಖವಾಗಿದ್ದು, ಅದನ್ನು ಟೆಹ್ರಾನ್ ಮಾತ್ರ ನಿಯಂತ್ರಿಸಬೇಕು ಎಂಬ ನಿಲುವನ್ನು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಪುನರುಚ್ಚರಿಸಿದ್ದಾರೆ .

ಈ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ಹೊಸ ಶಾಂತಿ ನಿರೀಕ್ಷೆಯನ್ನು ಹುಟ್ಟು ಹಾಕಿದರು. ಪರಿಸ್ಥಿತಿ ಇನ್ನೂ ತೀವ್ರವಾಗಿಯೇ ಮುಂದುವರೆದಿದೆ.

Sponsored

ಹಾರ್ಮುಜ್ ಜಲಸಂಧಿಗೆ ಪರ್ಯಾಯವಾಗಿ ಅಮೆರಿಕದ ನೌಕಾಪಡೆಯ ಮೇಲ್ವಿಚಾರಣೆಯಲ್ಲಿರುವ ಬಹುರಾಷ್ಟ್ರೀಯ ನೌಕಾ ಸಂಸ್ಥೆಯು ಶನಿವಾರ ಓಮಾನ್ ಬಳಿ ಒಳಬರುವ ಮತ್ತು ಹೊರಹೋಗುವ ಸಾಗಣೆಗಾಗಿ ಮಾರ್ಗವನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಈ ಕ್ರಮವು ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಈ ನಿರ್ಧಾರಕ್ಕೆ ತೀವ್ರ ಪ್ರತಿಕ್ರಿಯೆ ನೀಡುವ ಇರಾನ್ ವಿದೇಶಾಂಗ ಸಚಿವಾಲಯ, "ಪ್ರಸ್ತುತ ಇರುವ ವ್ಯವಸ್ಥೆಗಳನ್ನು ಬದಲಿಸಿ ಹೊಸ ಅಥವಾ ಪ್ರತ್ಯೇಕ ವ್ಯವಸ್ಥೆಗಳನ್ನು ಸ್ಥಾಪಿಸುವ ಯಾವುದೇ ಪ್ರಯತ್ನವು ಹೆಚ್ಚಿನ ತೊಡಕುಗಳಿಗೆ ಕಾರಣವಾಗುತ್ತದೆ" ಎಂದು ಎಚ್ಚರಿಕೆ ನೀಡಿದೆ. ಇದರಿಂದ ಹಾರ್ಮುಜ್ ಜಲಸಂಧಿ ತೆರೆಯುವ ಪ್ರಕ್ರಿಯೆ ವಿಳಂಬವಾಗಬಹುದು ಮತ್ತು ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಇರಾನ್ ಹಾಗೂ ಅಮೆರಿಕ ನಡುವಿನ ಈ ಸಂಘರ್ಷದಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನ ಮಂಗಳವಾರದಿಂದ ಶಾಂತಿ ಮಾತುಕತೆಗಳು ಪುನರಾರಂಭಗೊಳ್ಳಲಿವೆ ಎಂದು ಈಗ ತಿಳಿಸಿದೆ. ಟ್ರಂಪ್ ಆಡಳಿತವು ಯಾವುದೇ ಮಾತುಕತೆಗಳನ್ನು ರದ್ದುಗೊಳಿಸಿಲ್ಲ ಮತ್ತು ಮುಂದಿನ ದಿನಗಳಲ್ಲಿ ತಾಂತ್ರಿಕ ಮಟ್ಟದ ಚರ್ಚೆಗಳು ನಿಗದಿಯಂತೆ ಮುಂದುವರಿಯಲಿವೆ ಎಂದು ಪಾಕಿಸ್ತಾನ್ ಸ್ಪಷ್ಟಪಡಿಸಿದೆ.

ಈ ಬೆಳವಣಿಗೆಗಳು ಮಧ್ಯ ಪ್ರಾಚ್ಯದಲ್ಲಿ ಶಾಂತಿ ನಿರೀಕ್ಷೆ ಮೂಡಿಸಿದರು, ಹಾರ್ಮುಜ್ ಜಲಸಂಧಿ ವಿಚಾರವು ಮತ್ತೆ ಜಾಗತಿಕ ರಾಜತಾಂತ್ರಿಕ ತೀವ್ರತೆಯ ಕೇಂದ್ರಬಿಂದುವಾಗುವ ಸಾಧ್ಯತೆ ಇದೆ.

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online