<?= $pageTitle ?>
Logo
ಮುಖಪುಟ ಓದುವುದು ಕೇಳು
Trending

Election Result Live: ಬಾಗಲಕೋಟೆಯಲ್ಲಿ 15 ನೇ ಸುತ್ತಿನಲ್ಲೂ ಉಮೇಶ್ ಮೇಟಿ ಮೇಲುಗೈ-ಪಟಾಕಿ ಸಿಡಿಸಿ ಸಂಭ್ರಮ!

Election Result Live:  ಬಾಗಲಕೋಟೆಯಲ್ಲಿ 15 ನೇ ಸುತ್ತಿನಲ್ಲೂ ಉಮೇಶ್ ಮೇಟಿ ಮೇಲುಗೈ-ಪಟಾಕಿ ಸಿಡಿಸಿ ಸಂಭ್ರಮ!
Summary: Umesh Meti is leading continuously in the Bagalkot results, and his lead continues in the 15th round as well. Workers are bursting firecrackers and celebrating.

belagavi:

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನ ಸಭೆ ಕ್ಷೇತ್ರಗಳ ಹೈವೋಲ್ಟೇಜ್ ಉಪಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಬೆಳಿಗ್ಗೆ 8 ಗಂಟೆಯಿಂದ ಮತ್ತೆ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಸಲಾಗಿದೆ. 8:30 ರಿಂದ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮತ ಎಣಿಕೆ ಮುಂದುವರೆದಿದೆ.

ಈ ಉಪಚುನಾವಣೆ ಮೂರು ವರ್ಷಗಳ ಕಾಂಗ್ರೆಸ್ ಸರ್ಕಾರದ ಆಡಳಿತದ ಮೇಲೆ ಜನಾಭಿಪ್ರಾಯವನ್ನು ಪ್ರತಿಬಿಂಬಿಸುವ ಮಹತ್ವದ ಪರೀಕ್ಷೆಯಾಗಿ ಪರಿಗಣಿಸಲಾಗಿದೆ. ಆದರಿಂದ ರಾಜ್ಯ ಕಾಂಗ್ರೆಸ್ ಗೆ ಇಂದು ಪ್ರತಿಷ್ಠೆಯ ಮತ್ತು ಗೆಲ್ಲಲೇ ಬೇಕಾದ ಕಠಿಣ ಉಪಚುನಾವಣೆ ಎಂಬುದಾಗಿ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಇತ್ತ ಬಿಜೆಪಿ ಆತ್ಮವಿಶ್ವಾಸ ಹೆಚ್ಚಿಸುವ, ಬಿ.ವೈ. ವಿಜಯೇಂದ್ರ ಅವರ ರಾಜ್ಯ ಅಧ್ಯಕ್ಷಗಿರಿಯನ್ನು ಒರೆಗೆ ಹಚ್ಚುವ, ಕಾಂಗ್ರೆಸ್ ಸರ್ಕಾರದ ಬಗ್ಗೆ ಜನವಿರೋಧವಿದೆ ಎಂಬುದನ್ನು ಪುಷ್ಠಿಕರಿಸುವ ಫಲಿತಾಂಶವಾಗಲಿದೆ.

ಹೀಗಾಗಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧಪಕ್ಷ ಬಿಜೆಪಿ ಎರಡಕ್ಕೂ ಈ ಉಪಚುನಾವಣೆ ಪಲಿತಾಂಶ ಮುಂದಿನ ರಾಜಕೀಯ ದಿಕ್ಕು ಹಾಗೂ ಲೆಕ್ಕಾಚಾರಗಳಿಗೆ ಮಹತ್ವದ ದಾರಿ ಮಾಡಿಕೊಡಲಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರವು ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದು, ಬಾಗಲಕೋಟೆ ಕ್ಷೇತ್ರವು ಹೆಚ್ .ವೈ. ಮೇಟಿ ಅವರ ನಿಧನದಿಂದ ತೆರವಾಗಿದೆ. ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಮನೂರು ಅವರ ಮೊಮ್ಮಗ ಸಮರ್ಥ್ ಶಾಮನೂರು ಸ್ಪರ್ಧಿಸಿದ್ದಾರೆ. ಬಾಗಲಕೋಟೆಯಲ್ಲಿ ದಿವಂಗತ ಹೆಚ್. ವೈ. ಮೇಟಿ ಅವರ ಪುತ್ರ ಉಮೇಶ್ ಮೇಟಿ ಕಣಕ್ಕಿಳಿದಿದ್ದಾರೆ.

ಇನ್ನು ಬಿಜೆಪಿಯಿಂದ ದಾವಣಗೆರೆ ದಕ್ಷಿಣದಲ್ಲಿ ಟಿ.ಶ್ರೀನಿವಾಸ್ ದಾಸಕರಿಯಪ್ಪ ಹಾಗೂ ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠ ಸ್ಪರ್ಧಿಸಿದ್ದಾರೆ.

ಮತ ಎಣಿಕೆಯ ನಿಖರ ಹಾಗೂ ಕ್ಷಣಕ್ಷಣದ ಮಾಹಿತಿಗಾಗಿ ನಮ್ಮೊಂದಿಗಿರಿ.

15 ನೇ ಸುತ್ತಿನಲ್ಲಿ ಕಾಂಗ್ರೆಸ್ ಗೆ 9,555 ಮತ ಮುನ್ನಡೆ:

15 ನೇ ಸುತ್ತಿನಲ್ಲಿ ಕಾಂಗ್ರೆಸ್ 9555 ಮತಗಳಿಂದ ಮುನ್ನಡೆ

ಉಮೇಶ್ ಮೇಟಿ- 60977

ವೀರಣ್ಣ ಚರಂತಿಮಠ- 51422

14ನೇ ಸುತ್ತಿನಲ್ಲಿ ಕಾಂಗ್ರೆಸ್ 9952 ಲೀಡ್

ಉಮೇಶ್ ಮೇಟಿ - 57471

ವೀರಣ್ಣ ಚರಂತಿಮಠ - 47519

13 ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ:

13 ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ

ಉಮೇಶ್ ಮೇಟಿ - 53849

ವೀರಣ್ಣ ಚರಂತಿಮಠ- 43528

ಕಾಂಗ್ರೆಸ್ ಗೆ 10321 ಮತಗಳ ಮುನ್ನಡೆ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

12 ನೇ ಸುತ್ತಿನ ಮತ ಎಣಿಕೆ ಮಾಹಿತಿ

ಉಮೇಶ್ ಮೇಟಿ- 50432

ವೀರಣ್ಣ ಚರಂತಿಮಠ- 39898

ಸಮರ್ ಶಾಮನರು ಮುನ್ನಡೆ:

8ನೇ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್

ಅಲ್ಪಸಂಖ್ಯಾತರೇ ಹೆಚ್ಚಿರುವ ಏರಿಯಾಗಳ ಮತ ಎಣಿಕೆ ಶುರು ಆಗಿದ್ದು, ಇರಿ ಮೊದಲ ಬಾರಿಗೆ ಸಮರ್ ಶಾಮನೂರು 1071 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಬಾಗಲಕೋಟೆಯಲ್ಲಿ 12 ನೇ ಸುತ್ತಿನಲ್ಲಿ ಕಾಂಗ್ರೆಸ್ 10534 ಮತಗಳಿಂದ ಮುನ್ನಡೆ.

ಬಾಗಲಕೋಟೆಯಲ್ಲಿ ಉಮೇಶ್ ಮೇಟಿ 10534 ಮತಗಳಿಂದ ಲೀಡ್

ಉಮೇಶ್ ಮೇಟಿ- 50,432

ವೀರಣ್ಣ ಚರಂತಿಮಠ- 39898

7 ನೇ ಸುತ್ತಿನ ಕೌಂಟಿಂಗ್ ಮುಕ್ತಾಯ: ದಾವಣಗೆರೆಯಲ್ಲಿ ಬಿಜೆಪಿಗೆ 3925 ಮತಗಳಿಂದ ಮುನ್ನಡೆ

ಶ್ರೀನಿವಾಸ್ ದಾಸಕರಿಯಪ್ಪ - 25878

ಸಮರ್ಥ್ ಶಾಮನೂರು -21953

ಬಾಗಲಕೋಟೆಯಲ್ಲಿ 11 ನೇ ಸುತ್ತು, ದಾವಣಗೆರೆಯಲ್ಲಿ 6ನೇ ಸುತ್ತು ಮುಕ್ತಾಯ:

ಬಾಗಲಕೋಟೆಯಲ್ಲಿ 11 ನೇ ಸುತ್ತಿನಲ್ಲಿ 9969 ಮತಗಳಿಂದ ಕಾಂಗ್ರೆಸ್ ಮುನ್ನಡೆ

ಕಾಂಗ್ರೆಸ್- 47206 ಮತ

ಬಿಜೆಪಿ- 37237 ಮತ

ದಾವಣಗೆರೆಯಲ್ಲಿ 6ನೇ ಸುತ್ತು ಮುಕ್ತಾಯ:

8539 ಮತಗಳಿಂದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಮುನ್ನಡೆ

ಸಮರ್ಥ್ ಶಾಮನೂರು- 17189

ಶ್ರೀನಿವಾಸ್ ದಾಸಕರಿಯಪ್ಪ- 25728

ಎಸ್ ಡಿ ಪಿ ಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ- 2659

ಬಾಗಲಕೋಟೆಯಲ್ಲಿ ಕಾಂಗ್ರೆಸ್ ಗೆ ಭಾರಿ ಮುನ್ನಡೆ

ಕಾಂಗ್ರೆಸ್ ನಲ್ಲಿ 10ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಉಮೇಶ್ ಮೇಟಿ - 44620

ವೀರಣ್ಣ ಚರಂತಿಮಠ- 33236

ಕಾಂಗ್ರೆಸ್ 11384 ಮತಗಳಿಂದ ಮುನ್ನಡೆ

ಮುನ್ನಡೆ ಕಾಯ್ದುಕೊಂಡ ಬಿಜೆಪಿ, ಕಾಂಗ್ರೆಸ್:

ಬಾಗಲಕೋಟೆಯಲ್ಲಿ 9ನೇ ಸುತ್ತಿನ ಮತ ಎಣಿಕೆ ಪೂರ್ಣ:

ಉಮೇಶ್ ಮೇಟಿ - 41206

ವೀರಣ್ಣ ಚರಂತಿಮಠ- 29397

ಕಾಂಗ್ರೆಸ್ 11809 ಮತಗಳಿಂದ ಲೀಡ್

ದಾವಣಗೆರೆ 5ನೇ ಸುತ್ತಿನ ಎಣಿಕ ಮುಕ್ತಾಯ

ಸಮರ್ಥ್ ಶಾಮನೂರು - 14169

ಶ್ರೀನಿವಾಸ್ ದಾಸಕರಿಯಪ್ಪ- 22615

8446 ಮತಗಳಿಂದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಮುನ್ನಡೆ

ಬಾಗಲಕೋಟೆ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್:

8ನೇ ಸುತ್ತಿನ ಮತ ಎಣಿಕೆ ಪ್ರಕ್ರಿಯೆ

ಉಮೇಶ್ ಮೇಟಿ- 37202

ವೀರಣ್ಣ ಚರಂತಿಮಠ- 26321

ಕಾಂಗ್ರೆಸ್ ಗೆ 10881 ಮತಗಳ ಮುನ್ನಡೆ

ಮುನ್ನಡೆ ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ:

ದಾವಣಗೆರೆ 4ನೇ ಸುತ್ತಿನ ಮತ ಎಣಿಕೆ:

ಸಮರ್ಥ್ ಶಾಮನೂರು- 11953

ಶ್ರೀನಿವಾಸ್ ದಾಸಕರಿಯಪ್ಪ -17654

ಅಫ್ಸರ್ ಕೊಡ್ಲಿಪೇಟೆ- 1935

5701 ಮತಗಳಿಂದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಮುನ್ನಡೆ

ದಾವಣಗೆರೆ ದಕ್ಷಿಣದಲ್ಲಿ ಮೂರನೇ ಸುತ್ತಿನಲ್ಲೂ ಬಿಜೆಪಿ ಮೇಲುಗೈ:

ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು -9375

ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ -14058

ಎಸ್ ಡಿ ಪಿ ಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ -1187

4683 ಮತಗಳಿಂದ ಬಿಜೆಪಿ ಮುನ್ನಡೆ

ಎರಡನೇ ಸುತ್ತಿನ ಮತ ಎಣಿಕೆ

ಸಮರ್ಥ್ ಶಾಮನೂರು -6360

ಶ್ರೀನಿವಾಸ್ ದಾಸಕರಿಯಪ್ಪ -9137

ಬಾಗಲಕೋಟೆ 6ನೇ ಸುತ್ತಿನ ಮತ ಎಣಿಕೆ ಪೂರ್ಣ:

ಉಮೇಶ್ ಮೇಟಿ ಪಡೆದ ಮತಗಳು -32363

ವೀರಣ್ಣ ಚರಂತಿಮಠ ಪಡೆದ ಮತಗಳು -16906

15,457 ಮತಗಳ ಅಂತರ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ

5ನೇ ಸುತ್ತಿನಲ್ಲೂ ಕಾಂಗ್ರೆಸ್ ಲೀಡ್: ಕಾರ್ಯಕರ್ತರ ವಿಜಯೋತ್ಸವ:

ಉಮೇಶ್ ಮೇಟಿ- 27314 ಮತ:

ವೀರಣ್ಣ ಚರಂತಿಮಠ -13 923 ಮತ

15426 ಸಾವಿರ ಮತಗಳಿಂದ ಕಾಂಗ್ರೆಸ್ ಮುನ್ನಡೆ

ಕಾಂಗ್ರೆಸ್ ಮುನ್ನಡೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಹೊರಗೆ ವಿಜಯೋತ್ಸವ ಆಚರಿಸುತ್ತಿದ್ದಾರೆ.

ದಾವಣಗೆರೆ ದಕ್ಷಿಣ ಎರಡನೇ ಸುತ್ತಿನ ಕೌಟಿಂಗ್ ಪೂರ್ಣ:

ಕಾಂಗ್ರೆಸ್ ಅಭ್ಯರ್ಥಿ ಸಮರ್ ಶಾಮನೂರು -6360 ಮತ

ಬಿಜೆಪಿಯ ಶ್ರೀ ನಿವಾಸ್ ದಾಸಕರಿಯಪ್ಪ -9137 ಮತ

ಎಸ್ ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ - 1187 ಮತ

2777 ಮತಗಳಿಂದ ಬಿಜೆಪಿ ಅಭ್ಯರ್ಥಿ ಮುನ್ನಡೆ.

ಬಾಗಲಕೋಟೆಯಲ್ಲಿ ನಾಲ್ಕನೇ ಸುತ್ತಿನ ಮತ ಎಣಿಕೆ ಪೂರ್ಣ:

ಬಾಗಲಕೋಟೆಲಿ ನಾಲ್ಕನೇ ಸುತ್ತಿನ ಮತ ಎಣಿಕೆ ಪೂರ್ಣ

ಉಮೇಶ್ ಮೇಟಿ 21835 ಮತಗಳು

ವೀರಣ್ಣ ಚರಂತಿಮಠ- ಬಿಜೆಪಿ 10 968 ಮತಗಳು

10,000 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ

ಮೂರನೇ ಸುತ್ತಿನ ಮತ ಎಣಿಕೆ:

ಉಮೇಶ್ ಮೇಟಿ 16,935 ಮತಗಳು

ವೀರಣ್ಣ ಚರಂತಿಮಠ ಬಿಜೆಪಿ -83 12 ಮತಗಳು

8,623 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ

ದಾವಣಗೆರೆಯಲ್ಲಿ ಬಿಜೆಪಿ ಮುನ್ನಡೆ:

ದಾವಣಗೆರೆಯಲ್ಲಿ ಮೊದಲ ಸುತ್ತಿನ ಮತ ಎಣಿಕೆ ಸಮರ್ ಶಾಮನೂರು -3134 ಮತ

ಶ್ರೀನಿವಾಸ್ ದಾಸಕರಿಯಪ್ಪ -3711

- 577 ಮತಗಳಿಂದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸದಾಸಕರಿಯಪ್ಪ ಮುನ್ನಡೆ

-638 ಮತಗಳನ್ನು ಪಡೆದ ಎಸ್ ಡಿ ಪಿ ಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ

ಪಕ್ಷೇತರ ಅಭ್ಯರ್ಥಿ ರಿಯಾಜ್ ಅವರಿಗೆ- 347 ಮತ

ಎರಡನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ:

ಬಾಗಲಕೋಟೆಲಿ ಎರಡನೇ ಸುತ್ತು ಮುಕ್ತಾಯವಾಗಿದ್ದು ಕಾಂಗ್ರೆಸ್ -5016 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದೆ .

ಉಮೇಶ್ ಮೇಟಿಗೆ 10996 ವೀರಣ್ಣ ಚರಂತಿಮಠ ಅವರಿಗೆ 5980 ಮತಗಳು ಬಿದ್ದಿವೆ.

ಮತ ಎಣಿಕೆ ಆರಂಭ:

ದಾವಣಗೆರೆಯಲ್ಲಿ ಅಂಚೆ ಮತ ಎಣಿಕೆಯ ಬಳಿಕ ಇವಿಎಂ ಕೌಂಟಿಂಗ್ ಶುರುವಾಗಿದೆ.

ಆರಂಭದಲ್ಲಿ ಕಾಂಗ್ರೆಸ್ ಇವಿಎಂ ನಲ್ಲಿ -317 ಮತಗಳ ಮುನ್ನಡೆ ಸಾಧಿಸಿದೆ.

ಸ್ಟ್ರಾಂಗ್ ರೂಮ್ ಕೀ ಎಡವಟ್ಟು :

ದಾವಣಗೆರೆಯಲ್ಲಿ ಸ್ಟ್ರಾಂಗ್ ರೂಮ್ ಓಪನ್ ಮಾಡಲು ಮುಂದಾದಾಗ ಕೀ ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ಭಾಗಲನ್ನ ಚಿಲಕವನ್ನು ಸುತ್ತಿಗೆಯಿಂದ ಹೊಡೆಯಿತು ಸ್ಟ್ರಾಂಗ್ ರೂಮ್ ಓಪನ್ ಮಾಡಲಾಯಿತು.

ಒಟ್ಟು ನಾಲ್ಕು ಸ್ಟ್ರಾಂಗ್ ರೂಮ್ ಗಳನ್ನು ಹೊಡೆದು ಓಪನ್ ಮಾಡಲಾಯಿತು, ಡಿಸಿ ಜಿಎಂ ಗಂಗಾಧರ್ ಸ್ವಾಮಿ, ಚುನಾವಣಾ ವೀಕ್ಷಕರಾದ ಕುಮಾರ್ ರಮನಿಕಾಂತ್, ಸಿ ಇ ಓ ಗಿತ್ತಿ ಮಾಧವ್ ವಿಠಲ್ ರಾವ್, ಎಸ್ಪಿ ಹೆಚ್ ಟಿ ಶೇಖರ್ ಅಲ್ಲದೆ ಈ ವೇಳೆ ಏಜೆಂಟರು ಈ ವೇಳೆ ಇದ್ದರು.

8 ಕ್ಕೆ ಅಂಚೆ ಮತದಾನ ಎಂಟು ಮೂವತ್ತಕ್ಕೆ ಇವಿಎಂ ಮತ ಎಣಿಕೆ ಆರಂಭ ಆಗಬೇಕಿತ್ತು, ಆದರೆ ಸ್ವಲ್ಪ ತಡವಾಗಿ ಅಂಚೆ ಮತದಾನ ಆರಂಭಿಸಲಾಗಿದೆ.

ಸ್ಟ್ರಾಂಗ್ ರೂಮ್ ಮ್ಯಾಚ್ ಆಗದ ಕಾರಣ ಡಿ ಸಿ ಜಿಎಂ ಗಂಗಾಧರ್ ಸ್ವಾಮಿ ಜಿಎಂ ಅವರ ಸಹ ಅಧಿಕಾರಿಗಳ ಮೇಲೆ ಗರಂ ಆದರು.

ಮತ ಎಣಿಕ ಕೇಂದ್ರಕ್ಕೆ ಎವಿಎಂ ಯಂತ್ರ ರವಾನೆ:

ಡಿಸಿ ಎಸ್ ಪಿ ಮತ್ತು ಚುನಾವಣಾ ಅಧಿಕಾರಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ಓಪನ್

ಭದ್ರತಾ ಕೊಠಡಿ ಇಂದ ಮತ ಎಣಿಕೆ ಕೇಂದ್ರಕ್ಕೆ ಬಿಗಿಬದ್ರತೆಯಲ್ಲಿ ಇವಿಎಂ ಯಂತ್ರ ರವಾನೆ ಮಾಡಲಾಯಿತು.

ಬಾಗಲಕೋಟೆ ಉಪಚುನಾವಣೆ:

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಮತ ಎಣಿಕೆ

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ.

ಜಿಲ್ಲಾಧಿಕಾರಿ ಸಂಗಪ್ಪ, ಸಿ ಇ ಓ ಶಶಿಧರ್ ಕುರೇರ್, ಎಸ್ ಪಿ ಸಿದ್ದಾರ್ಥ್ ಹಾಗೂ ಚುನಾವಣೆ ಆಯೋಗದಧಿಕಾರಿಗಳ ಸಮ್ಮುಖದಲ್ಲಿ ಭದ್ರತಾ ಕೊಠಡಿ ಓಪನ್.

ದಾವಣಗೆರೆ ದಕ್ಷಿಣ ಉಪಸಮರ:

ದಾವಣಗೆರೆ ನಗರದ ಡಿ ಆರ್ ಆರ್ ಶಾಲೆಯಲ್ಲಿ ಮತ ಎಣಿಕೆ ಬಿಗಿ ಭದ್ರತೆಯಾಗಿ ಪೊಲೀಸ್ ಹಾಗೂ ಸಿ ಆರ್ ಪಿ ಎಫ್ ಸಿಬ್ಬಂದಿ ಆಯೋಜನೆ ಮಾಡಲಾಗಿದೆ. ಅಲ್ಲದೆ ಮತ್ತೆ ಏನಕ್ಕೆ ಕೇಂದ್ರದಿಂದ ಗೇಟ್ ತನಕ ಮೂರು ರೀತಿಯ ಭದ್ರತೆಗಳನ್ನು ಮಾಡಲಾಗಿದೆ ಜೊತೆಗೆ ಅಭ್ಯರ್ಥಿಗಳಿಗೆ ಏಜೆಂಟ್ ಗಳಿಗೆ ಕ್ಯೂ ಆರ್ ಕೋಡ್ ರೀತಿಯ ಗುರುತಿನ ಚೀಟಿಗಳನ್ನು ಕೊಡಲಾಗಿದೆ. ಯಾರು ಬಳಿ ಗುರುತಿನ ಚೀಟಿ ಇರುತ್ತೋ ಅವರನ್ನು ಮಾತ್ರ ಮತ್ತೆ ಎಣಿಕೆಯ ಕೇಂದ್ರಕ್ಕೆ ಬಿಡಲಾಗುತ್ತದೆ.

ಬೆಳಗ್ಗೆ 7:30ಕ್ಕೆ ಮತ ಪೆಟ್ಟಿಗೆ ಇವಿಎಂ ಮಷೀನ್ ಇರುವ ಸ್ಟ್ರಾಂಗ್ ರೂಮ್ ಓಪನ್:

ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರೆಲಾದ ಭಾವನಿಗೆರಿ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸಮರ್ ಶಾಮನೂರು ಮತ್ತು ಬಿಜೆಪಿಯಿಂದ ಟಿ. ಶ್ರೀ ನಿವಾಸ್ ದಾಸ ಕರಿಯಪ್ಪ ಮದ್ಯ ನೇರ ಪೈಪೋಟಿ ಏರ್ಪಟ್ಟಿದೆ.

Also Read:

"ಅಸ್ಸೋಂ ಚುನಾವಣೆ: ಹ್ಯಾಟ್ರಿಕ್ ಗುರಿಯಲ್ಲಿ ಬಿಜೆಪಿ, ಕಾಂಗ್ರೆಸ್ ಸವಾಲು"

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online