belagavi news :
ಐಸಿಸಿ ಅಂಡರ್-19 ವಿಶ್ವಕಪ್ 2024ರ ಮೊದಲ ಸೆಮಿಫೈನಲ್ ಪಂದ್ಯ ಇಂದು ಆಸ್ಟ್ರೇಲಿಯಾ ಅಂಡರ್ -೧೯ ಮತ್ತು ಇಂಗ್ಲೆಂಡ್ ಅಂಡರ್ -19 ತಂಡಗಳ ನಡುವೆ ನಡೆಯಲಿದೆ. ಟೂರ್ನಮೆಂಟ್ ಕಾಲದಲ್ಲಿ ಎರಡು ತಂಡಗಳು ಅದ್ಭುತ ಪ್ರದರ್ಶನ ನೀಡುತ್ತಾ, ಇದುವರೆಗೆ ಆಟದ ಎಲ್ಲಾ ಪಂದ್ಯಗಳನ್ನು ಸೆಮಿ ಫೈನಲ್ ಹಂತಕ್ಕೆ ತಲುಪಿಸಿವೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಅಂಡರ್ -19 ತಂಡವು ವೆಸ್ಟ್ ಇಂಡೀಸ್ ವಿರುದ್ಧ 22 ರನ್ಗಳ ಜಯ ಸಾಧಿಸಿತು.
ಇತ್ತ ಇಂಗ್ಲೆಂಡ್ ಅಂಡರ್-೧೯ ತಂಡವು ನ್ಯೂಜಿಲೆಂಡ್ ವಿರುದ್ಧ 65 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿ ಸೆಮಿ ಫೈನಲ್ ಟಿಕೆಟ್ ಪಡೆದುಕೊಂಡಿದೆ. ಈಗ ಫೈನಲ್ ಪ್ರವೇಶಕ್ಕಾಗಿ ನಡೆಯಲಿರುವ ಈ ಪಂದ್ಯದಲ್ಲಿ ಎರಡು ತಂಡಗಳು ಮಹತ್ವದ ಜಯ ಸಾಧಿಸಲು ಸಂಪೂರ್ಣ ಸಜ್ಜಾಗಿವೆ.ಯುವ ಆಟಗಾರರ ಶಕ್ತಿ,ತಂತ್ರ ಮತ್ತು ಆತ್ಮವಿಶ್ವಾಸ ಈ ಪಂದ್ಯವನ್ನು ಮತ್ತಷ್ಟು ರೋಚಕವಾಗಿಸುವ ನಿರೀಕ್ಷೆ ಇದೆ, ಕ್ರಿಕೆಟ್ ಅಭಿಮಾನಿಗಳ ಗಮನ ಇಂದು ಸಂಪೂರ್ಣವಾಗಿ AUS vs ENG U19 ಸೆಮಿಫೈನಲ್ ಪಂದ್ಯದತ್ತ ಇದೆ.
ಐಸಿಸಿ ಅಂಡರ್ -19 ಫೈನಲ್ ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಬಾರಿ ಪೈಪೋಟಿ ನಿರೀಕ್ಷೆ ಇದೆ. ಈ ಮಹತ್ವದ ಪಂದ್ಯದಲ್ಲಿ ಎರಡು ತಂಡಗಳ ಪ್ರಮುಖ ಆಟಗಾರರ ಪ್ರದರ್ಶನವೇ ಫಲಿತಾಂಶ ನಿರ್ಧರಿಸುವ ಸಾಧ್ಯತೆ ಇದೆ. ಇಂಗ್ಲೆಂಡ್ ಪರ ಬೆನ್ ಮೇಯಸ್ ಮೇಲೆ ಬಾರಿ ನಿರೀಕ್ಷೆ. ಕಳೆದ ಪಂದ್ಯದಲ್ಲಿ ಬೆನ್ ಮೇಯಸ್ ಅರ್ಧಶತಕ ತಿಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಟೂರ್ನಿಯಲ್ಲಿ ಅವರು 93.75 ಸರಾಸರಿಯಲ್ಲಿ 375 ರನ್ಗಳನ್ನು ದಾಖಲಿಸಿದ್ದು, ಇಂಗ್ಲೆಂಡ್ ಪರ ಅಗ್ರ ರನ್ಗೇರ್ ಆಗಿದ್ದಾರೆ. ಸೆಮಿ ಫೈನಲ್ ನಲ್ಲೂ ಮೇಯಸ್ ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಲಾಗುತ್ತಿದೆ. ಫೈನಲ್ ಗುರಿ : ಆಸ್ಟ್ರೇಲಿಯಾ vs ಇಂಗ್ಲೆಂಡ್ ಅಂಡರ್ -19 ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಎರಡು ತಂಡಗಳು ಶಕ್ತಿಶಾಲಿ ಪ್ರದರ್ಶನ ನೀಡಿವೆ.
ಆಸ್ಟ್ರೇಲಿಯಾ ಇದುವರೆಗೂ ಆರು ಬಾರಿ ಫೈನಲ್ ತಲುಪಿದ್ದು, ಇದೀಗ 7ನೇ ಫೈನಲ್ ಪ್ರವೇಶದ ಗುರಿ ಹೊಂದಿದೆ. ಇತ್ತ ಇಂಗ್ಲೆಂಡ್ ಮೂರನೇ ಬಾರಿ ಫೈನಲ್ಗೆ ಪ್ರವೇಶಿಸಲು ಶ್ರಮಿಸಲಿದೆ. ಇಂಗ್ಲೆಂಡ್ ಪರ ಮ್ಯಾನಿ ಲಮ್ಸ್ಡೆನ್ ಕಳೆದ ಪಂದ್ಯದಲ್ಲಿ 5 ಪಂದ್ಯಗಳಲ್ಲಿ 13 ವಿಕೆಟ್ಗಳು ಪಡೆದಿರುವ. ಅವರು ಈ ಪಂದ್ಯದಲ್ಲೂ ಆಸ್ಟ್ರೇಲಿಯಾ ದೊಡ್ಡ ಸವಾಲು ಎಸೆಯಲಿದ್ದಾರೆ.
ಇತ್ತ ಆಸ್ಟ್ರೇಲಿಯಾ ಪರ ಚಾರ್ಲ್ಸ್ ಲೆಚ್ಮಂಡ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.ಕಳೆದ ಪಂದ್ಯದಲ್ಲಿ ಅವರು ನಾಲ್ಕು ವಿಕೆಟ್ ಕಬಳಿಸಿದ್ದು, ಒಟ್ಟು 12 ವಿಕೆಟ್ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಸೆಮಿ ಫೈನಲ್ ನಲ್ಲಿ ಅವರ ಪಾತ್ರ ನಿರ್ಣಾಯಕವಾಗಲಿದೆ.ಆಸ್ಟ್ರೇಲಿಯಾ ಅಂಡರ್ -೧೯ ತಂಡದ ಬ್ಯಾಟಿಂಗ್ ನಲ್ಲೂ ನಿತೇಶ್ ಸ್ಯಾಮ್ಯುಯೆಲ್ ಪ್ರಮುಖ ಅಸ್ತ್ರ ಎಣಿಸಿಕೊಂಡಿದ್ದಾರೆ.ಅವರು ಇದುವರೆಗೆ ಆಡಿದ 5 ಪಂದ್ಯಗಳಲ್ಲಿ 114ರ ಅದ್ಭುತ ಸರಾಸರಿಯಲ್ಲಿ 258 ರನ್ಗಳನ್ನು ಗಳಿಸಿದ್ದಾರೆ. ಈ ಸೆಮಿ ಫೈನಲ್ ನಲ್ಲಿ ಅವರ ಬ್ಯಾಟ್ ನಿಂದ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನಿರೀಕ್ಷೆಯಿಂದೆ.
ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ಅಂಡರ್ 19 ಇದುವರೆಗೆ 10 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಅಂಡರ್ -೧೯ ತಂಡ ಎಂಟು ಪಂದ್ಯಗಳನ್ನು ಗೆದ್ದು ಬಾರಿ ಪ್ರಾಬ್ಲಮ್ ಆಧಾರದಲ್ಲಿ ಇದೀಗ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲ್ಲುವ ಪ್ರಾಬಲ್ಯ ಆಗಿ ಮೈದಾನಕ್ಕೆ ಸಾಧಿಸಿದೆ. ಈ ಅಂಕಿಅಂಶಗಳ ಆಧಾರದಲ್ಲಿ, ಇಂದಿನ ಸೆಮಿಫೈನಲ್ ಪಂದ್ಯದಲ್ಲೂ ಆಸ್ಟ್ರೇಲಿಯಾ ಗೆಲ್ಲುವ ಫೆವರಿಟ್ ಆಗಿ ಮೈದಾನಕ್ಕೆ ಇಳಿಯಲಿದೆ.
ಅಂಡರ್ -19 ವಿಶ್ವಕಪ್ ನ ಮೊದಲ ಸೆಮಿ ಫೈನಲ್ ಪಂದ್ಯವು ಜಿಂಬಾಬ್ವೆಯ ಬುಲವಾಯೊದಲ್ಲಿರುವ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯವು ಬೌಲರ್ಗಳಿಗೆ, ವಿಶೇಷವಾಗಿ ವೇಗದ ಬೌಲರ್ ಗಳಿಗೆ ಹೆಚ್ಚು ನೆರವು ನೀಡುವ ಪಿಚ್ ಆಗಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಸ್ಪಷ್ಟ ಲಾಭ ದೊರೆಯುವ ಸಾಧ್ಯತೆ ಇದೆ. ಜೊತೆಗೆ ,ವೇಗದ ಬೌಲರ್ಗಳ ಪಾತ್ರ ಈ ಸೆಮಿಫೈನಲ್ ನಲ್ಲಿ ಅತ್ಯಂತ ನಿರ್ಣಾಯಕವಾಗಲಿದೆ.
ಇನ್ನಷ್ಟು ಓದಿರಿ:
ಮೋದಿ - ಟ್ರಂಪ್ ಕರೆ ಪರಿಣಾಮ: ಅಮೆರಿಕ ಭಾರತ ಮೇಲಿನ ಸುಂಕವನ್ನು ಶೇ.18ಕ್ಕೆ ಏರಿಕೆ