ಅಂಡರ್ -೧೯ ವಿಶ್ವಕಪ್ ನಲ್ಲಿ ಫೈನಲ್ ಗೆ ಆಯ್ಕೆಯಾಗಿದ್ದ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಆಟವಾಡಿದವು ಭಾರತದ ಫೈನಲ್ ನಲ್ಲಿ ಭರ್ಜರಿ ಗೆಲುವನ್ನು ಸಾಧಿಸಿದೆ. ಮೂರು ರನ್ಗಳ ಅಂತರದಿಂದ ಭಾರತದ ಗೆಲುವನ್ನು ಸಾಧಿಸಿದೆ. ಭಾರತ ವು ಮೊದಲು ಟಾಸ್ ಗೆದ್ದು ಆಯುಷ್ ಮ್ಹಾತ್ರೆ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆರನ್ ಚಾರ್ಜ್- ವೈಭವ್ ಸೂರ್ಯವಂಶಿ ಅವರು ಇನ್ನಿಂಗ್ಸ್ ಆರಂಭಿಸಿದರು. ನಂತರ ವೈಭವ್ ಸೂರ್ಯವಂಶಿ ಅವರೊಂದಿಗೆ ಆಯುಷ್ ಮ್ಹಾತ್ರೆ ಅವರು ಬ್ಯಾಟಿಂಗ್ ಆರಂಭಿಸಿದರು. ಎರಡನೇ ವಿಕೆಟ್ ಗೆ 142 ರನ್ ಗಳ ಜೊತೆ ಆಟವನ್ನು ಆಡಿದರು.
ಎರಡನೇ ವಿಕೆಟ್ ಆಯುಷ್ ಮ್ಹಾತ್ರೆಯವರದಾಯಿತು. 53 ರನ್ ಬಾರಿಸಿ ಅರ್ಧಶತಕ ವನ್ನು ಪಡೆದುಕೊಂಡು ಆಯುಷ್ ಮಾತ್ರೆ ಔಟಾದರು .ನಂತರ ಬಂದ ತ್ರಿವೇದಿಯವರು ವೈಭವ್ ಅವರ ಜೊತೆ ಕೂಡಿ 89 ರನ್ ಗಳನ್ನು ಜೊತೆಯಾಗಿ ಆಟವಾಡಿದರು.
ವೈಭವ್ ಸೂರ್ಯವಂಶಿಯವರು ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 175 ರನ್ಗಳ ಕಲೆ ಹಾಕುವ ಮೂಲಕ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಔಟಾದರು. ಇವರ ಈ ಶತಕ ಅಂಡರ್ -19 ವಿಶ್ವಕಪ್ ಫೈನಲ್ ನಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ಮೊದಲ ಮತ್ತು ಒಟ್ಟಾರೆ ಎರಡನೇ ಬ್ಯಾಟರ್ ಎಂದು ಎನಿಸಿಕೊಂಡಿದ್ದಾರೆ. ಅಂಡರ್ -19 ವಿಶ್ವಕಪ್ ನಲ್ಲಿ ಶತಕ ಬಾರಿಸಿದ ಮೂರನೇ ಭಾರತೀಯ ಕ್ರಿಕೆಟ್ ಇಗ ಎಂಬ ಹೆಗ್ಗಳಿಕೆಗೆ ಸೂರ್ಯವಂಶಯವರು ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಇಬ್ಬರು ಆಟಗಾರರು ಶತಕವನ್ನು ಬಾರಿಸಿದ್ದಾರೆ. ಉನ್ಮುಕ್ತ್ ಚಂದ್ ಮತ್ತು ಮಂಜೋತ್ ಕಲ್ರಾ ಅವರು ಮಾತ್ರ ಶತಕವನ್ನು ಬಾರಿಸಿದರು .ಈಗ ಮೂರನೆಯ ಶತಕ ಬಾರಿಸಿದ ಭಾರತೀಯ ಎಂಬ ಸ್ಥಾನ ಸೂರ್ಯವಂಶ ಅವರು ಪಡೆದಿದ್ದಾರೆ.
ಅಂಡರ್ -19 ವಿಶ್ವಕಪ್ ಫೈನಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ವೈಭವ ಅವರು ಪಾತ್ರರಾಗಿದ್ದಾರೆ. ಈ ಪಂದ್ಯದಲ್ಲಿ ಅವರು ಒಟ್ಟಾರೆ 175 ರನ್ ಗಳನ್ನು ಗಳಿಸಿದ್ದಾರೆ. ಫೈನಲ್ ಅಲ್ಲಿ ಇಂತಹ ಪ್ರದರ್ಶನ ನೀಡಿದ ಅವರು ತಂಡಕ್ಕೆ ಗೆಲುವನ್ನು ಸುಲಭ ಮಾಡಿಕೊಟ್ಟರು. ತಂಡದ ಉಳಿದ ಆಟಗಾರರು ಸಹ ಅವರೊಂದಿಗೆ ಭರ್ಜರಿ ಪ್ರದರ್ಶನವನ್ನು ನೀಡಿದ್ದಾರೆ. 9 ವಿಕೆಟ್ ನಷ್ಟಕ್ಕೆ 411 ರನ್ಗಳನ್ನು ಕಲೆ ಹಾಕಿದ್ದಾರೆ. ನಂತರ ವೇದಾಂತ್ ತ್ರಿವೇದಿ ಯವರು 32 ರನ್ಗಳನ್ನು ಪಡೆದುಕೊಂಡರು, ಅಭಿಗ್ಯಾನ್ ಕುಂಡು ಅವರು 40 ರನ್ಗಳನ್ನು ಗಳಿಸಿಕೊಂಡರು ಮತ್ತು ವಿಹಾನ್ ಮಲ್ಹೋತ್ರ ಅವರು 30 ರನ್ ಬಾರಿಸಿದರು. ಅಂಬ್ರಿಷ್ ಅವರು 18 ರನ್ಗಳನ್ನು ಪಡೆದುಕೊಂಡರು. ಕನಿಷ್ಕ ಚೌಹಣ್ ಅವರು ಕೊನೆಗೆ ಬ್ಯಾಟಿಂಗ್ ಬಲದಿಂದ ಮಾಡಿ 50 ವರ್ಷಗಳಲ್ಲಿ ತಂಡವನ್ನು ಒಂಬತ್ತು ವಿಕೆಟ್ ನಷ್ಟಕ್ಕೆ 411 ರನ್ ಕಲೆ ಹಾಕಿದರು. ಭಾರತದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ. 2000, 2012 ,2018 ,2022 ರಲ್ಲಿ 5 ಬಾರಿ ಗೆಲುವನ್ನು ಸಾಧಿಸಿದ್ದಾರೆ. ಈಗ ಭಾರತದ ಆರನೇ ಬಾರಿ ಭರ್ಜರಿ ಗೆಲುವನ್ನು ಸಾಧಿಸಿದೆ.
411 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ 311 ರನ್ಗಳಿಗೆ ಆಲ್ ಔಟ್ ಆದರು. ಇಂಗ್ಲೆಂಡ್ ತಂಡವು ತಮ್ಮ ಇನ್ನಿಂಗ್ಸ್ ಅನ್ನು ಆರಂಭವನ್ನು ಚೆನ್ನಾಗಿ ಆರಂಭಿಸಲಿಲ್ಲ ಕೆಲೆಬ್ ಫಾಲ್ಕನರ್ ಅವರು 115 ರನ್ಗಳನ್ನು ಬಾರಿ ಶತಕವನ್ನು ಗಳಿಸಿದರು. ಬೆನ್ ಡಾಕಿನ್ಸ್ ಅವರು 66 ರನ್ಗಳನ್ನು ಪಡೆದು ಅರ್ಧ ಶತಕವನ್ನು ಗಳಿಸಿಕೊಂಡ್ರು. ಬೆನ್ ಮೆಯ್ಸ್ 42 ರನ್ ಗಳನ್ನು ಪಡೆಯುವ ಮೂಲಕ ತಂಡವು 300 ಗಡಿ ತಲುಪಿತು. ಇಂಗ್ಲೆಂಡ್ ತಂಡ ಅಂಡರ್-19 ವಿಶ್ವಕಪ್ ನಲ್ಲಿ 1997-98ರಲ್ಲಿ ಒಂದು ಬಾರಿ ಗೆಲುವನ್ನು ದಾಖಲಿಸಿದೆ, ಆದರೆ ಎರಡನೆಯ ಬಾರಿ ಟ್ರೋಫಿ ಗೆಲ್ಲುವ ಕನಸು ನನಸಾಗಲಿಲ್ಲ. ಇಂಗ್ಲೆಂಡ್ ತಂಡ 2022 ರಲ್ಲಿ ಭಾರತದ ವಿರುದ್ಧವಾಗಿಯೇ ಫೈನಲ್ ಗೆ ತಲುಪಿತ್ತು. ಆದರೆ ಭಾರತ ತಂಡವು ಇಂಗ್ಲೆಂಡ್ ತಂಡವನ್ನು ಸೋಲಿಸಿ ಗೆಲುವನ್ನು ಕಂಡಿತ್ತು ಮತ್ತೆ ಈಗ ಅವರ ಟ್ರೋಪಿ ಗಳಿಸುವ ಕನಸು ನನಸಾಗಲಿಲ್ಲ. ಭಾರತ ತಂಡ ಅಂಡರ್ -19 ವಿಶ್ವಕಪ್ ನಲ್ಲಿ ಭರ್ಜರಿ ಗೆಲುವನ್ನು ಪಡೆಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ.
ಇನ್ನಷ್ಟು ಓದಿರಿ:
SBI ಬ್ಯಾಂಕ್ ಪ್ರಿಯರಿಗೆ ಬಿಗ್ ಶಾಕ್ !