<?= $pageTitle ?>
Logo
ಮುಖಪುಟ ಓದುವುದು ಕೇಳು
Sports

ಅಂಡರ್ 19 ವಿಶ್ವಕಪ್ ಸೆಮಿಫೈನಲ್: ಭಾರತಕ್ಕೆ ಭರ್ಜರಿ ಜಯ : ಫೈನಲ್ ಗೆ ಭಾರತ

ಅಂಡರ್ 19 ವಿಶ್ವಕಪ್ ಸೆಮಿಫೈನಲ್: ಭಾರತಕ್ಕೆ ಭರ್ಜರಿ ಜಯ : ಫೈನಲ್ ಗೆ ಭಾರತ
Summary: 19 ವರ್ಷದೊಳಗಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಭರ್ಜರಿ ಪ್ರದರ್ಶನ ನೀಡಿ ಅಪಘಾನಿಸ್ತಾನವನ್ನು ಮನಿಸಿದೆ. ಈ ಗೆಲುವಿನೊಂದಿಗೆ ಭಾರತ ಫೈನಲ್ ಪ್ರವೇಶಿಸಿದೆ. ಇಂಗ್ಲೆಂಡ್ ವಿರುದ್ಧ ಫೈನಲ್ ಆಡಲು ಭಾರತ ಸಜ್ಜು
BELAGAVI NEWS :
ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಕಾಯ್ದುಕೊಂಡ ಅಫ್ಘಾನಿಸ್ತಾನ 50 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 310 ರನ್ ಗಳನ್ನು ಗಳಿಸಿತು. ಈ ಮೂಲಕ ಭಾರತಕ್ಕೆ ದೊಡ್ಡ ಪ್ರಮಾಣದ ಟಾರ್ಗೆಟ್ ನೀಡಿತು. ಆಫ್ಘಾನಿಸ್ತಾನದ ಆಟಗಾರ ಪೈಸಲ್ ಶಿನೋಜಾದ 110 ರನ್ ಗಳನ್ನು ಗಳಿಸಿದರು ಮತ್ತು ಉಜೈರುಲ್ಲಾನ ನಿಯಾಝೈ 110 ರನ್ ಗಳನ್ನು ಪಡೆದುಕೊಂಡರು, 12 ಬಾಂಡರಿ ಮತ್ತು ಎರಡು ಸಿಕ್ಸರ್ ಗಳನ್ನು ಬಾರಿಸಿ ಶತಕ ಪಡೆದುಕೊಂಡರು. ಈ ಸ್ಕೋರ್ ಹಾಲಿ ವಿಶ್ವಕಪ್ ನಲ್ಲಿ ಅತಿ ದೊಡ್ಡ ದಾಖಲೆಯಾದ ಸ್ಕೋರ್ ಆಗಿದೆ .

ಇಂದು ನಡೆದ U19 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿ ಭಾರತ ಗೆಲುವನ್ನು ಸಾಧಿಸಿದೆ ಮತ್ತು ಭಾರತವು ಫೈನಲ್ ಗೆ ತಲುಪಿದೆ. ಅಪಘಾನಿಸ್ತಾನ ನೀಡಿದ 311 ರನ್ ಗಳನ್ನು ಭಾರತ ಬೆನ್ನಟ್ಟಿತ ಭಾರತೀಯ ಬ್ಯಾಟ್ಸಮನ್ ಗಳು ಭರ್ಜರಿ ಪ್ರದರ್ಶನವನ್ನು ನೀಡಿದರು.

ಮೊದಲ ಬ್ಯಾಟರ್ ಆ್ಯರನ್ ಜಾರ್ಜ್ ಭರ್ಜರಿಯಾಗಿ ತಮ್ಮ ಶತಕವನ್ನು ಗಳಿಸಿಕೊಂಡರು ಮತ್ತು ಸೂರ್ಯವಂಶಿ ಅವರ ಜೊತೆ ಉತ್ತಮ ಆರಂಭವನ್ನು ನೀಡಿದರು. ಸೂರ್ಯವಂಶವರು 33 ರನ್ ಗಳಲ್ಲಿ 68 ರನ್ ಬಾರಿಸಿದರು. ಅವರು 9 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳನ್ನು ಬಾರಿಸಿದರು. ನುರಿಸ್ತಾನಿ ಓಮರ್ ಝೈ ಅವರು ಸೂರ್ಯವಂಶಿಯವರ ವಿಕೆಟ್ ಅನ್ನು ಪಡೆದುಕೊಂಡರು. ನಂತರ ಆರ್ಯನ್ ಜಾರ್ಜ್ ಅವರು ಶತಕವನ್ನು ಬಾರಿಸಿ ತಂಡಕ್ಕೆ ಗೆಲುವನ್ನು ತಂದು ಕೊಟ್ಟರು. ಅವರು ಭಾರತದ ಇನ್ನೊಬ್ಬ ಬ್ಯಾಟರ್ ಆಗಿದ್ದಾರೆ.

ಎರಡನೆಯ ಕ್ರಮದಲ್ಲಿ ಬ್ಯಾಟರ್ ಆಯುಷ್ ಮಾತ್ರೆಯವರು 62 ರನ್ ಗಳನ್ನು ಗಳಿಸಿಕೊಂಡರು. ಅವರು ಕೂಡ ಭರ್ಜರಿಯಾದ ಬ್ಯಾಟಿಂಗ್ ಮಾಡಿದರು. ನಂತರ ಅವರು ಔಟ್ ಆದರೂ ವಿಹಾನ್ ಮಲ್ಹೋತ್ರಾ ಅವರು ಆರಂಭಿಕ ಬ್ಯಾಟರ್ ಆರ್ಯನ್ ಜಾರ್ಜ್ ಜೊತೆ ಇನ್ನಿಂಗ್ಸನ್ನು ಮುಂದುವರಿಸಿಕೊಂಡು ಹೋದರು. ಆರ್ಯನ್ ಜಾರ್ಜ್ ಅವರು 115 ರನ್ಗಳನ್ನು ಗಳಿಸಿದರು. 15 ಬೌಂಡರಿ ಮತ್ತು ಎರಡು ಸಿಕ್ಸ್ ಗಳನ್ನು ಭಾರಿಸಿದರು. ಭಾರತ್ ತಂಡವು 41.1 ಓವರ್ ನಲ್ಲಿ ಆಟವನ್ನು ಮುಗಿಸಿತು. ಎರಡು ವಿಕೆಟ್ ನಷ್ಟಕ್ಕೆ 311 ಗುರಿ ತಲುಪಿ ಭರ್ಜರಿ ಗೆಲುವನ್ನು ಸಾಧಿಸಿದರು.


ಭಾರತವು ಗೆಲುವನ್ನು ಸಾಧಿಸಿ ಪೈನಲ್ಬ್ ತಲುಪಿದೆ. ಈಗಾಗಲೇ ಫೈನಲ್ ಗೆ ಇಂಗ್ಲೆಂಡ್ ತಂಡ ಹೋಗಿದೆ. ಅವರ ವಿರುದ್ಧವಾಗಿ ಭಾರತವು ಆಡಲು ಸಿದ್ಧವಾಗಿದೆ.ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಶುಕ್ರವಾರದಂದು ಫೈನಲ್ ನಡೆಯಲಿದೆ.


ಇನ್ನಷ್ಟು ಓದಿರಿ:
ಇರಾನ್ ಜೊತೆ ಮಾತುಕತೆಗೆ ಅಮೆರಿಕಾ ಸಿದ್ದ: ಇದು ಯಾವುದೇ ರಿಯಾಯಿತಿ ಅಲ್ಲ: ರುಬಿಯೋ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online