belagavi news :
IND vs ENG 4ನೇ T20 : ಸರಣಿ ಉಳಿಸಿಕೊಳ್ಳಲು ಭಾರತಕ್ಕೆ ಗೆಲುವು ಅನಿವಾರ್ಯ
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ T20 ಸರಣಿಯ ನಾಲ್ಕನೇ ಪಂದ್ಯ ಶುಕ್ರವಾರ ಬ್ರಿಸ್ಟಲ್ ನ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ ರಾತ್ರಿ 10 ಗಂಟೆಗೆ ಆರಂಭವಾಗಲಿದ್ದು, ಟೀಮ್ ಇಂಡಿಯಾಗೆ ಇದು ಅತ್ಯಂತ ನಿರ್ಣಾಯಕ ಪಂದ್ಯವಾಗಿದೆ.
5 ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 0-2 ಹಿನ್ನಡೆ ಅನುಭವಿಸಿದ್ದು, ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಇತ್ತ ಇಂಗ್ಲೆಂಡ್ ತಂಡ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡು ಸರಣಿ ಗೆಲುವಿನತ್ತ ಹೆಜ್ಜೆ ಇಡಲು ಸಜ್ಜಾಗಿದೆ.
ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಬಳಿಕ ನಡೆದ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿತು. ಮ್ಯಾಂಚೆಸ್ಟರ್ ನಲ್ಲಿ ನಡೆದ ಆ ಪಂದ್ಯದಲ್ಲಿ ಭಾರತ 190 ರನ್ ಗಳ ಉತ್ತಮ ಮೊತ್ತ ದಾಖಲಿಸಿದರು ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಇನ್ನು ನಾಟಿಂಗ್ ಹ್ಯಾಮ್ ನಲ್ಲಿ ನಡೆದ ಮೂರನೇ T20 ಪಂದ್ಯದಲ್ಲಿ ಅನುಭವಿಸಿತು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 125 ರನ್ ಗಳ ಅಂತರದ ಸೋಲು ಕಂಡಿದು... ಇದೀಗ ಸರಣಿಯಲ್ಲಿ ಪುಟಿದೆಳುವ ಒತ್ತಡದಲ್ಲಿದೆ.
ಬ್ರಿಸ್ಟಲ್ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಗೆಲುವಿನ ಹಾದಿಗೆ ಮರಳುವುದು ಭಾರತ ತಂಡದ ಮುಂದಿರುವ ಪ್ರಮುಖ ಸವಾಲಾಗಿದೆ.
ಬ್ರಿಸ್ಟಲ್ ನಲ್ಲಿ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಭಾರತ ತಂಡ ದಾಖಲೆ ಉತ್ತಮವಾಗಿದೆ. ಇಲ್ಲಿ ಆಡಿರುವ ಯಾವುದೇ ಪಂದ್ಯದಲ್ಲೂ ಟೀಮ್ ಇಂಡಿಯಾ ಸೋಲು ಕಂಡಿಲ್ಲ. ಈ ಮೈದಾನದಲ್ಲಿ ಭಾರತ 3 ಏಕದಿನ ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಮೂರರಲ್ಲೂ ಗೆಲುವು ಸಾಧಿಸಿದೆ. ಅಲ್ಲದೆ ಒಂದು T20 ಪಂದ್ಯದಲ್ಲೂ ಗೆದ್ದು ಉತ್ತಮ ದಾಖಲೆ ಹೊಂದಿದೆ.
2018ರ ಜುಲೈ 8ರಂದು ಬ್ರಿಸ್ಟಲ್ ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಭಾರತ ಅದ್ಭುತ ಗೆಲುವು ದಾಖಲಿಸಿತ್ತು. ಅಂದು ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ, ರೋಹಿತ್ ಶರ್ಮಾ ಅವರ ಅಜೇಯ ಶತಕದ ನೆರವಿನಿಂದ 199 ರನ್ಗಳ ಗುರಿಯನ್ನು ಕೇವಲ 18.4 ಗಳಲ್ಲಿ ಬೆನ್ನಟ್ಟಿ ಜಯ ಸಾಧಿಸಿತು.
ಬ್ರಿಸ್ಟಲ್ ಲ್ ಪಿಚ್ ಹೇಗಿರಲಿದೆ?
ಬ್ರಿಸ್ಟಲ್ ನ ಕೌಂಟಿ ಮೈದಾನದ ಪಿಚ್ ಬ್ಯಾಟ್ಸ್ಮನ್ ಗಳಿಗೆ ಹೆಚ್ಚು ಅನುಕೂಲವಾಗಿರುವ ನಿರೀಕ್ಷೆ ಇದೆ. ಇಂಗ್ಲೆಂಡ್ ನ ಪಿಚ್ ಗಳಿಗೆ ಹೊಂದಿಕೊಳ್ಳುವಲ್ಲಿ ಭಾರತ ಬ್ಯಾಟರಗಳು ಈ ಸರಣಿಯಲ್ಲಿ ಸವಾಲು ಎದುರಿಸುತ್ತಿದ್ದರು, ಈ ಮೈದಾನದ ಫ್ಲಾಟ್ ಪಿಚ್ ನಲ್ಲಿ ದೊಡ್ಡ ಮೊತ್ತದ ನೀರಿಕ್ಷೆ ಇದೆ.
ಸಣ್ಣ ಮೈದಾನವಾಗಿರುವ ಕಾರಣ ಬೌಂಡರಿ ಮತ್ತು ಸಿಕ್ಸರ್ ಗಳ ಸುರಿಮಳೆ ಕಾಣುವ ಸಾಧ್ಯತೆ ಇದೆ. ಚೆಂಡು ಬ್ಯಾಟ್ ಗೆ ಸುಲಭವಾಗಿ ಬರುವುದರಿಂದ ಆಕ್ರಮಣಕಾರಿ ಬ್ಯಾಟಿಂಗ್ ಗೆ ಹೆಚ್ಚು ಅವಕಾಶ ಸಿಗಲಿದೆ. ಹೀಗಾಗಿ ಟಾಸ್, ಪವರ್ ಪ್ಲೇ ಪ್ರದರ್ಶನ ಮತ್ತು ಮಧ್ಯಮ ಓವರ್ ಗಳ ಬೌಲಿಂಗ್ ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಬ್ರಿಸ್ಟಲ್ ನ ಉತ್ತಮ ದಾಖಲೆ ಮತ್ತು ಬ್ಯಾಟಿಂಗ್ ಗೆ ಸಹಾಯಕವಾಗಿ ಪಿಚ್ ನ ಲಾಭ ಪಡೆದು ಭಾರತ ತಂಡ ಸರಣಿಯಲ್ಲಿ ಹುಟ್ಟಿದೆಳುವ ನಿರೀಕ್ಷೆಯಲ್ಲಿದೆ.
ಬ್ರಿಸ್ಟಲ್ ನ ಕೌಂಟಿ ಂಗ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಭಾರತ-ಇಂಗ್ಲೆಂಡ್ ನಾಲ್ಕನೇ ಟಿ ಟ್ವೆಂಟಿ ಪಂದ್ಯದಲ್ಲಿ ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಇದೆ. ಈ ಮೈದಾನದಲ್ಲಿ ಸಾಮಾನ್ಯವಾಗಿ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚಿನ ಸ್ಕೋರ್ ಗಳು ದಾಖಲಾಗಿವೆ.
ಪಿಚ್ ಬ್ಯಾಟ್ಸ್ಮನ್ಗಳಿಗೆ ಅನುಕೂಲವಾಗಿದ್ದರೂ, ಬೌಲರ್ಗಳಿಗೂ ಅವಕಾಶ ನೀಡಲಿದೆ. ಪಂದ್ಯದ ಆರಂಭಿಕ ಹಂತದಲ್ಲಿ ವೇಗ ಬೌಲರ್ ಗಳು ಸ್ವಿಂಗ್ ಮತ್ತು ಬೌನ್ಸ್ ಪಡೆಯುವ ಸಾಧ್ಯತೆಯಿದ್ದು, ಬ್ಯಾಟರಗಳಿಗೆ ಸವಾಲು ಎದುರಾಗಬಹುದು. ಆದರೆ ಪಂದ್ಯ ಮುಂದುವರೆಯುವಂತೆ ಪಿಚ್ ಬ್ಯಾಟಿಂಗ್ ಗೆ ಮತ್ತಷ್ಟು ಸುಲಭವಾಗುವ ನೀರಿಕ್ಷೆ ಇದೆ.
ಹೀಗಾಗಿ ಜುಲೈ 9ರಂದು ನಡೆಯಲಿರುವ ಪಂದ್ಯದಲ್ಲಿ ರನ್ ಗಳ ಸುರಿಮಳೆ ಕಾಣುವ ಸಾಧ್ಯತೆ ಇದ್ದು, ಟಾಸ್ ಗೆಲ್ಲುವ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ..
ಬ್ರಿಸ್ಟಲ್ ನಲ್ಲಿ ಹವಾಮಾನ ಹೇಗಿರಲಿದೆ?
ನಾಲ್ಕನೇ T20 ಪಂದ್ಯಕ್ಕೆ ಹವಾಮಾನ ಉತ್ತಮವಾಗಿರುವ ನೀರಿಕ್ಷೆ ಇದೆ. ಪಂದ್ಯದ ವೇಳೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಕಡಿಮೆಯಿದ್ದು, ಸಂಪೂರ್ಣ ಪಂದ್ಯ ನಡೆಯುವ ನಿರೀಕ್ಷೆ ಇದೆ.
ಗುರುವಾರ ಬ್ರಿಷ್ಟಲ್ ನಲ್ಲಿ ಗರಿಷ್ಠ ತಾಪಮಾನ ಸುಮಾರು 32 ಡಿಗ್ರಿ ಸೆಲ್ಫಿಯಸ್ ಮತ್ತು ಕನಿಷ್ಠ ತಾಪಮಾನಿಸಲಾಗಿದೆ. ಸ್ಪಷ್ಟ ವಾತಾವರಣದ ಹಿನ್ನೆಲೆಯಲ್ಲಿ ಆಟಗಾರರಿಗೆ ಉತ್ತಮ ಪರಿಸ್ಥಿತಿ ಲಭ್ಯವಾಗಲಿದೆ.
IND vs ENG 4ನೇ T 20: ಮುಖಾಮುಖಿ ದಾಖಲೆಗಳಲ್ಲಿ ಭಾರತಕ್ಕೆ ಮುನ್ನಡೆ
ಭಾರತ ಮತ್ತು ಇಂಗ್ಲೆಂಡ್ ನಡುವಿನ T20 ಅಂತರಾಷ್ಟ್ರೀಯ ಪಂದ್ಯಗಳ ಮುಖಮೂಖಿ ದಾಖಲೆಯಲ್ಲಿ ಟೀಮ್ ಇಂಡಿಯಾ ಮೈಲುಗೈ ಸಾಧಿಸಿದೆ. ಉಭಯ ತಂಡಗಳು ಇದುವರೆಗೆ ಒಟ್ಟು 33 ಅಂತರಾಷ್ಟ್ರೀಯ ಪಂದ್ಯಗಳ ಮುಖಾಮುಖಿ ದಾಖಲೆಯಲ್ಲಿ ಟೀಮ್ ಇಂಡಿಯಾ ಮೈಲುಗೈ ಸಾಧಿಸಿದೆ. ಉಭಯ ತಂಡಗಳು ಇದುವರೆಗೆ ಒಟ್ಟು 33 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ18 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇಂಗ್ಲೆಂಡ್ ತಂಡ 14 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಒಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ.
ಈ ಅಂಕಿ ಅಂಶಗಳು ಭಾರತ ತಂಡಕ್ಕೆ ಆತ್ಮವಿಶ್ವಾಸ ನೀಡಿದ್ದರೂ, ಪ್ರಸ್ತುತ ಸರಣಿಯಲ್ಲಿ ಇಂಗ್ಲೆಂಡ್ ಮುನ್ನಡೆ ಸಾಧಿಸಿರುವುದರಿಂದ ನಾಲ್ಕನೇ T20 ಪಂದ್ಯದಲ್ಲಿ ಟೀಮ್ ಇಂಡಿಯಾ ಮೇಲೆ ಒತ್ತಡ ಹೆಚ್ಚಿದೆ. ಸರಣಿಯನ್ನು ಸಮ ಬಲಗೊಳಿಸುವ ಭಾರತ ಗೆಲುವಿನ ಹಾದಿಗೆ ಮರು ಮರಳಬೇಕಾಗಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ T20 ಪಂದ್ಯವನ್ನು ಕ್ರೀಡಾಭಿಮಾನಿಗಳು ನೇರವಾಗಿ ವೀಕ್ಷಿಸಬಹುದು. ಪಂದ್ಯದ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ನಲ್ಲಿ ಲಭ್ಯವಿರಲಿದ್ದು, ಲೈವ್ ಸ್ಟ್ರೀಮಿಂಗ್ ಜಿಯೋ ಹಾಟ್ ಸ್ಟಾರ್ ಅಪ್ಲಿಕೇಶನ್ ನಲ್ಲಿ ಇರಲಿದೆ.
ಕ್ರಿಕೆಟ್ ಅಭಿಮಾನಿಗಳು ಬ್ರಿಸ್ಟಲ್ ನ ಕೌಂಟಿಂಗ್ ಮೈದಾನದಲ್ಲಿ ನಡೆಯುವ ಈ ಮಹತ್ವದ ಪಂದ್ಯವನ್ನು ಮೊಬೈಲ್ ಮತ್ತು ಟಿವಿ ಮೂಲಕ ವೀಕ್ಷಿಸಬಹುದಾಗಿದೆ.
T20 ಸರಣಿಗೆ ಭಾರತ ತಂಡ
ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮ (ಉಪನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೊಯ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ ಮತ್ತು ಪ್ರಿನ್ಸ್ ಯಾದವ್.
ಇಂಗ್ಲೆಂಡ್ ತಂಡ
ಹ್ಯಾರಿ ಬ್ರೂಕ್(ನಾಯಕ), ಜೋಸ್ ಬಟ್ಲರ್, ಫಿಲ್ ಸಾಲ್ಟ್, ವಿಲ್ ಜ್ಯಾಕ್ಸ್, ಜಾಕೋಬ್ ಬೆಥೆಲ್ , ಸ್ಯಾಮ್ ಕರೆನ್, ಲಿಯಾನ್ ಡಾಸನ್, ಜೋಫ್ರಾ ಅರ್ಚರ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ಲ್ಯೂಕ್ ವುಡ್, ಟಾಮ್ ಬ್ಯಾಂಟನ್, ಜೋರ್ಡಾನ್ ಕಾಕ್ಸ್,ರೆಹಾನ್ ಅಹಮದ್,ಮತ್ತು ಜೋಶ್ ಟಂಗ್
ನಾಲ್ಕನೇ T20 ಪಂದ್ಯದಲ್ಲಿ ಎರಡು ತಂಡಗಳು ಬಲಿಷ್ಠ ಆಟಗಾರರೊಂದಿಗೆ ಕಣಕ್ಕಿಳಿಯುತ್ತಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳ ನಡುವಿನ ಪೈಪೋಟಿ ಕುತುಹಲ ಮೂಡಿಸಿದೆ. ಸರಣಿ ಉಳಿಸಿಕೊಳ್ಳಲು ಭಾರತ ಗೆಲುವಿಗಾಗಿ ಹೋರಾಡಲಿದ್ದರೆ, ಇಂಗ್ಲೆಂಡ್ ಮುನ್ನಡೆಯನ್ನು ಮತ್ತಷ್ಟು ಬಲಪಡಿಸುವ ಗುರಿಯಲ್ಲಿದೆ.
Also Read:
ಬಿಡದಿ ಟೌನ್ ಶಿಪ್ ವಿವಾದ ತೀವ್ರ: ರಕ್ತ ಚಳವಳಿ ಆರಂಭಿಸಿದ ರೈತರು, ಸಂತೋಷ್ ಹೆಗ್ಡೆ ಸಾಥ್