belagavi news :
2026ರ ಫಿಫಾ ವಿಶ್ವಕಪ್ ನಲ್ಲಿ ಮತ್ತೊಂದು ಫಲಿತಾಂಶ ದಾಖಲಾಗಿದೆ. ಗ್ರೂಪ್ ಸಿ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವು ಹೈಟಿ ವಿರುದ್ಧ 1-0 ಅಂತರದ ರೋಚಕ ಜಯ ಸಾಧಿಸಿ ವಿಶ್ವಕಪ್ ವೇದಿಕೆಯಲ್ಲಿ 36 ವರ್ಷಗಳ ಬಳಿಕ ಗೆಲುವಿನ ಸಿಹಿ ಅನುಭವಿಸಿದೆ. ಪಂದ್ಯದಲ್ಲಿ ನಾಯಕ john McGinn ಮೊದಲಾರ್ಧದಲ್ಲಿ ಗಳಿಸಿದ ಗೋಲು ನಿರ್ಣಾಯಕವಾಯಿತು.
1998ರ ನಂತರ ಮೊದಲ ಬಾರಿಗೆ ವಿಶ್ವಕಪ್ ಗೆ ಅರ್ಹತೆ ಪಡೆದಿದ್ದ ಸ್ಕಾಟ್ಲೆಂಡ್, 1990ರಲ್ಲಿಸ್ವೀಡನ್ ವಿರುದ್ಧ 2 ಅಂತರದ ಜಯ ದಾಖಲಿಸಿದ ಬಳಿಕ ವಿಶ್ವಕಪ್ ನಲ್ಲಿ ಗೆಲುವು ಕಂಡಿರಲಿಲ್ಲ. ನಂತರದ ಹಲವು ಆವೃತ್ತಿಗಳಿಗೆ ಅರ್ಹತೆ ಪಡೆಯಲು ವಿಫಲವಾಗಿದ್ದ ತಂಡ ಇದೀಗ ಭರ್ಜರಿ ಮರಳುವಿಕೆ ಮಾಡಿದೆ.
ಇದೇ ವೇಳೆ, ಗ್ರೂಪ್ ಸಿ ಯ ಮತ್ತೊಂದು ಪಂದ್ಯದಲ್ಲಿ ಬ್ರೆಜಿಲ್ ಮತ್ತು ಮೊರಾಕೊ ತಂಡಗಳು 1-1 ಗೋಲುಗಳ ಸಮಬಲ ಸಾಧಿಸಿವೆ. ಮೊರಾಕೊ ಪರ ಇಸ್ಮಾಯಿಲ್ ಸೈಬರಿ ಗೋಲು ಗಳಿಸಿದರೆ, ಬ್ರೆಜಿಲ್ ಪರ ವಿನಿಸಿಯಸ್ ಜೂನಿಯರ್ ಸಮಬಲ ಗೋಲು ದಾಖಲಿಸಿದರು.
ಈ ಫಲಿತಾಂಶಗಳ ನಂತರ ಗ್ರೂಪ್ ಸಿ ಅಂಕಪಟ್ಟಿಯಲ್ಲಿ ಸ್ಕಾಟ್ಲೆಂಡ್ ಮೂರು ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. ಬ್ರೆಜಿಲ್ ಮತ್ತು ಮೊರಾಕೊ ತಲಾ ಒಂದು ಅಂಕ ಹೊಂದಿದ್ದರೆ, ಹೈತಿ ಇನ್ನೂ ಖಾತೆ ತೆರೆಯಿಲ್ಲ.
ವಿಸ್ತರಿತ 48 ತಂಡಗಳ ವಿಶ್ವಕಪ್ ಮಾದರಿಯಲ್ಲಿ ಗ್ರೂಪ್ ಹಂತದಿಂದ ಅಗ್ರ ತಂಡಗಳು ಮತ್ತು ಉತ್ತಮ ಮೂರನೇ ಸ್ಥಾನ ಪಡೆದ ಕೆಲವು ತಂಡಗಳು ಮುಂದಿನ ಸುದ್ದಿಗೆ ಪ್ರವೇಶ ಪಡೆಯುತ್ತವೆ. ಈ ಹಿನ್ನೆಲೆಯಲ್ಲಿ ಸ್ಕಾಟ್ಲೆಂಡ್ ತನ್ನ ಮುಂದಿನ ಪಂದ್ಯಗಳಲ್ಲಿ ಮೊರಾಕೊ ಅಥವಾ ಬ್ರೆಜಿಲ್ ವಿರುದ್ಧ ಕನಿಷ್ಠ ಡ್ರಾ ಸಾಧಿಸಿದರೂ ನಕೌಟ್ ಹಂತದತ್ತ ದೊಡ್ಡ ಹೆಜ್ಜೆ ಇಡಲಿದೆ.
ಕತಾರ್-ಸ್ವಿಜರ್ಲ್ಯಾಂಡ್ ಪಂದ್ಯ ಡ್ರಾ
ಕತಾರ್ ಮತ್ತು ಸ್ವಿಜರ್ಲ್ಯಾಂಡ್ ನಡುವಿನ ತಂಡ ಡ್ರಾದಲ್ಲಿ ಕೊನೆಗೊಂಡಿದೆ. ಮೊದಲಾರ್ಧದಲ್ಲಿ ಬ್ರಿಯೆಲ್ ಎಂಬೊಲೊ ಪೆನಾಲ್ಟಿ ಮೂಲಕ ಸ್ವಿಜರ್ಲ್ಯಾಂಡ್ ತಂಡಕ್ಕೆ ಮುನ್ನಡೆ ತಂದು ಕೊಟ್ಟರು. ಇದಾದ ಬೆನ್ನಲ್ಲೇ ಕತಾರ್ ನಾಯಕ ಬೌಲೆಮ್ ಖೌಖಿ ಪಂದ್ಯದ ನಾಲ್ಕನೇ ವಿಷಯದಲ್ಲಿ ಗೋಲು ಗಳಿಸಿದರು. ಇದರಿಂದ ಪಂದ್ಯ ಡ್ರಾ ನಲ್ಲಿ ಕೊನೆಗೊಂಡಿತು.
ಏತನ್ಮಧ್ಯೆ, 1974ರಲ್ಲಿ ಪಶ್ಚಿಮ ಜರ್ಮನಿಯಲ್ಲಿ ನಡೆದ ವಿಶ್ವಕಪ್ ನಲ್ಲಿ ಕಾಣಿಸಿಕೊಂಡಿದ್ದವು ಇನ್ನು ತನ್ನ ಮೊದಲ ವಿಶ್ವಕಪ್ ಗೆಲುವಿಗಾಗಿ ಎದುರು ನೋಡುತ್ತಿದೆ.
2026ರ ಪಿಪಾ ವಿಶ್ವಕಪ್ ನಲ್ಲಿ ಪ್ರಶಸ್ತಿ ಫೇವರಿಟ್ ಗಳಲ್ಲೊಂದು ಎನಿಸಿರುವ ಬ್ರೆಜಿಲ್ ತನ್ನ ಮೊದಲ ಪಂದ್ಯದಲ್ಲೇ ಅನಿರೀಕ್ಷಿತ ಹಿನ್ನೆಲೆ ಅನುಭವಿಸಿದೆ. ಗ್ರೂಪ್ ಸಿ ಪಂದ್ಯದಲ್ಲಿ ಆಫ್ರಿಕಾದ ಬಲಿಷ್ಠ ತಂಡ ಮೊರಾಕೊ ವಿರುದ್ಧ ಬ್ರೆಜಿಲ್ 1-1 ಗೋಲುಗಳ ಸಮಬಲ ಸಾಧಿಸಬೇಕಾಯಿತು. ಆದ್ದರಿಂದಲೇ ಮೊರಾಕೊ ಅಕ್ರಮಣಕಾರಿ ಆಟ ಪ್ರದರ್ಶಿಸಿ ಬ್ರೆಜಿಲ್ ಗೆ ಕಠಿಣ ಸವಾಲು ಒಡಿತು.
ಪಂದ್ಯದ ಮೊದಲಾರ್ಧದಲ್ಲಿ ಮೊರಾಕೊ ಆಟಗಾರರು ಚೆಂಡಿನ ಮೇಲಿನ ನಿಯಂತ್ರಣ ಸಾಧಿಸುತ್ತಾ ನಿರಂತರ ದಾಳಿಗಳನ್ನು ನಡೆಸಿದರು. ಬ್ರೆಜಿಲ್ ರಕ್ಷಣಾ ವಿಭಾಗದ ಮೇಲೆ ಒತ್ತಡ ಹೆಚ್ಚಿಸಿದ ಮೊರಾಕೋಗೆ 21ನೇ ನಿಮಿಷದಲ್ಲಿ ಫಲ ಸಿಕ್ಕಿತು. ಬ್ರಾಹಿಂ ಡಿಯಾಜ್ ನೀಡಿದ ಅದ್ಭುತ ಪಾಸ್ ಅನ್ನು ಇಸ್ಮಾಯಿಲ್ ಸೈಬರಿ ಸಮರ್ಥವಾಗಿ ಗೋಲಾಗಿ ಪರಿವರ್ತಿಸಿ ತಂಡಕ್ಕೆ 1-0 ಮುನ್ನಡೆ ತಂದು ಕೊಟ್ಟರು.ಈ ಗೋಲು ಮೊರಾಕೊ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿತು.
ಹಿನ್ನಡೆ ಅನುಭವಿಸಿದ ಬಳಿಕ ಬ್ರೆಜಿಲ್ ತನ್ನ ಆಟದ ಶೈಲಿಯನ್ನು ಬದಲಿಸಿಕೊಂಡು ಹೆಚ್ಚು ಪರಿಣಾಮಕಾರಿ ಧೋರಣೆ ಅನುಸರಿಸಿತು. ಮಧ್ಯ ಮೈದಾನದಲ್ಲಿ ಬ್ರೂನೋ ಗೈಮರೇಸ್ ನೇತೃತ್ವದಲ್ಲಿ ಬ್ರೆಜಿಲ್ ದಾಳಿಗಳನ್ನು ಸಂಘಟಿಸ ತೊಡಗಿತು. ಅದರ ಫಲವಾಗಿ 32ನೇ ನಿಮಿಷದಲ್ಲಿ ಬ್ರೆಜಿಲ್ ಗೆ ಸಮಬಲ ಗೋಲು ದೊರೆಯಿತು. ಗೈಮರೇಸ್ ನೀಡಿದ ನಿಖರ ಪಾಸ್ ಅನ್ನು ವಿನಿಷಿಯಸ್ ಜೂನಿಯರ್ ಬೋರಾಗಿ ಪರಿವರ್ತಿಸಿ ಸ್ಕೋರನ್ನು 1-1 ಕ್ಕೆ ಸಮಗೊಳಿಸಿದರು.
ಮೊದಲಾರ್ಧ ನಂತರ ಎರಡು ತಂಡಗಳು ಗೆಲುವಿನ ಗೋಲಿಗಾಗಿ ಸಾಕಷ್ಟು ಪ್ರಯತ್ನ ನಡೆಸಿದವು. ಬ್ರೆಜಿಲ್ ಹೆಚ್ಚು ಚೆಂಡಿನ ನಿಯಂತ್ರಣ ಹೊಂದಿದ್ದರು, ಮೊರಾಕೋದ ಶಿಸ್ತಿನ ರಕ್ಷಣಾ ಆಟ ಮತ್ತು ಗೋಲ್ಕೀಪರ್ನ ಅದ್ಬುತ ಪ್ರದರ್ಶನದಿಂದ ಮತ್ತಷ್ಟು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಮೊರಾಕೊ ಕೂಡ ಪ್ರತಿದಾಳಿಗಳ ಮೂಲಕ ಅಪಾಯ ಸೃಷ್ಟಿಸಿದರು ಜಯದ ಗೋಲು ದಾಖಲಿಸಲು ವಿಫಲವಾಯಿತು.
ಅಂತಿಮವಾಗಿ ಪಂದ್ಯ 1- 1 ಗೋಲುಗಳ ಸಮಬಲದಲ್ಲಿ ಅಂತ್ಯಗೊಂಡಿತು. ಈ ಫಲಿತಾಂಶದಿಂದ ಮೊರಾಕೊ ಬಲಿಷ್ಠ ಬ್ರೆಜಿಲ್ ವಿರುದ್ಧ ಅಮೂಲ್ಯ ಒಂದು ಅಂಕವನ್ನು ಗಳಿಸಿದರೆ,ಬ್ರೆಜಿಲ್ ತನ್ನ ವಿಶ್ವಕಪ್ ಅಭಿಯಾನವನ್ನು ನಿರೀಕ್ಷಿತ ರೀತಿಯಲ್ಲಿ ಆರಂಭಿಸಲು ವಿಫಲವಾಯಿತು. ಗ್ರೂಪ್ ಸಿ ಯಲ್ಲಿ ಸ್ಯಾಟ್ಲೆಂಡ್ ಹೈತಿ ವಿರುದ್ಧ ಜಯ ಸಾಧಿಸಿದ ಹಿನ್ನೆಲೆಯಲ್ಲಿ, ಅಂಕಪಟ್ಟಿಯಲ್ಲಿ ಸ್ಕಾಟ್ಲೆಂಡ್ ಮುನ್ನಡೆ ಸಾಧಿಸಿದ್ದು,ಬ್ರೆಜಿಲ್ ಹಾಗೂ ಮೊರಾಕೋ ಕಲಾ ಒಂದು ಅಂಕಗಳೊಂದಿಗೆ ಮುಂದಿನ ಪಂದ್ಯಗಳತ್ತ ಗಮನಹರಿಸುವೆ.
2026 ಫಿಫಾ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಅಭಿಯಾನವನ್ನು ಆದುಧ ರೀತಿಯಲ್ಲಿ ಆರಂಭಿಸಿದ್ದು, ಗ್ರೂಪ್ ಡಿ ಪಂದ್ಯದಲ್ಲಿ ಟರ್ಕಿ ವಿರುದ್ಧ 2-0 ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಸಂಘಟಿತ ಆಟ,ಬಲಿಷ್ಠ ರಕ್ಷಣಾ ಪ್ರದರ್ಶನ ಮತ್ತು ಸಮಯೋಚಿತ ಗೋಳುಗಳ ನೆರವಿನಿಂದ ಆಸಿಸ್ ತಂಡ ಮಹತ್ವದ ಮೂರು ಅಂಕಗಳನ್ನು ತನ್ನದಾಗಿಸಿಕೊಂಡಿದೆ.
ಪಂದ್ಯದ ಆರಂಭದಲ್ಲೇ ಎರಡು ತಂಡಗಳು ಅಕ್ರಮಣಕಾರಿ ಆಟಕ್ಕೆ ಒತ್ತು ನೀಡಿದವು. ಟರ್ಕಿ ತಂಡ ಚಂದಿನ ಮೇಲಿನ ಹಿಡಿತ ಸಾಧಿಸಲು ಪ್ರಯತ್ನಿಸಿದರೆ, ಆಸ್ಟ್ರೇಲಿಯಾ ವೇಗದ ಪ್ರತಿ ದಾಳಿಗಳ ಮೂಲಕ ಅಪಾಯ ಸೃಷ್ಟಿಸಿತು. ಈ ಹೋರಾಟದ ನಡುವೆ 26ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ಗೆ ಮಹತ್ವದ ಮುನ್ನಡೆ ದೊರೆಯಿತು. ಯುವ ಆಟಗಾರ ನೆಸ್ಟೋರಿ ಇರಾಂಕುಂಡಾ ವಿಶ್ವ ಕಪ್ ನಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಗೋಲು ಗಳಿಸಿ ತಂಡದ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾದರು.ಅವರ ನಿಖರ ಫಿನಿಷಿಂಗ್ ಆಸ್ಟ್ರೇಲಿಯಾ ವನ್ನು 1-0 ಮುನ್ನಡೆಗೆ ಕೊಂಡೊಯ್ದರು.
ಗೋಲು ಬಿಟ್ಟು ಕೊಟ್ಟ ಬಳಿಕ ಟರ್ಕಿ ಸಮಬಲಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿತು. ಮಧ್ಯ ಮೈದಾನದಿಂದ ದಾಳಿಗಳನ್ನು ಸಂಘಟಿಸಿ ಹಲವು ಅವಕಾಶಗಳನ್ನು ಸೃಷ್ಟಿಸಿದರು,ಆಸ್ಟ್ರೇಲಿಯಾದ ಶಿಸ್ತಿನ ರಕ್ಷಣಾ ವಿಭಾಗ ಮತ್ತು ಗೋಲ್ ಕೀಪರ್ ನ ಉತ್ತಮ ಪ್ರದರ್ಶನದಿಂದ ಗೋಲು ಗಳಿಸಲು ವಿಫಲವಾಯಿತು. ಮೊದಲಾದ ಅಂತ್ಯಕ್ಕೆ ಆಸ್ಟ್ರೇಲಿಯಾ 1-0 ಮುನ್ನಡೆ ಕಾಯ್ದುಕೊಂಡಿತು.
ದ್ವಿತಿಯಾರ್ಧದಲ್ಲಿ ಆಸ್ಟ್ರೇಲಿಯಾ ತನ್ನ ಪ್ರಾಬಲ್ಯವನ್ನು ಮುಂದುವರಿಸಿತು. ಪಂದ್ಯದ ವೇಗವನ್ನು ನಿಯಂತ್ರಿಸುತ್ತಾ ಟರ್ಕಿಗೆ ಹೆಚ್ಚಿನ ಅವಕಾಶಗಳನ್ನು ನೀಡಿದ ಆಸಿಸ್, ಮತ್ತೊಂದು ಗೋಲುಗಾಗಿ ನಿರಂತರ ಒತ್ತಡ ಹೇರಿತು. ಅದರ ಫಲವಾಗಿ 74ನೇ ನಿಮಿಷದಲ್ಲಿ ಕಾನರ್ ಮೆಟ್ಕಾಲ್ಫ್ ತಂಡದ ಎರಡನೇ ಗೋಲು ದಾಖಲಿಸಿದರು.ಈ ಗೋಲು ಆಸ್ಟ್ರೇಲಿಯಾದ ಗೆಲುವನ್ನು ಬಹುತೇಕ ಖಚಿತಪಡಿಸಿತು.
ಕೊನೆಯ ನಿಮಿಷಗಳಲ್ಲು ಟರ್ಕಿ ತಂಡ ಹೋರಾಟ ಕೈಬಿಡದೆ ದಾಳಿ ನಡೆಸಿದರು, ಆಸ್ಟ್ರೇಲಿಯಾದ ರಕ್ಷಣಾ ಪಡೆ ಯಾವುದೇ ತಪ್ಪು ಮಾಡಲಿಲ್ಲ. ಪರಿಣಾಮವಾಗಿ ಪಂದ್ಯ 2 -0 ಅಂತರದಲ್ಲಿ ಆಸ್ಟ್ರೇಲಿಯಾದ ಪರ ಅಂತ್ಯಗೊಂಡಿತು.
ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಗ್ರೂಪ್ ಡಿ ಯಲ್ಲಿ ಅಮೂಲ್ಯ ಮೂರು ಅಂಕಗಳನ್ನು ಪಡೆದ ಅಂಕ ಪಟ್ಟಿಯಲ್ಲಿ ಬಲಿಷ್ಠ ಸ್ಥಾನವನ್ನು ಸಂಪಾದಿಸಿದೆ. ನೆಸ್ಟೋರಿ ಇರಾಂಕುಂಡಾ ಮತ್ತು ಕಾನರ್ ಮೆಟ್ಕಾಲ್ಫ್ ಅವರ ಗೋಳುಗಳು ತಂದದ ವಿಶ್ವಕಪ್ ಅಭಿಯಾನಕ್ಕೆ ಆತ್ಮವಿಶ್ವಾಸ ತಂದಿದ್ದು, ಮುಂದಿನ ಪಂದ್ಯಗಳಲ್ಲೂ ಇದೇ ಲಯ ಮುಂದುವರಿಸುವ ನಿರೀಕ್ಷೆ ಇದೆ. ಮತ್ತೊಂದೆಡೆ,ಟರ್ಕಿ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಒತ್ತಡಕ್ಕೆ ಸಿಲುಕಿದೆ.
ಆಸ್ಟ್ರೇಲಿಯಾದ ಈ ಜಯ ಗ್ರೂಪ್ ಡಿಯ ಸ್ಪರ್ಧೆಯನ್ನು ಇನ್ನಷ್ಟು ಕುತೂಹಲಕರವಾಗಿಸಿದ್ದು, ಲಾಕ್ ಹಂತದ ರೇಸ್ ನಲ್ಲಿ ತಂಡಕ್ಕೆ ಮಹತ್ವದ ಮುನ್ನಡೆ ನೀಡಿದೆ.
Also Read:
ಮಧ್ಯಪ್ರಾಚ್ಯ ಉದ್ವಿಗ್ನತೆಗೆ ತೆರೆ: ಇಂದು ಶಾಂತಿ ಒಪ್ಪಂದಕ್ಕೆ ಸಹಿ, ಬಳಿಕ ಹಾರ್ಮುಜ್ ಮುಕ್ತ ಸಂಚಾರ: ಟ್ರಂಪ್