<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

Vietnam Boat Accident: ಭಾರತೀಯ ಪ್ರವಾಸಿಗರು ಸೇರಿ 15 ಮಂದಿ ದುರ್ಮರಣ

Vietnam Boat Accident: ಭಾರತೀಯ ಪ್ರವಾಸಿಗರು ಸೇರಿ 15 ಮಂದಿ ದುರ್ಮರಣ
Summary: At least 15 people, including Indian tourists, have died in a horrific boat accident in Vietnam. Rescue teams are continuing search and rescue operations after the accident, and more information about the dead and injured is awaited.

Belagavi News:

ವಿಯೆಟ್ನಾಂ ಬೋಟ್ ದುರಂತ: 32 ಭಾರತೀಯರನ್ನು ಹೊತ್ತೊಯ್ಯುತ್ತಿದ್ದ ಸ್ಪೀಡ್ ಬೋಟ್ ಮಗುಚಿ ದುರಂತ; 15 ಮಂದಿ ಸಾವು

ಹನೋಯ್ ( ವಿಯೆಟ್ನಾಂ) : ವಿಯೆಟ್ನಾಂನ ಫು ಕ್ವಾಕ್ ದ್ವೀಪದ ಸಮೀಪ ಶನಿವಾರ ಸಂಭವಿಸಿದ ಭೀಕರ ಸ್ಪೀಡ್ ಬೋಟ್ ದುರಂತದಲ್ಲಿ ಆಂಧ್ರಪ್ರದೇಶದ ಇಬ್ಬರು ಪ್ರವಾಸಿಗರು ಸೇರಿದಂತೆ 15 ಮಂದಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಹಲವರು ಗಾಯಗೊಂಡಿದ್ದು, ಸಮುದ್ರದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ವಿಯೆಟ್ನಾಂ ಮಾಧ್ಯಮಗಳ ವರದಿ ಪ್ರಕಾರ, ಹಾನ್ ಮೇ ರುಟ್ ನಿಂದ ಆನ್ ಥೋಯ್ ಬಂದರಿಗೆ ತೆರಳುತ್ತಿದ್ದ ಸ್ಪೀಡ್ ಬೋಟ್ ನಲ್ಲಿ 32 ಭಾರತೀಯ ಪ್ರವಾಸಿಗರು ಹಾಗೂ ನಾಲ್ವರು ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಹಾನ್ ಮೇ ರುಟ್ ನ್ಗೋಯ್ ನಿಂದ ಸುಮಾರು 400 ಮೀಟರ್ ದೂರದಲ್ಲಿ ದೋಣಿ ಪರಿಣಾಮ ಅದರಲ್ಲಿದ್ದ ಎಲ್ಲರೂ ಸಮುದ್ರಕ್ಕೆ ಬಿದ್ದಿದ್ದಾರೆ.

ಘಟನೆಯ ತಕ್ಷಣ ಸಮೀಪದಲ್ಲಿದ್ದ ಪ್ರವಾಸಿ ದೋಣಿಗಳು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದು, ಬಳಿಕ ಗಡಿ ಕಾವಲು ಪಡೆ, ನೌಕಾಪಡೆ, ಕರಾವಳಿ ಕಾವಲು ಪಡೆ ಹಾಗೂ ಇತರೆ ತುರ್ತು ಸೇವೆಗಳ ತಂಡಗಳು ಸ್ಥಳಕ್ಕೆ ಆಗಮಿಸಿ ವ್ಯಾಪಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ.

ದುರಂತದಲ್ಲಿ ಮೃತಪಟ್ಟ ಭಾರತೀಯರಲ್ಲಿ ಆಂಧ್ರಪ್ರದೇಶದ ಕಡಪ ಮೂಲದ ಮುದಿಯಂ ಶ್ರೀಧರ್ (56) ಹಾಗೂ ಮಚಿಲಿಪಟ್ಟಣದ ಗೆಲ್ಲಿ ಜಯಶ್ರೀ ಸೇರಿದ್ದಾರೆ ಎಂದು ವರದಿಯಾಗಿದೆ. ಗೆಲ್ಲಿ ಕಿಶೋರ್ ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಮತ್ತೊಬ್ಬ ಕಡಪ ನಿವಾಸಿ ನಯೀಮ್ ಅಪಾಯದಿಂದ ಪಾರಾಗಿದ್ದಾರೆ.

ಶೋಧ ಮತ್ತು ರಕ್ಷಣಾ ಕಾರ್ಯಚರಣೆ ಇನ್ನೂ ಮುಂದುವರಿದಿರುವ ಹಿನ್ನೆಲೆಯಲ್ಲಿ, ಹನೋಯ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕೃತ ಸಾವಿನ ಸಂಖ್ಯೆಯನ್ನು ಇನ್ನೂ ಪ್ರಕಟಿಸಿಲ್ಲ. ಪ್ರವಾಸಿಗರ ಕುಟುಂಬಸ್ಥರಿಗೆ ನೆರವು ಒದಗಿಸಲು ತುರ್ತು ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಲಾಗಿದೆ.

ವಿಯೆಟ್ನಾಂ ಬೋಟ್ ದುರಂತ, ಭಾರತೀಯ ಪ್ರವಾಸಿಗರು, ಫು ಕ್ವಾಕ್ ದ್ವೀಪ, ಆಂಧ್ರಪ್ರದೇಶ ಪ್ರವಾಸಿಗರು, ಸ್ಪೀಡ್ ಬೋಟ್ ಅಪಘಾತ, ಅಂತರ ರಾಷ್ಟ್ರೀಯ ಸುದ್ದಿ ಕುರಿತ ಈ ಘಟನೆ ವ್ಯಾಪಕ ಗಮನ ಸೆಳೆದಿದೆ.

ವಿಯೆಟ್ನಾಂ ದೋಣಿ ದುರಂತ: ಭಾರತೀಯರಿಗೆ ತುರ್ತು ಸಹಾಯವಾಣಿ ಆರಂಭ

ವಿಯೆಟ್ನಾಂನ ಫು ಕ್ವಾಕ್ ದ್ವೀಪದ ಸಮೀಪ ಭಾರತೀಯ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ಮಗುಚಿ ಬಿದ್ದಿರುವ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರಿ ಕಚೇರಿಯ ತುರ್ತು ಸಹಾಯವಾಣಿಯನ್ನು ಆರಂಭಿಸಿದೆ.

ಮಾಹಿತಿ ಅಥವಾ ನೆರವು ಅಗತ್ಯವಿರುವವರು ಹೋ ಚಿ ಮಿನ್ಹ್ ನಗರದಲ್ಲಿರೋ ಭಾರತೀಯರು ಕಾನ್ಸುಲೇಟ್ ಜನರಲ್ ಹಾಗೂ ಹನೋಯ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಬಹುದು. +84 36 281 7930, + 84 91 552 3714 ಮತ್ತು + 84 33 452 0414 ಸಂಖ್ಯೆಗಳ ಮೂಲಕ ಮಾಹಿತಿ ಪಡೆಯಬಹುದು.

ಇದರ ಜೊತೆಗೆ, ಹನೋಯ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ + 84 91 308 9165 ಸಂಖ್ಯೆಯನ್ನು ಸಂಪರ್ಕಿಸಬಹುದು, ಯಾವುದೇ ಸಹಾಯ ಅಥವಾ ಮಾಹಿತಿಗಾಗಿ ಅಧಿಕಾರಿಗಳು 24×7 ಲಭ್ಯವಿರಲಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ.

" ವಿಯೆಟ್ನಾಂನ ಫು ಕ್ವಾಕ್ ದ್ವೀಪದ ಬಳಿ ಭಾರತೀಯ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ಮಗುಚಿ ಬಿದ್ದಿರುವ ದುರಂತ ಘಟನೆ ನಡೆದಿದೆ" ಎಂದು ಭಾರತೀಯ ರಾಯಭಾರಿ ಕಚೇರಿ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online