belagavi news :
ಕನ್ನಡ ನಟ ವಿಜಯ ರಾಘವೇಂದ್ರ ಅಭಿನಯದ ಹೊಸ ಸಿನಿಮಾ 'ಮಹಾನ್' ಇದೀಗ ಮತ್ತೆ ಸುದ್ದಿಯಲ್ಲಿದೆ.ವಿಜಯ ರಾಘವೇಂದ್ರ ಅವರ 47ನೇ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಈ ಪೋಸ್ಟರ್ ನಲ್ಲಿ ಅವರು ರೈತರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,ಅವರ ಹೊಸ ಅವತಾರ ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲವನ್ನು ಹುಟ್ಟು ಹಾಕಿದೆ.ಗ್ರಾಮೀಣ ಹಿನ್ನೆಲೆಯ ಕಥಾ ಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರ ಪಾತ್ರವೇ ಪ್ರಮುಖ ಆಕರ್ಷಣೆಯಾಗಿ ಇದೆ ಎಂದು ತಿಳಿಸಿ ಬಂದಿದೆ
ಕನ್ನಡ ಚಿತ್ರರಂಗದಲ್ಲಿ "ಚಿನ್ನಾರಿ ಮುತ್ತ"ಎಂದೆ ಖ್ಯಾತರಾಗಿರುವ ವಿಜಯ್ ರಾಘವೇಂದ್ರ ಸದಭಿರುಚಿಯ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನೆಗೆದ್ದಿದ್ದಾರೆ.ಇದೀಗ ಅವರು ತಮ್ಮ ಹೊಸ ಚಿತ್ರ ಮಹಾನ್ ಮೂಲಕ ಮತ್ತೆ ಗಮನ ಸೆಳೆಯುತ್ತಿದ್ದಾರೆ.ವಿಜಯ ರಾಘವೇಂದ್ರ ಅವರ ಜನ್ಮ ದಿನದ ವಿಶೇಷ ಸಂದರ್ಭದಲ್ಲಿ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.ಈ ಹೊಸ ಚಿತ್ರಕ್ಕೆ ಅವರು ಚಾಲನೆ ನೀಡಿದರು,ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಮೂಡಿದೆ.
ಆಕಾಶ ಪಿಚ್ಚರ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ ಹೊಸ ಸಿನಿಮಾ 'ಮಹಾನ್'ಇದೀಗ ಗಮನ ಸೆಳೆಯುತ್ತಿದೆ.ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಉತ್ತಮ ಚಿತ್ರಗಳನ್ನು ನೀಡಿರುವ ನಿರ್ದೇಶಕ ಪಿಸಿ ಶಂಕರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಈ ಸಿನಿಮಾದ ನಾಯಕನಾಗಿ ಪ್ರತಿಭಾವಂತ ನಟ ವಿಜಯ್ ರಾಘವೇಂದ್ರ ಅಭಿನಯಿಸುತ್ತಿದ್ದಾರೆ.ರೈತರ ಜೀವನ ಮತ್ತು ಅವರ ಹೋರಾಟವನ್ನು ಕೇಂದ್ರವಾಗಿಟ್ಟುಕೊಂಡ ಕಥಾಂದರವನ್ನು ಈ ಚಿತ್ರ ಹೊಂದಿದೆ.ವಿಶೇಷವೆಂದರೆ,ವಿಜಯ ರಾಘವೇಂದ್ರ ಈ ಚಿತ್ರದಲ್ಲಿ ರೈತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಗ್ರಾಮೀಣ ಜೀವನದ ನೈಜತೆಯನ್ನು ತೆರೆ ಮೇಲೆ ತರಲು ಪ್ರಯತ್ನಿಸುತ್ತಿರುವ'ಮಹಾನ್'ಚಿತ್ರವು ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲವನ್ನು ಹುಟ್ಟು ಹಾಕಿದೆ.
ಕನ್ನಡ ಚಿತ್ರರಂಗದ ಜನಪ್ರಿಯ ನಟ ವಿಜಯ ರಾಘವೇಂದ್ರ ಅವರು ಮೇ 26,1979ರಂದು ಜನಿಸಿದ್ದು,ತಮ್ಮ 47ನೇ ಹುಟ್ಟುಹಬ್ಬವನ್ನು ನಾಳೆ ಆಚರಿಸಲಿದ್ದಾರೆ.ಈ ವಿಶೇಷ ಸಂದರ್ಭದಲ್ಲಿ ಅವರ ಹೊಸ ಸಿನಿಮಾ 'ಮಹಾನ್'ತಂಡವು ಚಿತ್ರದ ವಿಶೇಷ ಲುಕ್ ಅನ್ನು ಬಿಡುಗಡೆ ಮಾಡಿ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದೆ.
ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ ಈ ಚಿತ್ರವನ್ನು ಕನ್ನಡದಲ್ಲಿ ಹಲವು ಸದಭಿರುಚಿಯ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪಿಸಿ ಶಂಕರ್ ನಿರ್ದೇಶಸುತ್ತಿದ್ದಾರೆ.ರೈತರ ಬದುಕು ಮತ್ತು ಅವರ ಸಂಕಷ್ಟಗಳನ್ನು ಕೇಂದ್ರವಾಗಿಟ್ಟುಕೊಂಡ ಕಥಾಹಂದರವನ್ನು ಹೊಂದಿರುವ'ಮಹಾನ್' ಚಿತ್ರವನ್ನು ಯಾವುದೇ ಕೊರತೆ ಬಾರದಂತೆ ನಿರ್ಮಿಸಲಾಗುತ್ತಿದೆ.ಈವರೆಗೆ 10 ಯಶಸ್ವಿ ಚಿತ್ರಗಳನ್ನು ನಿರ್ದೇಶಕ ಪಿಸಿ ಶೇಖರ್ ಅವರ 11ನೇ ನಿರ್ದೇಶನದ ಚಿತ್ರ ಇದಾಗಿದೆ.ಆರಂಭದಿಂದಲೇ ಗಮನ ಸೆಳೆಯುತ್ತಿರುವ'ಮಹಾನ್'ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರೊಂದಿಗೆ ರಾಧಿಕಾ ನಾರಾಯಣ್,ಮಿತ್ರ,ನಮ್ರತಾ ಗೌಡ, ವರ್ಷ ಬೊಳ್ಳಮ್ಮಮತ್ತು ಕಿರಣ್ ಶ್ರೀನಿವಾಸ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ವಿಜಯ ರಾಘವೇಂದ್ರ ಅವರ ಇತ್ತೀಚಿನ ಸಿನಿಮಾ'ಸೆಕೆಂಡ್ ಕೇಸ್ ಆಫ್ ಸೀತಾರಾಮ್'ಇತ್ತೀಚಿಗಷ್ಟೇ ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆದಿತ್ತು.ಔಟ್ ಅಂಡ್ ಔಟ್ ತ್ರಿಲ್ಲರ್ ಕಥಾಂದರ ಹೊಂದಿರುವ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ.
ಸದ್ಯ ವಿಜಯ್ ರಾಘವೇಂದ್ರ ಕೈಯಲ್ಲಿ ಹಲವು ಹೊಸ ಸಿನಿಮಾಗಳು ಇವೆ.ಅವು'ಮಹಾನ್', 'ರುದ್ರಾಭಿಷೇಕಂ' ಮತ್ತು 'ಶ್ರೀಮತಿ ಸಿಂಧೂರ' ಪ್ರಮುಖವಾಗಿವೆ.ವಿಭಿನ್ನ ಕಥಾ ಹಂದಿರಗಳಲ್ಲಿರುವ ಈ ಚಿತ್ರಗಳ ಮೂಲಕ ಅವರು ಮತ್ತೊಮ್ಮೆ ವಿಭಿನ್ನ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.
Also Read:
ಹಣ್ಣು ತರಕಾರಿ ತಿನ್ನುವ ಮೊದಲು ಯೋಚಿಸಿ!ವೈದ್ಯರ ನೀಡಿದ ರಾಸಾಯನಿಕ ಲಿಸ್ಟ್