<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ದರ್ಶನ ಬೇಟಿಯಾದ ವಿಜಯಲಕ್ಷ್ಮಿ : ವಿವಾಹ ವಾರ್ಷಿಕೋತ್ಸವದ ದಿನದ ವಿಶೇಷ ಬೆಳವಣಿಗೆ

ದರ್ಶನ ಬೇಟಿಯಾದ ವಿಜಯಲಕ್ಷ್ಮಿ : ವಿವಾಹ ವಾರ್ಷಿಕೋತ್ಸವದ ದಿನದ ವಿಶೇಷ ಬೆಳವಣಿಗೆ
Summary: The incident where Vijayalakshmi met actor Darshan on the wedding anniversary and then left has caused curiosity. The meeting on this special day and the subsequent development have caught the attention of fans.

Belagavi news:

ಇಂದು ನಟ ದರ್ಶನ್ ತೂಗುದೀಪ ಮತ್ತು ಅವರ ಪತ್ನಿ ವಿಜಯ್ ಲಕ್ಷ್ಮಿ ಅವರ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಜೈಲಿಗೆ ಮಗನೊಂದಿಗೆ ಭೇಟಿ ನೀಡಿದ ಅವರ ಧರ್ಮಪತ್ನಿಯಾದ ವಿಜಯಲಕ್ಷ್ಮಿ, ದರ್ಶನ್ ಅವರೊಂದಿಗೆ ಮುಖಾಮುಖಿಯಾಗಿದ್ದಾರೆ. ಮಗ ವಿನಿಶ್ ಜೊತೆ ಆಗಮಿಸಿದ ವಿಜಯಲಕ್ಷ್ಮಿ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ ಅವರನ್ನು ಭೇಟಿ ಮಾಡಿ ಕೆಲವು ಗಂಟೆಗಳ ಕಾಲ ಮಾತುಕತೆಯನ್ನು ನಡೆಸಿದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿದ್ದು ಅಭಿಮಾನಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

ಮೇ 19 ರಂದು ನಟ ದರ್ಶನ್ ತೂಗುದೀಪ ಹಾಗೂ ಅವರ ಪತ್ನಿ ವಿಜಯ್ ಲಕ್ಷ್ಮಿ ದರ್ಶನ್ ಅವರ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಜೈಲಿನಲ್ಲಿ ವಿಶೇಷ ಭೇಟಿ ನಡೆದಿದೆ. ಈ ಸಂದರ್ಭ ಜೈಲು ನಿಯಮಗಳಡಿ ಮುಖಾಮುಖಿ ಬೇಟೆಗೆ ಅವಕಾಶ ಮಾಡಿಕೊಡಲಾಗಿದ್ದು, ಕುಟುಂಬದ ಭಾವನಾತ್ಮಕ ಕ್ಷಣಗಳು ಗಮನ ಸೆಳೆದಿವೆ.

ಮಗ ವಿನೀಶ್ ಜೊತೆ ಆಗಮಿಸಿದ ವಿಜಯಲಕ್ಷ್ಮಿ ಅವರು ದರ್ಶನ್ ಅವರನ್ನು ಭೇಟಿ ಮಾಡಿ ಕೆಲಸಮಯ ಮಾತುಕತೆ ನಡೆಸಿದ ಬಳಿಕ ವಾಪಸ್ ತೆರಳಿದ್ದಾರೆ. ಈ ಭೇಟಿಗಾಗಿ ದರ್ಶನ್ ಅವರು ಜೈಲು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ವಾರ್ಷಿಕೋತ್ಸವದ ದಿನ ನಡೆದ ಈ ಭೇಟಿ ಅಭಿಮಾನಿಗಳ ನಡುವೆ ಕುತೂಹಲ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಕಾರಣವಾಗಿದೆ. ಕಠಿಣ ಪರಿಸ್ಥಿತಿಯ ನಡುವೆಯೂ ಕುಟುಂಬದ ಭೇಟಿ ಸಾಧ್ಯವಾಗಿರುವುದು ಭಾವನಾತ್ಮಕ ಕ್ಷಣವಾಗಿ ಪರಿಣಮಿಸಿದೆ.

ಜೈಲು ಅಧಿಕಾರಿಗಳ ಅನುಮತಿ ಹಿನ್ನೆಲೆಯಲ್ಲಿ ನಡೆದ ಈ ಭೇಟಿ ನಂತರ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಹೊರಟು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣ : ಜಾಮೀನು ತಿರಸ್ಕಾರ ಬಳಿಕ ದರ್ಶನ್ ಮಾನಸಿಕವಾಗಿ ಕುಗ್ಗಿದ್ದಾರೆ ಎಂಬ ಮಾಹಿತಿಗಳು ಕೇಳಿ ಬರುತ್ತಿವೆ. :

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಸ್ತುತ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಪ್ರಿಸನ್ ಜೈಲಿನಲ್ಲಿ ಇರಿಸಲಾಗಿದ್ದು, ಪ್ರಕರಣದ ವಿಚಾರಣೆ ಮುಂದುವರೆದಿದೆ.

ಇತ್ತೀಚೆಗೆ ದರ್ಶನ್ ಅವರು ಜಾಮೀನು ಪಡೆಯಲು ಸುಪ್ರೀಂ ಕೋರ್ಟ್ ಆಫ್ ಇಂಡಿಯಾ ದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದು, ಇದರಿಂದ ಅವರಿಗೆ ನಿರಾಶೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

ಜಾಮೀನು ನಿರಾಕರಣೆಯ ಬಳಿಕ ದರ್ಶನ್ ಮಾನಸಿಕವಾಗಿ ಬಹಳ ಕೂಗ್ಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಜೈಲಿನೊಳಗಿನ ಅವರ ಸ್ಥಿತಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಪ್ರಕರಣ ಸಂಬಂಧ ಕಾನೂನು ಪ್ರಕ್ರಿಯೆಗಳು ಮುಂದುವರಿಯುತ್ತಿದ್ದು, ಮುಂದಿನ ಬೆಳವಣಿಗೆಗಳು ಮಹತ್ವ ಪಡೆದುಕೊಳ್ಳುವ ಸಾಧ್ಯತೆ ಇದೆ.

Also Read:

ಭಾರತಕ್ಕೆ ರಿಲೀಫ್: ರಷ್ಯಾ ತೈಲ ಖರೀದಿ ವಿನಾಯಿತಿ ಅವಧಿ ವಿಸ್ತರಣೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online