<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

"ತಂದೆ ಟೈಗರ್ ಪ್ರಭಾಕರ್ ಬಿಟ್ಟು ಹೋದ ಅಧ್ಯಾಯಕ್ಕೆ ಜೀವ ತುಂಬಿದ ವಿನೋದ್ ಪ್ರಭಾಕರ್!"

"ತಂದೆ ಟೈಗರ್ ಪ್ರಭಾಕರ್ ಬಿಟ್ಟು ಹೋದ ಅಧ್ಯಾಯಕ್ಕೆ ಜೀವ ತುಂಬಿದ ವಿನೋದ್ ಪ್ರಭಾಕರ್!"
Summary: Actor Vinod Prabhakar spoke emotionally while remembering his father, the late actor Tiger Prabhakar. "Every award, every honour I receive is due to my father. He is the reason why I am what I am today," said Vinod Prabhakar.

belagavi news :

"ನಾನು ಇಲ್ಲಿ ನಿಂತಿದ್ದೇನೆಂದರೆ ಅದಕ್ಕೆ ನಮ್ಮ ತಂದೆ ಟೈಗರ್ ಪ್ರಭಾಕರ್ ಕಾರಣ. ಬಲರಾಮ್ ಏನಿದೆಯೋ, ಟೈಗರ್ ಪ್ರಭಾಕರ್ ಬಿಟ್ಟು ಹೋದ ಅಧ್ಯಾಯ ನಾನು!" - ನಟ ವಿನೋದ್ ಪ್ರಭಾಕರ್

'ಬಲರಾಮ್ ದಿನಗಳು' ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ವಿನೋದ್ ಪ್ರಭಾಕರ್ ಭಾವನಾತ್ಮಕವಾಗಿ ಮಾತನಾಡಿದರು. ತಮ್ಮ ಸಿನಿ ಪಯಣದ ಏರಿಳಿತಗಳನ್ನು ನೆನಪಿಸಿಕೊಂಡು ಅವರು, "ಚಿತ್ರರಂಗಕ್ಕೆ ಬಂದಾಗ ನಾನು ಬಹಳಷ್ಟು ಎಡವಿದ್ದೆ. ಅದಕ್ಕಾಗಿಯೇ ಒಮ್ಮೆ ನನ್ನನ್ನು ನಾನೇ 'ದಾರಿತಪ್ಪಿದ ಮಗ' ಎಂದು ಹೇಳಿಕೊಂಡಿದ್ದೆ. ಆದರೆ ಮತ್ತೆ ಯೂ-ಟರ್ನ್ ತೆಗೆದುಕೊಂಡು ಬಂದೆ. ಇಂದು ನಾನು ಏನಾಗಿದೆಂದರೆ ಅದಕ್ಕೆ ನನ್ನ ತಂದೆ ಟೈಗರ್ ಪ್ರಭಾಕರ್ ಅವರೇ ಕಾರಣ" ಎಂದು ಹೇಳಿದರು.

ಮುಂದುವರೆದು, "ಬಲರಾಮ್ ಕೇವಲ ಒಂದು ಸಿನಿಮಾ ಅಲ್ಲ. ಅದು ಟೈಗರ್ ಪ್ರಭಾಕರ್ ಅವರು ಬಿಟ್ಟುಹೋದ ಕನಸುಗಳ ಮುಂದುವರೆದ ಅಧ್ಯಾಯ. ನಾನು ಅವರ ಪರಂಪರೆಯನ್ನು ಮುಂದುವರಿಸುತ್ತಿದ್ದೇನೆ ಎಂಬ ಹೆಮ್ಮೆ ಇದೆ" ಎಂದು ಭಾವನಾತ್ಮಕವಾಗಿ ನುಡಿದರು.

Sponsored

ಇತ್ತೀಚಿಗೆ ಟ್ರೈಲರ್ ಮತ್ತು ಹಾಡುಗಳ ಮೂಲಕ ಸಾಕಷ್ಟು ಕುತೂಹಲ ಮೂಡಿಸಿರುವ ಬಲರಾಮನ ದಿನಗಳು ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅಭಿನಯಿಸಿದ್ದು,ಕೆ.ಎಂ.ಚೈತನ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಸಂತೋಷ್ ನಾರಾಯಣ್ ಸಂಗೀತ ನೀಡಿದ್ದು, ಆಲ್ ಓಕೆ ಹಾಡಿರುವ ಹೊಸ ಗೀತೆ ಈಗಾಗಲೇ ಸಿನಿ ಪ್ರಿಯರ ಗಮನ ಸೆಳೆಯುತ್ತಿದೆ.

"ಆಲ್ ಓಕೆ ಮತ್ತು ಸಂಪೂರ್ಣ ತಂಡಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು.ಈ ಹಾಡು ಅದ್ಭುತವಾಗಿ ಮೂಡಿಬಂದಿದೆ. ಪಟಾಣ್ ಅವರು ಕೂಡ ಕಾರ್ಯಕ್ರಮವನ್ನು ಬಹಳ ಚೆನ್ನಾಗಿ ಮನರಂಜಿಸಿದರು. ಈ ಹಾಡು ಖಂಡಿತವಾಗಿಯೂ ದೊಡ್ಡ ಹಿಟ್ ಆಗಲಿದೆ ಎಂಬ ನಂಬಿಕೆ ನನಗಿದೆ. ನಮ್ಮ ಸಿನಿಮಾಗೆ ಆಲ್ ಓಕೆ ಕೆಲಸ ಮಾಡಿದ್ದಕ್ಕೆ ನಾನು ಸದಾ ಚಿರಋಣಿ" ಎಂದು ಹೇಳಿದರು.

ಇದೆ ವೇಳೆ, "ನಮ್ಮ ಕೆವಿಎಲ್ ಸಂಸ್ಥೆ ಸೇರಿದಂತೆ ಈ ಪ್ರಯಾಣದಲ್ಲಿ ಕೈಜೋಡಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ವಿಶೇಷವಾಗಿ ಈ ಹಾಡು ಹಳೆಯ ಜನರೇಶನ್ ಮತ್ತು ಇಂದಿನ ಜನರೇಷನ್ ಎರಡಕ್ಕೂ ಕನೆಕ್ಟ್ ಆಗುವಂತೆ ರೂಪಗೊಂಡಿದೆ. ಇದೇ ಇದರ ದೊಡ್ಡ ವಿಶೇಷತೆ" ಎಂದು ವಿನೋದ್ ಪ್ರಭಾಕರ್ ತಿಳಿಸಿದರು.

ಭಾವನೆ,ನೆನಪು ಮತ್ತು ಹೊಸ ತಲೆಮಾರಿನ ವೈಬ್ ಗಳನ್ನು ಒಂದೇ ಹಾಡಿನಲ್ಲಿ ಬೆರೆಸಿರುವ ಬಲರಾಮನ ದಿನಗಳು ಚಿತ್ರದ ಈ ಗೀತೆ ಈಗಾಗಲೇ ಸಿನಿಪ್ರಿಯರ ನಡುವೆ ಸಾಕಷ್ಟು ಕುತೂಹಲ ಮೂಡಿಸಿದೆ.

Sponsored

ನಿರ್ಮಾಪಕ ಶ್ರೇಯಸ್ ಅವರು ಮಾತನಾಡುತ್ತಾ, ಮಧ್ಯರಾತ್ರಿ ನನಗೆ ಈ ಹಾಡಿನ ಕುರಿತು ಹೇಳುತ್ತಾರೆ. 5:30 ಗೆ ಫೈನಲ್ ವರ್ಷನ್ ಬರುತ್ತೆ. ಅದನ್ನು ಕೇಳಿ ನನ್ನ ಮೈ ಜುಮ್ ಅನಿಸ್ತು, ವಿನೋದ್ ಸರ್ ಗೆ ಧನ್ಯವಾದ ಹೇಳ್ತೀನಿ ಎಂದು ತಿಳಿಸಿದರು.

"ಈ ಹಾಡಿನ ಬಗ್ಗೆ ಕೇವಲ ಮಾತಿನಲ್ಲಿ ಹೇಳಿದರೆ ಸಾಲದು,ಮನಸ್ಸಿನಿಂದ ಹೇಳುತ್ತಿದ್ದೇನೆ!" ಎಂದು ಭಾವನಾತ್ಮಕವಾಗಿ ಹೇಳಿದ ನಿರ್ಮಾಪಕ ಪದ್ಮಾವತಿ, 'ಬಲರಾಮನ ದಿನಗಳು' ಚಿತ್ರದ ಹೊಸ ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

"ಆಲ್ ಓಕೆ ಅವರಿಗೆ ವಿಶೇಷ ಧನ್ಯವಾದಗಳು. ಸಿನಿಮಾ ಬಿಡುಗಡೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇವೆ. ಸಹಜವಾಗಿಯೇ ಸ್ವಲ್ಪ ಭಯವೂ ಇದೆ. ಆದರೆ ಇವತ್ತಿನ ಟ್ರೆಂಡಿಗೆ ತಕ್ಕಂತೆ ಇಂತಹ ಹಾಡುಗಳೇ ಬೇಕು. ಯುವ ಜನತೆಗೆ ಈ ಹಾಡು ಖಂಡಿತ ಇಷ್ಟವಾಗುತ್ತದೆ ಎಂಬ ಭರವಸೆ ನನಗಿದೆ. ಮೊದಲ ಬಾರಿ ಹಾಡು ಕೇಳಿದಾಗ ನಾನು ಶಾಕ್ ಆಗಿದ್ದೆ. ಅಷ್ಟು ಅದ್ಭುತವಾಗಿ ಮೂಡಿ ಬಂದಿದೆ. ಈ ಒಂದು ಹಾಡೇ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನಿಲ್ಲಿಸುವ ಶಕ್ತಿ ಹೊಂದಿದೆ" ಎಂದು ಹೇಳಿದರು.

ಟ್ರೈಲರ್, ಟೀಸರ್ ಮತ್ತು ಹಾಡುಗಳ ಮೂಲಕ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿರುವ ಬಲರಾಮನ ದಿನಗಳು ಚಿತ್ರವು ಜೂನ್ 26ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.ಚಿತ್ರತಂಡದ ಆತ್ಮವಿಶ್ವಾಸ ಮತ್ತು ಹಾಡುಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

Sponsored

Also Read:

ಮಳೆಯ ಆರ್ಭಟಕ್ಕೆ ದುಧಿಯಾ ಸೇತುವೆ ಧ್ವಂಸ : ಉತ್ತರ ಬಂಗಾಳದಲ್ಲಿ ಸಂಚಾರ ವ್ಯತ್ಯಯ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online