<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

SIR ನಲ್ಲಿ ಮತದಾರರ ಡಿಲೀಟ್ ಪರಿಣಾಮ: TMC ಪ್ರದರ್ಶನ ಹೇಗಿತ್ತು?

SIR ನಲ್ಲಿ ಮತದಾರರ ಡಿಲೀಟ್ ಪರಿಣಾಮ: TMC ಪ್ರದರ್ಶನ ಹೇಗಿತ್ತು?
Summary: The usual political analysis on how TMC (Trinamool Congress) performed in the constituencies with the highest number of voters deleted in the SIR (Special Intensive Revision) process is as follows; The electoral equations are likely to change in constituencies with such high voter deletion. There is a discussion in political circles that TMC will face pressure from voter deletion in some of its strongholds.

belagavi news:

ಪಶ್ಚಿಮ ಬಂಗಾಳದಲ್ಲಿ ಈ ವರ್ಷದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರರ ಪಟ್ಟಿಯ ಎಸ್ಐಆರ್ ಪ್ರಕ್ರಿಯೆ ಪ್ರಮುಖ ರಾಜಕೀಯ ಚರ್ಚೆಯ ವಿಷಯವಾಗಿತ್ತು. ಮತದಾರರ ಹೆಸರುಗಳನ್ನು ದೊಡ್ಡ ಪ್ರಮಾಣದಲ್ಲಿ ಡಿಲೀಟ್ ಮಾಡಿರುವುದು ಚುನಾವಣೆಯ ಮೇಲೆ ಪರಿಣಾಮ ಬೀರಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಟಿ ಎಂ ಸಿ (Trinamool Congress) ನಾಯಕರು ಎಸ್ಐಆರ್ ವಿರೋಧ ಸುಪ್ರೀಂ ಕೋರ್ಟ್ ವರೆಗೆ ಹೋದರು ಅವರಿಗೆ ನಿರೀಕ್ಷಿತ ಪರಿಹಾರ ಸಿಗಲಿಲ್ಲ ಎಂದು ಹೇಳಲಾಗುತ್ತಿದೆ. ಬಳಿಕ ನಡೆದ ಚುನಾವಣೆ ಫಲಿತಾಂಶಗಳಲ್ಲಿ ಪಕ್ಷದ ಪ್ರದರ್ಶನ ಕುಸಿತಕೆ ಇದೇ ಪ್ರಮುಖ ಕಾರಣವೆಂದು ಟಿಎಂಸಿ ನಾಯಕರು ಆರೋಪಿಸುತ್ತಿದ್ದಾರೆ.

ಲಭ್ಯ ಮಾಹಿತಿಯ ಪ್ರಕಾರ, ದಾಖಲೆಗಳ ಕೊರತೆ, ವಿಳಾಸ ಗೊಂದಲ ಹಾಗೂ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಹೆಸರುಗಳಿರುವ ಕಾರಣಗಳಿಂದ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಸಂಖ್ಯೆಯ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಈ ಸಂಖ್ಯೆಯ ಸುಮಾರು 90 ಲಕ್ಷಕ್ಕೂ ಹೆಚ್ಚು ಎಂದು ಹೇಳಲಾಗುತ್ತಿದೆ. ರಾಜಕೀಯ ವಿಶ್ಲೇಷಕರ ಅಭಿಪ್ರಾಯದಂತೆ, ಇಷ್ಟು ದೊಡ್ಡ ಪ್ರಮಾಣದ ಮತದಾರರ ಡಿಲೀಟ್ ಆಗುವುದು ಕೆಲವು ಕ್ಷೇತ್ರಗಳ ಮತ ಸಮೀಕರಣವನ್ನು ಬದಲಾಯಿಸಬಹುದು. ಆದರೆ ಟಿಎಂಸಿ ಹಿನ್ನೆಲೆಯಿಗೆ ಇದು ಮಾತ್ರವೇ ಕಾರ್ನವೇ ಅಥವಾ ಇತರ ರಾಜಕೀಯ ಅಂಶಗಳು ಪರಿಣಾಮ ಬೀರದವೆಯೇ ಎಂಬ ಬಗ್ಗೆ ವಿಭಿನ್ನ ವಿಶ್ಲೇಷಣೆಗಳು ನಡೆಯುತ್ತಿವೆ.

Sponsored

ಕಲ್ಕತ್ತಾ ಮೇ 5: ಎಸ್ ಐ ಆರ್ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿತ್ತು. ಸಿಎಂ ಮಮತಾ ಬ್ಯಾನರ್ಜಿ ಸ್ವತಃ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿ ರಾಜ್ಯದಲ್ಲಿ ಎಸ್ಐಆರ್ ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದರು. ಅದಾಗ್ಯೂ, ಎಸ್ ಐ ಆರ್ ಪ್ರಕ್ರಿಯೆ ಮುಂದುವರೆದಿದ್ದು, ಲಕ್ಷಾಂತರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ.

ಟಿಎಂಸಿ ಹೆಚ್ಚು ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಎಸ್ಐಆರ್ ಪರಿಣಾಮವು ಟಿಎಂಸಿ ಪ್ರದರ್ಶನದ ಮೇಲೆ ಹೇಗೆ ಬೀರಿತು ಎಂಬುದು ರಾಜಕೀಯ ವಲಯದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ.

ಮತದಾನರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೆಸರುಗಳು ಕೈ ಬಿಡಲ್ಪಟ್ಟಿರುವ ಕ್ಷೇತ್ರಗಳಲ್ಲಿ ಟಿಎಂಸಿ ಕೆಲವೇಡೆ ಮತ ಶೇಕಡಾವಾರು ಕುಸಿತ ಎದುರಿಸಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಆದರೆ ಕೆಲವು ಗ್ರಾಮೀಣ ಹಾಗೂ ಸಂಘಟಿತ ಬಲ ಹೊಂದಿರುವ ಕ್ಷೇತ್ರಗಳಲ್ಲಿ ಪಕ್ಷ ತನ್ನ ಹಿಡಿತವನ್ನು ಉಳಿಸಿಕೊಂಡಿರುವುದು ಕಂಡುಬಂದಿದೆ. ಪಟ್ಟರೆ ಎಸ್ಐಆರ್ ಪರಿಣಾಮವು ಎಲ್ಲಾ ಕ್ಷೇತ್ರಗಳಲ್ಲಿ ಒಂದೇ ರೀತಿಯಾಗಿ ಕಂಡು ಬರದೆ ಸ್ಥಳೀಯ ರಾಜಕೀಯ ಸಮೀಕರಣದ ಮೇಲೆ ಅವಲಂಬಿತವಾಗಿದೆ ಎಂದು ವಿಶ್ಲೇಷಣೆಗಳು ಸೂಚಿಸುತ್ತವೆ.

ಚುನಾವಣೆಗೂ ಸ್ವಲ್ಪ ಮೊದಲು ಚುನಾವಣಾ ಆಯೋಗವು ಮೃತಪಟ್ಟ ಮತ್ತು ನಕಲಿ ಮತದಾರರ ದಾಖಲೆಗಳನ್ನು ಸ್ವಚ್ಛಗೊಳಿಸುವ ಗುರಿಯನ್ನು ಹೊಂದಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅನ್ನು ಕೈಗೆತ್ತಿಕೊಂಡಿತ್ತು. ಇದಾದ ನಂತರ ರಾಜ್ಯದ 90 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿತ್ತು. ಕೇಂದ್ರ ಸರ್ಕಾರದ ಈ ಕ್ರಮದಿಂದ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಭಾರಿ ಹೊಡೆತ ಬೀಳಲಿದೆ ಎಂದು ಟಿಎಂಸಿ ಆರೋಪಿಸಿತ್ತು. ಆದರೆ ಆಶ್ಚರ್ಯಕರ ಸಂಗತಿ ಎಂದರೆ, ಅತಿ ಹೆಚ್ಚು ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿರುವ ಕ್ಷೇತ್ರಗಳಲ್ಲಿಯೂ ಟಿಎಂಸಿ ಉತ್ತಮ ಪ್ರದರ್ಶನ ನೀಡಿರುವುದು ಕಂಡು ಬಂದಿದೆ.

Sponsored

ಪಶ್ಚಿಮ ಬಂಗಾಳದ 147 ಕ್ಷೇತ್ರಗಳಲ್ಲಿ ತಲಾ 25,000ಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಎನ್ ಡಿ ಟಿವಿ ನಡೆಸಿದ ವಿಶ್ಲೇಷಣೆಯ ಪ್ರಕಾರ, ಈ ಕ್ಷೇತ್ರಗಳಲ್ಲಿ ಬಿಜೆಪಿ ಗಮನಾರ್ಹ ಮುನ್ನಡೆ ಸಾಧಿಸಿದ್ದು,147 ರಲ್ಲಿ 95 ಸ್ಥಾನಗಳನ್ನು ಗೆದ್ದಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ )51 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ ಕೇವಲ ಒಂದು ಸ್ಥಾನಕ್ಕೆ ಸೀಮಿತವಾಗಿದೆ. ಈ ಅಂಕಿ ಅಂಶಗಳು ಮತದಾರ ಪಟ್ಟಿಯ ಬದಲಾವಣೆಗಳು ಮತ್ತು ಚುನಾವಣಾ ಫಲಿತಾಂಶಗಳ ನಡುವಿನ ಸಂಬಂಧದ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

15,000 ರಿಂದ 25,000 ಹೆಸರುಗಳನ್ನು ಡಿಲೀಟ್ ಮಾಡಿರುವ 67 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು 47 ಗೆಲುವುಗಳೊಂದಿಗೆ ಮುನ್ನಡೆ ಸಾಧಿಸಿತು. ಟಿಎಂಸಿಗೆ 19 ಮತ್ತು ಕಾಂಗ್ರೆಸ್ಸಿಗೆ 1 ಸ್ಥಾನಗಳು ದೊರೆತವು. 5,000 ರಿಂದ 15,000 ಹೆಸರುಗಳನ್ನು ಡಿಲೀಟ್ ಮಾಡಲಾಗಿದ್ದ 62 ಸ್ಥಾನಗಳಲ್ಲಿ, ಬಿಜೆಪಿ 50 ಸ್ಥಾನವನ್ನು ಗೆದ್ದಿತು. ಉಳಿದವು ಟಿಎಂಸಿ ಪಾಲಾಯಿತು.5,000 ಇಂಥ ಕಡಿಮೆ ಹೆಸರುಗಳನ್ನು ಡಿಲೀಟ್ ಮಾಡಿದ ಎಲ್ಲಾ 13 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ.

Also Read:

ದಳಪತಿ ವಿಜಯ ತಂದೆ ಕನ್ನಡದ ಸ್ಟಾರ್ ನಟರಿಗೆ ಆಕ್ಷನ್ ಹೇಳಿದ ದಿಗ್ಗಜ!

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online