BELAGAVI NEW S:
ರಾಜ್ಯ ಸರ್ಕಾರ ಗೃಹಲಕ್ಷ್ಮಿ ಮತ್ತು ಗೃಹಜೋತಿ ಬೃಹತ್ ಯೋಜನೆಗಳ ಫಲಾನುಭವಿಗಳ ಮರುಶೀಲನೆಗೆ ಮುಂದಾಗಿದೆ. ಅನರ್ಹ ಫಲಾನುಭವಿಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಮನೆ ಮನೆಗೆ ತೆರಳಿ ವಿಶೇಷ ಸರ್ವೇ ನಡೆಸಲು ತೀರ್ಮಾನಿಸಲಾಗಿದೆ. ಈ ವೇಳೆ ಫಲಾನುಭವಿಗಳಿಂದ ಮರು ಪರಿಶೀಲನ ಅರ್ಜಿಯ ಮೂಲಕ ಮಾಹಿತಿ ಸಂಗ್ರಹಿಸಿ, ತನಿಖೆಯೊಂದಿಗೆ ಸ್ವಯಂ ಘೋಷಣೆ ಪತ್ರ ಪಡೆಯಲಾಗುತ್ತದೆ.
ಪಂಚ ಗ್ಯಾರಂಟಿ ಯೋಜನೆಗಳ ವೆಚ್ಚ ರಾಜ್ಯ ಸರ್ಕಾರದ ಮೇಲೆ ಬಾರಿ ಆರ್ಥಿಕ ಹೊರೆ ತಂದಿರುವ ಹಿನ್ನೆಲೆಯಲ್ಲಿ, ಯೋಜನೆಗಳ ಅರ್ಹತೆ ಪರಿಶೀಲನೆಗೆ ಸರ್ಕಾರ ಒತ್ತು ನೀಡಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮನೆ ಬಾಗಿಲಿಗೆ ಬರುವ ಅಧಿಕಾರಿಗಳು ಯಾವ ಮಾಹಿತಿ ಪಡೆಯಲಿದ್ದಾರೆ? ಯಾರಿಗೆ ಯೋಜನೆಯ ಲಾಭ ಮುಂದುವರೆಯಲಿದೆ? ಅನರ್ಹರು ಪತ್ತೆಯಾದರೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ? ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳು ತಿಳಿದುಕೊಳ್ಳಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಅನರ್ಹ ಫಲಾನುಭವಿಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಮನೆ ಮನೆಗೆ ತೆರಳಿ ವಿಶೇಷ ಸರ್ವೇ ನಡೆಸಲು ತೀರ್ಮಾನಿಸಿದ್ದು, ಮರು ಪರಿಶೀಲನ ಅರ್ಜಿ ಮೂಲಕ ವಿವರವಾದ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
ಮೂಲಗಳ ಪ್ರಕಾರ, ಮರುಪರಿಶೀಲನ ಅರ್ಜಿಯಲ್ಲಿ ಹತ್ತು ಪ್ರಮುಖ ಅಂಶಗಳ ಕುರಿತು ಮಾಹಿತಿ ಪಡೆಯಲಾಗುತ್ತದೆ. ಯಜಮಾನಿಯ ಪಡಿತರ ಚೀಟಿ ಸಂಖ್ಯೆ, ಮಂಜುರಾತಿ ಪತ್ರ ಸಂಖ್ಯೆ, ಹೆಸರು ಮತ್ತು ಪೂರ್ಣ ವಿಳಾಸ ಸೇರಿದಂತೆ ಆಧಾರ್ ಸಂಖ್ಯೆ ಹಾಗೂ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ದಾಖಲಿಸಲಾಗುತ್ತದೆ. ಅಧಿಕಾರಿಗಳು ಫಲಾನುಭವಿಗಳಿಂದ ಸ್ವಯಂ ಘೋಷಣೆ ಪತ್ರಕ್ಕೂ ಸಹಿ ಪಡೆಯಲಿದ್ದಾರೆ ಎನ್ನಲಾಗಿದೆ.
ಸರ್ಕಾರದ ಈ ಕ್ರಮದಿಂದ ಯೋಜನೆಯ ನಿಜವಾದ ಅರ್ಹತೆ ಮಾತ್ರ ಸೌಲಭ್ಯ ತಲುಪುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ. ನಿಮ್ಮ ಹೆಸರು ಗೃಹಲಕ್ಷ್ಮಿ ಅಥವಾ ಗೃಹಜ್ಯೋತಿ ಪಟ್ಟಿಯಲ್ಲಿದೆಯೇ? ಸರ್ವೆ ವೇಳೆ ಯಾವ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು? ಸಂಪೂರ್ಣ ಮಾಹಿತಿ ತಿಳಿಯಿರಿ.
ಹಣ ಪಾವತಿ ಮಾಡಬೇಕಾದ ಮನೆಯ ಯಜಮಾನಿಯ ವೈಯಕ್ತಿಕ ಬ್ಯಾಂಕ್/ಅಂಚೆ ಕಚೇರಿ ಶಾಖೆಯಲ್ಲಿನ ಆಧಾರ್ ಜೋಡಣೆ ಆಗಿರುವ ಖಾತೆಯ ಮಾಹಿತಿ ನೀಡಬೇಕಾಗಿದೆ.
ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮತ್ತೊಂದು ಮಹತ್ವದ ಅಪ್ಡೇಟ್!
ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಗೃಹಲಕ್ಷ್ಮಿ ಮರು ಪರಿಶೀಲನ ಸರ್ವೆ ಕಾರ್ಯ ಇನ್ನೆರಡು ಮೂರು ದಿನಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಮನೆ ಮನೆಗೆ ಭೇಟಿ ನೀಡುವ ಅಧಿಕಾರಿಗಳು ಯಜಮಾನಿಯ ಮಾಹಿತಿಯ ಜೊತೆಗೆ ಪತಿಯ ಹೆಸರು, ಪತಿಯ ಆಧಾರ್ ಸಂಖ್ಯೆ ಸೇರಿದಂತೆ ಹಲವು ಪ್ರಮುಖ ವಿವರಗಳನ್ನು ಸಂಗ್ರಹಿಸಲಿದ್ದಾರೆ.
ಅಷ್ಟೇ ಅಲ್ಲದೆ, ಫಲಾನುಭವಿಗಳು ಎಸ್.ಸಿ, ಎಸ್.ಟಿ, ಓಬಿಸಿ ಅಥವಾ ಇತರೆ ವರ್ಗಕ್ಕೆ ಸೇರಿದವರೇ ಎಂಬ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಮುಂದಿನ ಸಂಪರ್ಕಕ್ಕಾಗಿ ಮೊಬೈಲ್ ಸಂಖ್ಯೆಯನ್ನು ಪಡೆಯಲಾಗುವುದು. ಈ ಎಲ್ಲ ಮಾಹಿತಿಯನ್ನು ಮರು ಪರಿಶೀಲನ ಅರ್ಜಿ ಮೂಲಕ ಸಂಗ್ರಹಿಸಿ, ಫಲಾನುಭವಿಗಳಿಂದ ಸ್ವಯಂ ಘೋಷಣೆ ಪತ್ರಕ್ಕೂ ಸಹಿ ಪಡೆಯುವ ಪ್ರಕ್ರಿಯೆ ನಡೆಯಲಿದೆ.
ಅನರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯ ಸೌಲಭ್ಯವನ್ನು ನಿಜವಾದ ಅರ್ಹರಿಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಹೀಗಾಗಿ ಗೃಹಲಕ್ಷ್ಮಿ ಹಾಗೂ ಗೃಹಜೋತಿ ಯೋಜನೆಗಳ ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಒಳಿತು.
ಗೃಹಲಕ್ಷ್ಮಿ ಫಲಾನುಭವಿಗಳೆ ಎಚ್ಚರ! ಸ್ವಯಂ ಘೋಷಣೆ ಪತ್ರದಲ್ಲಿ ಈ ಮಾಹಿತಿಗಳನ್ನು ಕಡ್ಡಾಯವಾಗಿ ನೀಡಬಹುದು.
ಗೃಹಲಕ್ಷ್ಮಿ ಯೋಜನೆಯ ಮರು ಪರಿಶೀಲನ ಸರ್ವೆ ವೇಳೆ ಫಲಾನುಭವಿಗಳಿಂದ ಸಹಿಯೊಂದಿಗೆ ಸ್ವಯಂ ಘೋಷಣೆ ಪತ್ರ ಪಡೆಯಲು ಸರ್ಕಾರ ಮುಂದಾಗಿದೆ. ಈ ಘೋಷಣೆ ಪತ್ರದಲ್ಲಿ ಯಜಮಾನಿಯು ತಾನು ಹಾಗೂ ತನ್ನ ಪತಿ ಆದಾಯ ತೆರಿಗೆ ಪಾವತಿದಾರರೇ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ನೀಡಬೇಕಾಗುತ್ತದೆ. ಜೊತೆಗೆ ಜಿ ಎಸ್.ಟಿ ಪಾವತಿದಾರರಾಗಿರುವುದೇ, ಸರ್ಕಾರಿ ನೌಕರರಾಗಿರುವುದೇ ಎಂಬ ವಿವರಗಳನ್ನು ಸ್ಪಷ್ಟಪಡಿಸಬೇಕಾಗುತ್ತದೆ.
ಅಷ್ಟೇ ಅಲ್ಲದೆ, ಕುಟುಂಬದಲ್ಲಿ ತಾನೇ ಮನೆ ಒಡತಿಯಾಗಿದ್ದು, ಅರ್ಜಿಯಲ್ಲಿ ನೀಡಿರುವ ಎಲ್ಲಾ ಮಾಹಿತಿಯು ಸತ್ಯ ಮತ್ತು ತನ್ನ ತಿಳುವಳಿಕೆಗೆ ಅನುಗುಣವಾಗಿದೆ ಎಂದು ಘೋಷಿಸಲಾಗುತ್ತದೆ. ಒಂದು ವೇಳೆ ಸಲ್ಲಿಸಿದ ಮಾಹಿತಿ ಸುಳ್ಳು ಎಂದು ಬಳಿಕ ದೃಢಪಟ್ಟರೆ, ಕಾನೂನು ಕ್ರಮ ಎದುರಿಸುವುದರ ಜೊತೆಗೆ ಗೃಹಲಕ್ಷ್ಮಿ ಯೋಜನೆಯಡಿ ಪಡೆದ ಸೌಲಭ್ಯಗಳನ್ನು ಸರ್ಕಾರಕ್ಕೆ ಮರುಪಾವತಿಸಲು ಸಮ್ಮತಿಸುವ ಅಂಶವು ಘೋಷಣೆ ಪತ್ರದಲ್ಲಿ ಇರುತ್ತದೆ.
ಅನರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯ ಪಾರದರ್ಶಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಹೀಗಾಗಿ ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಯಜಮಾನಿಯರು ಮರು ಪರಿಶೀಲನ ಸರ್ವೆ ಮತ್ತು ಸ್ವಯಂ ಘೋಷಣೆ ಪತ್ರದ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಅಗತ್ಯವಾಗಿದೆ.
ಗೃಹಲಕ್ಷ್ಮಿ ಹಣ ಪಡೆಯುವವರೆ ಗಮನಿಸಿ ! ಸ್ವಯಂ ಘೋಷಣೆ ಪತ್ರದಲ್ಲಿ ಈ ವಿವರಗಳನ್ನು ನೀಡದಿದ್ದರೆ ಸಮಸ್ಯೆ ಎದುರಾಗಬಹುದೇ?
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆಗೆ ಸರ್ಕಾರ ಸಜ್ಜಾಗಿದ್ದು, ಮನೆ ಮನೆಗೆ ತೆರಳಿ ಸರ್ವೆ ನಡೆಸುವ ವೇಳೆ ಯಜಮಾನಿಯರಿಂದ ಸಿಹಿಯೊಂದಿಗೆ ಸ್ವಯಂ ಘೋಷಣೆ ಪತ್ರ ಪಡೆಯಲು ಮುಂದಾಗಿದೆ. ಈ ಪತ್ರದಲ್ಲಿ ತಾವು ಹಾಗೂ ತಮ್ಮ ಪತಿ ಆದಾಯ ತೆರಿಗೆ ಪಾವತಿದಾರರೇ, ಜಿ ಎಸ್ ಟಿ ಪಾವತಿ ದಾರರೇ, ಸರ್ಕಾರಿ ನೌಕರರಾಗಿರುವರೇ ಎಂಬ ಪ್ರಮುಖ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕಾಗಬಹುದು.
ಇದರ ಜೊತೆಗೆ, ಕುಟುಂಬದಲ್ಲಿ ತಾವೇ ಮನೆ ಯಜಮಾನಿಯಾಗಿದ್ದು, ಸಲ್ಲಿಸಿರುವ ಎಲ್ಲ ಮಾಹಿತಿಯು ಸತ್ಯವಾಗಿದೆ ಎಂಬ ಘೋಷಣೆಯನ್ನು ಸಹ ಮಾಡಬೇಕಾಗುತ್ತದೆ. ಒಂದು ವೇಳೆ ನೀಡಿರುವ ಮಾಹಿತಿ ತಪ್ಪು ಅಥವಾ ಸುಳ್ಳು ಎಂದು ನಂತರ ದೃಢಪಟ್ಟರೆ, ಕಾನೂನು ಕ್ರಮದ ಜೊತೆಗೆ ಯೋಜನೆಯಡಿ ಪಡೆದಿರುವ ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕಾಗುವ ಸಾಧ್ಯತೆಯೇ ಇದೆ ಎನ್ನಲಾಗಿದೆ.
ಅನರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯ ಸೌಲಭ್ಯವನ್ನು ನಿಜವಾದ ಅರ್ಹರಿಗೆ ತಲುಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆದಿರುವ ಯಜಮಾನರು ಮರು ಪರಿಶೀಲನ ಸರ್ವೆ ವೇಳೆ ಕೇಳಬಹುದಾದ ಮಾಹಿತಿಗಳು ಮತ್ತು ದಾಖಲೆಗಳ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳುವುದು ಅಗತ್ಯವಾಗಿದೆ.
ಮನೆ ಮನೆಗೆ ಹೋಗಿ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿಯ ಫಲಾನುಭವಿಗಳ ಸರ್ವೆ ಮಾಡಲಾಗುವುದು. ಇದರಲ್ಲಿ ಫಲಾನುಭವಿಗಳ ಮಾಹಿತಿಯನ್ನು ಪಡೆಯಲಾಗುವುದು. ಇದು ಫಲಾನುಭವಿಗಳ ಕೆವೈಸಿ ಮಾಡಿದ ಹಾಗೆ. ಯಜಮಾನಿಯ ವಿಳಾಸ, ಆಧಾರ್ ಸಂಖ್ಯೆ ಸೇರಿ ಎಲ್ಲ ಮಾಹಿತಿಯನ್ನು ಪಡೆಯಲಾಗುವುದು ಎಂದು ಸಿಎಂ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್ ತಿಳಿಸಿದ್ದಾರೆ.
Also Read:
ಕುಡಿಯುವ ನೀರಿಗಾಗಿ ರಾತ್ರಿಯಿಡೀ ಕಾದ ಜನರು - ಯರೇ ಹಂಚಿನಾಳ ಗ್ರಾಮದ ದುಸ್ಥಿತಿ