Belagavi News :
ವಯನಾಡು ಭೂಕುಸಿತ: ವಿಕ್ರಮ್ ರಾಣಾ ಪತ್ತೆಗೆ 5ನೇ ದಿನವೂ ಮುಂದುವರೆದ ಶೋಧ ಕಾರ್ಯಾಚರಣೆ
ವಯನಾಡು (ಕೇರಳ): ವಯನಾಡು ಭೂಕುಸಿತ ದುರಂತದ ಬಳಿಕ ನಾಪತ್ತೆಯಾಗಿರುವ ಯೋಜನಾ ವ್ಯವಸ್ಥಾಪಕ "ವಿಕ್ರಮ್ ರಾಣಾ" ಅವರ ಪತ್ತೆಯಾಗಿ ರಕ್ಷಣಾ ಕಾರ್ಯಾಚರಣೆ 5ನೇ ದಿನವೂ ಮುಂದುವರಿದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ( ಎನ್ ಡಿಆರ್ ಎಫ್) ಹಾಗೂ ಅಗ್ನಿಶಾಮಕ ಮತ್ತು ರಕ್ಷಣಾ ದಳದ ತಂಡಗಳು ಮೀನಾಚಿಪುಳ ನದಿಯುದ್ಧಕ್ಕೂ ಶೋಧ ಕಾರ್ಯವನ್ನು ತೀವ್ರಗೊಳಿಸಿವೆ.
ಮೀನಾಚಿಪುಳ ನದಿಯಲ್ಲಿ ವಿಶೇಷ ತಂಡವನ್ನು ನಿಯೋಜಿಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವ ಟಿ. ಸಿದ್ದಿಕಿ ತಿಳಿಸಿದ್ದಾರೆ. ಕಳೆದ ಎರಡು ದಿನಗಳಿಂದ ನದಿಯ ಮೇಲ್ಭಾಗದಲ್ಲಿ ನಡೆಯುತ್ತಿದ್ದ ಕಾಮಗಾರಿಯಿಂದಾಗಿ ನೀರು ಮಣ್ಣು ಮಿಶ್ರಿತವಾಗಿದ್ದ ಕಾರಣ ಶೋಧ ಕಾರ್ಯಕ್ಕೆ ಅಡಚಣೆಯಾಗಿತ್ತು. ಇದೀಗ ಕಾಮಗಾರಿ ಸ್ಥಗಿತಗೊಂಡಿದ್ದು, ನೀರು ಸ್ವಚ್ಛವಾಗಿರುವುದರಿಂದ ನದಿಯ ಆಳ ಪ್ರದೇಶಗಳಲ್ಲಿಯೂ ಪರಿಶೀಲನೆ ನಡೆಸಲಾಗುತ್ತಿದೆ.
ನದಿಯಲ್ಲಿ ಸಂಗ್ರಹವಾಗಿರುವ ಮಣ್ಣು ಮತ್ತು ಹೂಳನ್ನು ಸಂಪೂರ್ಣವಾಗಿ ತೆರವುಗೊಳಿಸಿ, ವಿಕ್ರಮ್ ರಾಣಾ ಅವರ ಪತ್ತೆಗೆ ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಯನಾಡು ಭೂಕುಸಿತ ದುರಂತದಲ್ಲಿ ಇದುವರೆಗೆ ಏಳು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಶುಕ್ರವಾರ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಮೂಲದ ರಾಜೇಶ್ ಅವರ ಮೃತದೇಹವನ್ನು ಮೀನಾಚಿಪುಳ ನದಿಯ ಕೆಳಭಾಗದಿಂದ ರಕ್ಷಣಾ ತಂಡವನ್ನು ಪತ್ತೆಹಚ್ಚಿದ್ದವು.
ದುರಂತದ ಬಳಿಕ ನಾಪತ್ತೆಯಾಗಿರುವ ಏಕೈಕ ವ್ಯಕ್ತಿಯಾಗಿರುವ ವಿಕ್ರಮ್ ರಾಣಾ ಅವರ ಪತ್ತೆಯಾಗುವವರೆಗೆ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವಯನಾಡು ಭೂಕುಸಿತ, ಕೇರಳ ಭೂಕುಸಿತ ಸುದ್ದಿ, ಎನ್ ಡಿ ಆರ್ ಎಫ್ ಕಾರ್ಯಾಚರಣೆ, ವಿಕ್ರಮ್ ರಾಣಾ ನಾಪತ್ತೆ, ರಕ್ಷಣಾ ಕಾರ್ಯಾಚರಣೆ" ಪ್ರಮುಖ ಸುದ್ದಿಯಾಗಿವೆ.
ವಯನಾಡು ಭೂಕುಸಿತ ದುರಂತದಲ್ಲಿ ನಾಪತ್ತೆಯಾಗಿರುವ ವಿಕ್ರಮ್ ರಾಣಾ ಅವರ ಪತ್ತೆಗಾಗಿ ರಕ್ಷಣಾ ತಂಡಗಳು ವ್ಯವಸ್ಥಿತವಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಎನ್ ಡಿ ಆರ್ ಎಸ್ ಮತ್ತು ಜಿಲ್ಲಾಡಳಿತ ಮೇಲ್ವಿಚಾರಣೆಯಲಿ ಕಾರ್ಯಾಚರಣೆ ನಡೆಯುತ್ತಿದ್ದು, ನದಿಯ ಕೆಳಭಾಗದಲ್ಲಿ ಹುಡುಕಾಟ ನಡೆಸಲು ಅವಶೇಷಗಳನ್ನು ತೆರವುಗೊಳಿಸಲು ಬೃಹತ್ ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದೆ.
ಎನ್ ಡಿ ಆರ್ ಎಫ್, ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಹಾಗೂ ಟರ್ಕಿ ಲೈಫ್ ರೆಸ್ಕ್ಯೂ ತಂಡದ ಸದಸ್ಯರು ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ವಲಯ 1,2 ಮತ್ತು 3 ರಲ್ಲಿ ವ್ಯಾಪಕ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ನಾಪತ್ತೆಯಾದವರ ಪತ್ತೆಗೆ ಎಲ್ಲಾ ಪ್ರಯತ್ನಗಳನ್ನು ಮುಂದುವರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಜುಲೈ 7ರಂದು ವಯನಾಡು ಮತ್ತು ಕೋಯಿಕ್ಕೋಡ್ ಜಿಲ್ಲೆಗಳ ನಡುವಿನ ಸಂಪರ್ಕವನ್ನು ಸುಧಾರಿಸುವ ಉದ್ದೇಶದಿಂದ ನಿರ್ಮಿಸಲಾಗುತ್ತಿರುವ ಅನಕ್ಕೊಂಪೋಯಿಲ್ -ಮೇಪ್ಪಾಡಿ ಸುರಂಗ ಮಾರ್ಗ ಯೋಜನೆ ಪ್ರದೇಶದ ಬಳಿ ಭೀಕರ ಭೂಕುಸಿತ ಸಂಭವಿಸಿತ್ತು. ಸುರಂಗ ಯೋಜನೆಗಾಗಿ ಸಂಗ್ರಹಿಸಲಾಗಿದ್ದ ಮಣ್ಣು ಭಾರಿ ಮಳೆಯಿಂದಾಗಿ ಕುಸಿದ್ದ ಪರಿಣಾಮ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಘಟನೆ ಬಳಿಕ ಕಲ್ಲಪೆಟ್ಟದಿಂದ ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತಕ್ಷಣ ಕಾರ್ಯಾಚರಣೆ ಆರಂಭಿಸಿದ್ದರು. ಇದೀಗ ವಿಕ್ರಮ್ ರಾಣಾ ಅವರ ಪತ್ತೆಗಾಗಿ ನದಿ ಪ್ರದೇಶ ಸೇರಿದಂತೆ ವಿವಿಧ ಭಾಗಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ.
ವಯನಾಡು ಭೂಕುಸಿತ, ಕೇರಳ ಭೂಕುಸಿತ, ವಿಕ್ರಮ್ ರಾಣಾ ನಾಪತ್ತೆ, ಎನ್ ಡಿ ಆರ್ ಎಫ್ ಶೋಧಕ ಕಾರ್ಯ, ರಕ್ಷಣಾ ಕಾರ್ಯಾಚರಣೆ ಪ್ರಮುಖ ಸುದ್ದಿಗಳಾಗಿವೆ.