ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ ಹೇಗಿದೆ. ಎಂಬುದು ಇಲ್ಲಿ ನೋಡೋಣ.
ಪಂಚಾಂಗ:
ದಿನಾಂಕ: 4-2-2026
ವಾರ: ಬುಧವಾರ
ಸಂವತ್ಸರ: ವಿಶ್ವವಸು
ಆಯನ: ಉತ್ತರಾಯಣ
ಪಕ್ಷ: ಕೃಷ್ಣ
ತಿಥಿ: ತೃತೀಯಾ
ನಕ್ಷತ್ರ: ಪೂರ್ವಫಾಲ್ಗುಣಿ
ಸೂರ್ಯೋದಯ: ಮುಂಜಾನೆ 06:44 ಗಂಟೆಗೆ
ಅಮೃತಕಾಲ: ಮಧ್ಯಾಹ್ನ 01:58 ರಿಂದ 03:25 ವರೆಗೆ
ದುರ್ಮುಹೂರ್ತ: ಮಧ್ಯಾಹ್ನ 12: 20 ರಿಂದ 01:08ರ ತನಕ
ರಾಹುಕಾಲ: ಮಧ್ಯಾಹ್ನ 12:32 ರಿಂದ 01:58 ರ ವರೆಗೆ
ಸೂರ್ಯಾಸ್ತ: ಸಂಜೆ 06:19 ಗಂಟೆಗೆ
ರಾಶಿ ಭವಿಷ್ಯ:
ಮೇಷ ರಾಶಿ: ಮಕ್ಕಳು ನಿಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ಸ್ಥಾನ ಹೊಂದಿರುತ್ತಾರೆ. ಅವರ ಭವಿಷ್ಯಕ್ಕಾಗಿ ನೀವು ಪ್ರತಿದಿನ ಕಠಿಣ ಪರಿಶ್ರಮ ಪಡೆತ್ತಿದ್ದು, ಇದೀಗ ಅವರು ನಿಮಗೆ ಸಂತೋಷದ ಕ್ಷಣವನ್ನು ನೀಡಲು ಸಜ್ಜಾಗಿದ್ದಾರೆ ಬಾಕಿ ಉಳಿದವರು ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ವೈದ್ಯರು, ವೃತ್ತಿಪರರು ಹಾಗೂ ಸೇವಾ ಕ್ಷೇತ್ರದ ವರೆಗೆ ಇಂದು ಅತಂತ್ಯ ಉತ್ಪಾದಕ ದಿನವಾಗಲಿದೆ.
ವೃಷಭ ರಾಶಿ: ಇಂದು ನಿಮ್ಮ ಜೀವನದಲ್ಲಿ ಆವಿಷ್ಕಾರ ಮತ್ತು ಸಾಧನೆಯ ದಿನವಾಗಿದೆ ಕೆಲಸ ಮಾಡುವ ನಿಮ್ಮ ಶೈಲಿ ಹಾಗೂ ನಿರ್ವಹಣಾ ಸಾಮರ್ಥ್ಯ ಸುತ್ತಲಿನವರನ್ನು ಪ್ರೇರೇಪಿಸುತ್ತದೆ. ಕಿರಿಯ ಉದ್ಯೋಗಿಗಳು ನಿಮ್ಮ ಮಾರ್ಗದರ್ಶನದಲ್ಲಿ ಉತ್ಸಾಹದಿಂದ ಕೆಲಸ ಮಾಡಲಿದ್ದು, ಹಿಂದೆಂದಿಗಿಂತ ಹೆಚ್ಚು ಸಹಕಾರ ನೀಡುತ್ತಾರೆ. ನಿಮ್ಮ ಯೋಜನೆಗಳು ಪ್ರಗತಿಯ ದಾರಿಗೆ ಸಾಗಲಿದು ದಿನವೂ ಅತ್ಯಂತ ಫಲಪ್ರದವಾಗಿರುತ್ತದೆ.
ಮಿಥುನ ರಾಶಿ: ಇಂದು ನೀವು ಭಾವನಾತ್ಮಕ ಚಕ್ರಸುಳಿನಲ್ಲಿ ಸಿಲುಕುವ ಸಾಧ್ಯತೆ ಇದೆ. ತರ್ಕಕ್ಕಿಂತ ಹೃದಯಕ್ಕೆ ಹೆಚ್ಚಿನ ಆರತಿ ನೀಡುವುದರಿಂದ ಯಾರು ನಿಮ್ಮ ಒಳಿತಿಗೆ ಮತ್ತು ಯಾರು ಸ್ವಾರ್ಥ ಉದ್ದೇಶ ಹೊಂದಿದ್ದಾರೆ. ಎಂಬುದನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು. ಆದರೆ ದಿನದ ಹಂತದ ವೇಳೆಗೆ ನಿಮ್ಮ ಅದೃಷ್ಟ ಉತ್ತಮ ದಿಕ್ಕಿನಲ್ಲಿ ತಿರುಗುವ ಸೂಚನೆಗಳಿವೆ.
ಕರ್ಕಾಟಕ ರಾಶಿ: ಇಂದಿನಿಂದ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಕಷ್ಟ ಯೋಜನೆ ರೂಪಿಸಲು ಪ್ರಾರಂಭಿಸುತ್ತೀರಿ. ನಿಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗುವಿರಿ. ವಿವರವಾದ ಯೋಜನೆಗಳು ಮುಂದಿನ ದಿನಗಳಲ್ಲಿ ನಿಮಗೆ ಮಹತ್ವದ ನೆರವು ನೀಡಲಿವೆ. ಕೈಗೊಂಡ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ದೊರೆಯುವ ನಿರೀಕ್ಷೆಯಿದ್ದು, ದಿನವು ಅತ್ಯುತ್ತಮವಾಗಿರುತ್ತದೆ.
ಸಿಂಹ ರಾಶಿ: ನೀವು ಹೊಸ ಪ್ರಾಜೆಕ್ಟ್ ಗಳನ್ನು ತೆಗೆದುಕೊಳ್ಳುತ್ತೀರಿ. ಮತ್ತು ನಿಮ್ಮ ಕೆಲಸಗಳನ್ನು ಪರಿಣಾಮಕಾರಿಯಾಗಿ ಪೂರೈಸುತ್ತಿರಿ. ಬಾಂಧವ್ಯಗಳನ್ನು ನಿಭಾಯಿಸುವಾಗ ನೀವು ಕೆಲವು ಅಡೆತಡೆಗಳನ್ನು ಎದುರಿಸುತ್ತಿರಿ. ಆದರೆ ಆ ಸಮಸ್ಯೆಗಳು ಸರಾಗವಾಗಿ ಇತ್ಯರ್ಥವಾಗುತ್ತವೆ.
ಕನ್ಯಾ ರಾಶಿ: ಈ ದಿನ ನಿಮಗೆ ನಿಮ್ಮ ಕುಟುಂಬದ ಮೌಲ್ಯ ಅರ್ಥಮಾಡಿಕೊಳ್ಳಲು ನೇರವಾಗಿತ್ತದೆ. ಮುಂದಿನ ವಿವಾದಗಳು ನಿಮ್ಮ ಅದ್ಭುತ ಸಂಧಾನ ಕೌಶಲಗಳಿಂದ ಸುಲಭವಾಗಿ ಇತ್ಯರ್ಥವಾಗುತ್ತವೆ. ನಿಮ್ಮ ಶಾಂತ ಮತ್ತು ಲೆಕ್ಕಾಚಾರದ ಸ್ವಭಾವ ಜೀವನದೊಂದಿಗೆ ವ್ಯವಹರಿಸಲು ನೆರವಾಗುತ್ತದೆ ಮತ್ತು ಹಲವು ಪಾಠಗಳನ್ನು ಬೋಧಿಸುತ್ತದೆ.
ತುಲಾ ರಾಶಿ: ಇಂದು ಭೋಜನ ರಸಿಕತೆ ನಿಮ್ಮಲ್ಲಿ ಹೆಚ್ಚಾಗುತ್ತದೆ. ವಿಭಿನ್ನ ರುಚಿಗಳನ್ನು ಆಸ್ವಾದಿಸುವ ಅವಕಾಶ ದೊ ರೆಯಲಿದೆ. ಕೆಲಸದ ವಿಷಯದಲ್ಲಿ ಮಹತ್ವದ ಆಯ್ಕೆ ಮಾಡಬೇಕಾದ ಹಂತಕ್ಕೆ ಬರುತ್ತಿರಿ ಚಿಂತಿಸಬೇಕಾಗಿಲ್ಲ ದೇವರಿಗೆ ಕೃತಜ್ಞತೆ ಸಲ್ಲಿಸಿದರೆ ತೆಗೆದುಕೊಂಡರೆ ಸರಿಯಾದ ದಾರಿ ಸ್ಪಷ್ಟವಾಗುತ್ತದೆ.
ವೃಶ್ಚಿಕ ರಾಶಿ: ಬಹುಕಾಲದಿಂದ ಒಳಗೆ ಸಂಗ್ರಹಿಸಿಕೊಂಡಿದ್ದ ಭಾವನೆಗಳನ್ನು ಇಂದು ಹೊರ ಹಾಕುವ ಸಮಯ ಬಂದಿದೆ. ಇದರಿಂದ ಮಾನಸಿಕ ಮತ್ತು ದೈಹಿಕ ಒತ್ತಡ ಅನುಭವಿಸುವ ಸಾಧ್ಯತೆ ಇದೆ. ಪ್ರೀತಿ ಪಾತ್ರರೊಂದಿಗೆ ಗುಣಮಟ್ಟದ ಸಮಯ ಕಳೆಯುವುದರಿಂದ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ದೊರೆಯಲಿದೆ.
ಧನು ರಾಶಿ: ಕಚೇರಿಯಲ್ಲಿ ನಿಮ್ಮ ಇಚ್ಛಾ ಶಕ್ತಿ ಮತ್ತು ಬದ್ಧತೆ ಹೆಚ್ಚುವರಿ ಕೆಲಸದ ಒತ್ತಡವನ್ನು ಆಕರ್ಷಿಸಬಹುದು. ವರ್ಕೋಹಾಲಿಕ್ ಆಗುವ ಸಾಧ್ಯತೆಯಿದ್ದು, ಆರೋಗ್ಯದ ಕಡೆ ಗಮನ ಅಗತ್ಯ. ಸಂಜೆಯ ವೇಳೆಗೆ ವಿಶ್ರಾಂತಿ ದೊರೆಯಲಿದ್ದು ಉಳಿದ ಸಮಯವನ್ನು ಸಂತೋಷದಿಂದ ಕಳೆಯುವಿರಿ.
ಮಕರ ರಾಶಿ: ನೀವು 'ಆರೋಗ್ಯವೇ ಭಾಗ್ಯ' ಎಂಬ ಪರಿಕಲ್ಪನೆಯಲ್ಲಿ ನಂಬಿಕೆ ಇರಿಸಿದ್ದೀರಿ. ನೀವು ಇಲ್ಲಿಯವರೆಗೂ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದೀರಿ ಮತ್ತು ಅದು ಇಂದು ವಿಷಯವು ಅಲ್ಲ. ಪ್ರಸ್ತುತ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ದೂರದ ವಿಷಯ ಎತ್ತಿಸುತ್ತದೆ. ಆದರೆ ನೀವು ಅದನ್ನು ಪೂರ್ಣಗೊಳಿಸುತ್ತೀರಿ. ಸಕಾಲಕ್ಕೆ ಕೆಲಸ ಪೂರ್ಣಗೊಳಿಸದೆ ಇರುವುದರಿಂದ ನಿಮ್ಮ ಭಾಸದ ನಿಮ್ಮ ಕುರಿತು ಅಸಮಧಾನ ಪಟ್ಟುಕೊಳ್ಳುತ್ತಾರೆ ಇಂದು ನಿಮ್ಮ ಹಣಕಾಸಿನ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತಿರಿ.
ಕುಂಭ ರಾಶಿ: ಇಂದು ನೀವು ನಿಮ್ಮ ಪ್ರೀತಿ ಪಾತ್ರರ ಜೊತೆಯಲ್ಲಿ ಆನಂದಿಸುತ್ತೀರಿ. ಪಿಕ್ ನೀಕ್ ಮತ್ತು ಶಾಪಿಂಗ್ ನಿಮ್ಮ ಮಾಡ್ಲೇಬೇಕಾದ ಪಟ್ಟಿಯಲ್ಲಿವೆ. ಹಲೋ ಹಲೋ ಪ್ರೀತಿ ಮತ್ತು ಸಂಭ್ರಮ ನಿಮ್ಮ ತಾರೆಗಳು ಸೂಚಿಸುತ್ತಿವೆ.
ಮೀನ ರಾಶಿ: ನೀವು ಜನರನ್ನು ಅರ್ಥ ಮಾಡಿಕೊಳ್ಳಲು ಮತ್ತು ಅವರೊಂದಿಗೆ ಅಗತ್ಯವಿ ರುವಾಗ ಅನುಕರಿಸಲು ಸಮರ್ಥರಾಗುತ್ತೀರಿ. ಇಂದು ನಿಮಗೆ ಅವರ ಆಶೀರ್ವಾದ ಪಡೆದುಕೊಳ್ಳಲು ನೆರವಾಗುತ್ತದೆ. ನೀವು ನಿಮ್ಮನ್ನು ಸಮರ್ಥ ಬಾತ್ ಸಹ ಕೆಲಸಗಾರ ಸಂಗಾತಿ ಮತ್ತು ಒಡಹುಟ್ಟಿದವರಂತೆ ಸಾಬೀತುಪಡಿಸಿಕೊಳ್ಳುತ್ತಿರಿ. ಇಂದು ನಿಮ್ಮನ್ನು ವ್ಯಕ್ತಿಯಾಗಿ ವ್ಯಾಖ್ಯಾನಿಸುವುದರಿಂದ ಈ ಸದ್ಗುಣಗಳನ್ನು ಕಳೆದುಕೊಳ್ಳುವುದು ಒಳ್ಳೇಯ ದಲ್ಲ
ಇನ್ನಷ್ಟು ಓದಿರಿ:
ಕರ್ನಾಟಕದ ಮಾನವ - ವನ್ಯಜೀವಿ ಸಂಘರ್ಷ : ಪರಿಹಾರಕ್ಕೆ ಹೆಚ್ಡಿಕೆ ಮನವಿ