ಕರ್ನಾಟಕದ ಮಾನವ ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ನೀಡಬೇಕಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರು ಸಂಸತ್ ಭವನದಲ್ಲಿರುವ ಅರಣ್ಯ ಸಚಿವರ ಕಚೇರಿಯಲ್ಲಿ ನಡೆದ ಭೇಟಿಯ ಸಮಯದಲ್ಲಿ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವರಾದ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆಯನ್ನು ಮಾಡಿದರು.
ಮುಖ್ಯವಾಗಿ ಕರ್ನಾಟಕದ ಜಿಲ್ಲೆಗಳಲ್ಲಿ ನಡೆಯುತ್ತಿರುವ ತೊಂದರೆಗಳಿಗೆ ಪರಿಹಾರ ನೀಡಬೇಕೆಂದು ಚರ್ಚೆಗಳನ್ನು ನಡೆಸಿದರು. ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರು ,ಚಾಮರಾಜನಗರ, ಶಿವಮೊಗ್ಗ ಹಾಗೂ ರಾಮನಗರ ಸೇರಿದಂತೆ ಇನ್ನೂ ಅನೇಕ ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿರುವುದರಿಂದ ಅದರ ಬಗ್ಗೆ ದೀರ್ಘ ಕಾಲದವರೆಗೆ ಚರ್ಚೆ ನಡೆಸಿದರು.
ಕರ್ನಾಟಕದಲ್ಲಿ ಹಲವಾರು ತೊಂದರೆಗಳು ಆಗುತ್ತಿರುವುದರಿಂದ ಅದಕ್ಕೆ ಶಾಶ್ವತ ಪರಿಹಾರ ಕೊಡಬೇಕೆಂದು ಕುಮಾರಸ್ವಾಮಿಯವರು ಭೂಪೇಂದ್ರ ಯಾದವ್ ಅವರನ್ನು ವಿನಂತಿಸಿದರು. ವನ್ಯಜೀವಿಗಳ ಕಾಟ ನಿರಂತರವಾಗಿ ನಡೆಯುತ್ತಿದೆ. ಅನೇಕ ಜನರು ಅರಣ್ಯದಲ್ಲಿ ಬೇಸಾಯ ಮಾಡುವ, ದರಕನಗಳನ್ನು ಮೇಯಿಸುವ ರೈತರು ತುಂಬಾ ಬಲಿಯಾಗುತ್ತಿದ್ದಾರೆ .ಆದ್ದರಿಂದ ಇದಕ್ಕೆಲ್ಲ ಸೂಕ್ತ ಪರಿಹಾರ ನೀಡಬೇಕಾಗಿ ಅವರಲ್ಲಿ ಮನವಿ ಮಾಡಿಕೊಂಡರು. ಇನ್ನು ಅನೇಕರು ಇನ್ನು ಕೆಲ ಜನರು ಗಾಯಗೊಂಡು ಶಾಶ್ವತವಾಗಿ ಅಂಗವಿಕಲತೆಯನ್ನು ಪಡೆಯುತ್ತಿದ್ದಾರೆ.
ಆದ ಕಾರಣ ಅವೆಲ್ಲವುಗಳ ಯಾರಿಗೆ ಸೂಕ್ತವಾದ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂದು ಅವರಿಗೆ ವಿನಂತಿಸಿಕೊಂಡರು. ಈ ಭೇಟಿಯ ಸಂದರ್ಭದಲ್ಲಿ ಸಚಿವರು ತಮ್ಮ ನಿರ್ವಹಣೆಯ ಇಲಾಖೆಗೆ ಸಂಬಂಧಿಸಿದಂತೆ ದೀರ್ಘಕಾಲಿಕ ಚರ್ಚೆಗಳನ್ನು ಮಾಡಿದರು. ಎರಡು ಇಲಾಖೆಗಳ ಸಮನ್ವಯತೆ ಮತ್ತು ಅಭಿವೃದ್ಧಿಯ ವಿಷಯ ಕುರಿತಾಗಿ ಕುಮಾರಸ್ವಾಮಿಯವರು ಮತ್ತು ಭೂಪೇಂದ್ರ ಯಾದವ್ ಅವರು ನಡೆಸಿದರು ಮತ್ತು ಅದರ ಜೊತೆ ಇನ್ನೂ ಹಲವು ಇಲಾಖೆಗಳ ಬಗ್ಗೆ ಚರ್ಚೆಯನ್ನು ನಡೆಸಿದರು. ಉಕ್ಕು ಉದ್ಯಮದ ಬೆಳವಣಿಗೆ ಮತ್ತು ಅದಕ್ಕೆ ಪೂರಕವಾಗಿ ಪರಿಸರ ಇಲಾಖೆಯಲ್ಲಿ ಸಹಕಾರದ ವಿಚಾರವಾಗಿ ಚರ್ಚೆಯನ್ನು ನಡೆಸಿದರು.
ಕುಮಾರಸ್ವಾಮಿಯವರ ಮನವಿಗೆ ಸ್ಪಂದಿಸಿ ಉತ್ತಮವಾಗಿ ಸ್ಪಂದಿಸಿದ ಉಪೇಂದ್ರ ಯಾದವ್ ಈ ಸಮಸ್ಯೆಗಳ ಬಗ್ಗೆ ಗಮನಹರಿಸುವುದಾಗಿ ಭರವಸೆ ನೀಡಿದರು. ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ಅಧಿಕಾರಿಗಳು ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವ ಕುರಿತು ಅವರಿಗೆ ಸಲಹೆ ನೀಡಲಾಗುತ್ತದೆ ಎಂದು ಹೇಳಿದರು. ಸಂಸತ್ತಿನ ಬಜೆಟ್ ಅಧಿವೇಶನ ಮುಗಿಯುವುದರ ಒಳಗಾಗಿ ಈ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡುವಂತೆ ಸಚಿವ ಭೂಪೇಂದ್ರ ಯಾದವ ಅವರು ಅಧಿಕಾರಿಗಳಿಗೆ ತಿಳಿಸಿದರು.
ಈ ಸಮಸ್ಯೆಗಳ ಬಗ್ಗೆ ಸಂಪೂರ್ಣ ಕ್ರಮ ಕೈಗೊಳ್ಳಲಾಗುವುದು ಎಂದು ಭೂಪೇಂದ್ರ ಯಾದವ್ ವಿಶ್ವಾಸದಿಂದ ಹೇಳಿದರು. ಕೇಂದ್ರ ಅರಣ್ಯ ಸಚಿವರಾದ ಭೂಪೇಂದ್ರ ಯಾದವ್ ಅವರಿಗೆ ಹೆಚ್ಡಿಕೆ ಅವರು ಸ್ಪಷ್ಟವಾಗಿ ಕರ್ನಾಟಕದ ಮಾನವ ವನ್ಯಜೀವಿ ಸಂಘರ್ಷದ ಬಗ್ಗೆ ತಿಳಿಸಿ ಶಾಶ್ವತ ಪರಿಹಾರ ನೀಡಬೇಕೆಂದು ಅವರಲ್ಲಿ ಮನವಿ ಮಾಡಿಕೊಂಡರು. ಅದಕ್ಕೆ ಸ್ಪಂದಿಸಿ ಭೂಪೇಂದ್ರ ಅವರು ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರವನ್ನು ಹೇಳಿದರು.
ಇನ್ನಷ್ಟು ಓದಿರಿ:
ಚಲನಚಿತ್ರ ಅಕಾಡೆಮಿಗೆ ಅರ್ಪಣಾ ಸುಬ್ರಮಣಿಯನ್ ಮನವಿ