<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಪಶ್ಚಿಮ ಬಂಗಾಳ ರಾಜಕೀಯ ಕದನ: ಫಾಲ್ಟಾದಲ್ಲಿ ಹೈಅಲರ್ಟ್ ನಡುವೆ ಮತದಾನ

ಪಶ್ಚಿಮ ಬಂಗಾಳ ರಾಜಕೀಯ ಕದನ: ಫಾಲ್ಟಾದಲ್ಲಿ ಹೈಅಲರ್ಟ್ ನಡುವೆ ಮತದಾನ
Summary: Voting in West Bengal's Falta assembly constituency was conducted peacefully amid tight security. Heavy police deployment was made near the polling booths and voters enthusiastically exercised their franchise. The Election Commission had taken strict measures to prevent any untoward incident.

Belagavi News:

ಕೋಲ್ಕತ್ತಾ (ಪಶ್ಚಿಮ ಬಂಗಾಳ): ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಬೆಳಿಗ್ಗೆ ಯಿಂದ ಬಿಗಿ ಭದ್ರತೆಯ ನಡುವೆ ಮರು ಮತದಾನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಕ್ಷೇತ್ರದ ಸುಮಾರು 2.36 ಲಕ್ಷ ಅರ್ಹ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ. ಮತದಾನ ಪ್ರಕ್ರಿಯೆ ಸುಗಮವಾಗಿಸಲು ಒಟ್ಟು 285 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ಸುಮಾರು 1.15 ಲಕ್ಷ ಮಹಿಳಾ ಮತದಾರರು ಸೇರಿದ್ದಾರೆ.

ಮತಗಟ್ಟೆಗಳ ಸುತ್ತ ಭಾರಿ ಪೊಲೀಸ್ ಬಂದೋಬಸ್ತ್ ಹಾಗೂ ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಮತದಾರರು ಬೆಳಿಗ್ಗೆಯಿಂದಲೇ ಮತಗಟ್ಟೆಗಳಿಗೆ ಆಗಮಿಸಿ ಉತ್ಸಾಹದಿಂದ ಮತ ಚಲಾವಣೆ ಮಾಡುತ್ತಿರುವುದು ಕಂಡು ಬಂದಿದೆ.

ಗಮನಾರ್ಹವಾಗಿ, ಏಪ್ರಿಲ್ 29ರಂದು ನಡೆದಿದ್ದ ಎರಡನೇ ಹಂತದ ವಿಧಾನಸಭಾ ಚುನಾವಣೆಯ ವೇಳೆ ಫಾಲ್ಟಾ ಕ್ಷೇತ್ರದಲ್ಲಿ ಗಂಭೀರ ಚುನಾವಣಾ ಅಕ್ರಮ ಮತ್ತು ಹಿಂಸಾಚಾರದ ಪ್ರಕರಣಗಳು ವರದಿಯಾಗಿದ್ದವು, ಈ ಹಿನ್ನೆಲೆ ಚುನಾವಣಾ ಆಯೋಗವು ಕೆಲವು ಬೂತ್ ಗಳಲ್ಲಿ ಮರು ಮತದಾನ ನಡೆಸಲು ಆದೇಶಿಸಿತ್ತು.

ಫಾಲ್ಟಾ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿದ್ದ ಟಿಎಂಸಿಯ ಜಹಾಂಗೀರ್ ಖಾನ್ ಸೇರಿದಂತೆ ಒಟ್ಟು ಆರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಜಹಾಂಗೀರ್ ಖಾನ್ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ಆದಾಗ್ಯೂ, ಅಧಿಕೃತವಾಗಿ ಉಮೇದುವಾರಿಕೆ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗದ ಹಿನ್ನೆಲೆ ಅವರ ಹೆಸರು ಇವಿಎಂ ಯಂತ್ರಗಳಲ್ಲಿ ಮುಂದುವರೆದಿತ್ತು.

ಇಸ್ ಕ್ಷೇತ್ರದಲ್ಲಿ ಬಿಜೆಪಿಯಿಂದ ದೇಬಾಂಗ್ಶು ಪಾಂಡಾ, ಸಿಪಿಐ (ಎಂ) ಅಭ್ಯರ್ಥಿಯಾಗಿ ಸಂಭು ನಾಥ್ ಕುರ್ಮಿ ಹಾಗೂ ಕಾಂಗ್ರೆಸ್ ನಿಂದ ಅಬ್ದುರ್ ರಜಾಕ್ ಮೊಲ್ಲಾ ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದರು.

ಮರುಮ ಮತದಾನ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ಕಠಿಣ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಿಆರ್ ಪಿ ಎಫ್ ನ 35 ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಯೊಂದು ಮತಗಟ್ಟೆಯಲ್ಲೂ ಎಂಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಏಪ್ರಿಲ್ 29 ರಂದು ನಡೆದಿದ್ದ ಮೂಲ ಮತದಾನದ ವೇಳೆ ಪ್ರತಿ ಬೂತ್ ಗೆ ಕೇವಲ ನಾಲ್ವರು ಸಿಬ್ಬಂದಿ ಅಥವಾ ಅರ್ಧ ವಿಭಾಗದ ಭದ್ರತಾ ಪಡೆಯನ್ನಷ್ಟೇ ನಿಯೋಜಿಸಲಾಗಿತ್ತು ಎಂದು ತಿಳಿಸಿದರು.

ಇದರ ಜೊತೆಗೆ, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು 30 ತ್ವರಿತ ಪ್ರತಿಕ್ರಿಯೆ ತಂಡಗಳನ್ನು (QRT) ಸಜ್ಜುಗೊಳಿಸಲಾಗಿದೆ. ಹಿಂದಿನ ಮತದಾನದ ವೇಳೆ ಇವಿಎಂ ಯಂತ್ರಗಳಿಗೆ ಸುಗಂಧದ್ರವ್ಯ ಹಾಗೂ ಅಂಟಿಕೊಳ್ಳುವ ಟೇಪ್ ಅಳವಡಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದರಿಂದ ಕ್ಷೇತ್ರದಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮರು ಮತದಾನವನ್ನು ಅತ್ಯಂತ ಕಟ್ಟುನಿಟ್ಟಿನ ಭದ್ರತೆಯೊಂದಿಗೆ ನಡೆಸುತ್ತಿದೆ.

ಚುನಾವಣಾ ಆಯೋಗದ ಮಾಜಿ ವಿಶೇಷ ವೀಕ್ಷಕ ಸುಬ್ರತಾ ಗುಪ್ತಾ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಂತರ ಕನಿಷ್ಠ 60 ಮತಗಟ್ಟೆಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಾಕ್ಷಿಗಳು ಪತ್ತೆ ಯಾಗಿದ್ದವು.

ಇವಿಎಂ ದುರ್ಬಳಕೆ ಆರೋಪದ ಜೊತೆಗೆ, ಹಲವಾರು ಮತಗಟ್ಟೆಗಳಲ್ಲಿ ಅಳವಡಿಸಲಾಗಿದ್ದ ವೆಬ್ ಕ್ಯಾಮೆರಾಗಳಿಂದ ಸೆರೆಹಿಡಿಯಲಾದ ದೃಶ್ಯಗಳನ್ನು ತಿರುಚುವ ಪ್ರಯತ್ನಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದರು.

Also Read: ಮೆಲೋಡಿ ಕ್ಷಣ: ಇಟಲಿ ಪ್ರಧಾನಿ ಮೆಲೋನಿಗೆ ಚಾಕೊಲೇಟ್ ಗಿಫ್ಟ್ ನೀಡಿದ ಪ್ರಧಾನಿ ಮೋದಿ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online