Belagavi news:
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ರಕ್ತಹೀನತೆ ಪ್ರಕರಣಗಳು ಹೆಚ್ಚಾಗಿರುವುದು ಪೋಷಕರಲ್ಲಿ ಆತಂಕವನ್ನು ಹುಟ್ಟಿಸಿದೆ. ರಕ್ತದ ಕೊರತೆ ಎಂದು ಕರೆಯಲಾಗುವ ಈ ಸಮಸ್ಯೆ ಕೇವಲ ದೌರ್ಬಲ್ಯ ಕ್ಕೆ ಸೀಮಿತವಾಗದೆ, ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಮೇಲು ಗಂಭೀರ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಎಚ್ಚರಿಸುತ್ತಾರೆ.
ಐರನ್ ಕೊರತೆ, ಸಮತೋಲನ ಆಹಾರದ ಅಭಾವ, ಹಾಗೂ ಅಸ್ವಸ್ಥ ಜೀವನಶೈಲಿ ಇವು ಮಕ್ಕಳಲ್ಲಿ ಅನೀಮಿಯ ಹೆಚ್ಚಾಗಲು ಪ್ರಮುಖ ಕಾರಣವಾಗಿವೆ. ಇದರ ಆರಂಭಿಕ ಲಕ್ಷಣಗಳಾಗಿ ದೌರ್ಬಲ್ಯ, ಬೇಗ ಆಯಾಸ, ಬಿಳಿ ಚರ್ಮ, ತಲೆ ಸುತ್ತು ಗಮನ ಕೇಂದ್ರೀಕರಿಸಲು ಕಷ್ಟಪಡುವುದು ಮುಂತಾದವು ಕಾಣಿಸಬಹುದು. ಈ ಲಕ್ಷಣಗಳನ್ನು ಪೋಷಕರು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಾಗಿ ಮಾರ್ಪಡುವ ಸಾಧ್ಯತೆ ಹೆಚ್ಚಾಗಿವೆ.
ತಜ್ಞರ ಪ್ರಕಾರ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ, ವಿಶೇಷವಾಗಿ ಐರನ್ ಸಮೃದ್ಧ ಆಹಾರ ನೀಡುವುದು, ನಿಯಮಿತ ಆರೋಗ್ಯ ತಪಾಸಣೆ ಮಾಡಿಸುವುದು ಹಾಗೂ ಲಕ್ಷಣಗಳು ಕಾಣಿಸುತ್ತಿದ್ದಂತೆಯೇ ವೈದ್ಯರನ್ನು ಸಂಪರ್ಕಿಸುವುದು ಅನಿಮಿಯ ತಡಿಯಲು ಮುಖ್ಯ. ಮಕ್ಕಳ ಆರೋಗ್ಯದ ಬಗ್ಗೆ ಜಾಗರೂಕರಾಗಿರುವುದು ಪೋಷಕರ ಪ್ರಮುಖ ಜವಾಬ್ದಾರಿ ಎಂಬುದನ್ನು ಈ ಬೆಳವಣಿಗೆ ಮತ್ತೆ ಒತ್ತಿ ಹೇಳುತ್ತಿದೆ.
ದಿನದಿಂದ ದಿನಕ್ಕೆ ಚಿಕ್ಕ ಮಕ್ಕಳಲ್ಲಿ ಅನಿಮಿಯ ಸಮಸ್ಯೆ ಹೆಚ್ಚುತ್ತಿರುವುದು ವೈದ್ಯರನ್ನು ಕೂಡ ಆತಂಕಕೀಡು ಮಾಡಿದೆ. ರಕ್ತಹೀನತೆ ಕೇವಲ ದೌರ್ಬಲ್ಯ ಕ್ಕೆ ಮಾತ್ರ ಸೀಮಿತವಾಗದೆ, ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲು ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.
ಪದ್ಯದ ಪ್ರಕಾರ, ಮಕ್ಕಳಲ್ಲಿ ಅನಿಮಿಯಾ ದ ಪ್ರಮುಖ ಕಾರಣ ಐರನ್ ಕೊರತೆ. ಹಿಮೋಗ್ಲೋಬಿನ್ ನಿರ್ಮಾಣಕ್ಕೆ ಐರನ್ ಅಗತ್ಯವಾಗಿದ್ದು, ಆಹಾರದಲ್ಲಿ ಇದರ ಅಭಾವ ಕಂಡು ಬಂದರೆ ರಕ್ತ ಹೀನತೆ ಉಂಟಾಗತ್ತದೆ. ಜೊತೆಗೆ ವಿಟಮಿನ್ ಬಿ12 ಮತ್ತು ಪೋಲಿಕ್ ಆಸಿಡ್ ಕೊರತೆಯೂ ಈ ಸಮಸ್ಯೆಗೆ ಕಾರಣವಾಗುತ್ತದೆ. ಇತ್ತೀಚಿನ ಜೀವನ ಶೈಲಿಯಲ್ಲಿ ಮಕ್ಕಳಲ್ಲಿ ಪೌಷ್ಟಿಕ ಆಹಾರದ ಕೊರತೆ, ಹೆಚ್ಚುತ್ತಿರುವ ಜಂಕ್ ಫುಡ್ ಸೇವನೆ ಮತ್ತು ಅಸಮತೋಲನ ಆಹಾರ ಪದ್ಧತಿ ಕೂಡ ಅನೀಮಿಯ ಹೆಚ್ಚಿಸಲು ಕಾರಣವಾಗುತ್ತಿದೆ.
ಇದರ ಆರಂಭಿಕ ಲಕ್ಷಣಗಳಾಗಿ ದೌರ್ಬಲ್ಯ ಬಿಳಿ ಚರ್ಮ ತಲೆ ಸುತ್ತು, ಉಸಿರಾಟದಲ್ಲಿ ತೊಂದರೆ ಓದಿನಲ್ಲಿ ಗಮನ ಕೇಂದ್ರೀಕರಿಸಲು ಕಷ್ಟಪಡುವುದು ಮುಂತಾದವು ಕಾಣಿಸಬಹುದು. ಈ ಲಕ್ಷಣಗಳನ್ನು ಪೋಷಕರು ನಿರ್ಲಕ್ಷಿಸಿದರೆ, ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ.
ಇನ್ನಿತರ ಕಾರಣಗಳಾಗಿ ಪುನಃ ಪುನಃ ಸಂಕುಗಳು, ಅಜೀರ್ಣ ಸಮಸ್ಯೆ, ಹೊಟ್ಟೆಯಲ್ಲಿ ಹುಳುಗಳ ಇರುವುದು ಹಾಗೂ ಸಮಯಕ್ಕಿಂತ ಮೊದಲು ಜನಿಸಿದ ಶಿಶುಗಳು ಅಥವಾ ಕಡಿಮೆ ತೂಕದ ಮಕ್ಕಳಲ್ಲಿ ರಕ್ತ ಹೀನತೆ ಅಪಾಯ ಹೆಚ್ಚು ಕಂಡು ಬರುತ್ತದೆ.
ತಜ್ಞರ ಸಲಹೆಯಂತೆ, ಮಕ್ಕಳಿಗೆ ಐರನ್, ವಿಟಮಿನ್ b12 ಮತ್ತು ಪೋಲಿಕ್ ಆಸಿಡ್ ಸಮೃದ್ಧ ಆಹಾರ ನೀಡುವುದು, ನಿಯಮಿತ ಆರೋಗ್ಯ ತಪಾಸನೆ ಮಾಡಿಸುವುದು ಮತ್ತು ಲಕ್ಷಣಗಳು ಕಾಣಿಸುತ್ತಿದ್ದಂತೆ ವೈದ್ಯರನ್ನು ಸಂಪರ್ಕಿಸುವುದು ಅನಿಮಯ ತಡೆಗಟ್ಟಲು ಅತ್ಯಂತ ಒಳ್ಳೆಯ ಉಪಾಯವಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ಹೆಚ್ಚು ಜಾಗರೂಕರ ಆಗಿರಬೇಕೆಂದು ಸಂದೇಶವನ್ನು ಈ ಬೆಳವಣಿಗೆ ಸ್ಪಷ್ಟಪಡಿಸುತ್ತದೆ.
ಮಕ್ಕಳಲ್ಲಿ ರಕ್ತಹೀನ ಸಮಸ್ಯೆ ಹೆಚ್ಚು ಇರುವ ಹಿನ್ನೆಲೆ, ಇದರ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು ಅತ್ಯಂತ ಅಗತ್ಯವಾಗಿದೆ. ತಜ್ಞರ ಪ್ರಕಾರ, ರಕ್ತಹೀನತೆ ಮೊದಲ ಹಂತದಲ್ಲಿ ಸ್ವಲ್ಪಮಟ್ಟಿಗೆ ಕಾಣಿಸಿಕೊಂಡರು ಪೋಷಕರು ಗಮನಿಸಿದರೆ ಸುಲಭವಾಗಿ ತಿಳಿದುಕೊಳ್ಳಬಹುದು.
ಮಕ್ಕಳಲ್ಲಿ ಸುಸ್ತು ದೌರ್ಬಲ್ಯ ಆಟದಲ್ಲಿ ಆಸಕ್ತಿ ಕಡಿಮೆಯಾಗುವುದು ಸಾಮಾನ್ಯ ಲಕ್ಷಣಗಳಾಗಿವೆ. ಚರ್ಮ ಬಿಳಿಯಾಗುವುದು, ತುಟಿಗಳ ಬಣ್ಣ ಕಡಿಮೆಯಾಗುವುದು ಕೂಡ ಪ್ರಮುಖ ಸೂಚನೆಗಳು. ಕೆಲವೊಮ್ಮೆ ತಲೆ ಸುಸ್ತು, ಉಸಿರಾಟದ ತೊಂದರೆ, ಹೃದಯದ ಬಡಿತ ಹೆಚ್ಚಾಗುವುದು ಕಾಣಿಸಬಹುದು. ಜೊತೆಗೆ ಸಿಡಿಚಿಡಿ ಸ್ವಭಾವ, ಭಕ್ಷ್ಯಾ ಸಕ್ತಿ ಕಡಿಮೆಯಾಗುವುದು ಹಾಗೂ ಓದಿನಲ್ಲಿ ಗಮನ ಕೇಂದ್ರೀಕರಿಸಲು ಕಷ್ಟಪಡುವುದು ಕೂಡ ಅನಿಮಿಯಾ ಪ್ರಮುಖ ಲಕ್ಷಣವಾಗಿದೆ.
ಈ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಸಮಸ್ಯೆ ಗಂಭೀರವಾಗುವ ಸಾಧ್ಯತೆ ಇರುವುದರಿಂದ ತಕ್ಷಣ ವೈದ್ಯರ ಸಲಹೆ ಪಡೆಯುವುದು ಅಗತ್ಯ.
ತಡೆಗಟ್ಟುವಿಕೆ ಬಂದರೆ, ಮಕ್ಕಳಿಗೆ ಸಮತೋಲನ ಆಹಾರ ನೀಡುವುದು ಬಹಳ ಮುಖ್ಯ. ಹಸಿರು ತರಕಾರಿಗಳು, ಬೆಳೆಕಾಳುಗಳು, ಹಣ್ಣುಗಳು ಹಾಗೂ ಐರನ್ ಸಮೃದ್ಧ ಆಹಾರಗಳನ್ನು ನಿಯಮಿತವಾಗಿ ನೀಡಬೇಕು. ಜೊತೆಗೆ ವಿಟಮಿನ್ ಸಿ ಇರುವ ಆಹಾರಗಳನ್ನು ಐರನ್ ಶೋಷಣೆಗೆ ಸಹಕಾರಿಯಾಗುತ್ತವೆ.
ಇದರ ಜೊತೆಗೆ ಸ್ವಚ್ಛತೆ ಕಾಪಾಡುವುದು, ಹೊಟ್ಟೆ ಹುಳು ಸಮಸ್ಯೆ ತಡೆಗಟ್ಟುವುದು ಹಾಗೂ ನಿಯಮಿತ ಆರೋಗ್ಯ ತಪಾಸಣೆ ಮಾಡಿಸುವುದು ಮುಖ್ಯ. ಸರಿಯಾದ ಆಹಾರ ಮತ್ತು ಆರೈಕೆಯಿಂದ ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆಯನ್ನು ನಿಯಂತ್ರಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.
Also Read:
ಡಿಕೆ ಶಿವಕುಮಾರ್ ತಾತನನಾದರು : ರಾಜಕೀಯದಲ್ಲಿ ಹರ್ಷದ ಕ್ಷಣ