Belagavi news:
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಐಶ್ವರ್ಯ ಹೆಗಡೆ ಹೆಣ್ಣು ಮಗುವಿನ ಜನ್ಮ ನೀಡುತ್ತಿದ್ದಂತೆ, ಡಿಕೆಶಿ ಆಸ್ಪತ್ರೆಗೆ ದಾವಿಸಿ ಮೊಮ್ಮಗಳನ್ನು ಮುದ್ದಾಡಿ, ಮಗಳ ಆರೋಗ್ಯ ವಿಚಾರಿಸಿದರು. ಇದೇ ದಿನ ಲೇಬರ್ ಡೇ ಎಸ್ ಎಂ ಕೃಷ್ಣ ಜನ್ಮದಿನ ಹಾಗೂ ಶುಭ ಪೂರ್ಣಿಮೆಯ ವಿಶೇಷವೂ ಸೇರಿ ಈ ಕ್ಷಣ ಇನ್ನಷ್ಟು ಸ್ಮರಣೀಯವಾಯಿತು.
ಈ ನಡುವೆ ತೇಜಸ್ವಿ ಸೂರ್ಯ ಅವರು ಎಕ್ಸ್ ನಲ್ಲಿ ಹೃತ್ಪೂರ್ವಕ ಶುಭಾಶಯ ಕೋರಿದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ಭೇದ ಮೀರಿ ವ್ಯಕ್ತವಾದ ಮಾನವೀಯತೆ ನೆಟ್ಟಿಗರ ಮೆಚ್ಚುಗೆ ಪಾತ್ರವಾಗಿದೆ.
ಸದಾ ರಾಜಕೀಯವಾಗಿ ಮುಖಾಮುಖಿಯಾಗುವ ಡಿಕೆ ಶಿವಕುಮಾರ್ ಮತ್ತು ತೇಜಸ್ವಿ ಸೂರ್ಯ ನಡುವೆ ಮತ್ತೆ ಮಾನವೀಯ ಕ್ಷಣವೂ ಗಮನ ಸೆಳೆದಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿ ಇಬ್ಬರು ಒಂದೇ ವೇದಿಕೆಯಲ್ಲಿ ಭಾಗಿಯಾಗಿದ್ದ ವೇಳೆ, ತಾನು ತಾತ ಆಗುತ್ತಿರುವ ಸಂತಸದ ವಿಚಾರವನ್ನು ಡಿಕೆಶಿ ಹಂಚಿಕೊಂಡಿದ್ದರು.
ಈ ಸಂದರ್ಭವನ್ನು ಉಲ್ಲೇಖಿಸಿ ತೇಜಸ್ವಿ ಸೂರ್ಯ ಎಕ್ಸ್ ನಲ್ಲಿ ಮಾಡಿದ ಪೋಸ್ಟ್ ಫೈರಲ್ ಆಗಿದ್ದು, ರಾಜಕೀಯ ಭೇದಗಳ ನಡುವೆಯೂ ವೈಯಕ್ತಿಕ ಸಂತಸ ಹಂಚಿಕೊಂಡ ಕ್ಷಣ ನೆಟ್ಟಿಗರ ಮೆಚ್ಚುಗೆ ಪಾತ್ರವಾಗಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೀವನದಲ್ಲಿ ಮರೆಯಲಾಗದ ಸಂತಸದ ಕ್ಷಣ ಒಂದು ಸಾರ್ವಜನಿಕ ವಲಯದಲ್ಲೂ ಚರ್ಚೆಗೂ ಕಾರಣವಾಗಿದೆ. ಪುತ್ರಿ ಐಶ್ವರ್ಯ ಅವರಿಗೆ ಹೆಣ್ಣು ಮಗು ಜನಿಸಿರುವ ಹಿನ್ನೆಲೆಯಲ್ಲಿ ಡಿಕೆಶಿ ತಾತನಾಗಿದ್ದು, ಈ ವಿಚಾರವನ್ನು ತೇಜಸ್ವಿ ಸೂರ್ಯ ತಮ್ಮ ಎಕ್ಸ್ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.
ಬೆಂಗಳೂರು ದಕ್ಷಿಣ ಭಾಗದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಇಬ್ಬರು ನಾಯಕರು ಒಂದೇ ವೇದಿಕೆಯಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮಗಳ ನಡುವೆ ಕಾರಿನಲ್ಲಿ ಜೊತೆಯಾಗಿ ಪ್ರಯಾಣಿಸುತ್ತಿದ್ದ ವೇಳೆ ಡಿಕೆಶಿಗೆ ಮನೆಯಿಂದ ಪದೇ ಪದೇ ಕರೆಗಳು ಬರುತ್ತಿದ್ದವು. ವಿಚಾರಿಸ್ಸಿದಾಗ " ಇಂದು ನನ್ನ ಮಗಳ ಡೆಲಿವರಿ , ನಾನು ತಾತ ಆಗುತ್ತಿದ್ದೇನೆ" ಎಂದು ಅವರು ಸಂತಸ ಹಂಚಿಕೊಂಡ ಕ್ಷಣವನ್ನು ತೇಜಸ್ವಿ ಸೂರ್ಯ ತಮ್ಮ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.
ಒಂದು ಕಡೆ ಕುಟುಂಬದ ಅತ್ಯಂತ ಸಂತೋಷದ ಕ್ಷಣ, ಮತ್ತೊಂದು ಕಡೆ ಸಾರ್ವಜನಿಕ ಜವಾಬ್ದಾರಿ ಈ ಎರಡರ ಮಧ್ಯೆಯು ಸಮತೋಲನ ಸಾಧಿಸಿದ ಡಿಕೆಶಿ ಫ್ಲೈ ಓವರ್ ಉದ್ಘಾಟನೆ, ಸ್ಕೈವಾಕ್ ಶಂಕು ಸ್ಥಾಪನೆ ಸೇರಿದಂತೆ ನಿಗದಿತ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು ಎಂಬುದನ್ನು ಸಂಸದರು ವಿಶೇಷವಾಗಿ ಉಲ್ಲೇಖಿಸಿದ್ದಾರೆ." ದಿ ಫಸ್ಟ್ ಕೇಜ್ವಲಿಟಿ ಆಫ್ ಪಬ್ಲಿಕ್ ಲೈಫ್ ಈಸ್ ಪರ್ಸನಲ್ ಲೈಫ್ " ಎಂಬ ಮಾತು ಇಂತಹ ಸಂದರ್ಭಗಳಲ್ಲಿ ಎಷ್ಟು ಅರ್ಥಪೂರ್ಣವಾಗಿರುತ್ತದೆ ಎಂಬುದನ್ನು ಅವರು ಗಮನಿಸಿದ್ದಾರೆ.
ರಾಜಕೀಯವಾಗಿ ಅನೇಕ ಬಾರಿ ವಿರುದ್ಧ ಧ್ರುವಗಳಲ್ಲಿ ಕಾಣಿಸಿಕೊಳ್ಳುವ ಈ ಇಬ್ಬರು ನಾಯಕರ ನಡುವೆ ಮಾನವೀಯತೆ ತೋರಿದ ಈ ಘಟನೆ ನೆಟ್ಟಿಗರ ಗಮನ ಸೆಳೆಯುತ್ತದೆ. ರಾಜಕೀಯ ಭೇದಗಳನ್ನು ಮೀರಿ ವೈಯಕ್ತಿಕ ಸಂತಸ ಹಂಚಿಕೊಂಡ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ತಾತನದ ಡಿಕೆ ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿರುವ ತೇಜಸ್ವಿ ಸೂರ್ಯ ಅವರ ಪುತ್ರಿ ಐಶ್ವರ್ಯ ಮಗು ಮತ್ತು ಕುಟುಂಬಕ್ಕೆ ಆರೋಗ್ಯ ಆಯುಷ್ಯ ಹಾಗೂ ಸಂತೋಷ ಕೋರಿದ್ದಾರೆ.
Also Read:
LPG Price Hike: 70% ಏರಿಕೆ - ಬೆಂಗಳೂರಿನಲ್ಲಿ ಹೋಟೆಲ್ ಊಟ ಬೆಲೆ ಗಗನಕ್ಕೇರಿತು!