<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

LPG Price Hike: 70% ಏರಿಕೆ - ಬೆಂಗಳೂರಿನಲ್ಲಿ ಹೋಟೆಲ್ ಊಟ ಬೆಲೆ ಗಗನಕ್ಕೇರಿತು!

LPG Price Hike: 70% ಏರಿಕೆ - ಬೆಂಗಳೂರಿನಲ್ಲಿ ಹೋಟೆಲ್ ಊಟ ಬೆಲೆ ಗಗನಕ್ಕೇರಿತು!
Summary: The cost of living in Bengaluru city has further increased as LPG gas prices have increased by 70% in the last two months. The effect of the increase in cooking gas prices has directly affected hotels, restaurants and small businesses. As a result, food prices are also likely to increase. As the daily expenses of the common man increase, an additional burden is falling on the consumers.

belagavi news:

ಗ್ಯಾಸ್ ಪೂರೈಕೆ ಕೊರತೆ ಹಾಗೂ ನಿರಂತರವಾಗಿ ಹೆಚ್ಚುತ್ತಿರುವ ವೆಚ್ಚಗಳ ಹಿನ್ನೆಲೆಯಲ್ಲಿ ಹೋಟೆಲ್ ಗಳು ಈಗಾಗಲೇ ಏಪ್ರಿಲ್ ತಿಂಗಳಲ್ಲಿ ತಮ್ಮ ಮೆನು ದರಗಳನ್ನು ಹೆಚ್ಚಿಸಿವೆ. ಇದೀಗ ಅಡುಗೆ ಅನಿಲದ ಬೆಲೆಯಲ್ಲಿ ₹993 ರಷ್ಟು ಏರಿಕೆ ಕಂಡಿರುವುದು ಗ್ರಾಹಕರಿಗೆ ದೊಡ್ಡ ಹೊಡೆತವಾಗಿದೆ. ಇದರಿಂದ ಹೋಟೆಲ್ ಉದ್ಯಮ ಹಾಗೂ ಸಾಮಾನ್ಯ ಗ್ರಾಹಕರಿಬ್ಬರ ಮೇಲು ಹೆಚ್ಚುವರಿ ಆರ್ಥಿಕ ಒತ್ತಡ ಉಂಟಾಗಿದೆ.

ಬೆಂಗಳೂರು: ಕಳೆದ ಎರಡು ತಿಂಗಳಗಳಲ್ಲಿ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ಗಳ ದರದಲ್ಲಿ ತೀವ್ರ ಹೆಚ್ಚಳ ಮಾಡಿರುವುದರಿಂದ ನಗರದ ಹೋಟೆಲ್ ಗಳು, ರೆಸ್ಟೋರೆಂಟ್ಗಳಲ್ಲಿನ ಊಟ ಮತ್ತು ಬೀದಿಬದಿಯ ತಿಂಡಿ ತಿನಿಸುಗಳ ಬೆಲೆಯಲ್ಲಿ ಮತ್ತೊಂದು ಸುತ್ತಿನ ಏರಿಕೆಯಾಗಲಿದೆ.

ಏಪ್ರಿಲ್ 30 ರಂದು ₹993 ರಷ್ಟು ಹೆಚ್ಚಳದ ಬಳಿಕ, ಬೆಂಗಳೂರು ನಗರದಲ್ಲಿ 19 ಕೆಜಿ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ಬೆಲೆ ಮೇ 1 ರಿಂದ ₹3,152ಕ್ಕೆ ಏರಿಕೆಯಾಗಿದೆ. ಇದು ಬೆಂಗಳೂರಿನಲ್ಲಿ ಇದುವರೆಗಿನ ಅತ್ಯಧಿಕ ದರವೆಂದು ಪರಿಗಣಿಸಲಾಗುತ್ತಿದೆ.

Sponsored

ಮಾರ್ಚ್ 1ರಂದು ₹1,844 ಇದ್ದ ಸಿಲಿಂಡರ್ ಬೆಲೆ, ಏಪ್ರಿಲ್ 1ರಂದು 2,162ಕ್ಕೆ ಏರಿತ್ತು. ಇದೀಗ ಮತ್ತೊಮ್ಮೆ ಬರಿ ಏರಿಕೆಯಾಗುವುದರಿಂದ ಕೇವಲ 60 ದಿನಗಳಲ್ಲಿ ಪ್ರತಿ ಸಿಲಿಂಡರ್ ಗೆ ₹1,308 ರಷ್ಟು ಹೆಚ್ಚುವರಿ ಪಾವತಿಸುವ ಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ನೀಡಲಾಗುತ್ತಿದ್ದ ₹150 ರಿಯಾಯಿತಿಯನ್ನು ಹಿಂಪಡೆಯಲಾಗಿದೆ.

ಇದೇ ಸಮಯದಲ್ಲಿ ಹೋಟೆಲ್ ವಲಯಕ್ಕೆ ಸಾಕಷ್ಟು ಗ್ಯಾಸ್ ಪೂರೈಕೆಗೂ ಆಗುತ್ತಿಲ್ಲ ಎಂಬ ಸಮಸ್ಯೆ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ ಪಿ ಜಿ ಲಭ್ಯತೆ ಸುಮಾರು ಶೇಕಡ 60 ಕ್ಕೆ ಇಳಿದಿದೆ ಎಂದು ವರದಿಯಾಗಿದೆ. ಇದರಿಂದ ಹೋಟೆಲ್ ಗಳು ಪರ್ಯಾಯ ಇಂಧನ ಮೂಲಗಳನ್ನು ಬಳಸುವ ಅನಿವಾರ್ಯತೆಯಲ್ಲಿವೆ. ಹಾಗೂ ಒತ್ತಡದ ನಡುವೆ ಕಾರ್ಯ ನಿರ್ವಹಿಸುತ್ತದೆ. ಕೆಲವೆಡೆ ಸಿಲಿಂಡರ್ ಗಳನ್ನು ಬ್ಲ್ಯಾಕ್ ಮಾರ್ಕೆಟ್ ನಲ್ಲಿ ₹5000 ಕ್ಕೂ ಹೆಚ್ಚು ದರಕ್ಕೆ ಖರೀದಿಸಿರುವ ಘಟನೆಗಳು ವರದಿಯಾಗಿದ್ದು ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿದೆ.

ಕರ್ನಾಟಕ ಹೋಟೆಲ್ ಗಳ ಸಂಘದ ಅಧ್ಯಕ್ಷರು ಜಿ.ಕೆ. ಶೆಟ್ಟಿ, ಸಣ್ಣ ತಿನಿಸುಗಳು, ಟೀ ಅಂಗಡಿಗಳು ಮತ್ತು ಬೀದಿಬದಿ ವ್ಯಾಪಾರಿಗಳಿಗೆ ಬೆಲೆ ಏರಿಕೆಯ ಹೆಚ್ಚು ಪರಿಣಾಮ ಬೀರಿದೆ. ಒಂದು ಕಪ್ ಕಾಫಿಯಿಂದ ಹಿಡಿದು ಅಲ್ಯೂಮಿನಿಯಂ ಮತ್ತು ಕಟ್ಲಿರಿ ಎಂತಹ ಇನ್ಫುಟ್ ವಸ್ತುಗಳವರಿಗೆ ಎಲ್ಲದರ ಮೇಲೆಯೂ ಸಿಲಿಂಡರ್ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅನೇಕ ಸಣ್ಣ ವ್ಯವಹಾರಗಳು ಸಂಕಷ್ಟಕ್ಕೆ ಸಿಲುಕೀವೆ ಎಂದು ಹೇಳಿದರು.

ಬೆಂಗಳೂರು ಹೋಟೆಲ್ ಗಳ ಸಂಘ ಅಧ್ಯಕ್ಷ ಪಿ.ಜಿ. ರಾವ್ ಅವರು ಮಾತನಾಡಿ, ರೆಸ್ಟೋರೆಂಟ್ ಗಳ ಮತ್ತು ತಿನ್ನಿಸುಗಳಲ್ಲಿನ ಎಲ್ಲಾ ಆಹಾರ ಪದಾರ್ಥಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ ಎನ್ನು ತಿಳಿಸಿದ್ದಾರೆ. ಗ್ಯಾಸ್ ಪೂರೈಕೆ ಕೊರತೆ ಹಾಗೂ ನಿರಂತರವಾಗಿ ಹೆಚ್ಚುತ್ತಿರುವ ವೆಚ್ಚಗಳ ಹಿನ್ನೆಲೆಯಲ್ಲಿ ಹೋಟೆಲ್ ಗಳು ಈಗಾಗಲೇ ಏಪ್ರಿಲ್ ತಿಂಗಳಲ್ಲಿ ಬೆಲೆಗಳನ್ನು ಹೆಚ್ಚಿಸುವೆ. ಇದೀಗ ₹993 ರಷ್ಟು ಹೆಚ್ಚಳವಾಗಿರುವುದು ಅಡುಗೆ ಅನಿಲ ಗ್ರಾಹಕರಿಗೆ ದೊಡ್ಡ ಹೊಡೆತವಾಗಿದೆ ಎಂದು ಅವರು ಹೇಳಿದ್ದಾರೆ.

Sponsored

ಆಹಾರದ ದರಗಳನ್ನು ಹೆಚ್ಚಿಸುವ ನಿರ್ಧಾರವನ್ನು ಹೊಟ್ಟೆಯಲ್ಲಿ ಉದ್ಯಮಿಗಳ ವಿವೇಚನೆಗೆ ಬಿಟ್ಟಿದ್ದೇವೆ ಎಂದು ಪಿ.ಸಿ. ರಾವ್ ತಿಳಿಸಿದ್ದಾರೆ.

ತೆರಿಗೆ ವಿಚಾರದಲ್ಲಿಯೂ ಹೊಟ್ಟೆಲ್ ಉದ್ಯಮಿಗಳ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ವಾಣಿಜ್ಯ ಎಲ್ ಪಿ ಜಿ ಗೆ 18ರಷ್ಟು ಿಎಸ್‌ಟಿ ಹಾಗೂ ಗೃಹ ಬಳಕೆಯ ಸಿಲಿಂಡರ್ ಗಳಿಗೆ ಶೇಕಡಾ 5 ರಷ್ಟು ಿಎಸ್‌ಟಿ ವಿಧಿಸಲಾಗುತ್ತಿದೆ. ಪ್ರಸ್ತುತ ನಾವು ಸುಮಾರು ₹568 ಜಿಎಸ್‌ಟಿ ಪಾವತಿಸುತ್ತಿದ್ದೇವೆ. ಇದನ್ನು ಶೇಕಡ ಇದಕ್ಕೆ ಇಳಿಸಿದರೆ ಪ್ರತಿ ಸಿಲಿಂಡರ್ ಮೇಲೆ ಸುಮಾರು ₹400 ರಷ್ಟು ಉಳಿತಾಯವಾಗಲಿದೆ ಎಂದು ಬೆಂಗಳೂರು ಹೋಟೆಲ್ಗಳ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ.

ಬೆಳೆಗಳ ನಿರಂತರವಾಗಿ ಏರುತ್ತಿರುವ ಈ ಸಂದರ್ಭದಲ್ಲಿ ಇಂತಹ ತೆರಿಗೆ ಸಿಡಿಲಿಕೆ ಗಳೇ ಪರಿಹಾರ ಮಾರ್ಗವಾಗಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಇದೇ ವೇಳೆ ಸಿಲಿಂಡರ್ ಬೆಲೆ ಏರಿಕೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಟೀಕಿಸಿದ್ದು, ಈ ಹೆಚ್ಚುವರಿ ಹೊರೆ ಅಂತಿಮವಾಗಿ ಗ್ರಾಹಕರ ಮೇಲೆ ಬೀಳುತ್ತದೆ ಎಂದು ಹೇಳುತ್ತಾರೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ವಾಣಿಜ್ಯ ಸಿಲಿಂಡರ್ ದರ ಏರಿಕೆ ಮತ್ತೊಂದು ದೊಡ್ಡ ಹೊಡೆತವಾಗಿದೆ ಎಂದು ಅವರು ತಿಳಿಸಿದ್ದಾರೆ.

ತೆರಿಗೆ ಪರಿಹಾರ ಕೋರಿ ಕೈಗಾರಿಕಾ ಸಂಸ್ಥೆಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಸಂಪರ್ಕಿಸಲು ಮುಂದಾಗಿದೆ. ಇಂಧನ ವೆಚ್ಚಗಳು ಹೆಚ್ಚುತ್ತಲೇ ಇರುವುದರಿಂದ ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ ಒಂದು ಹೊತ್ತಿನ ಊಟವು ಸಹ ಭಾರಿ ದುಬಾರಿಯಾಗುವ ಸಾಧ್ಯತೆಯಿದೆ.

Sponsored

Also Read:

Bank Holidays May 2026: 9 ದಿನ ಬ್ಯಾಂಕ್ ಬಂದ್!

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online