belagavi news :
ದೆಹಲಿ: ಮುಖ್ಯ ಕಾರ್ಯದರ್ಶಿ ನೇಮಕಾತಿ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೊಸ ರಾಜಕೀಯ ವಾಕ್ ಸಮರ ಆರಂಭವಾಗಿದೆ.ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಈ ವಿವಾದ ಮತ್ತಷ್ಟು ತೀವ್ರಗೊಂಡಿದೆ.
ಚುನಾವಣೆಗಳಲ್ಲಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಹಾಗೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೇರಳದಲ್ಲಿ ಜಯ ಸಾಧಿಸಿದ ನಂತರ,ಆಯಾ ರಾಜ್ಯಗಳಲ್ಲಿ ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿರುವ ವಿಚಾರ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಈ ಬೆಳವಣಿಗೆಯನ್ನು ಉಲ್ಲೇಖಿಸಿ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಆರೋಪ ಪ್ರತ್ಯಾರೋಪ ನಡೆಸುತ್ತಿದ್ದು,ಆಡಳಿತಾತ್ಮಕ ನೇಮಕಾತಿಯನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಟೀಕೆಗಳು ಕೇಳಿ ಬರುತ್ತಿವೆ.ಎರಡು ಪಕ್ಷಗಳ ನಡುವೆ ಈ ವಿಚಾರದಲ್ಲಿ ತೀವ್ರ ವಾಗ್ವಾದ ಮುಂದುವರೆದಿದೆ.
ಒಟ್ಟಾರೆಯಾಗಿ,ಚುನಾವಣಾ ನಿರ್ವಹಣೆ ಹಾಗೂ ನಂತರದ ಆಡಳಿತಾತ್ಮಕ ನೇಮಕಾತಿ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನಡೆಯುತ್ತಿರುವ ಈ ಜಟಾಪಟಿ ರಾಷ್ಟ್ರೀಯ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ
ತಿರುವನಂತಂಪುರ:ನೂತನವಾಗಿ ಅಧಿಕಾರಕ್ಕೆ ಬಂದಿರುವ ವಿಡಿ ಸತೀಶನ್ ನೇತೃತ್ವದ ಯುಡಿಫ್ ಸರ್ಕಾರವು,ಆಡಳಿತಾತ್ಮಕವಾಗಿ ಅತ್ಯಂತ ಮಹತ್ವದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿದೆ.ಈ ನೇಮಕಾತಿ ರಾಜ್ಯರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು,ಸರ್ಕಾರದ ನಿರ್ಧಾರವನ್ನು ಬಿಜೆಪಿ ತೀವ್ರವಾಗಿ ಪ್ರಶಿಸಿದೆ.
ಬಿಜೆಪಿ ನಾಯಕರು,ಈ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲಾಗಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದ್ದು,ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿಯವರ ನಿಲುವಿನ ಕುರಿತು ಚರ್ಚೆಗಳು ಎತ್ತಿದ್ದಾರೆ.
ಅದಕ್ಕೆ ಪ್ರತಿಕ್ರಿಸಿದ ಯುಡಿಎಫ್ ನಾಯಕರು,ಸರ್ಕಾರವು ಹಿರಿಯತೆ,ಕಾರ್ಯಕ್ಷಮತೆಯನ್ನು ಆಧಾರವಾಗಿಟ್ಟುಕೊಂಡೆ ನೇಮಕಾತಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.ಹೊಸ ಮುಖ್ಯ ಕಾರ್ಯದರ್ಶಿಯವರ ನೇಮಕ ರಾಜ್ಯದ ಆಡಳಿತ ವ್ಯವಸ್ಥೆಗೆ ವೇಗ ಮತ್ತು ಸ್ಥಿರತೆ ತರಲಿದೆ ಎಂದು ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಕೇರಳದ ಮುಖ್ಯ ಚುನಾವಣಾ ಅಧಿಕಾರಿ ರತನ್ ಯು ಕೇಳ್ಕರ್ ಅವರನ್ನು ವಿಡಿ ಸತೀಶನ್ಅವರು ಚೀಫ್ ಸೆಕ್ರೆಟರಿ ಆಗಿ ನೇಮಿಸಿದೆ.ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಅಧಿಕಾರಿಯನ್ನು,ಮುಖ್ಯ ಕಾರ್ಯದರ್ಶಿ ಹುದ್ದೆಗೆ ಆಯ್ಕೆ ಮಾಡಿದಾಗ,ಬಿಜೆಪಿ ನಿಲುವನ್ನು ರಾಹುಲ್ ಗಾಂಧಿ ಪ್ರಶಿಸಿದರು. ಈಗ,ರಾಹುಲ್ ಹೇಳಿಕೆಯನ್ನು ಅವರಿಗೆ ತಿರುಗಿಸಿ ಪ್ರಶ್ನಿಸಿದೆ.
ಕೇರಳದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದರೆ ಯುಡಿಎಫ್ ಸರಕಾರವು,ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದ ರತನ್ ಹೇಳ್ಕರ ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿದ ಬೆನ್ನಲ್ಲಿ ರಾಜಕೀಯ ವಾಗ್ವಾದ ತೀವ್ರಗೊಂಡಿದೆ.ಈ ಬೆಳವಣಿಗೆಯನ್ನು ಉಲ್ಲೇಖಿಸಿರುವ ಬಿಜೆಪಿ ನಾಯಕರು,ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ತೀಕ್ಷ್ಣ ಟೀಕಿಗಳನ್ನು ಮುಂದುವರಿಸಿದ್ದಾರೆ.
ಬಿಜೆಪಿ ನಾಯಕರು ಪಶ್ಚಿಮ ಬಂಗಾಳದ ಉದಾರಣೆಯನ್ನು ಮುಂದಿಟ್ಟಿದ್ದಾರೆ.ಅಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ,ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದ ಮನೋಜ್ ಅಗರ್ವಾಲ್ ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು.ಆಗ ಆ ನಿರ್ಧಾರವನ್ನು ರಾಹುಲ್ ಗಾಂಧಿ ತೀವ್ರವಾಗಿ ಆಕ್ಷೇಪಿಸಿದ್ದರು.
ಈಗ ಕೇರಳದಲ್ಲೂ ಅದೇ ರೀತಿಯ ನೇಮಕಾತಿ ನಡೆದಿರುವ ಹಿನ್ನೆಲೆಯಲ್ಲಿ,"ಆ ಸಂದರ್ಭದಲ್ಲಿ ಮಾಡಿದ ಟೀಕೆ ಈಗಲೂ ಅನ್ವಯವಾಗುತ್ತದೆಯೇ?"ಎಂದು ಬಿಜೆಪಿ ಪ್ರಶ್ನಿಸಿದೆ."ಒಂದೇ ರೀತಿಯ ಕ್ರಮವನ್ನು ಒಂದು ರಾಜ್ಯದಲ್ಲಿ ಟೀಕಿಸಿ,ಮತ್ತೊಂದು ರಾಜ್ಯದಲ್ಲಿ ಸಮರ್ಥಿಸುವುದು ಕಾಂಗ್ರೆಸ್ ನ ದ್ವಂದ್ವ ನಿಲುವನ್ನು ತೋರಿಸುತ್ತದೆ"ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಇನ್ನಷ್ಟು ತೀವ್ರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ,"ಕೇರಳದಲ್ಲಿ ಕಾಂಗ್ರೆಸ್ ಸರ್ಕಾರ ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದ ರತನ್ ಕೇಳ್ಕರ್ ಅವರನ್ನು ಚೀಫ್ ಸೆಕ್ರೆಟರಿಯಾಗಿ ನೇಮಕ ಮಾಡಿದೆ.ರಾಹುಲ್ ಗಾಂಧಿಯವರ ಹಿಂದಿನ ತರ್ಕದ ಪ್ರಕಾರ ನೋಡಿದರೆ,ಈ ನೇಮಕಾತಿಯನ್ನು ಯುಡಿಎಫ್ ಗೆಲುವಿಗೆ ನೀಡಲಾದ ಬಹುಮಾನವೆಂದು ಪರಿಗಣಿಸಬೇಕಾಗುತ್ತದೆ"ಎಂದು ವ್ಯಂಗ್ಯವಾಡಿದೆ.
"ಜನರನ್ನು ದಾರಿ ತಪ್ಪಿಸುವ ರಾಜ್ಯ ಕಾರಣವನ್ನು ಕಾಂಗ್ರೆಸ್ ಇನ್ನೂ ಮುಂದಾದರು ಬಿಡಬೇಕು"ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಅಮಿತ್ ಮಾಳ್ವಿಯಾ ಟ್ವೀಟ್:
ಬಿಜೆಪಿಯ ಸೇಲ್ ಮುಖ್ಯಸ್ಥ ಅಮಿತ್ ಮಾಳ್ವಿಯಾ ಈ ಬಗ್ಗೆ ಪ್ರತಿಕ್ರಿದ್ದಾರೆ."ರಾಹುಲ್ ಗಾಂಧಿಯವರ ಆಯುಧ ಆಕ್ರೋಶ ಮತ್ತೊಮ್ಮೆ ಜಗಜ್ಜಾಹೀರಾಗಿದೆ.ಬಂಗಾಳದ ಸಿಎಂ ಸುವೆಂದು ಅಧಿಕಾರಿಯವರು,ಮನೋಜ್ ಅಗರ್ವಾಲ್ ಅವರನ್ನು ಸಿ ಎಸ್ ಹುದ್ದೆಗೆ ನೇಮಿಸಿದ್ದಾಗ,ರಾಹುಲ್ ಟೀಕಿಸಿದರು.ಸುವೆಂದು ಅಧಿಕಾರಿಯವರು ಐಪಿಎಸ್ ನಿಯಮಾವಳಿಗಳ ಪ್ರಕಾರವೇ ನಡೆದು ಕೊಂಡಿದ್ದರು"ಎಂದು ಮಾಳ್ವಿಯ ಟೀಕಿಸಿದ್ದಾರೆ.ಮಮತಾ ಬ್ಯಾನರ್ಜಿ ರೀತಿಯಲ್ಲಿ ಹತ್ತಾರು ಅರ ಐಪಿಎಸ್ ಅಧಿಕಾರಿಗಳನ್ನು ಬಿಟ್ಟು,ತಮಗೆ ಬೇಕಾದವರನ್ನು ಸುವೆಂದು ಅಧಿಕಾರಿ ನೇಮಿಸಿಲ್ಲ ಎಂದು ಮಾಳ್ವಿಯ,ರಾಹುಲ್ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇರಳದಲ್ಲಿ ಮುಖ್ಯ ಕಾರ್ಯದರ್ಶಿ ನೇಮಕಾತಿ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಜಟಾಪಟಿ ತೀವ್ರಗೊಂಡಿದೆ.ರತನ್ ಕೇಳ್ಕರ್ ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿರುವ ಯುಡಿಎಫ್ ಸರ್ಕಾರದ ನಿರ್ಧಾರವನ್ನು ಬಿಜೆಪಿ ಪ್ರಶ್ನಿಸಿದ್ದು,ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ದ್ವಂದ್ವ ನೀತಿಯ ಆರೋಪ ಮಾಡಿದೆ.
"ಕೇರಳದಲ್ಲಿ ರತನ್ ಕೇಳ್ಕರ್ ಅತ್ಯಂತ ಹಿರಿಯ ಅಧಿಕಾರಿಯಲ್ಲ.ಆದರೂ ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.ಕಾನೂನು ಮತ್ತು ನಿಯಮಗಳ ಬಗ್ಗೆ ನಿರಂತರವಾಗಿ ಭಾಷಣ ಮಾಡುವ ರಾಹುಲ್ ಗಾಂಧಿ ಈಗ ಏನು ಹೇಳುತ್ತಾರೆ?ಅವರ ನೀತಿ ಪಾಠಗಳು ಈಗ ಎಲ್ಲಿ ಹೋಗಿವೆ?"ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ,ಸಿಎಂ ತುವೆಂದು ಅಧಿಕಾರಿ ಮನೋಜ್ ಅಗರ್ವಾಲ್ ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿದ ಸಂದರ್ಭವನ್ನು ಬಿಜೆಪಿ ಮತ್ತು ಪ್ರಸ್ತಾಪಿಸಿದೆ.ಆ ವೇಳೆ,ಚುನಾವಣಾ ಆಯೋಗ ಮತ್ತು ಬಿಜೆಪಿ ನಡುವೆ ಒಳಒಪ್ಪಂದ ನಡೆದಿದೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ,"ಬಂಗಾಳ ಚುನಾವಣೆಯಲ್ಲಿ ಸಹಾಯ ಮಾಡಿದ ಪ್ರತಿಫಲವೇ ಈ ನೇಮಕಾತಿ"ಎಂದು ಲೇವಡಿ ಮಾಡಿದರು.
ಈಗ ಕೇರಳದಲ್ಲಿ ಅದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ,ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ನಿನವು ಏಕೆ ಬದಲಾಗಿದೆ ಎಂದು ಬಿಜೆಪಿ ಪ್ರಶ್ನಿಸಿದೆ."ಒಂದು ರಾಜ್ಯದಲ್ಲಿ ಟೀಕೆ,ಮತ್ತೊಂದು ರಾಜ್ಯದಲ್ಲಿ ಸಮರ್ಥನೆ-ಇದೇ ಕಾಂಗ್ರೆಸ್ ನ ದ್ವಂದ್ವ ರಾಜಕಾರಣ"ಎಂದು ಬಿಜೆಪಿ ಕಿಡಿಕಾರಿದೆ.
Also Read:
ಪ್ರಧಾನಿ ಮೋದಿ ಮನವಿ : ದೇಶದ ಪ್ರವಾಸಿ ತಾಣಗಳನ್ನು ಅನ್ವೇಷಿಸಿ, ಸ್ವದೇಶಿ ಪ್ರವಾಸ ಬೆಳೆಸಿರಿ