belagavi news :
ಇಂದಿನ ಹೈಟೆಕ್ ಮತ್ತು ಡಿಜಿಟಲ್ ಯುಗದಲ್ಲಿ ಇಂಟರ್ನೆಟ್ ಇಲ್ಲದೆ ಜೀವನವನ್ನು ಊಹಿಸಿಕೊಳ್ಳುವುದೇ ಕಷ್ಟ. ಆಹಾರ ಆರ್ಡರ್ ಮಾಡುವುದರಿಂದ ಹಿಡಿದು ಬ್ಯಾಂಕಿಂಗ್, ಶಾಪಿಂಗ್, ಕ್ಯಾಬ್ ಬುಕಿಂಗ್, ಶಿಕ್ಷಣ, ಉದ್ಯೋಗ ಮತ್ತು ಸಂವಹನದವರೆಗೆ ಬಹುತೇಕ ಎಲ್ಲಾ ಕೆಲಸಗಳು ಇಂಟರ್ನೆಟ್ ಆಧಾರಿತವಾಗಿವೆ. ಸ್ಮಾರ್ಟ್ ಫೋನ್ ಮತ್ತು ಮೊಬೈಲ್ ಡೇಟಾ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಈ ಕಾಲಘಟ್ಟದಲ್ಲಿ ಒಂದು ದೇಶದಲ್ಲಿ ಮಾತ್ರ ಮೊಬೈಲ್ ಇಂಟರ್ನೆಟ್ ಸೇವೆ ಇಲ್ಲ ಎಂಬುದು ಅಚ್ಚರಿಯ ಸಂಗತಿ ಆಗಿದೆ.
ಜಗತ್ತಿನ ಬಹುತೇಕ ದೇಶಗಳು 4G, 5G ಹಾಗೂ ಅತಿ ವೇಗದ ಡಿಜಿಟಲ್ ಸಂಪರ್ಕದತ್ತ ಸಾಗುತ್ತಿರುವಾಗ, ಕೆಲವು ಕಟ್ಟುನಿಟ್ಟಿನ ಸರ್ಕಾರಿ ನಿಯಮಗಳು ಮತ್ತು ನೀತಿಗಳ ಕಾರಣದಿಂದ ಆ ದೇಶದ ಜನರಿಗೆ ಮೊಬೈಲ್ ಡೇಟಾ ಸೇವೆ ಲಭ್ಯವಿಲ್ಲ. ಅಲ್ಲಿನ ನಾಗರಿಕರು ಸೀಮಿತ ಮಟ್ಟದಲ್ಲಿ ಇಂಟರ್ನೆಟ್ ಬಳಸಬಹುದಾದರೂ, ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸಾಮಾನ್ಯ ಜನರಿಗೆ ಒದಗಿಸಲಾಗಿಲ್ಲ.
ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಈ ಯುಗದಲ್ಲೂ, ಮೊಬೈಲ್ ಇಂಟರ್ನೆಟ್ ಇಲ್ಲದೆ ಜೀವನ ಸಾಗಿಸುತ್ತಿರುವ ಈ ದೇಶವು ವಿಶ್ವದ ಗಮನ ಸೆಳೆದಿದೆ. ಡಿಜಿಟಲ್ ಕ್ರಾಂತಿಯ ನಡುವೆ ಇಂತಹ ವ್ಯವಸ್ಥೆ ಇನ್ನೂ ಅಸ್ತಿತ್ವದಲ್ಲಿರುವುದು ಅನೇಕರಿಗೆ ಆಶ್ಚರ್ಯ ಉಂಟುಮಾಡಿದೆ.
ಹಾಗಾಗಿ ಮೊಬೈಲ್ ಇಂಟರ್ನೆಟ್ ವ್ಯವಸ್ಥೆಯೇ ಇಲ್ಲದ ಆದೇಶ ಯಾವುದು? ಅಲ್ಲಿನ ಜನರು ಹೇಗೆ ಸಮೂಹನ ನಡೆಸುತ್ತಾರೆ? ಈ ನಿರ್ಧಾರದ ಹಿಂದಿನ ಕಾರಣಗಳೇನು? ಎಂಬ ಕುತೂಹಲಕಾರಿ ಮಾಹಿತಿಯನ್ನು ತಿಳಿದುಕೊಳ್ಳಲು ಮುಂದಿನ ವಿವರವನ್ನು ತಪ್ಪದೆ ಓದಿ.
ಇಂಟರ್ನೆಟ್ ವ್ಯವಸ್ಥೆ ಇಲ್ಲದ ದೇಶ ಯಾವುದು ಗೊತ್ತಾ?
ಮೊಬೈಲ್ ಇಂಟರ್ನೆಟ್ ವ್ಯವಸ್ಥೆ ಇಲ್ಲದ ಜಗತ್ತಿನ ಏಕೈಕ ದೇಶವೆಂದರೆ ಅದು ಎರಿಟ್ರಿಯಾ. ಈ ದೇಶವು ವಿಶ್ವದಲ್ಲಿ ಅತ್ಯಂತ ಕಡಿಮೆ ಸಂಪರ್ಕ ಹೊಂದಿರುವ ದೇಶವೆಂದು ಪರಿಗಣಿಸಲಾಗಿದೆ. ಪೂರ್ವ ಆಫ್ರಿಕಾದ
ಕೆಂಪು ಸಮುದ್ರದ ಬಳಿ ಇರುವ ಈ ದೇಶದಲ್ಲಿ ಮೊಬೈಲ್ ಇಂಟರ್ನೆಟ್ ವ್ಯವಸ್ಥೆ ಇಲ್ಲ. ಇಲ್ಲಿ ಇಂಟರ್ನೆಟ್ ಪ್ರದೇಶವು ತುಂಬಾ ಸೀಮಿತವಾಗಿದೆ ಮತ್ತು ಜನಸಂಖ್ಯೆಯ ಒಂದು ಸಣ್ಣ ಭಾಗ ಮಾತ್ರ ಇಂಟರ್ನೆಟ್ ಬಳಸಲು ಸಾಧ್ಯವಾಗುತ್ತಿದೆ. ಇಲ್ಲಿನ ಸರ್ಕಾರ ಇಂಟರ್ನೆಟ್ ಅನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ. ಇಂಟರ್ನೆಟ್ ಸೇವೆಗಳು ಪ್ರಾರ್ಥಮಿಕವಾಗಿ ಸರ್ಕಾರಿ ನೆಟ್ವರ್ಕ್ಗಳ ಮೂಲಕ ಮಾತ್ರ ಲಭ್ಯವಿದೆ, ಆದರೆ ಖಾಸಗಿ ಇಂಟರ್ನೆಟ್ ಸೇವೆಗಳು ಅಸ್ತಿತ್ವದಲ್ಲಿ ಇಲ್ಲ.
ಜಗತ್ತು 4G,5G ಹಾಗೂ ಅತಿ ವೇಗದ ಡಿಜಿಟಲ್ ಸಂಪರ್ಕದತ್ತ ಸಾಗುತ್ತಿರುವಾಗ, Eritea ಮಾತ್ರ ಇನ್ನೂ ಇಂಟರ್ನೆಟ್ ಪ್ರವೇಶದ ವಿಷಯದಲ್ಲಿ ಸಾಕಷ್ಟು ಹಿಂದುಳಿದಿದೆ. ಹಲವು ವರದಿಗಳ ಪ್ರಕಾರ, ದೇಶದ ದೂರ ಸಂಪರ್ಕ ವ್ಯವಸ್ಥೆಯು ಸಂಪೂರ್ಣವಾಗಿ ಸರ್ಕಾರದ ನಿಯಂತ್ರಣದಲ್ಲಿದ್ದು, ಖಾಸಗಿ ಟೆಲಿಕಾಂ ಕಂಪನಿಗಳಿಗೆ ಅವಕಾಶವಿಲ್ಲ. ಇದರ ಪರಿಣಾಮವಾಗಿ ಮೊಬೈಲ್ ಡೇಟಾ ಸೇವೆಗಳು ಅತ್ಯಂತ ಸೀಮಿತವಾಗಿದ್ದು, ಇಂಟರ್ನೆಟ್ ಬಳಕೆ ಸಾಮಾನ್ಯ ಜನರಿಗೆ ಸುಲಭವಾಗಿ ಲಭ್ಯವಾಗುವುದಿಲ್ಲ.
ದೇಶದ ಕೆಲ ಪ್ರಮುಖ ನಗರಗಳಲ್ಲಿ ಮಾತ್ರ ಇಂಟರ್ನೆಟ್ ಕೆಫೆಗಳು ಕಂಡುಬರುತ್ತವೆ. ಆದರೆ ಇಲ್ಲಿ ಸಹ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿದ್ದು, ಇಂಟರ್ನೆಟ್ ವೇಗ ಅತ್ಯಂತ ನಿದಾನವಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಸೇವೆಯ ವೆಚ್ಚವು ಹೆಚ್ಚಿನದಾಗಿರುವುದರಿಂದ, ಇಂಟರ್ನೆಟ್ ಲಭ್ಯವಿದ್ದರೂ ಅದರ ಬಳಕೆ ವ್ಯಾಪಕವಾಗಿಲ್ಲ. ಇದೇ ಕಾರಣದಿಂದ ದೇಶದ ಜನಸಂಖ್ಯೆಯ ಅಲ್ಪ ಪ್ರಮಾಣದ ಜನರಿಗೆ ಮಾತ್ರ ಆನ್ಲೈನ್ ಸಂಪರ್ಕದ ಅವಕಾಶ ಸಿಗುತ್ತಿದೆ..
ಎರಿಟ್ರಿಯದಲ್ಲಿ ಇಂಟರ್ನೆಟ್ ಪ್ರವೇಶದ ಕೊರತೆಗೆ ರಾಜಕೀಯ ವ್ಯವಸ್ಥೆ, ಆರ್ಥಿಕ ಸವಾಲುಗಳು ಮತ್ತು ಸರಕಾರದ ಕಟ್ಟುನಿಟ್ಟಿನ ನಿಯಂತ್ರಣ ಪ್ರಮುಖ ಕಾರಣಗಳೆಂದು ವಿಸ್ಲೇಜಿಸಲಾಗುತ್ತದೆ. ಇದರ ಪರಿಣಾಮ ಶಿಕ್ಷಣ, ವ್ಯವಹಾರ, ಸಂವಹನ ಹಾಗೂ ಉದ್ಯೋಗ ಆಕಾಂಕ್ಷೆಗಳ ಮೇಲು ಕಂಡುಬರುತ್ತವೆ. ಸ್ಥಳೀಯ ಉದ್ಯಮಗಳು ಜಾಗತಿಕ ಮಾರುಕಟ್ಟೆಗಳಿಗೆ ತಲುಪಲು ಕಷ್ಟಪಡುತ್ತಿದ್ದು, ಯುವ ಪ್ರತಿಭೆಗಳು ತಮ್ಮ ಕೌಶಲ್ಯವನ್ನು ವಿಶ್ವದ ಮುಂದೆ ಪ್ರದರ್ಶಿಸಲು ಸೀಮಿತ ಅವಕಾಶಗಳನ್ನು ಮಾತ್ರ ಪಡೆಯುತ್ತಿವೆ.
ಸಾಮಾಜಿಕ ಮಾಧ್ಯಮ ಮತ್ತು ಆನ್ಲೈನ್ ವೇದಿಕೆಗಳ ಪ್ರವೇಶ ಕಡಿಮೆ ಇರುವುದರಿಂದ ಜಾಗತಿಕ ಸಂಪರ್ಕವೂ ಸೀಮಿತವಾಗಿದೆ. ಡಿಜಿಟಲ್ ಜಗತ್ತು ವೇಗವಾಗಿ ಬೆಳೆಯುತ್ತಿರುವ ಈ ಸಮಯದಲ್ಲಿ, ಎರಿಟ್ರಿಯ ಇನ್ನು ಮೂಲಭೂತ ಇಂಟರ್ನೆಟ್ ಸೌಲಭ್ಯಗಳ ವಿಸ್ತರಣೆಯ ಸವಾಲುಗಳನ್ನು ಎದುರಿಸುತ್ತಿದೆ. ಇದೇ ಕಾರಣಕ್ಕೆ ಮೊಬೈಲ್ ಇಂಟರ್ನೆಟ್ ಲಭ್ಯತೆಯ ವಿಷಯದಲ್ಲಿ ಎರಿಟ್ರಿಯಾ ಜಗತ್ತಿನ ಗಮನ ಸೆಳೆಯುವ ದೇಶವಾಗಿ ಉಳಿದಿದೆ.
ಎರಿಟ್ರಿಯಾ ಅನ್ನು ಸಾಮಾನ್ಯವಾಗಿ "ಆಫ್ರಿಕಾದ ಉತ್ತರ ಕೊರಿಯಾ" ಎಂದು ಕರೆಯಲಾಗುತ್ತಿದೆ. ಈ ಹೆಸರು ದೇಶದ ರಾಜಕೀಯ ವ್ಯವಸ್ಥೆ, ಆಡಳಿತ ಶೈಲಿ ಮತ್ತು ನಾಗರಿಕ ಸ್ವತಂತ್ರಗಳ ಮೇಲಿನ ಕಟ್ಟುನಿಟ್ಟಿನ ನಿಯಮಗಳಿಂದ ಬಂದಿದೆ ಎಂದು ಹೇಳಲಾಗುತ್ತದೆ.
ಸ್ವತಂತ್ರದ ನಂತರದಿಂದ ಎರಿಟ್ರಿಯಾದಲ್ಲಿ ಬಹು ಪಕ್ಷಿಯ ಚುನಾವಣೆಯವು ನಡೆದಿಲ್ಲ ಎಂದು ಮಾಹಿತಿ ವ್ಯಾಪಕವಾಗಿ ವರದಿಯಾಗಿದೆ. ದೇಶವು ಬಲವಾದ ಕೇಂದ್ರ ಆಡಳಿತ ವ್ಯವಸ್ಥೆ ಅಡಿ ಕಾರ್ಯ ನಿರ್ವಹಿಸುತ್ತಿದ್ದು, ಜನರ ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳ ಮೇಲೆ ಕಟ್ಟುನಿಟಿನ ನಿಯಂತ್ರಣಗಳಿವೆ ಎಂದು ಹೇಳಲಾಗುತ್ತದೆ. ಇದರ ಪರಿಣಾಮವಾಗಿ ಪತ್ರಿಕಾ ಸ್ವತಂತ್ರ, ಅಭಿವ್ಯಕ್ತಿ ಸ್ವತಂತ್ರ ಮತ್ತು ಮಾಧ್ಯಮ ಸ್ವಯಕ್ತತೆ ಬಹಳ ಸೀಮಿತವಾಗಿದೆ.
ಎರಿಟ್ರಿಯಾದಲ್ಲಿ ಅಧಿಕೃತವಾಗಿ ಬಳಕೆಯಾಗುವ ಭಾಷೆಗಳ ವಿಷಯದಲ್ಲಿ ವಿವಿಧ ಮೂಲಗಳ ಪ್ರಕಾರ ಹಲವು ಸ್ಥಳೀಯ ಮತ್ತು ವಿದೇಶಿ ಭಾಷೆಗಳು ಬಳಕೆಯಲ್ಲಿವೆ. ಕುಶಿಟಿಕ್ ಹಾಗೂ ಆಪ್ರೋ-ಏಷ್ಯಾಟಿಕ್ ಭಾಷಾ ಕುಟುಂಬಗಳಿಗೆ ಸೇರಿದ ಭಾಷೆಗಳು, ಜೊತೆಗೆ ಅರೇಬಿಕ್ ಮತ್ತು ಇಂಗ್ಲಿಷ್ ಕೂಡ ಕೆಲವೊಂದು ಸಂದರ್ಭಗಳಲ್ಲಿ ಬಳಕೆಯಾಗುತ್ತದೆ ಎಂದು ವರದಿಗಳು ಹೇಳುತ್ತವೆ.
ದೇಶದಲ್ಲಿ ಕಡ್ಡಾಯ ರಾಷ್ಟ್ರೀಯ ಸೇನಾ ವ್ಯವಸ್ಥೆ ಇರುವುದರಿಂದ ನಾಗರಿಕರು ಮಿಲಿಟರಿ ಸೇವೆ ಸಲ್ಲಿಸಬೇಕಾಗುತ್ತದೆ ಎಂಬ ಮಾಹಿತಿಗಳು ಇವೆ. ಆರ್ಥಿಕ ಮತ್ತು ಹಣಕಾಸು ವ್ಯವಸ್ಥೆಯಲ್ಲೂ ನಿರ್ಬಂಧ ಗಳಿರುವುದರಿಂದ ಬ್ಯಾಂಕಿಂಗ್ ಹಾಗೂ ಎಟಿಎಂ ಸೇವೆಗಳು ಸೀಮಿತವಾಗಿವೆ ಎಂದು ಹೇಳಲಾಗುತ್ತದೆ.
ಮಾಧ್ಯಮ ವಲಯದಲ್ಲಿಯೂ ಸರ್ಕಾರದ ನಿಯಂತ್ರಣ ಬಲವಾಗಿದ್ದು, ಒಂದೇ ಸರ್ಕಾರಿ ದೂರದರ್ಶನ ಚಾನೆಲ್ ಕಾರ್ಯನಿರ್ವಹಿಸುತ್ತದೆ ಎಂಬ ವರದಿಗಳಿವೆ. ವಿದೇಶಿ ಮಾಧ್ಯಮ ಪ್ರಸಾರ ಅಥವಾ ಸ್ವತಂತ್ರ ಪತ್ರಿಕೋದ್ಯಮಕ್ಕೆ ಅವಕಾಶ ಕಡಿಮೆ ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ದೇಶವು ವಿಶ್ವ ಪತ್ರಿಕಾ ಸ್ವತಂತ್ರ ಸೂಚ್ಯಂಕದಲ್ಲಿ ಕಡಿಮೆ ಸ್ಥಾನದಲ್ಲಿದೆ ಎಂಬುದು ಹಲವು ಅಂತರರಾಷ್ಟ್ರೀಯ ವರದಿಗಳಲ್ಲಿ ಉಲ್ಲೇಖವಾಗಿದೆ.
ಒಟ್ಟಾರೆ, ರಾಜಕೀಯ ನಿಯಂತ್ರಣ, ಸೀಮಿತ ಸ್ವತಂತ್ರಗಳು ಮತ್ತು ಕಟ್ಟುನಿತಿನ ಆಡಳಿತ ವ್ಯವಸ್ಥೆಯಿಂದ Eritea ಜಗತ್ತಿನಲ್ಲಿ ವಿಶಿಷ್ಟ ಹಾಗೂ ವಿವಾದಾತ್ಮಕ ದೇಶಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
Also Read:
ಮಮತಾ ಬ್ಯಾನರ್ಜಿಗೆ ಮತ್ತೊಂದು ಸಂಕಷ್ಟ: 20 ಟಿಎಂಸಿ ಸಂಸದರು ಎನ್ಡಿಎ ಕಡೆಗೆ?