<?= $pageTitle ?>
Logo
ಮುಖಪುಟ ಓದುವುದು ಕೇಳು
Trending

Palm beach ಬದಲು White House: ಟ್ರಂಪ್ ತೆಗೆದುಕೊಂಡ ಅಚ್ಚರಿ ನಿರ್ಧಾರ ಏಕೆ?

Palm beach ಬದಲು White House: ಟ್ರಂಪ್ ತೆಗೆದುಕೊಂಡ ಅಚ್ಚರಿ ನಿರ್ಧಾರ ಏಕೆ?
Summary: Donald Trump's decision to stay at the White House instead of attending his son's wedding has caused a lot of debate in American politics and media circles. Trump, who usually attracts attention at family events, has not gone to Palm Beach this time and has remained at the White House, raising many questions.

Balagavi News:

Washington, D.C: ರಾಜಕೀಯ ಬೆಳವಣಿಗೆಗಳು ಹಾಗೂ Iran ಜೊತೆಗಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ Donald Trump ತಮ್ಮ ಮಗ Donald Trump Jr. ಅವರ ವಿವಾಹ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಈ ಕುರಿತು ಮಾತನಾಡಿದ ಟ್ರಂಪ್, Palm beach ನಲ್ಲಿ ನಡೆಯಲಿರುವ ಮದುವೆ ಕಾರ್ಯಕ್ರಮಕ್ಕೆ ತೆರಳದೇ White House ನಲ್ಲೆ ಉಳಿಯುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದ ಟ್ರಂಪ್,"ಸರ್ಕಾರಕ್ಕೆ ಸಂಬಂಧಿಸಿದ ಮಹತ್ವದ ಸಂದರ್ಭಗಳು ನಡೆಯುತ್ತಿವೆ. ಇಂತಹ ಸಮಯದಲ್ಲಿ ನಾನು ಶ್ವೇತಭವನದಲ್ಲೇ ಉಳಿಯುವುದು ಮುಖ್ಯ" ಎಂದು ಹೇಳಿದ್ದಾರೆ.

ಅಮೆರಿಕ-ಇರಾನ್ ಉದ್ವಿಗ್ನತೆ, ಜಾಗತಿಕ ಭದ್ರತಾ ಚರ್ಚೆಗಳು ಹಾಗೂ ಮಧ್ಯ ಪ್ರಾಚ್ಯದ ಬೆಳವಣಿಗೆಗಳ ನಡುವೆಯೇ ಟ್ರಂಪ್ ತೆಗೆದುಕೊಂಡಿರುವ ನಿರ್ಧಾರ ಅಮೆರಿಕ ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಕುಟುಂಬ ಸಮಾರಂಭಕ್ಕಿಂತ ರಾಷ್ಟ್ರೀಯ ಹಾಗೂ ಜಾಗತಿಕ ವಿಚಾರಗಳಿಗೆ ಆದ್ಯತೆ ನೀಡಿರುವ ಟ್ರಂಪ್ ನಡೆ ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.

Donald Trump ಅಧಿಕೃತ truth social ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು. ಮಗ Donald Trump Jr. ಅವರ ವಿವಾಹಕ್ಕೆ ಗೈರಾಗಿರುವುದರ ಹಿಂದೆ ಇರುವ ಕಾರಣವನ್ನು ವಿವರಿಸಿದ್ದಾರೆ.

"ನನ್ನ ಮಗ ಡಾನ್ ಜೂನಿಯರ್ ಮತ್ತು ಟ್ರಂಪ್ ಕುಟುಂಬದ ಹೊಸ ಸದಸ್ಯ ಆತನ ಪತ್ನಿ ಬೆಟ್ಟಿನಾ ಅವರೊಂದಿಗೆ ಇರಲು ನಾನು ತುಂಬಾ ಬಯಸಿದ್ದೆ. ಆದರೆ ಸರ್ಕಾರದ ಸಂದರ್ಭಗಳು ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ ಮೇಲಿನ ನನ್ನ ಪ್ರೀತಿ ನನಗೆ ಹಾಗೆ ಮಾಡಲು ಅವಕಾಶ ನೀಡುವುದಿಲ್ಲ," ಎಂದು ಟ್ರಂಪ್ ಬರೆದುಕೊಂಡಿದ್ದಾರೆ.

ಇದೇ ವೇಳೆ," ಈ ಮಹತ್ವದ ಅವಧಿಯಲ್ಲಿ ನಾನು Washington, D.C ಯ White House ನಲ್ಲಿ ಉಳಿಯುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಡಾನ್ ಮತ್ತು ಬೆಟ್ಟಿನಾಗೆ ಅಭಿನಂದನೆಗಳು" ಎಂದು ಅವರು ಶುಭ ಹಾರೈಸಿದ್ದಾರೆ.

Iran ಜೊತೆಗಿನ ಉದ್ವಿಗ್ನ ಪರಿಸ್ಥಿತಿ ಮತ್ತು ಜಾಗತೀಕ ರಾಜಕೀಯ ಬೆಳವಣಿಗೆಗಳ ನಡುವೆ ಟ್ರಂಪ್ ತೆಗೆದುಕೊಂಡಿರುವ ಈ ನಿರ್ಧಾರ ಇದೀಗ ಅಮೆರಿಕ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕುಟುಂಬ ಸಮಾರಂಭಕ್ಕಿಂತ ದೇಶದ ಕರ್ತವ್ಯಕ್ಕೆ ಆದ್ಯತೆ ನೀಡಿರುವ ಟ್ರಂಪ್ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Donald Trump ಮೂಲ ಈ ವಾರಾಂತ್ಯವನ್ನು ಮತ್ತು Trump National Golf Club Bedminster ಗಾಲ್ಫ್ ಕ್ಲಬ್ ನಲ್ಲಿ ಕಲಾಳೆಯಲು ನಿರ್ಧರಿಸಿದ್ದರು ಎಂದು politico ವರದಿ ಮಾಡಿದೆ.

ಇದೇ ವೇಳೆ do not Trump Jr. ಮತ್ತು ಆಂಡರ್ಸನ್ ಅವರ ವಿವಾಹವು Bahamas ನಲ್ಲಿ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮೂಖದಲ್ಲಿ ಸರಳ ಹಾಗೂ ಆತ್ಮೀಯ ಸಮಾರಂಭವಾಗಿ ನಡೆಯಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಧ್ಯ ಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆ ಟ್ರಂಪ ಆಡಳಿತದೊಳಗೂ ತೀವ್ರ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಮಂಗಳವಾರ Iran ಮೇಲೆ ಹೊಸ ದಾಳಿ ನಡೆಸುವ ಸಾಧ್ಯತೆ ಬಗ್ಗೆ ಟ್ರಂಪ್ ಚಿಂತನೆ ನಡೆಸಿದ್ದರು ಎಂದು ಪೊಲಿಟಿಕೋ ವರದಿ ಮಾಡಿದೆ. ಆದರೆ, ಮಧ್ಯ ಪ್ರಾಚ್ಯದ ಮಿತ್ರ ರಾಷ್ಟ್ರಗಳು ರಾಜತಾಂತ್ರಿಕ ಮಾತುಕತೆಗಳಿಗೆ ಅವಕಾಶ ನೀಡುವಂತೆ ಒತ್ತಾಯಿಸಿದ ಬಳಿಕ ಆ ಯೋಚನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೋಳಿಸಲಾಗಿದೆ ಎಂದು ತಿಳಿದು ಬಂದಿದೆ.

ಇದೆ ವೇಳೆ, ವಾಷಿಂಗ್ಟನ್ ನ ಕೆಲ ಅಧಿಕಾರಿಗಳು Cuba ವಿರುದ್ಧದ ಮಿಲಿಟರಿ ಕ್ರಮಗಳ ವಿಚಾರವು ಟ್ರಂಪ್ ಆಡಳಿತದ ಚರ್ಚೆಗಳಲ್ಲಿ ಪ್ರಸ್ತಾಪವಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಜಾಗತಿಕ ಭದ್ರತೆ, ಮಧ್ಯಪ್ರಾಚ್ಯ ರಾಜಕೀಯ ಮತ್ತು ಅಮೆರಿಕದ ಮುಂದಿನ ರಾಜತಾಂತ್ರಿಕ ಹೆಜ್ಜೆಗಳ ಬಗ್ಗೆ ವಿಶ್ವದ ಗಮನ ಕೇಂದ್ರೀಕೃತವಾಗಿರುವ ನಡುವೆ ಈ ಬೆಳವಣಿಗೆಗಳು ಮಹತ್ವ ಪಡೆದುಕೊಂಡಿವೆ.

Also Read:

ಮಾನವ ಸರಪಳಿ ಆಯೋಜನೆಗೆ ಗ್ರೀನ್ ಸಿಗ್ನಲ್ ಇಲ್ಲ: ಬೆಂಗಳೂರು ಪೊಲೀಸರ ಎಚ್ಚರಿಕೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online