<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

Bollywood shock hospital ಬಳಿ ಸಲ್ಮಾನ್ ಖಾನ್ ಗರಂ ಆಗಿದ್ದೇಕೆ?

Bollywood shock hospital ಬಳಿ ಸಲ್ಮಾನ್ ಖಾನ್ ಗರಂ ಆಗಿದ್ದೇಕೆ?
Summary: Bollywood actor Salman Khan's angry outburst against paparazzi near the hospital has now gone viral on social media. "Even after 60 years, I haven't forgotten that fight... will you send me to jail?" The video of Salman Khan reacting angrily has caused a lot of discussion everywhere.

Balagavi News:

ಮುಂಬೈ(ಮಹಾರಾಷ್ಟ್ರ): ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮಂಗಳವಾರ ರಾತ್ರಿ ಆಸ್ಪತ್ರೆ ಹೊರಗೆ ಪಾಪರಾಜಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ನಗರದ ಮಾಹಿಮ್ ಪ್ರದೇಶದ P.D. Hinduja hospital ಆಸ್ಪತ್ರೆಯಿಂದ ಹೊರ ಬರುತ್ತಿದ್ದ ವೇಳೆ ಛಾಯಗ್ರಾಹಕರು ಅವರನ್ನು ಸುತ್ತುವರೆದಿದ್ದರು. ತಮ್ಮ ಕಾರಿನತ್ತ ಸಾಗುತ್ತಿದ್ದ ಸಲ್ಮಾನ್ ಖಾನ್, ಪಾಪರಾಜಿ ಗಡಿಗೆ ಸರಿಯಾಗಿ ವರ್ತಿಸುವಂತೆ ಖಡಕ್ ಎಚ್ಚರಿಕೆ ನೀಡಿದರು. " ಪಾಗಲ್ ಹೋಕ್ಯಾ?" (ಹುಚ್ಚರೇ?) ಎಂದು ಕೇಳಿದ ನಟನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ.

ನಟನ ಆಕ್ರೋಶದ ಬಳಿಕ ಪಾಪರಾಜಿಗಳು ಕ್ಷಮೆಯಾಚಿಸಿದ್ದು. ವಿಡಿಯೋ ಚಿತ್ರೀಕರಣವನ್ನೂ ನಿಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಅಭಿಮಾನಿಗಳ ನಡುವೆ ಭಾರಿ ಚರ್ಚೆಗೆ ಕಾರಣವಾಗಿದ್ದು. ಕೆಲವರು ಸಲ್ಮಾನ್ ಖಾನ್ ಪರ ಮಾತನಾಡುತ್ತಿದ್ದರೆ. ಇನ್ನೂ ಕೆಲವರು ಪಾಪರಾಜಿಗಳ ವರ್ತನೆ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ.

ಮುಂಬೈ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಆಸ್ಪತ್ರೆ ಭೇಟಿ ಬಳಿಕ ಪಾಪರಾಜಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರುವ ಘಟನೆ ಇದೀಗ ಸಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ನಟ ಆಸ್ಪತ್ರೆಗೆ ಏಕೆ ಎಂದಿದ್ದರು? ಯಾರನ್ನು ಭೇಟಿ ಮಾಡಿದರು? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ನಗರದ ಮಾಹಿನ್ ಪ್ರದೇಶದ P.D. Hindu the hospital ಆಸ್ಪತ್ರೆಯಿಂದ ಹೊರ ಬರುತ್ತಿದ್ದ ವೇಳೆ ಪಾಪರಾಜುಗಳು ಅವರನ್ನು ಸುತ್ತುವರೆದಿದ್ದು. ಇದರಿಂದ ಸಲ್ಲು ಕೋಪಗೊಂಡಿದ್ದರು. ಘಟನೆ ಬಳಿಕ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸರಣಿ ಪೋಸ್ಟ್ಗಳನ್ನು ಹಂಚಿಕೊಂಡಿರುವ ನಟ, ಪಾಪರಾಜಿಗಳ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಸ್ವತಃ ತಮ್ಮ ನಾಲ್ಕು ಸೆಲ್ಫಿಗಳನ್ನು ಹಂಚಿಕೊಂಡು ಒಂದಾದ ಮೇಲೊಂದು ಪೋಸ್ಟ್ ಮಾಡಿರುವ ಸಲ್ಮಾನ್ ಖಾನ್, ನೇರವಾಗಿ ಯಾವುದೇ ವಿವರಣೆ ನೀಡದಿದ್ದರೂ, ಅವರ ಪೋಸ್ಟ್ ಗಳು ಪಾಪರಾಜಿಗಳ ವಿರುದ್ಧದ ಅಸಮಾಧಾನವನ್ನು ಸ್ಪಷ್ಟ ಪಡಿಸುತ್ತಿವೆ ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಹಾಗೂ ಸಲ್ಲು ಮಾಡಿದ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು. ಅಭಿಮಾನಿಗಳು ಮತ್ತು ನೆಟ್ಟಿಗರ ನಡುವೆ ಪರ-ವಿರೋಧ ಚರ್ಚೆಗಳು ಜೋರಾಗಿವೆ.

"ಆಸ್ಪತ್ರೆಯಲ್ಲಿ ಯಾವುದೇ ಮೀಡಿಯಾ (ಪ್ರೆಸ್) ನನ್ನ ನೋವನ್ನು ಆನಂದಿಸುವುದನ್ನು ನಾನು ನೋಡಿದರೆ... ನಾನು ಸದಾ ಬೆಂಬಲಿಸಿದ್ದ. ಮಾತನಾಡಿದ್ದ. ಅವರ ಬದುಕಿಗೆ ಸಹಾಯವಾಗುವಂತೆ ನೋಡಿಕೊಂಡಿದ್ದ ಅದೇ ಪ್ರೆಸ್... "ಎಂದು ಸಲ್ಮಾನ್ ಖಾನ್ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು. ಅಭಿಮಾನಿಗಳು ನಟನ ಬೆಂಬಲಕ್ಕೆ ನಿಂತಿದ್ದಾರೆ. ಕೆಲವರು ಪಾಪರಾಜಿಗಳ ವರ್ತನೆ ಬಗ್ಗೆ ಟೀಕೆ ಮಾಡುತ್ತಿದ್ದರೆ. ಇನ್ನೂ ಕೆಲವರು ಸೆಲೆಬ್ರಿಟಿಗಳ ಖಾಸಗಿ ಬದುಕಿಗೆ ಗೌರವ ಕೊಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿಗೆ ಮುಂಬೈನ P.D. Hinduja hospital ಆಸ್ಪತ್ರೆ ಬಳಿ ನಡೆದ ಘಟನೆಯ ನಂತರ ಸಲ್ಮಾನ್ ಖಾನ್ ಹಂಚಿಕೊಂಡ ಸರಣಿ ಪೋಸ್ಟ್ ಗಳು ಬಾಲಿವುಡ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಮುಂಬೈ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದಾರೆ. ಆಸ್ಪತ್ರೆ ಬಳಿ ಪಾಪರಾಜಿಗಳೊಂದಿಗೆ ನಡೆದ ಘಟನೆ ಬಳಿಕ ನಟ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಸರಣಿ ಪೋಸ್ಟ್ ಗಳು ವೈರಲ್ ಆಗಿದ್ದು. ಅವರ ಕೋಪಭರಿತ ಮಾತುಗಳು ಗಮನ ಸೆಳೆದಿವೆ. ಮೊರನೇ ಪೋಸ್ಟ್ ನಲ್ಲಿ ಸಲ್ಮಾನ್ ಖಾನ್,"ಐಸೆ ಮೇ ಸೌ ಜಲಾದೂಂಗಾಗಾ... ಮುಂದಿನ ಬಾರಿ ನನ್ನೊಂದಿಗೆ ಟ್ರೈ ಮಾಡಿ. ನಿಮ್ಮವರಲ್ಲಿ ಯಾರಾದರೂ ಆಸ್ಪತ್ರೆಗೆ ಬಂದಾಗ ನಾನು ಹೀಗೆ ಪ್ರತಿಕ್ರಿಯಿಸಬೇಕಾ?" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ, "ನನಗೆ ಈಗ 60 ವರ್ಷ ಆಗಿದೆ, ಆದರೆ ಹೋರಾಡುವುದನ್ನು ಮರೆತಿಲ್ಲ... ಇದನ್ನು ನೆನಪಿಟ್ಟುಕೊಳ್ಳಿ. ಜೈಲಿಗೆ ಹಾಕ್ತೀರಾ? ಹಾ ಹಾ... "ಎಂದು ಪೋಸ್ಟ್ ಮುಗಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಲ್ಮಾನ್ ಖಾನ್ ಹೆಂಚಿಕೊಂಡ ಪೋಸ್ಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರತೆಗೆ ಕಾರಣವಾಗಿವೆ. ವಿಶೇಷವಾಗಿ " ಒಂಟಿತನ" ಕುರಿತ ಪೋಸ್ಟ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಇದರಿಂದ ನಟ ಮಾನಸಿಕವಾಗಿ ಬೆಸರಗೊಂಡಿದ್ದಾರೆ ಎಂಬ ಊಹಾಪೋಹಗಳು ಹರಡಿದ್ದವು.

ಆದರೆ ಬಡಿಕ ಸ್ವತಃ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿ, ಆ ಪೋಸ್ಟ್ ಅಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟದಲ್ಲ ಎಂದು ಸ್ಪಷ್ಟಪಡಿಸಿದ್ದರು. " Alone ಮತ್ತು lonely ಎರಡು ಬೇರೆ ವಿಚಾರಗಳು. ನೀವು ನಿಮ್ಮಂತೀರಲು ಕಲಿಯಬೇಕು" ಎಂಬ ಸಂದೇಶದೊಂದಿಗೆ ಅವರು ಪೋಸ್ಟ್ ಹಂಚಿಕೊಂಡಿದ್ದರು.

ಇದೀಗ ಆಸ್ಪತ್ರೆ ಘಟನೆ ಮತ್ತು ಇನ್ಸ್ಟಾಗ್ರಾಂ ಪೋಸ್ಟ್ ಗಳ ಬಳಿಕ ಸಲ್ಮಾನ್ ಖಾನ್ ಮತ್ತೆ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ. ಅಭಿಮಾನಿಗಳು ನಟನ ಬಂಬಲಕ್ಕೆ ನಿಂತಿದ್ದು. ಪಾಪರಾಜಿಗಳ ವರ್ತನೆ ವಿರುದ್ಧವು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬೈ ಒಂಟಿತನ ಕುರಿತ ಪೋಸ್ಟ್ ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಇದೀಗ ಸ್ವತಃ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಪೋಸ್ಟ ವೈಯಕ್ತಿಕ ಬೇಸರ ಅಥವಾ ಏಕಾಂಗಿ ಜೀವನಕ್ಕೆ ಸಂಬಂಧಪಟ್ಟದ್ದಲ್ಲ ಎಂದು ಹೇಳಿ ಎಲ್ಲ ಊಹಾಪೂಹಗಳಿಗೆ ತೆರೆ ಎಳಿದಿದ್ದಾರೆ.

"ಅರೆ ಯಾರ್...ನಾನು ನನ್ನ ಬಗ್ಗೆ ಮಾತನಾಡಿದ್ದಲ್ಲ. ನನಗೆ ಇಷ್ಟೊಂದು ದೊಡ್ಡ ಕುಟುಂಬ ಮತ್ತು ಸ್ನೇಹಿತರು ಇರುವಾಗ ನಾನು ಹೇಗೆ ಒಂಟಿಯಾಗಿರಲು ಸಾಧ್ಯ? ನಿಮ್ಮೆಲ್ಲರ ಹಾರೈಕೆ ಮತ್ತು ಆಶೀರ್ವಾದ ನನ್ನ ಜೊತೆ ಇರುವಾಗ ನಾನು ಒಂಟಿಯಾಗುವುದೇ ಸಾಧ್ಯವಿಲ್ಲ" ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಇನ್ನೂ ಮುಂದೆ ಮಾತನಾಡಿದ ಅವರು, " ಕೆಲವೊಮ್ಮೆ ಜನರ ಸುತ್ತಲೂ ಇರುವುದು ಬೇಸರ ತರಿಸುತ್ತದೆ. ಹಾಗಾಗಿ, ನಾನು ಮತ್ತು ನನ್ನ ಸಮಯ ಅಷ್ಟೇ. ಈ ಬಾರಿ ಫೋಟೋವನ್ನು 'ಬ್ರೇಕಿಂಗ್ ನ್ಯೂಸ್' ಮಾಡ್ಲಿಲ್ಲ... ಕ್ಯಾ ಹುವಾ ಬೀಟಾ ? ಎಂದು ಅಮ್ಮ ಕೇಳುತ್ತಿದ್ದಾಳೆ. ಚಿಲ್ ಮಾರೋಯಾರ್! ಎಂದು ಹಾಸ್ಯಭರಿತವಾಗಿ ಪ್ರತಿಕ್ರೀಸಿದ್ದಾರೆ.

Also Read:

ಮೆಲೋಡಿ ಕ್ಷಣ: ಇಟಲಿ ಪ್ರಧಾನಿ ಮೆಲೋನಿಗೆ ಚಾಕೊಲೇಟ್ ಗಿಫ್ಟ್ ನೀಡಿದ ಪ್ರಧಾನಿ ಮೋದಿ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online