<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ಅಮೀರ್ ಮದುವೆಯಲ್ಲಿ ಶಾರುಖ್, ಸಲ್ಮಾನ್ ಕಾಣಿಸಿದಿದ್ದೇಕೆ? ವೈರಲ್ ಆಯ್ತು ಕಾರಣ

ಅಮೀರ್ ಮದುವೆಯಲ್ಲಿ ಶಾರುಖ್, ಸಲ್ಮಾನ್ ಕಾಣಿಸಿದಿದ್ದೇಕೆ? ವೈರಲ್ ಆಯ್ತು ಕಾರಣ
Summary: The absence of Shah Rukh Khan and Salman Khan from Aamir Khan's wedding ceremony has created a lot of curiosity among fans. Despite the friendship of the three Khans of Bollywood, why were the two superstars absent? Find out the reason behind this viral post here.

Belagavi News:

61ರ ವಯಸ್ಸಿನಲ್ಲಿ 3 ನೇ ಮದುವೆಯಾದ ಅಮೀರ್ ಖಾನ್

ಮಗುವನ್ನು ಸೋಶಿಯಲ್ ಮೀಡಿಯಾದಲ್ಲಿ ವೆಡ್ಡಿಂಗ್ ಫೋಟೋಸ್ ವೈರಲ್

ಮಾಜಿ ಪತ್ನಿಯರು ಮತ್ತು ಸ್ಟಾರ್ ನಟರು ದೂರ ಉಳಿದಿದ್ದೇಕೆ?

ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ ಎನ್ನುವ ಮಾತನ್ನು ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. 61ನೇ ವಯಸ್ಸಿನಲ್ಲಿ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಮೂರನೇ ಬಾರಿಗೆ ವಿವಾಹವಾಗುವ ಮೂಲಕ ಅವರು ಜೀವನದ ಹೊಸ ಅಧ್ಯಾಯಕ್ಕೆ ಕಾಣಿಟ್ಟಿದ್ದಾರೆ. ಅಮೀರ್ - ಗೌರಿ ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು. ಅಭಿಮಾನಿಗಳ ಗಮನ ಸೇಳೆಯುತ್ತಿವೆ.

ಆದರೆ ಈ ಮದುವೆಯಲ್ಲಿ ಬಾಲಿವುಡ್ ನ ಇಬ್ಬರು ಸೂಪರ್ ಸ್ಟಾರ್ ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಕಾಣಿಸದಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಮೀರ್ ಅವರ ಆಪ್ತ ಸ್ನೇಹಿತರಾಗಿರುವ ಇಬ್ಬರೂ ವಿಶೇಷ ಸಮಾರಂಭದಲ್ಲಿ ಗೈರಾಗಿದ್ದೇಕೆ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮದುವೆಗೆ ಮುನ್ನ ಆಮಿರ್ ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್, ಗೌರಿ ಸ್ಪ್ರಾಟ್ ಅವರೊಂದಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಮೂವರು ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿರುವ ದೃಶ್ಯಗಳು ವೈರಲ್ ಆಗಿದ್ದವು. ಇದರಿಂದ ಅಮೀರ್ ಅವರ ಮೂರನೇ ಮದುವೆಯಲ್ಲೂ ರೀನಾ ಮತ್ತು ಕಿರಣ್ ಭಾಗವಹಿಸುವರೆಂದು ಹಲವರು ನಿರೀಕ್ಷಿಸಿದ್ದರು. ಆದರೆ ಮದುವೆ ಸಮಾರಂಭದಲ್ಲಿ ಇಬ್ಬರು ಕಾಣಿಸದಿರುವುದು ಕುತೂಹಲಕ್ಕೆ ಕಾರಣವಾಯಿತು.

ಇನ್ನೊಂದೆಡೆ, ಅಮೀರ್ ಅವರ ಮಕ್ಕಳಾದ ಜುನೈದ್ ಖಾನ್, ಐರಾ ಖಾನ್ ಹಾಗೂ ಆಜಾದ್ ರಾವ್ ಖಾನ್ ಮದುವೆ ಸಮಾರಂಭದಲ್ಲಿ ಭಾಗವಹಿಸಿ ನೂತನ ದಂಪತಿಗೆ ಶುಭ ಹಾರೈಸಿದರು. ಕುಟುಂಬದ ಸದಸ್ಯರು ಹಾಗೂ ಚಿತ್ರರಂಗದ ಕೆಲ ಆಪ್ತರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಬಗ್ಗೆ ಮಾತನಾಡುವುದಾದರೆ, ಅಮೀರ್ ಮತ್ತು ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಮೊದಲಿಗೆ ಪರಿಚಯಿಸಿದ್ದೇ ಈ ಇಬ್ಬರು ಸ್ನೇಹಿತರಿಗೆ ಎನ್ನಲಾಗುತ್ತದೆ. ಆದರೂ ಮದುವೆಯ ದಿನ ಇಬ್ಬರೂ ಗೈರಾಗಿರುವುದು ಅಭಿಮಾನಿಗಳಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ತಮ್ಮ ಸಿನಿಮಾ ಶೂಟಿಂಗ್ ಹಾಗೂ ವೃತ್ತಿಪರ ಕೆಲಸಗಳಲ್ಲಿ ನಿರತರಾಗಿದ್ದ ಕಾರಣ ಮದುವೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಮೂವರು ನಟರ ತಂಡದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ.

ಅಮೀರ್ ಖಾನ್ ಅವರ ಮೂರನೇ ಮದುವೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು. ಮದುವೆ ಸಮಾರಂಭಕ್ಕಿಂತಲೂ ಶಾರುಖ್-ಸಲ್ಮಾನ್ ಗೈರು ಹಾಜರಾತಿಯೇ ಇದೀಗ ಹೆಚ್ಚು ಸುದ್ದಿಯಾಗುತ್ತಿದೆ.

ಅಮೀರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಸುಮಾರು 20ವರ್ಷಗಳಿಗೂ ಹೆಚ್ಚು ಕಾಲ ಪರಸ್ಪರ ಪರಿಚಿತರಾಗಿದ್ದರು. ಆದರೆ 2024 ರಲ್ಲಿ ಬೆಂಗಳೂರಿನಲ್ಲಿ ನಡೆದ ಮರುಭೇಟಿಯೇ ಅವರ ಜೀವನದಲ್ಲಿ ಹೊಸ ತಿರುವು ನೀಡಿತು. ಆ ಬೇಟಿ ಸ್ನೇಹವಾಗಿ ಆರಂಭವಾಗಿ, ಬಳಿಕ ಪ್ರೀತಿಗೆ ತಿರುಗಿತು. ಸಮಯ ಕಳೆದಂತೆ ಇಬ್ಬರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದ್ದು, ನಂತರ ಮುಂಬೈನಲ್ಲಿ ಲಿವ್-ಇನ್ ಸಂಬಂಧದಲ್ಲಿ ವಾಸಿಸಲು ಆರಂಭಿಸಿದ್ದರು.

ಗೌರಿ ಸ್ಪ್ರಾಟ್ ಗೆ ಇದು ಎರಡನೇ ಮದುವೆಯಾಗಿದ್ದು. ಮೊದಲ ಪತಿಯಿಂದ ಅವರಿಗೆ ಒಬ್ಬ ಮಗನಿದ್ದಾನೆ. ಮತ್ತೊಂದೆಡೆ, ಅಮೀರ್ ಖಾನ್ ಈಗಾಗಲೇ ಎರಡು ಮದುವೆಗಳನ್ನು ಮಾಡಿಕೊಂಡಿದ್ದು. ರೀನಾ ದತ್ತಾ ಹಾಗೂ ಕಿರಣ್ ರಾವ್ ಅವರೊಂದಿಗೆ ವಿಚ್ಛೇದನ ಪಡೆದಿದ್ದರು. ಆದರೂ ಇಬ್ಬರು ಮಾಜಿ ಪತ್ನಿಯರೊಂದಿಗೆ ಆಮಿರ ಮತ್ತೊಮ್ಮೆ ಸ್ನೇಹ ಸಂಬಂಧವನ್ನು ಉಳಿಸಿಕೊಂಡಿರುವುದು ವಿಶೇಷ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online