<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಕಳ್ಳತನದ ಅನುಮಾನಕ್ಕೆ ಬಲಿಯಾದ ಯುವಕ: ಗುಂಪು ಹಲ್ಲೆಯಲ್ಲಿ ಸಾವಿಗೆ 5 ಮಂದಿ ಅರೆಸ್ಟ್

ಕಳ್ಳತನದ ಅನುಮಾನಕ್ಕೆ ಬಲಿಯಾದ ಯುವಕ: ಗುಂಪು ಹಲ್ಲೆಯಲ್ಲಿ ಸಾವಿಗೆ 5 ಮಂದಿ ಅರೆಸ್ಟ್
Summary: A gang attack on a youth suspected of theft has ended in tragedy. The youth died after being tied up with a rope and brutally beaten. Police have arrested 5 people in connection with the case. Know the complete details of the incident, the police investigation and the reactions of the locals here.

Balagavi News:

ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗನ ಜಿಲ್ಲೆಯ ಕುಲ್ತಾಲಿ ಪ್ರದೇಶದಿಂದ ಕಳ್ಳನೆಂದು ಶಂಕಿಸಿ ಕೆರಳದ 30ವರ್ಷದ ಯುವಕನನ್ನು ಹಗ್ಗದಿಂದ ಕಟ್ಟಿಹಾಕಿ ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಭಾಷೆಯ ಸಮಸ್ಯೆ ಮತ್ತು ಗುರುತು ಪರಿಶೀಲನೆ ವೇಳೆ ಉಂಟಾದ ಗೊಂದಲದ ಪರಿಣಾಮ ಈ ದಾರುಣ ಘಟನೆ ನಡೆದಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು. ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಜೂನ್ 9 ರಂದು ಸ್ಯಾಂಕಿ ಜಹಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಯುವಕ ಕೇರಳದಿಂದ ತನ್ನ ಸ್ನೇಹಿತರೊಂದಿಗೆ ಕೆಲಸದ ನಿಮಿತ್ತ ಕುಲ್ತಾಲಿಗೆ ಬಂದಿದ್ದ ಎಂದು ತಿಳಿದು ಬಂದಿದೆ.

ಸ್ಥಳೀಯ ಮಾರುಕಟ್ಟೆಗೆ ಒಬ್ಬಂಟಿಯಾಗಿ ತೆರಳಿದ್ದ ಯುವಕ ದಾರಿ ತಪ್ಪಿ ಸುತ್ತಾಡುತ್ತಿದ್ದ ವೇಳೆ ಕೆಲವರು ಆತನನ್ನು ಪ್ರಶ್ನಿಸಿದ್ದಾರೆ. ಆದರೆ ಬಂಗಾಳಿ ಭಾಷೆ ತಿಳಿಯದ ಕಾರಣ ಆತ ನನ್ನ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ. ಇದರಿಂದ ಅನುಮಾನಗೊಂಡ ಕೆಲವರು ಆತನನ್ನ ಕಳ್ಳನೆಂದು ಭಾವಿಸಿ ಹಗ್ಗದಿಂದ ಕಟ್ಟಿಹಾಕಿ ಕ್ರೋರವಾಗಿ ಥಳಿಸಿರುವ ಆರೋಪ ಕೇಳಿಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

Sponsored

ಈ ಘಟನೆ ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ. ಗುಂಪು ಹಲ್ಲೆ ಹಾಗೂ ಭಾಷಾ ಅಡೆತಡೆಗಳ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು. ಇನ್ನಷ್ಟು ಆರೋಪಿಗಳ ಪಾತ್ರವಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಕೇರಳ ಮೂಲದ ಯುವಕನು ತನ್ನ ಸ್ನೇಹಿತರೊಂದಿಗೆ ಕೆಲಸದ ವಿಮಿತ್ತ ಪಶ್ಚಿಮ ಬಂಗಾಳಕ್ಕೆ ಬಂದಿದ್ದ. ಸ್ಥಳೀಯ ಮಾರುಕಟ್ಟೆಗೆ ತೆರಳಿದ್ದ ವೇಳೆ ದಾರಿ ತಪ್ಪಿ ಸುತ್ತಾಡುತ್ತಿದ್ದ ಆತನನ್ನು ಕೆಲವರು ಅನುಮಾನಾಸ್ಪದವಾಗಿ ಕಂಡು ಪ್ರಶ್ನಿಸಿದ್ದಾರೆ. ಬಂಗಾಳಿ ಭಾಷೆ ತಿಳಿಯದ ಕಾರಣ ಆತ ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗದಿದ್ದರಿಂದ ಕೆಲವರು ಕಳ್ಳನೆಂದು ಶಂಕಿಸಿ ಹಗ್ಗದಿಂದ ಕಟ್ಟಿ ಹಾಕಿ ಕ್ರೂರವಾಗಿ ಥಳಿಸಿರುವ ಆರೋಪ ಕೇಳಿಬಂದಿದೆ.

ಗಂಭೀರವಾಗಿ ಗಾಯಗೊಂಡ ಯುವಕನನ್ನು ಜಯನಗರ - ಕುಲ್ತಿಲಿ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಗೆ ಮೂಲಗಳು ತಿಳಿಸಿವೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು. ಮೃತನ ಪೂರ್ಣ ಗುರುತು ಪತ್ತೆ ಹಚ್ಚಲು ತನಿಖಾ ತಂಡವು ಕೇರಳ ಪೊಲೀಸರೊಂದಿಗೆ ಸಂಪರ್ಕ ಸಾಧಿಸಿದೆ.

ಬರುಯಿಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರವಿಂದ್ ಕುಮಾರ್ ಆನಂದ್ ಮಾತನಾಡಿ, "ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದ್ದು. ತನಿಖೆ ಮುಂದುವರಿದಿದೆ" ಎಂದು ತಿಳಿಸಿದ್ದಾರೆ.

Sponsored

ಇದೇ ವೇಳೆ, ಜಯನಗರ ಬಿಜೆಪಿ ಸಂಘಟನೆಯ ಜಿಲ್ಲಾಧ್ಯಕ್ಷ ಉತ್ಪಲ್ ನಾಸ್ಕರ್ ಈ ಘಟನೆಯನ್ನು ಖಂಡಿಸಿದ್ದು, "ಇದು ಅನಾಗರಿಕ ಕೃತ್ಯ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಇಂತಹ ಘಟನೆಗಳು ಸಮಾಜಕ್ಕೆ ಅಪಾಯಕಾರಿ ಸಂದೇಶ ನೀಡುವುದರ ಜೊತೆಗೆ ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರ ಮೇಲೂ ಪರಿಣಾಮ ಬೀರಬಹುದು" ಎಂದು ಹೇಳಿದ್ದಾರೆ.

ಈ ಘಟನೆ ಮತ್ತೊಮ್ಮೆ ಗುಂಪು ಹಲ್ಲೆ (Mob Lynching), ಕಾನೂನು ಸುವ್ಯವಸ್ಥೆ ಹಾಗೂ ವಲಸೆ ಕಾರ್ಮಿಕರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

Also Read:

ಬಿಡದಿ ಟೌನ್ ಶಿಪ್ ಯೋಜನೆಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ: "ಸರ್ಕಾರಕ್ಕೆ ಧಕ್ಕೆ ಆಗಬಾರದು

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online