<?= $pageTitle ?>
Logo
ಮುಖಪುಟ ಓದುವುದು ಕೇಳು
Corporate

ಆರೋಗ್ಯ ಕ್ಷೇತ್ರದಲ್ಲಿ 2030ರೊಳಗೆ 2.5 ಲಕ್ಷ ಉದ್ಯೋಗಾವಕಾಶ: ಬಜೆಟ್ ಘೋಷಣೆ ವಿಶೇಷ

ಆರೋಗ್ಯ ಕ್ಷೇತ್ರದಲ್ಲಿ 2030ರೊಳಗೆ 2.5 ಲಕ್ಷ ಉದ್ಯೋಗಾವಕಾಶ: ಬಜೆಟ್ ಘೋಷಣೆ ವಿಶೇಷ
Summary: ಬಜೆಟ್ 2026 - 27ರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದಂತೆ 2030ರೊಳಗೆ ಆರೋಗ್ಯ ಕ್ಷೇತ್ರದಲ್ಲಿ 2.5 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ. ಆರೋಗ್ಯ ಸೇವೆ ವೈದ್ಯಕೀಯ ಹುದ್ದೆಗಳು ಮತ್ತು ಸಂಬಂಧಿತ ವೃತ್ತಿಗಳಲ್ಲಿ ಹೆಚ್ಚಿನ ಅವಕಾಶಗಳ ನಿರೀಕ್ಷೆ.

belagavi news:

ಕೇಂದ್ರ ಬಜೆಟ್ 2026: ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಆದ್ಯತೆ- 2030ರೊಳಗೆ 2.5 ಲಕ್ಷಕ್ಕೂ ಹೆಚ್ಚು ಉದ್ಯೋಗವಕಾಶಗಳು:

2026ರ ಕೇಂದ್ರ ಬಜೆಟ್ ಆರೋಗ್ಯ ಮತ್ತು ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿದೆ. 2030ರ ವೇಳೆಗೆ 2.5 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗ ಸೃಷ್ಟಿಯ ನಿರೀಕ್ಷೆಯಾಗಿದೆ.

ಬಜೆಟ್ ನಲ್ಲಿ ಆರೋಗ್ಯ ವೃತ್ತಿಪರರು AHP ಆರೈಕೆದಾರರಿಗೆ ತರಬೇತಿ ಮತ್ತು ವೈದ್ಯಕೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಯೋಜನೆಗಳನ್ನು ಘೋಷಿಸಲಾಗಿದೆ. ಮೂಲ ಸೌಕರ್ಯ ಅಭಿವೃದ್ಧಿ ಮತ್ತು ವೈದ್ಯಕೀಯ ಶಿಕ್ಷಣ ಸುಧಾರಣೆಗಳಿಂದ ಭಾರತದಲ್ಲಿ ಆರೋಗ್ಯ ಸೇವೆಗಳು ಉತ್ತಮಗೊಳ್ಳುವುದರ ಜೊತೆಗೆ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚುತ್ತದೆ.

ಕೇಂದ್ರ ಸರ್ಕಾರದ ಬಜೆಟ್ 2026 ಆರೋಗ್ಯ ಮತ್ತು ಆರೋಗ್ಯ ವಲಯವನ್ನು ಬಲಪಡಿಸುವ ಜೊತೆಗೆ ಉದ್ಯೋಗ ಸೃಷ್ಟಿಗೆ ವಿಶೇಷ ಆದ್ಯತೆ ನೀಡಿದೆ. ಆರೋಗ್ಯ ಸೇವೆಗಳು ತರಬೇತಿ ವೈದ್ಯಕೀಯ ಶಿಕ್ಷಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಣಕಾಸು ಸಚಿವರು ಹಲವಾರು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.

ಮುಂಬರುವ ವರ್ಷಗಳಲ್ಲಿ ದೇಶಾದ್ಯಂತ ಲಕ್ಷಾಂತರ ಯುವಕರಿಗೆ ತುರ್ತು ಮತ್ತು ನಿರಂತರ ತರಬೇತಿ ನೀಡಿ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಉಪಕ್ರಮಗಳ ಮೂಲಕ ಭಾರತದಲ್ಲಿ ಸುಧಾರಿತ ಆರೋಗ್ಯ ಸೇವೆಗಳು ಲಭ್ಯವಾಗುವುದು ಮಾತ್ರವಲ್ಲ ಆರೋಗ್ಯ ವೃತ್ತಿಗೆ ಹೊಸ ಗುರುತನ್ನು ನೀಡುವ ಪ್ರಯತ್ನವು ನಡೆಯುತ್ತಿದೆ.

ಈ ಬಜೆಟ್ ಯುವಕರಿಗೆ ಉದ್ಯೋಗಾವಕಾಶಗಳ ಕಾಲ್ಪನಿ ಯೊಂದಿಗೆ ಆರೋಗ್ಯ ಕ್ಷೇತ್ರಕ್ಕೆ ಸ್ಥಿರ ಬೆಳವಣಿಗೆ ಮತ್ತು ಗುಣಮಟ್ಟದ ಸೇವೆಗಳ ವಿಸ್ತರನಿಗೆ ಮಾರ್ಗ ಸೂಚಿ ನೀಡುತ್ತದೆ.

ಆರೋಗ್ಯ ವಲಯದಲ್ಲಿ ಉದ್ಯೋಗ ಸೃಷ್ಟಿ:

ಕೇಂದ್ರ ಬಜೆಟ್ 2026 ಆರೋಗ್ಯ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಆದಿತಿ ನೀಡಿದ್ದು, 2030 ರೊಳಗೆ 2.5 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗವಕಾಶಗಳ ಸೃಷ್ಟಿ ನಿರೀಕ್ಷಿಸಲಾಗಿದೆ. ಈ ಉದ್ದೇಶವನ್ನು ಸಾಧಿಸಲು ಸರ್ಕಾರ ತರಬೇತಿ ಸಂಸ್ಥೆಗಳ ಮೇಲ್ದರ್ಜೆ, ಹೊಸ ಕೋರ್ಸ್ ಪರಿಚಯ ಆರೋಗ್ಯ ಮೂಲಸೌಕರ್ಯ ವಿಸ್ತರಣೆ ಗಳಿಗೆ ವಿಶೇಷ ಒತ್ತು ನೀಡುತ್ತಿದೆ.

ಆರೋಗ್ಯ ವೃತ್ತಿಪರರಿಗೆ ಹೊಸ ಯೋಜನೆ:

ಮುಂದಿನ 5 ವರ್ಷಗಳಲ್ಲಿ ಒಂದು ಲಕ್ಷ ಅಲೈನ್ ಹೆಲ್ತ್ ಪ್ರೊಫೆಷನಲ್ಸ್ ತರಬೇತಿ ನೀಡಲು ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಬರಲಿದೆ. ಈ ಯೋಜನೆಯ ಅಡಿಯಲ್ಲಿ ಪ್ರಮುಖ ಕ್ಷೇತ್ರಗಳಾದ;

ಅಪ್ಟೋಮೆಟ್ರಿ (Optometry)

ರೆಡಿಯಾಲಜಿ (Radiology)

ಅರಿವಳಿಕೆ ( Anesthesia)

OT ತಂತ್ರಜ್ಞಾನ

ಮನೋ ವಿಜ್ಞಾನ ಸಂಸ್ಥೆಗಳ ಸುಧಾರಣೆ

ಹೊಸ ತರಬೇತಿ ಸಂಸ್ಥೆಗಳ ಸ್ಥಾಪನೆ

ಇವುಗಳನ್ನು ಅನುಷ್ಠಾನಗೊಳಿಸುವ ಮೂಲಕ, ದೇಶಾದ್ಯಂತ ಮಾರ್ಗದರ್ಶಿತ ತರಬೇತಿ ಉದ್ಯೋಗಾವಕಾಶಗಳು ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳು ಲಭ್ಯವಾಗಲಿವೆ.

ಈ ಬಜೆಟ್ ಉಪಕ್ರಮಗಳು ಯುವಕರಿಗೆ ಉದ್ಯೋಗಾವಕಾಶಗಳೊಂದಿಗೆ ಜೊತೆಗೆ ಭಾರತದಲ್ಲಿ ಆರೋಗ್ಯ ವೃತ್ತಿಗೆ ಹೊಸ ಗುರುತನ್ನು ನೀಡಲು ಸಹಾಯ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಆರೈಕೆದಾರರಿಗೆ ದೊಡ್ಡ ಮಟ್ಟದ ತರಬೇತಿ:

ಕೇಂದ್ರ ಬಜೆಟ್ 2026 ಮೂಲಕ ಆರೈಕೆ ಕ್ಷೇತ್ರವನ್ನು ಬಲಪಡಿಸಲು ಸುಮಾರು 1.5 ಲಕ್ಷ ಆರೈಕೆದಾರರಿಗೆ ಬಹು ಕೌಶಲ್ಯ ತರಬೇತಿ ನೀಡುವ ಮಹತ್ವಾಕಾಂಕ್ಷಿ ಯೋಜನೆ ಘೋಷಿಸಲಾಗಿದೆ. ಈ ತರಬೇತಿಯಲ್ಲಿ ವೃದ್ಧರ ಆರೈಕೆ, ಕ್ಷೇಮ ಸೇವೆಗಳು, ಯೋಗ ಬೆಂಬಲ, ಆಧುನಿಕ ವೈದ್ಯಕೀಯ ಸಾಧನ ನಿರ್ವಹಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಪಡೆಯಲಾಗುತ್ತದೆ. ತರಬೇತಿಗೊಂಡ ಆರೈಕೆದಾರರು ಆಸ್ಪತ್ರೆಗಳಲ್ಲಿ ಕ್ಲಿನಿಕ್ ಗಳಲ್ಲಿ ಮತ್ತು ವೃದ್ಧಾಶ್ರಯಗಳಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ.

ವೈದ್ಯಕೀಯ ಮೌಲ್ಯ ಪ್ರವಾಸೋದ್ಯಮಕ್ಕೆ ಉತ್ತೇಜನ:

ಭಾರತವನ್ನು ವೈದ್ಯಕೀಯ ಮೌಲ್ಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರಮುಖ ಕೇಂದ್ರವನ್ನಾಗಿ ರೂಪಿಸಲು ಸರ್ಕಾರ ಖಾಸಗಿ ಒಳ್ಳೆಯದ ಸಹಯೋಗದೊಂದಿಗೆ ಐದು ಪ್ರಾದೇಶಿತ ವೈದ್ಯಕೀಯ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಈ ಉಪಕ್ರಮದಿಂದ ಸಂಶೋಧನೆ ಸಿಕ್ಕಿದೆ ಮತ್ತು ಪುನರ್ವಸತಿ ಕ್ಷೇತ್ರಗಳಲ್ಲಿ ಹೊಸ ಉದ್ಯೋಗವಕಾಶಗಳು ಲಭ್ಯವಾಗಲಿವೆ.

ಮಾನಸಿಕ ಆರೋಗ್ಯ ಸೇವೆಗಳ ಬಲವರ್ಧನೆ:

NIMHANS ಮಾದರಿಯ ಹೊಸ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಸ್ಥಾಪನೆಗೆ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ ಈ ಕ್ರಮಗಳು ಆರೋಗ್ಯ ವೃತ್ತಿಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತವೆ ಮತ್ತು ಯುವಕರಿಗೆ ಗೌರವಯುತ ಹಾಗೂ ಭವಿಷ್ಯ ಭರಿತ ವೃತ್ತಿ ಮಾರ್ಗಗಳನ್ನು ತೆರೆದಿಡಲಿವೆ.

ಈ ಬಜೆಟ್ ಉಪಕ್ರಮಗಳು ಮೂಲಕ ಭಾರತದಲ್ಲಿ ಆರೈಕೆ ವೈದ್ಯಕೀಯ ಪ್ರವಾಸೋದ್ಯಮ ಮತ್ತು ಮಾನಸಿಕ ಆರೋಗ್ಯ ಸೇವೆಗಳು ಉನ್ನತ ಮಠಕ್ಕೆ ಇರುತ್ತವೆ. ಇದರಿಂದ ಮಿಲಿಯನ್ ಗಳಿಗೆ ಉದ್ಯೋಗವಕಾಶವನ್ನು ತರಬೇತಿ ಮತ್ತು ಹೊಸ ವೃತ್ತಿಪರಾವಕಾಶಗಳು ಲಭ್ಯವಾಗುತ್ತದೆ ಆರೋಗ್ಯ ಸೇತ್ರವು ಯುವಕರಿಗೆ ಭವಿಷ್ಯ ಬರುತ್ತಾ ಮತ್ತು ಘನತೆ ಪೂರ್ಣ ಪೂರ್ತಿ ಮಾರ್ಗವನ್ನು ನೀಡುತ್ತವೆ.

ಆರೋಗ್ಯ ವೃತ್ತಿಗೆ ಹೊಸ ಗುರುತು:

ಈ ಎಲ್ಲಾ ಕ್ರಮಗಳ ಮೂಲಕ ಆರೋಗ್ಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಯುವಜನರನ್ನು ಕೇಳು ಸಹಾಯಕ ಸಿಬ್ಬಂದಿಯಾಗಿ ಮಾತ್ರವಲ್ಲ ತರಬೇತಿ ಪಡೆದ ವೃತ್ತಿಪರ ರಾಗಿ ಗುರುತಿಸುವ ಗುರಿಯನ್ನು ಸರ್ಕಾರ ಹೊಂದಿದೆ ಇದರಿಂದ ಜಾಗತಿಕ ಆರೋಗ್ಯ ಪೂರೈಕೆ ಸರಪಳಿಯಲ್ಲಿ ಭಾರತದ ಪಾತ್ರ ಮತ್ತಷ್ಟು ಬಲಗೊಳ್ಳಲಿದೆ.

ಇನ್ನಷ್ಟು ಓದಿರಿ:

ಕಿಶನ್ ಅಬ್ಬರ,ಅರ್ಷದೀಪ್ ಬೌಲಿಂಗ್ ದಾಳಿ:ಕಿವೀಸ್ ವಿರುದ್ಧ ಭಾರತ ಭರ್ಜರಿ ಗೆಲುವು

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online