<?= $pageTitle ?>
Logo
ಮುಖಪುಟ ಓದುವುದು ಕೇಳು
Politics

23 ಪಕ್ಷಗಳು ಒಂದೇ ವೇದಿಕೆಯಲ್ಲಿ: ಇಂದು INDIA ಕೂಟದ 'ಜನಬಂಧನ್' ಮಹಾಸಭೆ

23 ಪಕ್ಷಗಳು ಒಂದೇ ವೇದಿಕೆಯಲ್ಲಿ: ಇಂದು INDIA ಕೂಟದ 'ಜನಬಂಧನ್' ಮಹಾಸಭೆ
Summary: The important 'Janabandhan' meeting of the India alliance will be held today, in which 23 opposition parties of the country will participate, the Congress said. The meeting is organized with the aim of sending a message of unity despite the differences within the alliance.

belagavi news :

ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ನಲ್ಲಿ ಇಂದು ವಿರೋಧಪಕ್ಷಗಳ INDIA ಮೈತ್ರಿ ಕೂಟದ 'ಜನ್ ಬಂಧನ್' ಸಭೆ ನಡೆಯಲಿದೆ. ಮೈತ್ರಿ ಕೂಟದೊಳಗೆ ಕೆಲ ಪಕ್ಷಗಳ ಅಸಮಾಧಾನ ಹಾಗೂ ಅಂತರ ಕಾಯ್ದುಕೊಳ್ಳುವ ವರದಿಗಳ ನಡುವೆಯೂ ಈ ಮಹತ್ವದ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಒಟ್ಟು 23 ಪಕ್ಷಗಳು ಭಾಗವಹಿಸುವ ಸಾಧ್ಯತೆ ಇದೆ.

ಈ ಕುರಿತು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದು, ಜೂನ್ 8ರಂದು ನಡೆಯುವ ಈ ಮಹತ್ವದ ಸಭೆಗೆ 23 ಪಕ್ಷಗಳು ಹಾಜರಾಗಲಿವೆ ಎಂದು ತಿಳಿಸಿದ್ದಾರೆ. ಕೆಲ ಪಕ್ಷಗಳು ವೈಯಕ್ತಿಕ ಕಾರಣಗಳಿಂದ ಸಭೆಯಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದರು, ಮೈತ್ರಿ ಕೂಟದೊಳಗಿನ ಒಗ್ಗಟ್ಟು ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

ಮೈತ್ರಿಕೂಟದ ಭವಿಷ್ಯದ ತಂತ್ರ, ಚುನಾವಣಾ ಸಹಕಾರ ಹಾಗೂ ಮುಂದಿನ ರಾಜಕೀಯ ಕಾರ್ಯತಂತ್ರಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ. ದೇಶದ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದ್ದು, ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದೆ.

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ: ಸಭೆಗೆ ಗೈರಾಗುತ್ತಿರುವ ಪಕ್ಷಗಳು ಸಹ ಕೇಂದ್ರ ಸರ್ಕಾರದ ನೀತಿಗಳು ಮತ್ತು ಕ್ರಮಗಳ ವಿರುದ್ಧ ತಮ್ಮ ವಿರುದ್ಧವನ್ನು ವ್ಯಕ್ತಪಡಿಸಿವೆ. ಕೋಟ್ಯಾಂತರ ಭಾರತೀಯರ ಮತದಾನದ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವುದು, ಸಂವಿಧಾನದ ಮೇಲೆ ದಾಳಿ ಮಾಡುತ್ತಿರುವ ಮತ್ತು ತನಿಕಾ ಸಂಸ್ಥೆಗಳ ಮೂಲಕ ವಿರೋಧ ಪಕ್ಷದ ನಾಯಕರನ್ನು ಗುರಿ ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿಗಳನ್ನು ಈ ಪಕ್ಷಗಳು ತೀವ್ರವಾಗಿ ವಿರೋಧಿಸಿವೆ. ಹಣದುಬ್ಬರ, ನಿರುದ್ಯೋಗ ಮತ್ತು ವಿದೇಶಿ ನೀತಿಯಿಂದ ದೇಶದ ಹಿತಾಸಕ್ತಿಗೆ ಧಕ್ಕೆ ಆಗುತ್ತಿದೆ. ವೈವಿಧ್ಯತೆಯ ನಡುವೆಯೂ ಇಂಡಿಯಾ ಜನಬಂಧನ ಒಗ್ಗಟ್ಟಾಗಿ ನಿಲ್ಲುತ್ತದೆ ಎಂದು ಅವರು ಹೇಳಿದ್ದಾರೆ.

ವಿಪಕ್ಷಗಳ INDIA ಮೈತ್ರಿ ಕೂಟದ ಒಳಗೆ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿರುವ ನಡುವೆ ದೆಹಲಿಯಲ್ಲಿ ನಡೆಯಲಿರುವ 'ಜನಬಂಧನ' ಸಭೆ ಕುತೂಹಲಕ್ಕೆ ಕಾರಣವಾಗಿದೆ. ಒಕ್ಕೂಟದ ಪ್ರಮುಖ ಮಿತ್ರ ಪಕ್ಷವಾದ ತಮಿಳುನಾಡಿನ ಡಿಎಂಕೆ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದೆ ಎಂದು ಮಾಹಿತಿ ರಾಜಕೀಯ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಧಾನಸಭೆ ಚುನಾವಣೆ ನಂತರ , ನಟ ವಿಜಯ್ ಅವರ ತಮಿಳಿಗ ವಟ್ರಿ ಕಳಗಂ ಕಾಂಗ್ರೆಸ್ ಬೆಂಬಲ ನೀಡಿದ ಕ್ರಮವನ್ನು ತಮ್ಮ ವಿರುದ್ಧದ ರಾಜಕೀಯ ನಡೆ ಎಂದು ಡಿಎಂಕೆ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೂ, ರಾಷ್ಟ್ರಮಟ್ಟದ ವಿಷಯಗಳಲ್ಲಿ ತಮ್ಮ ಧ್ವನಿ ಮುಂದುವರಿಸುತ್ತೇವೆ ಎಂದು ಡಿಎಂಕೆ ಇಂಡಿಯಾ ಕೂಟಕ್ಕೆ ಕಳುಹಿಸಿದ ಪತ್ರದಲ್ಲಿ ತಿಳಿಸಿದೆ.

ಇದೇ ವೇಳೆ, ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ರಾಜಕೀಯ ಲಕ್ಷಣಗಳು ಕಾಣಿಸುತ್ತಿವೆ. ಮಾಜಿ ಮುಖ್ಯಮಂತ್ರಿ ಹಾಗೂ ತೃಣ ಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ದೆಹಲಿಗೆ ಪ್ರಯಾಣ ಬೆಳೆಸಿದ್ದು, ತೃಣ ಮೂಲ ಕಾಂಗ್ರೆಸ್ ಒಳಗೆ ಅಸಮಾಧಾನ ತೀವ್ರಗೊಂಡಿದೆ ಎನ್ನಲಾಗುತ್ತಿದೆ. ಪಕ್ಷದೊಳಗೆ 58 ಶಾಸಕರು ಮತ್ತು ಸುಮಾರು 20 ಸಂಸದರು ಪಕ್ಷ ದೊರೆಯುವ ಸಾಧ್ಯತೆ ಇದೆ ಎಂಬ ವರದಿಗಳು ರಾಜಕೀಯ ವಲಯದಲ್ಲಿ ಆತಂಕ ಮೂಡಿಸಿವೆ.

ಈ ಬೆಳವಣಿಗೆಗಳ ನಡುವೆ INDIA ಕೂಟದ 'ಜನಬಂಧನ್' ಸಭೆ ನಡೆಯುತ್ತಿದ್ದು, ಮೈತ್ರಿ ಕೂಟದ ಒಗ್ಗಟ್ಟು ಉಳಿಯುತ್ತದೆಯೇ ಅಥವಾ ಭಿನ್ನಮತಗಳು ಹೆಚ್ಚಾಗುತ್ತವೆ ಎಂಬುದರ ಮೇಲೆ ಎಲ್ಲರ ಚಿತ್ತನೆಟ್ಟಿದೆ. ವಿಪಕ್ಷಗಳ INDIA ಮೈತ್ರಿ ಕೂಟದೊಳಗೆ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿರುವ ನಡುವೆ ಕೇರಳ ರಾಜಕೀಯದಲ್ಲೂ ಹೊಸ ತಿಕ್ಕಾಟ ಉಂಟಾಗಿದೆ. ಕೇರಳ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧ ನಡೆಸಿದ "ವ್ಯವಸ್ಥಿತ ಅಪಪ್ರಚಾರ" ಕುರಿತು CPI ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕಾಂಗ್ರೆಸ್ ನಾಯಕರು ಸಿಪಿಐ (ಎಂ) ಮತ್ತು ಬಿಜೆಪಿ ನಡುವೆ "ರಹಸ್ಯ ಒಪ್ಪಂದ" ಇದೆ ಎಂದು ಮಾಡಿದ ಆರೋಪಗಳನ್ನು ಪಕ್ಷ ಗಂಭೀರವಾಗಿ ತೆಗೆದುಕೊಂಡಿದ್ದು, ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಪಿಐ (ಎಂ) ಪತ್ರ ಬರೆದಿದೆ ಎಂದು ತಿಳಿದು ಬಂದಿದೆ. ಆದಾಗ್ಯೂ, ನಾಳೆ ನಡೆಯಲಿರುವ ಇಂಡಿಯಾ ಕೂಟದ ಸಭೆಯಲ್ಲಿ ಸಿಪಿಐ (ಎಂ) ಸಂಸದ ಜಾನ್ ಬ್ರಿಟ್ಟಾಸ್ ಭಾಗವಹಿಸುವುದು ಖಚಿತವಾಗಿದೆ.

ಇದೇ ವೇಳೆ, ವಿರೋಧ ಪಕ್ಷಗಳ ಮೈತ್ರಿಕೂಟದ ಒಳಗಿನ ಗೊಂದಲವನ್ನು ಭಾರತೀಯ ಜನತಾ ಪಾರ್ಟಿ ನಾಯಕರು ಟೀಕಿಸಿದ್ದಾರೆ. ಬಿಜೆಪಿ ನಾಯಕಿ ಅಗ್ನಿ ಮಿತ್ರಾ ಪೌಲ್, INDIA ಕೂಟವನ್ನು ಜನರು ತಿರಸ್ಕರಿಸಿದ್ದಾರೆ ಮತ್ತು ಮೈತ್ರಿಕೂಟ ದೊಳಗೆ ತೀವ್ರ ಒಳಜಗಳ ನಡೆಯುತ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ಟಿಎಂಸಿ ಕೂಡ ಪತನದ ಹಾದಿಯಲ್ಲಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಬೆಳವಣಿಗೆಗಳ ನಡುವೆ ಇಂಡಿಯಾ ಕೂಟದ ಮುಂದಿನ ಸಭೆ ನಡೆಯಲಿದ್ದು, ಮೈತ್ರಿಕೂಟದ ಒಗ್ಗಟ್ಟು ಉಳಿಯುತ್ತದೆಯೇ ಅಥವಾ ಭಿನ್ನಮತಗಳು ಮತ್ತಷ್ಟು ತೀವ್ರಗೊಳ್ಳುತ್ತವೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

Also Read:

French Open 2026: ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಗೆದ್ದು ಇತಿಹಾಸ ಸೃಷ್ಟಿಸಿದ ಅಲೆಕ್ಸಾಂಡರ್ ಜ್ವೆರೆವ್ !

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online