Balagavi News:
ಭಾರತದ ಆಟೋಮೋಟಿವ್ ಮಾರುಕಟ್ಟೆಯಲ್ಲಿ SUV ವಿಭಾಗದಲ್ಲಿ 7-ಸೀಟರ್ ವಾಹನಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಕುಟುಂಬ ವ್ಯವಸ್ಥೆ ಹೆಚ್ಚು ಪ್ರಬಲವಾಗಿರುವ ಭಾರತದಲ್ಲಿ, ಒಂದೇ ವಾಹನದಲ್ಲಿ ಎಲ್ಲ ಕುಟುಂಬ ಸದಸ್ಯರೊಂದಿಗೆ ಆರಾಮದಾಯಕ ಪ್ರಯಾಣ ಮಾಡುವ ಅಗತ್ಯದಿಂದ ಈ ಸೆಗ್ಮೆಂಟ್ ಗೆ ಹೆಚ್ಚಿನ ಗಮನ ಸಿಗುತ್ತಿದೆ.
ಈ 7-ಸೀಟರ್ ಕಾರುಗಳು ದೈನಂದಿನ ಪ್ರಯಾಣಕ್ಕೆ ಮಾತ್ರವಲ್ಲದೆ ಹಬ್ಬಗಳು, ಕುಟುಂಬ ಪ್ರವಾಸಗಳು ಹಾಗೂ ಓರಾಡಲು ನಾವು ದೀರ್ಘ ಪ್ರಯಾಣಗಳಿಗೆ ಸಹ ಅತ್ಯಂತ ಉಪಯುಕ್ತವಾಗಿವೆ. ಹೆಚ್ಚಿನ ಸೀಟಿಂಗ್ ಸಾಮರ್ಥ್ಯ, ಆರಾಮದಾಯಕ ಮತ್ತು ಆಧುನಿಕ ಫೀಚರ್ ಗಳ ಕಾರಣದಿಂದ ಗ್ರಾಹಕರು ಈ ವಾಹನಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.
ಎಸ್ ಯುವಿಗಳ ಜನಪ್ರಿಯತೆಯನ್ನು ಬಂಡವಾಳ ಮಾಡಿಕೊಂಡು ಕಾರು ತಯಾರಕರು ಈಗ 7-ಸೀಟರ್ ಕಾರ್ಯಕ್ಷಮತೆಯ ಜೊತೆಗೆ ಸ್ಟೈಲಿಪ್ ಡಿಸೈನ್ ಹಲ್ಮಿಡಿ ಪವರ್ ಫುಲ್ ಪರ್ಫಾರ್ಮೆನ್ಸ್ ಹೊಂದಿರುವ ಹೊಸ ಮಾದರಿಗಳನ್ನು ನಿರಂತರವಾಗಿ ಪರಿಚಯಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಹಲವು ಹೊಸ 7-ಸೀಟರ್ SUV ಮಾದರಿಗಳು ಆಟೋಮೋಟಿವ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಲಿವೆ ಎಂದು ನಿರೀಕ್ಷಿಸಲಾಗಿದೆ.
MG ಮೆಜೆಸ್ಟರ್: ಭಾರತದ ಆಟೋಮೊಟಿವ್ ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ SUV ವಿಭಾಗದಲ್ಲಿ 7-ಸೀಟರ್ ಕಾರುಗಳ ಸ್ಪರ್ಧೆ ಮತ್ತಷ್ಟು ತೀವ್ರವಾಗುತ್ತಿದೆ. ಈ ಸೆಗ್ಮೆಂಟ್ ನಲ್ಲಿ MG Motor ಪರಿಚಯಿಸಿರುವ MG ಮೆಜೆಸ್ಟರ್ ಮತ್ತು ಮಹಿಂದ್ರ ಜನಪ್ರಿಯ ಮಾದರಿಗಳು ಭಾರಿ ಚರ್ಚೆಗೆ ಕಾರಣವಾಗಿವೆ.
MG ಮೆಜೆಸ್ಟರ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗಲಿದ್ದು, ಇದು ಪೂರ್ಣ ಗಾತ್ರದ 7-ಸೀಟರ್ SUV ಆಗಿದೆ. 2.0- ಲೀಟರ್ ಟೈನ್-ಟರ್ಬೊ ಡಿಸಲ್ ಎಂಜಿನ್ ಹೊಂದಿರುವ ಈ SUV 215 ಹಾರ್ಸ್ ಪವರ್ ಮತ್ತು 478 Nmಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. RWD ಮತ್ತು 4WD ಆಯ್ಕೆಗಳೊಂದಿಗೆ 8-ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಇದರಲ್ಲಿ ಲಭ್ಯವಿದೆ. 4WD ರೂಪಾಂತರದಲ್ಲಿ ಆಫ್-ರೋಡ್ ಮೋಡ್ ಗಳು, ಟ್ರಿಪಲ್ ಡಿಫರೆನ್ಶಿಯಲ್ ಲಾಕ್ ಮತ್ತು 810 mm ವಾಟರ್ ವೆಡ್ಡಿಂಗ್ ಸಮರ್ಥ ಸೇರಿದಂತೆ ಅತ್ಯಧುನಿಕ ವೈಶಿಷ್ಟ್ಯಗಳು ಇರುವ ನಿರೀಕ್ಷೆಯಿದೆ. ಇದರ ಬೆಲೆ ಸುಮಾರು ₹50 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ.
ಇದೇ ವೇಳೆ Mahindra ತನ್ನ ಜನಪ್ರಿಯ SUV ಮಾದರಿಗಳಾದ ಸ್ಕಾರ್ಪಿಯೋ ಕ್ಲಾಸಿಕ್ ಮತ್ತು ಸ್ಕಾರ್ಪಿಯೋ-N ಅನ್ನು ಅಪ್ಡೇಟ್ ಮಾಡಲು ಸಜ್ಜಾಗಿದೆ. ಈ ಫೇಸ್ ಲಿಫ್ಟ್ ಮಾದರಿಗಳು ವಿನ್ಯಾಸ ಮತ್ತು ವೈಶಿಷ್ಟ್ಯಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಪಡೆಯಲಿದ್ದು, ಯಾಂತ್ರಿಕವಾಗಿ ಬಹುತೇಕ ಸ್ದಿರವಾಗಿರುತ್ತವೆ. ವಿಶೇಷವಾಗಿ ಸ್ಕಾರ್ಪಿಯೋ-N ಹೊಸ ಅಮೃತಯಲ್ಲಿ ಲೆವೆಲ್ 2 ADAS ಸುರಕ್ಷತಾ ತಂತ್ರಜ್ಞಾನ ತೇರುಸುವ ಸಾಧ್ಯತೆ ಇದೆ ಎಂದು ವರದಿಗಳು ಸೂಚಿಸುತ್ತವೆ.
ಈ ಎಲ್ಲಾ ಹೊಸ 7-ಸೀಟರ್ SUVಅಪ್ಡೇಟ್ ಗಳು ಭಾರತೀಯ ಆಟೋ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಹೆಚ್ಚು ಆಯ್ಕೆಗಳು ಮತ್ತು ಆಧುನಿಕ ಫೀಚರ್ಗಳನ್ನು ನೀಡಲಿವೆ.
ಭಾರತದ SUV ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ 7- ಸೀಟರ್ ಕಾರುಗಳ ಸ್ಪರ್ಧೆ ಮತ್ತಷ್ಟು ತೀವ್ರಗೊಳ್ಳುತ್ತಿದೆ. ಇತ್ತೀಚಿನ ಸ್ಪೈ ಗುಣಗಳು ಫೋಟೋಗಳು ಹೊಸ ಮಹಿಂದ್ರ ಸ್ಕಾರ್ಪಿಯೋ-N ಫೇಸ್ ಲಿಫ್ಟ್ ಹಾಗೂ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ 7- ಸೀಟರ್ ಮಾದರಿಗಳ ಬಗ್ಗೆ ಹಲವು ಪ್ರಮುಖ ಮಾಹಿತಿಗಳನ್ನು ಬಹಿರಂಗಪಡಿಸುತ್ತಿವೆ.
ಹೊಸ ಸ್ಕಾರ್ಪಿಯೊ -N ಫೇಸ್ ಲಿಫ್ಟ್ ಹಂತದಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದು. ಮುಂಭಾಗದಲ್ಲಿ ಹೊಸ ಗ್ರಿಲ್, ಮರು ವಿನ್ಯಾಸಗೋಳಿಸಲಾದ LED ಹೆಡ್ ಲೈಟ್ ಗಳು, ಹೊಸ ಸ್ಕಿಡ್ ಪ್ಲೇಟ್ ಹಾಗೂ ಅಪ್ಡೇಟ್ ಮಾಡಿದ ಬಂಪರ್ ವಿನ್ಯಾಸವನ್ನು ಹೊಂದಿದೆ.ಜೊತೆಗೆ ಹೊಸ ಫಾಗ್ ಲ್ಯಾಂಪುಗಳು SUV ಗೆ ಹೆಚ್ಚು ಆಧುನಿಕ ಲುಕ್ ನೀಡುವ ನಿರೀಕ್ಷೆಯಿದೆ. ಒಳಭಾಗದಲ್ಲಿ 10.25- ಇಂಚಿನ ದೊಡ್ಡ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಮ್, ಪನುರಾಮಿಕ ಸನ್ ರೂ ಫ್ ಮತ್ತು ವೆಂಟಿಲೇಟೆಡ್ ಸೀಟ್ಸ್ ಸೇರಿದಂತೆ ಪ್ರೀಮಿಯಂ ಫೀಚರ್ ಗಳು ಇರಲಿವೆ ಎಂದು ವರದಿಗಳು ಸೂಚಿಸುತ್ತಿವೆ.
ಇದೇ ವೇಳೆ Toyota ತನ್ನ ಜನಪ್ರಿಯ ಅರ್ಬನ್ ಕ್ರೂಸಾರ್ ಹೈ ರೈಡರ್ ನ 7 - ಸೀಟರ್ ಆವೃತ್ತಿಯನ್ನು ಶೀಘ್ರದಲ್ಲೇ ಪರಿಚಯಿಸಲು ಸಜ್ಜಾಗಿದೆ. ಕುಟುಂಬ ಬಳಕೆಗೆ ಸೂಕ್ತವಾಗಿ ವಿನ್ಯಾಸಗೊಳಿಸಲಾದ ಈ SUV ಹಬ್ಬದ ಋತುವಿನಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.
ಪರ್ಫಾರ್ಮೆನ್ಸ್ ವಿಷಯದಲ್ಲಿ, 1.5-ಲಿಟರ್ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ 103bhp ಶಕ್ತಿ ಉತ್ಪಾದಿಸಲಿದೆ. ಜೊತೆಗೆ 116bhp ಒಟ್ಟು ಶಕ್ತಿಯುಳ್ಳ ಹೈಬ್ರಿಡ್ ಸೆಟಪ್ ಸಹ ಲಭ್ಯವಾಗುವ ನಿರೀಕ್ಷೆ ಯಿದೆ. ಆಯ್ದು ರೂಪಾಂತರಗಳಲ್ಲಿ AWD (ಆಲ್-ವೀಲ್ ಡ್ರೈ ವ್) ವ್ಯವಸ್ಥೆಯೂ ಇರಬಹುದು. ಈ SUV ಗಳ ಬೆಲೆ ಸುಮಾರು ₹ 16 ಲಕ್ಷದಿಂದ ₹24 ಲಕ್ಷದವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.
ಈ ಹೊಸ 7-ಸೀಟರ್ S UV ಮಾದರಿಗಳು ಭಾರತೀಯ ಆಟೋಮೊಟಿವ್ ಮಾರುಕಟ್ಟೆಯಲ್ಲಿ ಕುಟುಂಬ ಕಾರು ವಿಭಾಗದಲ್ಲಿ ದೊಡ್ಡ ಬದಲಾವಣೆ ತರಲಿವೆ.
Also Read:
ಸ್ನಾನ ಮಾಡುವ ನೀರಿಗೆ ಚಿಟಿಕೆ ಅರಿಶಿಣ ಹಾಕಿದರೆ ಏನಾಗುತ್ತದೆ?