<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

8 ವರ್ಷದ ಬಾಲಕನ ಸಾಧನೆ : ಶೀರ್ಷಾಸನದಲ್ಲಿ ಶಿವ ತಾಂಡವ ಸ್ತೋತ್ರ ಪಠಣೆ

8 ವರ್ಷದ ಬಾಲಕನ ಸಾಧನೆ : ಶೀರ್ಷಾಸನದಲ್ಲಿ ಶಿವ ತಾಂಡವ ಸ್ತೋತ್ರ ಪಠಣೆ
Summary: An 8-year-old boy from Sirsi has displayed a rare talent and has gained international recognition. This boy, who attracted everyone's attention by reciting Shiva Tandava Stotra while sitting on his head, has won an international award for his achievement.

belagavi news:

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 8 ವರ್ಷದ ಓಂ ಎನ್ನುವ ಬಾಲಕ ಅಪೂರ್ವ ಪ್ರತಿಭೆಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾನೆ. ಶೀರ್ಷಾಸನ ಭಂಗಿಯಲ್ಲಿ ಶಿವ ತಾಂಡವ ಸ್ತೋತ್ರವನ್ನು ಪಠಿಸಿ ವಿಶ್ವದಾಖಲೆ ನಿರ್ಮಿಸಿರುವುದು ವಿಶೇಷವಾಗಿದೆ. ಕೇವಲ 3 ನಿಮಿಷ 47 ಸೆಕೆಂಡುಗಳಲ್ಲಿ ಸ್ತೋತ್ರವನ್ನು ಸಂಪೂರ್ಣವಾಗಿ ಪಠಿಸಿದ ಈ ಬಾಲಕನ ಸಾಧನೆಗೆ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ವಿಶ್ವ ದಾಖಲೆ ಪ್ರಶಸ್ತಿ ನೀಡಿ ಗೌರವಿಸಿದೆ. ಯೋಗ ಹಾಗೂ ಭಕ್ತಿಯನ್ನು ಸಯೋಜಿಸಿದ ಈ ಸಾಧನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಶಿರಸಿ ಭಾಗದ ಹೆಮ್ಮೆಯನ್ನು ಹೆಚ್ಚಿಸಿದೆ.

ಕೆಲವರಿಗೆ ಹುಟ್ಟುತ್ತಲೇ ಒಂದಲ್ಲೊಂದು ವಿಶೇಷ ಕಲೆ ಒಲಿದು ಬರುತ್ತದೆ ಎನ್ನುವುದು ಸಾಮಾನ್ಯವಾಗಿ ಕೇಳಿ ಬರುವ ಮಾತು. ಅದನ್ನು ಹೋದ ಜನ್ಮದ ಬಂದ ಎಂದು ಕೆಲವರು ವಿವರಿಸುತ್ತಾರೆ. ಇನ್ನು ಕೆಲ ಮಕ್ಕಳು ಇನ್ನೂ ಒಂದು ವರ್ಷ ತುಂಬುವ ಮುನ್ನವೇ ವಿಶಿಷ್ಟ ಸಾಧನೆ ತೋರಿಸಿ ಅಚ್ಚರಿ ಮೂಡಿಸುತ್ತಾರೆ.2-3 ವರ್ಷದೊಳಗೆ ದಾಖಲೆ ನಿರ್ಮಿಸಿ ಎಲ್ಲರ ಗಮನಸೆಳೆಯುವ ಪುಟಾಣಿಗಳು ಇರುತ್ತಾರೆ.

ಇದಕ್ಕೆ ಕೆಲವೊಮ್ಮೆ ಮನೆಯ ಸಂಸ್ಕಾರ, ಪೋಷಕರ ಪ್ರೋತ್ಸಾಹ ಕಾರಣವಾಗಬಹುದು. ಆದರೆ ಕೆಲವು ಮಕ್ಕಳಲ್ಲಿ ಪ್ರಭಾವಿಕವಾಗಿ ಮೂಡುವ ಪ್ರತಿಭೆ ಹೇಗೆ ಬರುತ್ತದೆ ಎಂಬುದು ಅನೇಕರಿಗೆ ಆಶ್ಚರ್ಯಕಾರಿಯೇ ಅಂತ ಅದ್ಭುತ ಕೌಶಲ್ಯಗಳನ್ನು ನೋಡಿದಾಗ "ಇದು ದೇವರ ವರವೇ ಇರಬೇಕು"ಎನ್ನುವ ಮಾತುಗಳು ಸಹಜವಾಗಿ ಕೇಳಿ ಬರುತ್ತದೆ.

Sponsored

8 ವರ್ಷದ ಬಾಲಕನ ಅಸಾಧಾರಣ ಸಾಧನೆ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 8 ವರ್ಷದ ಓಂ ಎನ್.ಎನ್ನುವ ಬಾಲಕನ ತನ್ನ ವಿಶೇಷ ಪ್ರತಿಬಿಂಬ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾನೆ. ಈ ಪುಟಾಣಿ ಶಿವ ತಾಂಡವ ಸ್ತೋತ್ರವನ್ನು ಕೇವಲ ಮೂರು ನಿಮಿಷ 47 ಸೆಕೆಂಡುಗಳಲ್ಲಿ ಪಠಿಸುವ ಮೂಲಕ ಅಂತರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಇದರಲ್ಲಿ ವಿಶೇಷತೆ ಏನೆಂದರೆ,

ಈ ಸ್ತೋತ್ರವನ್ನು ಆತ ಸಾಮಾನ್ಯವಾಗಿ ಪಠಿಸಿಲ್ಲ. ಶೀರ್ಷಾಸನ ಭಂಗಿಯಲ್ಲಿ -ಅಂದರೆ ತಲೆಕೆಳಗಾಗಿ ನಿಂತು, ಕೈಗಳನ್ನು ಮುಗಿದು ಈ ಸ್ತೋತ್ರವನ್ನು ಪಠಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ ಈ ವಿಶಿಷ್ಟ ಪ್ರತಿಭೆ ಮತ್ತು ಶಿಸ್ತು ಬದ್ಧ ಸಾಧನೆಗೆ ಅಂತರಾಷ್ಟ್ರೀಯ ದಾಖಲೆ ಸಂಸ್ಥೆ ನೀಡಿ ಗೌರವಿಸಿದೆ. ಇಂತಹ ಸಾಧನೆ ಅಭ್ಯಾಸ ಮತ್ತು ಅಸಾಧಾರಣ ಪ್ರತಿಬಿಯ ಸಾಕ್ಷಿಯಾಗಿ ಸ್ಥಳೀಯವಾಗಿ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಮೂರನೇ ತರಗತಿ ವಿದ್ಯಾರ್ಥಿಯ ಅಸಾಧಾರಣ ಸಾಧನೆ: ಶಿರಸಿಯ ಇಸಳೂರಿನ ಶ್ರೀನಿಕೇತನ್ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿರುವ ಓಂ ತನ್ನ ವಿಶಿಷ್ಟ ಪ್ರತಿಭೆಯಿಂದ ಎಲ್ಲರ ಗಮನ ಸೆಳೆದಿದ್ದಾನೆ ಮಹಾಶಿವರಾತ್ರಿಯ ಪ್ರಯುಕ್ತ ಈ ಬಾಲಕ ಶೀರ್ಷಾಸನ ಭಂಗಿಯಲ್ಲಿ ಕೇವಲ ಮೂರು ನಿಮಿಷ 47 ಸೆಕೆಂಡ್ ಗಳಲ್ಲಿ ಶಿವ ತಾಂಡವ ಸ್ತೋತ್ರವನ್ನು ಪಠಿಸಿ ಗಮನಾರ್ಹ ಸಾಧನೆ ತೋರಿದ್ದಾನೆ.

ಈ ವಿಶಿಷ್ಟ ಪ್ರದರ್ಶನವನ್ನು ಗುರುತಿಸಿದ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಬಾಲಕನಿಗೆ ವಿಶ್ವದಾಖಲೆ ಪ್ರಶಸ್ತಿ ನೀಡಿ ಗೌರವಿಸಿದೆ. ಇದರೊಂದಿಗೆ ಓಂ ನ ಸಾಧನೆ ಇಲ್ಲಿಗೆ ನಿಲ್ಲಿಲ್ಲ . ಕೇವಲ ಆರು ವರ್ಷದವನು ಆಗಿದ್ದಾಗಲೇ ಒಂದು ನಿಮಿಷ 42 ಸೆಕೆಂಡುಗಳಲ್ಲಿ ಏಷ್ಯಾ ಖಂಡದ 48 ದೇಶಗಳ ಹೆಸರುಗಳು, ರಾಜಧಾನಿಗಳು ಮತ್ತು ಕರೆನ್ಸಿಗಳನ್ನು ನೋಡದೆ ಸರಾಗವಾಗಿ ಹೇಳಿ ಮತ್ತೊಂದು ದಾಖಲೆಯನ್ನು ನಿರ್ಮಿಸಿದ್ದಾನೆ.

Sponsored

ಶಿರಸಿಯ ನಿವೃತ್ತ ಸೈನಾಧಿಕಾರಿ ಶ್ರೀನಿವಾಸ್ ನಾಯಕ್ ಹಾಗೂ ಉಪನ್ಯಾಸಕಿ ಡಾಕ್ಟರ್ ಅಪರ್ಣ ಕರ್ಕಿ ಅವರ ಪುತ್ರನಾಗಿರುವ ಓಂ ಪ್ರತಿಭೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

Also Read:

ಕರ್ನಾಟಕ ರಾಜಕೀಯದಲ್ಲಿ ಹೊಸ ತಿರುವು : ರಾಯರೆಡ್ಡಿ ಹೇಳಿದ್ದೇನು?

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online