Belagavi News:
ನಟಿ ನಿವೇದಿತಾ ಗೌಡ ತಮ್ಮ ವೈಯಕ್ತಿಕ ಜೀವನದ ಮತ್ತು ವಿಚ್ಛೇದನದ ಬಗ್ಗೆ ಸಂದರ್ಶನ ಒಂದರಲ್ಲಿ ಮನವಿ ಮಾತನಾಡಿದ್ದಾರೆ. ಬಿಗ್ ಬಾಸ್ ಸೀಸನ್ 5 ಮೂಲಕ ಪರಿಚಯಗೊಂಡಿದ್ದ ನಿವೇದಿತಾ ಗೌಡ ಮತ್ತು ಗಾಯಕ ಚಂದನ್ ಶೆಟ್ಟಿ ನಡುವಿನ ಪ್ರೀತಿ, ಮದುವೆ ಹಾಗೂ ಬಳಿಕದ ವಿಚ್ಛೇದನ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ಪರಿಚಯವಾಗಿ ಪ್ರೀತಿಗೆ ಬಿದ್ದಿದ್ದರು. ಬಳಿಕ 2020ರ ಫೆಬ್ರವರಿ 26ರಂದು ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕ್ಯೂಟ್ ವಿಡಿಯೋಗಳನ್ನು ಹಂಚಿಕೊಂಡು ಅಭಿಮಾನಿಗಳ ಹೆಚ್ಚುಗೆ ಪಾತ್ರರಾಗಿದ್ದರು.
ಅಭಿಮಾನಿಗಳು ಇವರನ್ನು ಆದರ್ಶ ದಂಪತಿಗಳಾಗಿ ಕಂಡಿದ್ದರೂ, ಮದುವೆಯಾಗಿ ನಾಲ್ಕು ವರ್ಷಗಳ ನಂತರ 2024ರಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆ ಮೇರಿಗೆ ವಿಚ್ಛೇದನ ಪಡೆದಿದ್ದರು. ಪ್ರಸ್ತುತ ಇಬ್ಬರು ತಮ್ಮ ತಮ್ಮ ವೈಯಕ್ತಿಕ ಬದುಕಿನ ಸ್ವತಂತ್ರವಾಗಿ ಮುಂದುವರೆಯುತ್ತಿದ್ದಾರೆ.
ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ನಿವೇದಿತಾ ಗೌಡ ಅವರು ತಮ್ಮ ವಿಚ್ಛೇದನದ ಕುರಿತು ಮಾತನಾಡಿದ್ದು, ಹಳೆಯ ನೆನಪುಗಳು ಹಾಗೂ ಜೀವನದ ಹೊಸ ಹಂತದ ಬಗ್ಗೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಚರ್ಚೆಗೆ ಕಾರಣವಾಗಿವೆ.
ಬಿಗ್ ಬಾಸ್ ಮೂಲಕ ಆರಂಭವಾದ ಇವರ ಪ್ರೇಮ ಕಥೆ, ಮದುವೆ ಹಾಗೂ ವಿಚ್ಛೇದನದ ಪ್ರಯಾಣ ಈಗ ಮತ್ತೆ ಅಭಿಮಾನಿಗಳ ಗಮನ ಸೆಳೆದಿದೆ.
ಡಿವೋರ್ಸ್ ಕುರಿತು ನಿವೇದಿತಾ ಗೌಡ ಮನ ಬಿಚ್ಚಿ ಮಾತು: "ಹೊಂದಾಣಿಕೆ ಇರಲಿಲ್ಲ, ವೈಯಕ್ತಿಕ ವಿಚಾರಕ್ಕೆ ಫುಲ್ ಸ್ಟಾಪ್ ಇಟ್ಟಿದ್ದೇವೆ":
ಮನ ಬಿಚ್ಚಿ ಮಾತನಾಡಿದ್ದಾರೆ. ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರ ದಾಂಪತ್ಯ ಹಾಗೂ ಬಳಿಕದ ವಿಚ್ಛೇದನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗೆ ಅವರು ಸ್ಪಷ್ಟನೆ ನೀಡಿದ್ದಾರೆ.
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರ ವಿಚ್ಛೇದನದ ನಂತರವಾಗಿ ಕಮೆಂಟ್ಗಳು ಬರುತ್ತಿದ್ದು, "ವಿಚ್ಛೇದನಕ್ಕೆ ನಿವೇದಿತಾ ಕಾರಣ" ಸೇರಿದಂತೆ ಹಲವು ಟೀಕೆಗಳು ಎದುರಾಗುತ್ತಿವೆ. ಈ ಹಿನ್ನಲೆಯಲ್ಲಿ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ನಿವೇದಿತಾ,"ವಿಚ್ಛೇದನ ಪಡೆಯಬೇಕು ಎಂದು ಯಾರೂ ಮದುವೆ ಆಗುವುದಿಲ್ಲ. ನಾವು ಚೆನ್ನಾಗಿರಬೇಕು ಎಂದುಕೊಂಡೆ ಮದುವೆಯಾದೆವು. ಆದರೆ ನಮ್ಮಿಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ" ಎಂದು ತಿಳಿಸಿದ್ದಾರೆ.
ಅವರು ಮುಂದುವರೆದು ವಿಚ್ಛೇದನಕ್ಕೆ ನಿಖರ ಕಾರಣಗಳನ್ನು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ."ಅದು ನಮ್ಮ ವೈಯಕ್ತಿಕ ವಿಷಯ. ಆದರೆ ವಿಚ್ಛೇದನದ ನಂತರ ಸಂಬಂಧ ಇಲ್ಲದವರೂ ಬಂದು ಏನೇನೋ ಹೇಳಲು ಶುರು ಮಾಡಿದರು. ಎಲ್ಲದಕ್ಕೂ ಫುಲ್ ಸ್ಟಾಪ್ ಇಡಲು ನಾವು ಸುದ್ದಿಗೋಷ್ಠಿ ನಡೆಸಿದ್ದೆವು" ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ನಡೆಯುತ್ತಿರುವ ಟೀಕೆಗಳಿಗೆ ಪ್ರತಿಕ್ರಿಸಿದವರು ಈ ಹೇಳಿಕೆಗಳು ಈಗ ಮತ್ತೆ ಚರ್ಚೆಗೆ ಗ್ರಾಸವಾಗಿವೆ.
"ಪರಸ್ಪರ ಗೌರವ ಇದೆ, ಆದರೆ ಹೊಂದಾಣಿಕೆ ಇರಲಿಲ್ಲ" - ಡಿವೋರ್ಸ್ ನಿವೇದಿತಾ ಗೌಡ ಮನ ಬಿಚ್ಚು ಮಾತು:
ವಿಚ್ಛೇದನದ ಕುರಿತು ನಟಿ ನಿವೇದಿತಾ ಗೌಡ ಅವರು ಮತ್ತೊಮ್ಮೆ ಮನ ಬಿಚ್ಚಿ ಮಾತನಾಡಿದ್ದು, ತಮ್ಮ ವೈಯಕ್ತಿಕ ಜೀವನ ಹಾಗೂ ಮದುವೆ ಕುರಿತು ಸಾಮಾಜಿಕ ಜಾಲತಾಣಗಳ ಪ್ರಭಾವದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಿವೇದಿತಾ ಗೌಡ ಅವರು ನೀಡಿದ ಈ ಹೇಳಿಕೆಗಳು ಈಗ ಮತ್ತೆ ಚರ್ಚೆಗೆ ಕಾರಣವಾಗಿವೆ.
ಸಂದರ್ಶನದಲ್ಲಿ ಮಾತನಾಡಿದ ನಿವೇದಿತಾ,"ನಮ್ಮಿಬ್ಬರ ನಡುವೆ ಪರಸ್ಪರ ಗೌರವ ಇದೆ. ಬೇರೆಯವರ ಖಾಸಗಿ ಜೀವನದ ಬಗ್ಗೆ ಗೌರವ ಸಹ ಇದೆ. ಇದೇ ಕಾರಣಕ್ಕೆ ನಾವು ವಿಚ್ಛೇದನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ. ಅದು ನಮ್ಮ ವೈಯಕ್ತಿಕ ವಿಷಯ" ಎಂದು ಹೇಳಿದ್ದಾರೆ.
ಅವರು ಮುಂದುವರೆದು,"ನನ್ನ ಹತ್ತಿರದವರಿಗೆ ಗೊತ್ತಾದರೆ ಸಾಕು, ಎಲ್ಲರಿಗೂ ತಿಳಿಯಬೇಕೆಂಬ ಅಗತ್ಯವಿಲ್ಲ. ಜನರು ಅವರಿಗೆ ಬೇಕಾದಂತೆ ನಂಬುತ್ತಾರೆ. ಎಲ್ಲರನ್ನೂ ಕನ್ವೆನ್ಸ್ ಮಾಡುವುದು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಮದುವೆಯ ನಿರ್ಧಾರದಲ್ಲಿ ಸಾಮಾಜಿಕ ಜಾಲತಾಣದ ಪ್ರಭಾವದ ಬಗ್ಗೆ ಮಾತನಾಡಿದ ನಿವೇದಿತಾ, ಬಿಗ್ ಬಾಸ್ ಅನುಭವವನ್ನು ನೆನಪಿಸಿಕೊಂಡಿದ್ದಾರೆ. "ನಾವು ಬಿಗ್ ಬಾಸ್ ಗೆ ಹೋಗಿದ್ದರಿಂದ ಅಲ್ಲಿಯೇ ನಮ್ಮನ್ನು ಜೋಡಿ ಎಂದು ಬ್ರ್ಯಾಂಡ್ ಮಾಡಲಾಗಿತ್ತು. ಸಾಮಾಜಿಕ ಜಾಲತಾಣದಲ್ಲೂ ಅದೇ ಪ್ರತಿಬಿಂಬವಿತ್ತು. ಹೊದಲ್ಲೇಲ್ಲಾ ಮದುವೆಯಾಗಬೇಕು ಎಂಬ ಒತ್ತಡ ಇತ್ತು. ನಾವು ಆ ಪ್ರಭಾವಕ್ಕೆ ಬೆಳಗಾದೆವು" ಎಂದು ಹೇಳಿದ್ದಾರೆ.
ಆದರೆ ಮದುವೆಯ ನಂತರ ಇಬ್ಬರ ನಡುವೆ ಹೊಂದಾಣಿಕೆ ಕೊರತೆ ಇದ್ದು, ಅದು ವಿಚ್ಛೇದನಕ್ಕೆ ಕಾರಣವಾಯಿತು ಎಂದು ಅವರು ತಿಳಿಸಿದ್ದಾರೆ. ಈ ಹೇಳಿಕೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವ್ಯಾಪಕ ಚರ್ಚೆಗೆ ಕಾರಣವಾಗಿವೆ.
Also Read:
Al ಯುಗಕ್ಕೆ ಕರ್ನಾಟಕ ಸಿದ್ಧ : ಸರ್ಕಾರಿ ಕಾಲೇಜುಗಳಲ್ಲಿ 50 ಲ್ಯಾಬ್ ಗಳು ಸ್ಥಾಪನೆ