Belagavi News:
ಗಿರ್ ಸೋಮನಾಥ್ (ಗುಜರಾತ್) : ಕೇವಲ 19 ತಿಂಗಳ ವಯಸ್ಸಿನ ಪುಟಾಣಿ ತನ್ನ ಅಸಾಧಾರಣ ಸ್ಮರಣಶಕ್ತಿ ಮತ್ತು ಬುದ್ಧಿಮತ್ತೆಯಿಂದ ಎಲ್ಲರ ಗಮನ ಸೆಳೆದಿದ್ದಾನೆ. ಆಟವಾಡುತ್ತಲೇ 170ಕ್ಕೂ ಹೆಚ್ಚು ವಸ್ತುಗಳನ್ನು ನಿಖರವಾಗಿ ಗುರುತಿಸುವ ಸಾಮರ್ಥ್ಯ ಹೊಂದಿರುವ ಈ ಮಗುವಿನ ಪ್ರತಿಭೆ ಅಚ್ಚರಿ ಮೂಡಿಸಿದೆ.
ಗುಜರಾತಿನ ಜುನಾಗಢ್ ಮೂಲದ ದಂಪತಿಯ ಪುತ್ರ ಕರ್ಣ ಪರ್ಮಾರ್, ಪ್ರಸ್ತುತ ಸೂರತ್ ನಲ್ಲಿ ವಾಸಿಸುತ್ತಿದ್ದು, ಚಿಕ್ಕ ವಯಸ್ಸಿನಲ್ಲೇ ಅಸಾಮಾನ್ಯ ನೆನಪಿನ ಶಕ್ತಿಯನ್ನು ಪ್ರದರ್ಶಿಸಿ ವಿಶೇಷ ಗುರುತಿಸಿಕೊಂಡಿದ್ದಾನೆ. ವಿವಿಧ ವಸ್ತುಗಳು, ಚಿತ್ರಗಳು ಹಾಗೂ ಪದಗಳನ್ನು ಕ್ಷಣಾರ್ಧದಲ್ಲಿ ಗುರುತಿಸುವ ಅವರ ಸಾಮರ್ಥ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಡಿಜಿಟಲ್ ಪರದೆಗಳಿಂದ ದೂರವಿರಿಸಿ, ಫ್ಲ್ಯಾಷ್ ಕಾರ್ಡ್ ಗಳು ಹಾಗೂ ಶಿಕ್ಷಣಾತ್ಮಕ ಚಟುವಟಿಕೆಗಳ ಮೂಲಕ ಕರ್ಣನ ಕಲಿಕೆಗೆ ಉತ್ತೇಜನ ನೀಡಲಾಗಿದೆ. ಇದೇ ಕ್ರಮವು ಅವನ ಗಮನಶಕ್ತಿ ಮತ್ತು ನೆನಪಿನ ಸಾಮರ್ಥ್ಯವನ್ನು ಮತ್ತಷ್ಟು ಬೆಳೆಸಲು ನೇರವಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಕರ್ಣನ ಈ ಅಪರೂಪದ ಪ್ರತಿಭೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಗುರುತಿಸಿ ದಾಖಲಿಸಿವೆ. 2024ರ ಜುಲೈ 5 ರಂದು ಜನಿಸಿದ ಕರ್ಣ, ಕೇವಲ ಒಂದು ವರ್ಷ ಎಂಟು ತಿಂಗಳ ವಯಸ್ಸಿನಲ್ಲೇ ಈ ಸಾಧನೆ ಮಾಡುವ ಮೂಲಕ ಅನೇಕರಿಗೆ ಅಚ್ಚರಿ ಮೂಡಿಸಿದ್ದಾನೆ.
ಇಂಗ್ಲೀಷ್ ವರ್ಣಮಾಲೆ, ಹಣ್ಣುಗಳು, ತರಕಾರಿಗಳು, ಕಾಡು ಮತ್ತು ಸಾಕು ಪ್ರಾಣಿಗಳು, ಪಕ್ಷಿಗಳು, ವಾಹನಗಳು, ವಿವಿಧ ಆಕಾರಗಳು, ರಾಷ್ಟ್ರಧ್ವಜಗಳು ಸೇರಿದಂತೆ ಅನೇಕ ವಸ್ತುಗಳನ್ನು ಕರ್ಣ ಪರ್ಮಾರ್ ಸುಲಭವಾಗಿ ಗುರುತಿಸುವ ಸಾಮರ್ಥ ಹೊಂದಿದ್ದಾನೆ. ಫ್ಲ್ಯಾಷ್ ಕಾರ್ಡ್ ಗಳ ಮೂಲಕ ಕಳಿಸಲಾದ ಪ್ರತಿ ವಸ್ತುವಿನ ಹೆಸರನ್ನು ಅವನು ನಿಖರವಾಗಿ ಗುರುತಿಸುತ್ತಿದ್ದು, ತನ್ನ ಅದ್ಬುತ ಸ್ಮರಣಶಕ್ತಿಯಿಂದ ಎಲ್ಲರ ಗಮನ ಸೆಳೆದಿದ್ದಾನೆ.
" ನಾವು ಅವನನ್ನು ಹುಟ್ಟಿನಿಂದಲೇ ಮೊಬೈಲ್ ಫೋನ್ ಮತ್ತು ಡಿಜಿಟಲ್ ಪರದೆಗಳಿಂದ ಸಂಪೂರ್ಣವಾಗಿ ದೂರವಿಟ್ಟಿವು. ಈಗ ಅವನು 170ಕ್ಕೂ ಹೆಚ್ಚು ವಸ್ತುವಿನ ಸುಲಭವಾಗಿ ಗುರುತಿಸುತ್ತಾನೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವನ ಪ್ರತಿಭೆಗೆ ಸಿಕ್ಕಿರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆ ತಮ್ಮ ಕುಟುಂಬಕ್ಕೆ ಹೆಮ್ಮೆ ಮತ್ತು ಸಂತೋಷದ ಸಂಗತಿ ಎಂದು ತಂದೆ ಮಿಥುನ್ ಭಾಯ್ ಪಾರ್ಮಾರ್ ತಿಳಿಸಿದ್ದಾರೆ.
ಈ ಅಪರೂಪದ ಪ್ರತಿಬಿ ಬಾಲ್ಯ ಶಿಕ್ಷಣದ ಸರಿಯಾದ ಮಾರ್ಗದರ್ಶನ ಮತ್ತು ಕುಟುಂಬದ ಶಿಸ್ತಿನ ಪರಿಣಾಮವಾಗಿ ಬೆಳಗಿದ ಉದಾಹರಣೆಯಾಗಿ ಗಮನ ಸೆಳೆಯುತ್ತಿದೆ.
Also Read:
ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ - UPSC Recruitment 2026 ಅರ್ಜಿ ಆಹ್ವಾನ