<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Corporate

ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ - UPSC Recruitment 2026 ಅರ್ಜಿ ಆಹ್ವಾನ

ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ - UPSC Recruitment 2026 ಅರ್ಜಿ ಆಹ್ವಾನ
Summary: Applications have been invited for central government posts without examination through UPSC Recruitment 2026. Interested candidates can apply by July 17 and avail this golden opportunity.

Belagavi News:

ಕೇಂದ್ರ ಸಾರ್ವಜನಿಕ ಸೇವಾ ಆಯೋಗ 2026 ನೇ ಸಾಲಿನ ನೇರ ನೇಮಕಾತಿ ಅಡಿಯಲ್ಲಿ ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಉನ್ನತ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪ್ರಮುಖ ಸಚಿವಾಲಯಗಳು ಮತ್ತು ಸರ್ಕಾರಿ ಇಲಾಖೆಗಳಲ್ಲಿನ ಪ್ರತಿಷ್ಠಿತ ಹುದ್ದೆಗಳಿಗೆ ಆಯ್ಕೆ ನಡೆಯಲಿದ್ದು, ಇದು ಅರ್ಹ ಅಭ್ಯರ್ಥಿಗಳಿಗೆ ಸುವರ್ಣಾವಕಾಶವಾಗಿದೆ.

ಈ ನೇಮಕಾತಿಯ ವಿಶೇಷತೆ ಎಂದರೆ, ಸಾಮಾನ್ಯವಾಗಿ ನಡೆಯುವ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಿಲ್ಲದೆ ನೇರ ನೇಮಕಾತಿ ಮೂಲಕ ಹುದ್ದೆ ಪಡೆಯುವ ಅವಕಾಶ ಲಭ್ಯವಿದೆ. ಅನುಭವಿ ಮತ್ತು ಅರ್ಹ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಮಹತ್ವದ ವಿಭಾಗಗಳಿಗೆ ಕೆಲಸ ಮಾಡುವ ಅವಕಾಶ ದೊರೆಯಲಿದೆ.

ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂನ್ 27, 2026 ರಿಂದ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಜುಲೈ 17, 2026ರೊಳಗೆ ಅರ್ಜಿ ಸಲ್ಲಿಸಬೇಕು ಎಂದು upsc ಪ್ರಕಟಿಸಿದೆ. ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಯುಪಿಎಸ್ಸಿ ವೆಬ್ಸೈಟ್ ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.

Sponsored

ಈ ನೇರ ನೇಮಕಾತಿ ಮೂಲಕ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿನ ಪ್ರಮುಖ ಹುದ್ದೆಗಳು ಭರ್ತಿಯಾಗಲಿದ್ದು, ಸರ್ಕಾರಿ ಉದ್ಯೋಗ ಆಸೆ ಹೊಂದಿರುವ ಅಭ್ಯರ್ಥಿಗಳಿಗೆ ಇದೊಂದು ಮಹತ್ವದ ಅವಕಾಶವಾಗಿದೆ.

ಅರ್ಹತೆ, ಅನುಭವ ಮತ್ತು ಇತರ ಮಾನದಂಡಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು, ಸಂಪೂರ್ಣ ವಿವರಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.

UPSC Direct Recruitment 2026 : ಪ್ರಮುಖ ಸಚಿವಾಲಯಗಳಲ್ಲಿ ಉನ್ನತ ಹುದ್ದೆಗಳ ಭರ್ತಿ ; ಜಂಟಿ ನಿರ್ದೇಶಕರಿಂದ ಸಹಾಯಕ ಪ್ರಾಧ್ಯಾಪಕರವರೆಗೆ ಅವಕಾಶ :

ಕೇಂದ್ರ ಸಾರ್ವಜನಿಕ ಸೇವಾ ಆಯೋಗ ಜಾಹೀರಾತು ಸಂಖ್ಯೆ 07 / 2026 ಅಡಿಯಲ್ಲಿ ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿನ ಉನ್ನತ ಹುದ್ದೆಗಳ ಬರ್ತಿಗೆ ನೇರ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಅರ್ಹತೆ ಮತ್ತು ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಇದು ಪ್ರತಿಷ್ಠಿತ ಕೇಂದ್ರ ಸರ್ಕಾರೀ ಉದ್ಯೋಗ ಪಡೆಯಲು ಉತ್ತಮ ಅವಕಾಶವಾಗಿದೆ.

Sponsored

ಈ ನೇಮಕಾತಿ ಅಭಿಯಾನದಡಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಆಯುಷ್ ಸಚಿವಾಲಯ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಭಾರತೀಯಂ ಪುರಾತತ್ವ ಸಮೀಕ್ಷೆ, ರಕ್ಷಣಾ ಸಚಿವಾಲಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೇರಿದಂತೆ ಹಲವು ಪ್ರಮುಖ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಖಾಲಿ ಇರುವ ಪ್ರಮುಖ ಹುದ್ದೆಗಳು :

ನೇರ ನೇಮಕಾತಿಯ ಮೂಲಕ ವಿವಿಧ ಉನ್ನತ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರಮುಖ ಹುದ್ದೆಗಳು ಹೀಗಿವೆ :

1. ಜಂಟಿ ನಿರ್ದೇಶಕ (joint Director )

Sponsored

2. ವೈದ್ಯಕೀಯ ಅಧಿಕಾರಿ (Medical officer)

3. ಸಂಶೋಧನಾ ಅಧಿಕಾರಿ

4. ಏರೋನಾಟಿಕಲ್ ಅಧಿಕಾರಿ

5. ಕಾನೂನು ಅಧಿಕಾರಿ

Sponsored

6. ಕಂಪನಿ ಪ್ರಾಸಿಕ್ಯೂಟರ್

7. ಉಪ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ

8. ಹಿರಿಯ ಛಾಯಾಗ್ರಹಣ ಅಧಿಕಾರಿ

9. ಛಾಯಾಗ್ರಹಣ ಅಧಿಕಾರಿ

Sponsored

10. ಸಿವಿಲ್ ಸಹಾಯಕ ಭದ್ರತಾ ಅಧಿಕಾರಿ

11. ಸ್ಟೋರ್ಸ್ ಆಫೀಸರ್

12. ಸ್ಪೆಷಲಿಸ್ಟ್ ಗ್ರೇಡ್ - III

13. ಸಹಾಯಕ ಪ್ರಾಧ್ಯಾಪಕ

Sponsored

ಈ ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ, ವೃತ್ತಿಪರ ಅನುಭವ ಹಾಗೂ ಇತರ ಅರ್ಹತಾ ಮಾನದಂಡಗಳನ್ನು ಪೂರೈಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.

ಆನ್ಲೈನ್ ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದ್ದು, ಜುಲೈ 17, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಯುಪಿಎಸ್‌ಸಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳೊಂದಿಗೆ ನಿಗದಿತ ಅವಧಿ ಒಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಪ್ರತಿ ಹುದ್ದೆಗೆ ವಿಭಿನ್ನ ಅರ್ಹತೆ - ಅಜ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದೋದು ಕಡ್ಡಾಯ:

ಕೇಂದ್ರ ಸಾರ್ವಜನಿಕ ಸೇವಾ ಆಯೋಗ ನೇರ ನೇಮಕಾತಿ 2026 ಅಡಿಯಲ್ಲಿ ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳ ಉನ್ನತ ಹುದ್ದೆಗಳ ಬರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯ ಪ್ರಮುಖ ವಿಶೇಷತೆ ಎಂದರೆ, ಇದು ಲಿಖಿತ ಸ್ಪರ್ಧಾತ್ಮಕ ಪರೀಕ್ಷೆಯ ಬದಲಾಗಿ ನೇರ ನೇಮಕಾತಿ ಪ್ರಕ್ರಿಯೆಯ ಮೂಲಕ ನಡೆಯುತ್ತಿದೆ. ಆದ್ದರಿಂದ ಪ್ರತಿ ಹುದ್ದೆಗೆ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳು ವಿಭಿನ್ನವಾಗಿವೆ.

Sponsored

ಯುಪಿಎಸ್‌ಸಿ ಪ್ರಕಟಿಸಿರುವ ಜಾಹೀರಾತು ಸಂಖ್ಯೆ 07 / 2026 ಪ್ರಕಾರ, ಅಭ್ಯರ್ಥಿಗಳು ಆಯ್ಕೆ ಮಾಡುವ ಹುದ್ದೆಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆ, ವೃತ್ತಿಪರ ಅನುಭವ, ಹಾಗೂ ವಯೋಮಿತಿ ಬದಲಾಗುತ್ತದೆ. ಹೀಗಾಗಿ ಎಲ್ಲಾ ಹುದ್ದೆಗಳಿಗೂ ಒಂದೇ ರೀತಿ ಅರ್ಹತೆ ಅನ್ವಯಿಸುವುದಿಲ್ಲ.

ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಅನುಭವ ಮತ್ತು ಪರಿಣತಿಗೆ ಹೊಂದುವ ಹುದ್ದೆಯನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು. ತಪ್ಪಾದ ಮಾಹಿತಿಯೊಂದಿಗೆ ಅಥವಾ ಅರ್ಹತೆ ಇಲ್ಲದ ಹುದ್ದೆಗೆ ಅರ್ಜಿ ಸಲ್ಲಿಸಿದರೆ ಅರ್ಜಿಯನ್ನು ತಿರಸ್ಕರಿಸುವ ಸಾಧ್ಯತೆ ಇದೆ.

ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ಯುಪಿಎಸ್‌ಸಿ ಬಿಡುಗಡೆ ಮಾಡಿರುವ ಜಾಹೀರಾತು ಸಂಖ್ಯೆ 07/2026 ರ ಸಂಪೂರ್ಣ ಅಧಿಕೃತ ಅಧಿಸೂಚನೆಯನ್ನು ಗಮನದಿಂದ ಓದಿ, ತಮ್ಮ ಅರ್ಹತೆಯನ್ನು ಖಚಿತಪಡಿಸಿಕೊಂಡ ಬಳಿಕವೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.

ಅಜ್ಜಿ ಸಲ್ಲಿಸುವ ಕೊನೆಯ ದಿನಾಂಕ ಜುಲೈ 17, 2026 ಆಗಿದ್ದು, ಆಸಕ್ತ ಅಭ್ಯರ್ಥಿಗಳು ಕೊನೆಯ ಕ್ಷಣದವರೆಗೆ ಕಾಯದೆ ನಿಗದಿತ ಅವಧಿ ಒಳಗೆ ಅರ್ಜಿ ಸಲ್ಲಿಸುವುದು ಒಳಿತು.

Sponsored

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿಗೆ ಸಂಪೂರ್ಣ ಮಾಹಿತಿ :

ಕೇಂದ್ರ ಸಾರ್ವಜನಿಕ ಸೇವಾ ಆಯೋಗ ನೇರ ನೇಮಕಾತಿ 2026 ಅಡಿಯಲ್ಲಿ ವಿವಿಧ ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆಯಲಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.

ಅಭ್ಯರ್ಥಿಗಳು ಯುಪಿಎಸ್ಇ ಯ ಅಧಿಕೃತ ವೆಬ್ಸೈಟ್ ಅಥವಾ online recruitment application (ORA) ಪೋರ್ಟಲ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರು ಮೊದಲು one time registration (OTR) ಪ್ರಕ್ರಿಯೆ ಪೂರ್ಣಗೊಳಿಸಿ ತಮ್ಮ ನೋಂದಣಿಯನ್ನು ಮಾಡಿಕೊಳ್ಳಬೇಕು.

ನೊಂದಣಿ ಪೂರ್ಣಗೊಂಡ ಬಳಿಕ ಲಾಗಿನ್ ಮಾಡಿ, ಅರ್ಜಿ ನಮೂನೆಯಲ್ಲಿ ಕೇಳಲಾದ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಅರ್ಹತೆ, ವೃತ್ತಿಪರ ಅನುಭವ ಹಾಗೂ ಇತರ ವಿವರಗಳನ್ನು ನಿಖರವಾಗಿ ಭರ್ತಿ ಮಾಡಬೇಕು. ಜೊತೆಗೆ ಅಗತ್ಯ ದಾಖಲೆಗಳು, ಪ್ರಮಾಣ ಪತ್ರಗಳು ಹಾಗೂ ಇತ್ತೀಚಿನ ಭಾವಚಿತ್ರವನ್ನು ಸೂಚನೆಯಂತೆ ಅಪ್ಲೋಡ್ ಮಾಡಬೇಕು.

Sponsored

ಅರ್ಜಿ ನಮೂನೆಯನ್ನು ಅಂತಿಮವಾಗಿ ಸಲ್ಲಿಸುವ ಮೊದಲು ಭರ್ತಿ ಮಾಡಿದ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸುವುದು ಅತ್ಯಂತ ಮುಖ್ಯ. ತಪ್ಪು ಮಾಹಿತಿ ಅಥವಾ ಅಪೂರ್ಣ ದಾಖಲೆಗಳಿದ್ದರೆ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇದೆ.

ಅಜ್ಜಿ ಯಶಸ್ವಿಯಾಗಿ ಕಲಿಕೆಯಾದ ಬಳಿಕ ಅದರ ಪ್ರಿಂಟ್ ಔಟ್ ಅಥವಾ ಡೌನ್ಲೋಡ್ ಪ್ರತಿಯನ್ನು ಭವಿಷ್ಯದ ಉಲ್ಲೇಖಕ್ಕಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಅಭ್ಯರ್ಥಿಗಳಿಗೆ ಸಲಹೆ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಜುಲೈ 17, 2026 ಕೊನೆಯ ದಿನಾಂಕವಾಗಿದ್ದು, ಕೊನೆಯ ಕ್ಷಣದ ತಾಂತ್ರಿಕ ಸಮಸ್ಯೆಗಳನ್ನು ತಪ್ಪಿಸಲು ಅಭ್ಯರ್ಥಿಗಳು ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಉತ್ತಮ.

Also Read:

Sponsored

ಮಾನಸ ಸರೋವರ ಯಾತ್ರಿಕರೇ ಗಮನಿಸಿ: ವಿದೇಶಾಂಗ ಸಚಿವಾಲಯ ನೀಡಿದ ಮಹತ್ವದ ಸೂಚನೆಗಳು

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online